AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

GT vs PBKS Highlights, IPL 2024: ಪಂಜಾಬ್​ಗೆ ಗೆಲುವು ತಂದ ಶಶಾಂಕ್ ಸಿಂಗ್

Gujarat Giants Vs Punjab Kings Highlights in Kannada: ಗುಜರಾತ್ ಟೈಟಾನ್ಸ್ ಮತ್ತು ಪಂಜಾಬ್ ಕಿಂಗ್ಸ್ ನಡುವೆ ನಡೆದ ಐಪಿಎಲ್​ ಪಂದ್ಯ ಸಾಕಷ್ಟು ರೋಚಕತೆಯಿಂದ ಕೂಡಿತ್ತು. ಈ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಪರ ಮ್ಯಾಚ್ ವಿನ್ನಿಂಗ್ ಇನ್ನಿಂಗ್ಸ್ ಆಡಿದ ಶಶಾಂಕ್ ಸಿಂಗ್ ತಂಡದ ಗೆಲುವಿನ ರೂವಾರಿ ಎನಿಸಿಕೊಂಡರು.

GT vs PBKS Highlights, IPL 2024: ಪಂಜಾಬ್​ಗೆ ಗೆಲುವು ತಂದ ಶಶಾಂಕ್ ಸಿಂಗ್
ಪೃಥ್ವಿಶಂಕರ
|

Updated on:Apr 04, 2024 | 11:30 PM

Share

ಗುಜರಾತ್ ಟೈಟಾನ್ಸ್ ಮತ್ತು ಪಂಜಾಬ್ ಕಿಂಗ್ಸ್ ನಡುವೆ ನಡೆದ ಐಪಿಎಲ್​ ಪಂದ್ಯ ಸಾಕಷ್ಟು ರೋಚಕತೆಯಿಂದ ಕೂಡಿತ್ತು. ಈ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಪರ ಮ್ಯಾಚ್ ವಿನ್ನಿಂಗ್ ಇನ್ನಿಂಗ್ಸ್ ಆಡಿದ ಶಶಾಂಕ್ ಸಿಂಗ್ ತಂಡದ ಗೆಲುವಿನ ರೂವಾರಿ ಎನಿಸಿಕೊಂಡರು. ಈ ಪಂದ್ಯದಲ್ಲಿ ಪಂಜಾಬ್ ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿತು. ಅದರಂತೆ ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ 20 ಓವರ್‌ಗಳಲ್ಲಿ ನಾಲ್ಕು ವಿಕೆಟ್ ಕಳೆದುಕೊಂಡು 199 ರನ್ ಗಳಿಸಿತು. ಗುರಿ ಬೆನ್ನಟ್ಟಿದ ಪಂಜಾಬ್, ಪಂದ್ಯದ ಕೊನೆಯ ಓವರ್‌ನಲ್ಲಿ ಗೆಲುವಿನ ದಡ ಮುಟ್ಟಿತು.

LIVE NEWS & UPDATES

The liveblog has ended.
  • 04 Apr 2024 11:25 PM (IST)

    ಪಂಜಾಬ್​ಗೆ 3 ವಿಕೆಟ್ ಜಯ

    ಈ ಪಂದ್ಯವನ್ನು ಪಂಜಾಬ್ ಕಿಂಗ್ಸ್ 3 ವಿಕೆಟ್‌ಗಳಿಂದ ಗೆದ್ದುಕೊಂಡಿದೆ. ಶಶಾಂಕ್ ಸಿಂಗ್ ಅವರ 61 ರನ್‌ಗಳ ಇನ್ನಿಂಗ್ಸ್ ಪಂದ್ಯವನ್ನು ಪಂಜಾಬ್ ಪಾಳೆಯದಲ್ಲಿ ಇರಿಸಿತು.

  • 04 Apr 2024 11:00 PM (IST)

    17 ಓವರ್‌ ಮುಕ್ತಾಯ

    ಪಂಜಾಬ್ ಕಿಂಗ್ಸ್ 17 ಓವರ್‌ಗಳಲ್ಲಿ 167 ರನ್ ಗಳಿಸಿದೆ. ಈ ಪಂದ್ಯ ಗೆಲ್ಲಲು 16 ಎಸೆತಗಳಲ್ಲಿ 33 ರನ್‌ಗಳ ಅಗತ್ಯವಿದೆ. ಶಶಾಂಕ್ ಸಿಂಗ್ ಅಮೋಘ ಬ್ಯಾಟಿಂಗ್ ಪ್ರದರ್ಶಿಸಿ 49 ರನ್ ಗಳಿಸಿದರೆ, ಅಶುತೋಷ್ ಶರ್ಮಾ 15 ರನ್ ಗಳಿಸಿ ಆಡುತ್ತಿದ್ದಾರೆ.

  • 04 Apr 2024 10:48 PM (IST)

    ಜಿತೇಶ್ ಶರ್ಮಾ ಔಟ್

    ಶಶಾಂಕ್ ಸಿಂಗ್ ಅವರ ಅದ್ಭುತ ಇನ್ನಿಂಗ್ಸ್ ನಡುವೆ, ಪಂಜಾಬ್ ಕಿಂಗ್ಸ್ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಜಿತೇಶ್ ಶರ್ಮಾ ರೂಪದಲ್ಲಿ ಆರನೇ ವಿಕೆಟ್ ಪತನವಾಗಿದೆ. ಗುಜರಾತ್ ಟೈಟಾನ್ಸ್ ತಂಡದ ಸ್ಟಾರ್ ಸ್ಪಿನ್ನರ್ ರಶೀದ್ ಖಾನ್ ಜಿತೇಶ್​ಗೆ ಪೆವಿಲಿಯನ್ ಹಾದಿ ತೋರಿಸಿದ್ದಾರೆ.

  • 04 Apr 2024 10:37 PM (IST)

    ಪಂಜಾಬ್‌ ಐದನೇ ವಿಕೆಟ್ ಪತನ

    ಪಂಜಾಬ್ ಕಿಂಗ್ಸ್ ಮತ್ತೊಂದು ವಿಕೆಟ್ ಕಳೆದುಕೊಂಡಿದೆ. ಸಿಕಂದರ್ ರಜಾ 15 ರನ್ ಗಳಿಸಿ ವಿಕೆಟ್ ಒಪ್ಪಿಸಿದ್ದಾರೆ. ತಂಡಕ್ಕೆ ದೊಡ್ಡ ಜೊತೆಯಾಟದ ಅಗತ್ಯವಿದೆ. ಪಂಜಾಬ್ ಕಿಂಗ್ಸ್ 13 ಓವರ್‌ಗಳಲ್ಲಿ 5 ವಿಕೆಟ್ ನಷ್ಟದಲ್ಲಿ 121 ರನ್ ಗಳಿಸಿದೆ.

  • 04 Apr 2024 10:24 PM (IST)

    ಕರನ್ ಔಟ್

    ಪಂಜಾಬ್ 71 ರನ್ ಗಳಿಗೆ ನಾಲ್ಕು ವಿಕೆಟ್ ಕಳೆದುಕೊಂಡಿದೆ. ಸ್ಯಾಮ್ ಕರನ್ ರೂಪದಲ್ಲಿ ತಂಡವು ನಾಲ್ಕನೇ ಹೊಡೆತ ಅನುಭವಿಸಿದೆ. ಪಂಜಾಬ್ ಪರ ಸಿಕಂದರ್ ರಜಾ ಐದು ಎಸೆತಗಳಲ್ಲಿ ಮೂರು ರನ್ ಗಳಿಸಿ ಕ್ರೀಸ್‌ನಲ್ಲಿದ್ದರೆ, ಶಶಾಂಕ್ ಸಿಂಗ್ ಒಂದು ಎಸೆತದಲ್ಲಿ ಒಂದು ರನ್ ಗಳಿಸಿ ಕ್ರೀಸ್‌ನಲ್ಲಿದ್ದಾರೆ.

  • 04 Apr 2024 10:08 PM (IST)

    ಪ್ರಭಾಸಿಮ್ರಾನ್ ಸಿಂಗ್ ಔಟ್

    ಗುಜರಾತ್ ಟೈಟಾನ್ಸ್ ವಿರುದ್ಧ 200 ರನ್ ಗಳ ಗುರಿ ಬೆನ್ನಟ್ಟಿರುವ ಪಂಜಾಬ್ ಕಿಂಗ್ಸ್ ಇನ್ನಿಂಗ್ಸ್ ತತ್ತರಿಸಿದೆ. ತಂಡ ಕೇವಲ 64 ರನ್ ಗಳಿಸುವಷ್ಟರಲ್ಲಿ ಮೂರು ವಿಕೆಟ್ ಕಳೆದುಕೊಂಡಿದೆ. ನಾಯಕ ಶಿಖರ್ ಧವನ್ ಮತ್ತು ಜಾನಿ ಬೈರ್‌ಸ್ಟೋ ನಂತರ ಇದೀಗ ಪ್ರಭಾಸಿಮ್ರಾನ್ ಸಿಂಗ್ ಕೂಡ ಪೆವಿಲಿಯನ್‌ಗೆ ಮರಳಿದ್ದಾರೆ.

  • 04 Apr 2024 10:03 PM (IST)

    ಬೈರ್‌ಸ್ಟೋವ್ ಔಟ್

    ಗುಜರಾತ್ ಟೈಟಾನ್ಸ್ ನೀಡಿದ 200 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಪಂಜಾಬ್ ಕಿಂಗ್ಸ್‌ಗೆ ಉತ್ತಮ ಆರಂಭ ಸಿಗಲಿಲ್ಲ. ನಾಯಕ ಶಿಖರ್ ಧವನ್ ನಂತರ ತಂಡ ಜಾನಿ ಬೈರ್‌ಸ್ಟೋವ್ ವಿಕೆಟ್ ಕೂಡ ಕಳೆದುಕೊಂಡಿದೆ. 13 ಎಸೆತಗಳಲ್ಲಿ 4 ಬೌಂಡರಿಗಳ ನೆರವಿನಿಂದ 22 ರನ್ ಗಳಿಸಿದ್ದ ಬೈರ್‌ಸ್ಟೋವ್ ಅವರನ್ನು ನೂರ್ ಅಹ್ಮದ್ ಔಟ್ ಮಾಡಿದರು.

  • 04 Apr 2024 09:52 PM (IST)

    4 ಓವರ್‌ ಮುಕ್ತಾಯ

    ಪಂಜಾಬ್ ಕಿಂಗ್ಸ್ 4 ಓವರ್‌ಗಳಲ್ಲಿ 39 ರನ್ ಗಳಿಸಿದೆ. ಜಾನಿ ಬೈರ್‌ಸ್ಟೋ 20 ರನ್ ಹಾಗೂ ಪ್ರಭಾಸಿಮ್ರಾನ್ ಸಿಂಗ್ 18 ರನ್ ಗಳಿಸಿ ಆಡುತ್ತಿದ್ದಾರೆ.

  • 04 Apr 2024 09:48 PM (IST)

    ಪಂಜಾಬ್‌ ಮೊದಲ ವಿಕೆಟ್ ಪತನ

    ಎರಡನೇ ಓವರ್‌ನ ಮೊದಲ ಎಸೆತದಲ್ಲಿ ಪಂಜಾಬ್‌ ಮೊದಲ ವಿಕೆಟ್ ಪತನ. ಉಮೇಶ್ ಯಾದವ್ ಎಸೆತದಲ್ಲಿ ಶಿಖರ್ ಧವನ್ ಕ್ಲೀನ್ ಬೌಲ್ಡ್ ಆದರು. ಸದ್ಯ ಜಾನಿ ಬೈರ್‌ಸ್ಟೋ ಮತ್ತು ಪ್ರಭಾಸಿಮ್ರಾನ್ ಸಿಂಗ್ ಕ್ರೀಸ್‌ನಲ್ಲಿದ್ದಾರೆ. ಎರಡು ಓವರ್‌ಗಳ ನಂತರ ಪಂಜಾಬ್ ಸ್ಕೋರ್ ಒಂದು ವಿಕೆಟ್‌ಗೆ 19 ರನ್ ಆಗಿದೆ.

  • 04 Apr 2024 09:15 PM (IST)

    ಪಂಜಾಬ್‌ಗೆ 200 ರನ್‌ ಗುರಿ

    ಪಂಜಾಬ್ ಕಿಂಗ್ಸ್ ಗೆಲುವಿಗೆ ಗುಜರಾತ್ ಟೈಟಾನ್ಸ್ 200 ರನ್​ಗಳ ಗುರಿ ನೀಡಿದೆ.

  • 04 Apr 2024 09:09 PM (IST)

    ವಿಜಯ್ ಶಂಕರ್

    ವಿಜಯ್ ಶಂಕರ್, ಪಂಜಾಬ್ ಕಿಂಗ್ಸ್ ವೇಗಿ ಕಗಿಸೊ ರಬಾಡಗೆ ಬಲಿಯಾಗಿದ್ದಾರೆ. ವಿಜಯ್ 10 ಎಸೆತಗಳಲ್ಲಿ ಎಂಟು ರನ್ ಗಳಿಸಲಷ್ಟೇ ಶಕ್ತರಾದರು. ಇದು ಈ ಪಂದ್ಯದಲ್ಲಿ ರಬಾಡ ಅವರ ಎರಡನೇ ವಿಕೆಟ್ ಆಗಿದೆ.

  • 04 Apr 2024 08:59 PM (IST)

    ಗಿಲ್ ಸ್ಫೋಟಕ ಬ್ಯಾಟಿಂಗ್

    ಪಂಜಾಬ್ ಕಿಂಗ್ಸ್ ವಿರುದ್ಧ ಗುಜರಾತ್ ಟೈಟಾನ್ಸ್ ನಾಯಕ ಶುಭ್ಮ​ನ್ ಗಿಲ್ ಅವರ ಅಮೋಘ ಪ್ರದರ್ಶನ ಮುಂದುವರಿದಿದೆ. ಅರ್ಧಶತಕ ಬಾರಿಸಿದ ನಂತರ ಅವರ ಇನ್ನಿಂಗ್ಸ್ ವೇಗ ಪಡೆದುಕೊಂಡಿದೆ. ಗಿಲ್ ಪ್ರಸ್ತುತ 39 ಎಸೆತಗಳಲ್ಲಿ 69 ರನ್ ಗಳಿಸಿ ಆಡುತ್ತಿದ್ದರೆ, ವಿಜಯ್ ಶಂಕರ್ ಒಂಬತ್ತು ಎಸೆತಗಳಲ್ಲಿ ಎಂಟು ರನ್ ಗಳಿಸಿ ಅವರೊಂದಿಗೆ ಕ್ರೀಸ್‌ನಲ್ಲಿದ್ದಾರೆ.

  • 04 Apr 2024 08:51 PM (IST)

    ಗಿಲ್ ಅರ್ಧಶತಕ

    ಗುಜರಾತ್ ತಂಡದ ನಾಯಕ ಶುಭ್​ಮನ್ ಗಿಲ್ ಅರ್ಧಶತಕ ಪೂರೈಸಿದ್ದಾರೆ. ಗುಜರಾತ್ ತಂಡ 16 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 143 ರನ್ ಗಳಿಸಿ ಆಡುತ್ತಿದೆ. ಶುಭಮನ್ ಗಿಲ್ 59 ರನ್ ಹಾಗೂ ವಿಜಯ್ ಶಂಕರ್ 6 ರನ್ ಗಳಿಸಿ ಆಡುತ್ತಿದ್ದಾರೆ.

  • 04 Apr 2024 08:46 PM (IST)

    ಸುದರ್ಶನ್ ಔಟ್

    ಗುಜರಾತ್ ಮೂರನೇ ವಿಕೆಟ್ ಕಳೆದುಕೊಂಡಿದೆ. ಸಾಯಿ ಸುದರ್ಶನ್ 19 ಎಸೆತಗಳಲ್ಲಿ 33 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಮತ್ತೊಂದೆಡೆ, ನಾಯಕ ಶುಭಮನ್ ಗಿಲ್ ಕ್ರೀಸ್‌ನಲ್ಲಿದ್ದು ಅರ್ಧಶತಕ ಗಳಿಸುವ ಸನಿಹದಲ್ಲಿದ್ದಾರೆ. 14 ಓವರ್‌ಗಳ ಅಂತ್ಯಕ್ಕೆ ಗುಜರಾತ್ ಮೂರು ವಿಕೆಟ್‌ಗೆ 123 ರನ್ ಗಳಿಸಿದೆ. ಗಿಲ್ 29 ಎಸೆತಗಳಲ್ಲಿ ನಾಲ್ಕು ಬೌಂಡರಿ ಹಾಗೂ ಎರಡು ಸಿಕ್ಸರ್‌ಗಳ ನೆರವಿನಿಂದ 46 ರನ್, ವಿಜಯ್ ಶಂಕರ್ ಒಂದು ರನ್ ಗಳಿಸಿ ಅವರೊಂದಿಗೆ ಕ್ರೀಸ್‌ನಲ್ಲಿದ್ದಾರೆ.

  • 04 Apr 2024 08:24 PM (IST)

    10 ಓವರ್‌ ಮುಕ್ತಾಯ

    ಗುಜರಾತ್ ತಂಡ 10 ಓವರ್‌ಗಳಲ್ಲಿ 84 ರನ್ ಗಳಿಸಿ ಆಡುತ್ತಿದೆ. ಶುಭಮನ್ ಗಿಲ್ 29 ರನ್ ಹಾಗೂ ಸಾಯಿ ಸುದರ್ಶನ್ 12 ರನ್ ಗಳಿಸಿ ಆಡುತ್ತಿದ್ದಾರೆ.

  • 04 Apr 2024 08:24 PM (IST)

    ಕೇನ್ ವಿಲಿಯಮ್ಸನ್

    ನಾಯಕ ಶುಭಮನ್ ಗಿಲ್ ಅವರೊಂದಿಗೆ ಇನಿಂಗ್ಸ್ ನಿಭಾಯಿಸುತ್ತಿದ್ದ ಕೇನ್ ವಿಲಿಯಮ್ಸನ್ ಔಟಾದರು. ಈ ಸೀಸನ್​ನಲ್ಲಿ ಮೊದಲ ಪಂದ್ಯವನ್ನು ಆಡಿದ ವಿಲಿಯಮ್ಸನ್ 22 ಎಸೆತಗಳಲ್ಲಿ ನಾಲ್ಕು ಬೌಂಡರಿಗಳ ಸಹಾಯದಿಂದ 26 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಗುಜರಾತ್ ಪರ ನಾಯಕ ಶುಭಮನ್ ಗಿಲ್ ಜೊತೆಗೆ ಸಾಯಿ ಸುದರ್ಶನ್ ಕ್ರೀಸ್‌ನಲ್ಲಿದ್ದಾರೆ. ಗಿಲ್ 26 ರನ್ ಗಳಿಸಿ ಆಡುತ್ತಿದ್ದಾರೆ.

  • 04 Apr 2024 08:03 PM (IST)

    4 ಓವರ್‌ ಮುಕ್ತಾಯ

    ಗುಜರಾತ್ 4 ಓವರ್​ಗಳಲ್ಲಿ 1 ವಿಕೆಟ್ ನಷ್ಟಕ್ಕೆ 35 ರನ್ ಗಳಿಸಿದೆ. ಗಿಲ್ 18 ರನ್ ಗಳಿಸಿ ಆಡುತ್ತಿದ್ದರೆ, ಕೇನ್ ವಿಲಿಯಮ್ಸನ್ 1 ರನ್ ಗಳಿಸಿ ಆಡುತ್ತಿದ್ದಾರೆ.

  • 04 Apr 2024 07:49 PM (IST)

    ಸಹಾ ಔಟ್

    ವೃದ್ಧಿಮಾನ್ ಸಹಾ 13 ಎಸೆತಗಳಲ್ಲಿ 11 ರನ್ ಗಳಿಸಿ ವಿಕೆಟ್ ಒಪ್ಪಿಸಿದ್ದಾರೆ. ಸಹಾ ಅವರನ್ನು ವೇಗಿ ಕಗಿಸೊ ರಬಾಡ ಬಲಿಪಶು ಮಾಡಿದರು. ಐಪಿಎಲ್‌ನ ಕಳೆದ ಐದು ಇನ್ನಿಂಗ್ಸ್‌ಗಳಲ್ಲಿ ರಬಾಡ ಸಾಹಾ ಅವರನ್ನು ಬಲಿಪಶು ಮಾಡಿದ್ದು ಇದು ನಾಲ್ಕನೇ ಬಾರಿ. ಇನ್ನು ಕೇನ್ ವಿಲಿಯಮ್ಸನ್ ಶುಭಮನ್ ಗಿಲ್ ಅವರೊಂದಿಗೆ ಕ್ರೀಸ್‌ನಲ್ಲಿದ್ದಾರೆ. ಗಿಲ್ ಆರು ಎಸೆತಗಳಲ್ಲಿ 13 ರನ್ ಗಳಿಸಿ ಆಡುತ್ತಿದ್ದಾರೆ.

  • 04 Apr 2024 07:36 PM (IST)

    ಗುಜರಾತ್ ಬ್ಯಾಟಿಂಗ್ ಆರಂಭ

    ಪಂಜಾಬ್ ಕಿಂಗ್ಸ್ ವಿರುದ್ಧ ಗುಜರಾತ್ ಟೈಟಾನ್ಸ್ ಇನ್ನಿಂಗ್ಸ್ ಆರಂಭವಾಗಿದೆ. ನಾಯಕ ಶುಭ್‌ಮನ್ ಗಿಲ್ ಮತ್ತು ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್ ವೃದ್ಧಿಮಾನ್ ಸಹಾ ಗುಜರಾತ್‌ಗೆ ಬ್ಯಾಟಿಂಗ್ ಆರಂಭಿಸಲು ಬಂದಿದ್ದಾರೆ.

  • 04 Apr 2024 07:24 PM (IST)

    ಗುಜರಾತ್ ಟೈಟಾನ್ಸ್

    ವೃದ್ಧಿಮಾನ್ ಸಹಾ (ವಿಕೆಟ್ ಕೀಪರ್), ಶುಬ್ಮನ್ ಗಿಲ್ (ನಾಯಕ), ಸಾಯಿ ಸುದರ್ಶನ್, ಕೇನ್ ವಿಲಿಯಮ್ಸನ್, ವಿಜಯ್ ಶಂಕರ್, ಅಜ್ಮತುಲ್ಲಾ ಒಮರ್ಜಾಯ್, ರಾಹುಲ್ ತೆವಾಟಿಯಾ, ರಶೀದ್ ಖಾನ್, ನೂರ್ ಅಹ್ಮದ್, ಉಮೇಶ್ ಯಾದವ್, ದರ್ಶನ್ ನಲ್ಕಂಡೆ.

    ಇಂಪ್ಯಾಕ್ಟ್ ಪ್ಲೇಯರ್: ಬಿಆರ್ ಶರತ್, ಮೋಹಿತ್ ಶರ್ಮಾ, ಸಂದೀಪ್ ವಾರಿಯರ್, ಅಭಿನವ್ ಮನೋಹರ್, ಮಾನವ್ ಸುತಾರ್

  • 04 Apr 2024 07:23 PM (IST)

    ಪಂಜಾಬ್ ಕಿಂಗ್ಸ್

    ಶಿಖರ್ ಧವನ್ (ನಾಯಕ), ಜಾನಿ ಬೈರ್‌ಸ್ಟೋವ್ (ವಿಕೆಟ್ ಕೀಪರ್), ಪ್ರಭ್‌ಸಿಮ್ರಾನ್ ಸಿಂಗ್, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಸ್ಯಾಮ್ ಕರನ್, ಶಶಾಂಕ್ ರಜಾ, ಸಿಕಂದರ್ ಸಿಂಗ್, ಸಿಕಂದರ್ ಸಿಂಗ್ ಹರ್ಷಲ್ ಪಟೇಲ್, ಹರ್ಪ್ರೀತ್ ಬ್ರಾರ್, ಕಗಿಸೊ ರಬಾಡ, ಅರ್ಶ್ದೀಪ್ ಸಿಂಗ್.

    ಇಂಪ್ಯಾಕ್ಟ್ ಪ್ಲೇಯರ್: ತಾನ್ಯಾ ತ್ಯಾಗರಾಜನ್, ನಾಥನ್ ಎಲ್ಲಿಸ್, ಅಶುತೋಷ್ ಶರ್ಮಾ, ರಾಹುಲ್ ಚಾಹರ್, ವಿದ್ವತ್ ಕಾವೇರಪ್ಪ

  • 04 Apr 2024 07:02 PM (IST)

    ಟಾಸ್ ಗೆದ್ದ ಪಂಜಾಬ್

    ಟಾಸ್ ಗೆದ್ದ ಪಂಜಾಬ್ ನಾಯಕ ಶಿಖರ್ ಧವನ್ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ.

Published On - Apr 04,2024 7:01 PM