AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಾಂಡ್ಯ ಕ್ಯಾಪ್ಟನ್ಸಿಗೆ ಕೋಕ್? ಸತತ ಸೋಲಿನ ಬಳಿಕ ತಲೆದಂಡದ ಎಚ್ಚರಿಕೆ

ಐದು ಬಾರಿ ಐಪಿಎಲ್ ಚಾಂಪಿಯನ್ ಮುಂಬೈ ಇಂಡಿಯನ್ಸ್ ಸತತ ಸೋಲುಗಳಿಂದ ಕಂಗಾಲಾಗಿದೆ. ಹಾರ್ದಿಕ್ ಪಾಂಡ್ಯ ನಾಯಕತ್ವದಲ್ಲಿ ತಂಡ 9ನೇ ಸ್ಥಾನದಲ್ಲಿದ್ದು, 5ರಲ್ಲಿ 4 ಪಂದ್ಯ ಸೋತಿದೆ. ಕಳಪೆ ಪ್ರದರ್ಶನ ಮತ್ತು ನಾಯಕತ್ವಕ್ಕಾಗಿ ಪಾಂಡ್ಯ ಮೇಲೆ ಭಾರಿ ಟೀಕೆಗಳು ವ್ಯಕ್ತವಾಗಿವೆ. ಪರಿಸ್ಥಿತಿ ಸರಿಪಡಿಸಲು ಕಠಿಣ ನಿರ್ಧಾರಗಳ ಅಗತ್ಯವಿದೆ ಎಂದು ಪಾಂಡ್ಯವೇ ಹೇಳಿದ್ದು, ಅವರ ನಾಯಕತ್ವ ಸ್ಥಾನಕ್ಕೆ ಕುತ್ತು ಬಂದಿದೆ.

ಪಾಂಡ್ಯ ಕ್ಯಾಪ್ಟನ್ಸಿಗೆ ಕೋಕ್? ಸತತ ಸೋಲಿನ ಬಳಿಕ ತಲೆದಂಡದ ಎಚ್ಚರಿಕೆ
ಹಾರ್ದಿಕ್
ರಾಜೇಶ್ ದುಗ್ಗುಮನೆ
| Edited By: |

Updated on:Jul 03, 2026 | 1:22 PM

Share

ಐದು ಬಾರಿ ಚಾಂಪಿಯನ್ಸ್ ಪಟ್ಟಕ್ಕೇರಿದ ಮುಂಬೈ ಇಂಡಿಯನ್ಸ್ ಈ ಬಾರಿಯ ಐಪಿಎಲ್ ಅಂಕ ಪಟ್ಟಿಯಲ್ಲಿ 9ನೇ ಸ್ಥಾನದಲ್ಲಿದೆ. ಕಳೆದ ವರ್ಷವೂ ತಂಡದ ಸ್ಥಿತಿ ಇದೇ ರೀತಿ ಇತ್ತು. ಕೆಕೆಆರ್​ ವಿರುದ್ಧದ ಮೊದಲ ಪಂದ್ಯ ಗೆದ್ದಿದ್ದು ಬಿಟ್ಟರೆ, ಉಳಿದ ನಾಲ್ಕಕ್ಕೆ ನಾಲ್ಕು ಪಂದ್ಯವನ್ನು ಪಾಂಡ್ಯ ನೇತೃತ್ವದ ಮುಂಬೈ ಪಡೆ ಸೋತಿದೆ. ಈ ಬೆನ್ನಲ್ಲೇ ದೊಡ್ಡ ತಲೆದಂಡದ ಎಚ್ಚರಿಕೆ ಬಂದಿದೆ. ಹಾರ್ದಿಕ್ ಪಾಂಡ್ಯ ಕಳಪೆ ಆಟ ಹಾಗೂ ಕ್ಯಾಪ್ಟನ್ಸಿ ಕಾರಣದಿಂದ ಅವರನ್ನು ಸ್ಥಾನದಿಂದ ಕೆಳಕ್ಕೆ ಇಳಿಸಲಾಗುತ್ತದೆಯೇ ಎಂಬ ಪ್ರಶ್ನೆ ಮೂಡಿದೆ.

ಏಪ್ರಿಲ್ 16ರಂದು ನಡೆದ ಪಂಜಾಬ್ ವಿರುದ್ಧದ ಪಂದ್ಯದಲ್ಲಿ ಮುಂಬೈ 7 ವಿಕೆಟ್​​​ಗಳ ಸೋಲನ್ನು ಕಂಡಿದೆ. ಮುಂಬೈ ಇಂಡಿಯನ್ಸ್ ನೀಡಿದ 195 ರನ್​​ಗಳ ಬೃಹತ್ ಮೊತ್ತವನ್ನು ಅನಾಯಾಸವಾಗಿ ಹೊಡೆದು ಹಾಕಿದೆ ಪಂಜಾಬ್ ತಂಡ. ಈ ಮೂಲಕ ಅಂಕಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಿದೆ. ಹೋಂ ಗ್ರೌಂಡ್​​ನಲ್ಲೇ ಈ ಸೋಲು ಉಂಟಾಗಿದ್ದು ಮುಂಬೈ ತಂಡಕ್ಕೆ ಭಾರೀ ಮುಖಭಂಗ ಆದಂತೆ ಆಗಿದೆ. ಕ್ವಿಂಟನ್ ಡಿಕಾಕ್ ಅವರ ಶತಕದ ನಡುವೆಯೂ ಮುಂಬೈಗೆ ಗೆಲುವು ಸಿಕ್ಕಿಲ್ಲ.

ಸೋಲಿನ ನಂತರ ಮಾತನಾಡಿದ ಕ್ಯಾಪ್ಟನ್ ಹಾರ್ದಿಕ್ ಪಾಂಡ್ಯ, ಪರಿಸ್ಥಿತಿಯನ್ನು ಸರಿಪಡಿಸಲು ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಬೇಕೇ ಎಂದು ಯೋಚಿಸಬೇಕಿದೆ ಎಂದಿದ್ದಾರೆ. ಹಾರ್ದಿಕ್ ಕ್ಯಾಪ್ಟನ್ಸಿ ಹೋಗಬಹುದೇ ಎಂಬ ಪ್ರಶ್ನೆ ಕೂಡ ಮೂಡಿದೆ.

‘ನಾವು ಕೆಲವು ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಬೇಕೇ ಅಥವಾ ಈಗ ಆಡುತ್ತಿರುವ ರೀತಿಯೇ ಆಡಿ ಪರಿಸ್ಥಿತಿಯನ್ನು ಬದಲಾಯಿಸುವ ಪ್ರಯತ್ನ ಮಾಡಬೇಕೇ ಎಂಬುದನ್ನು ನೋಡಬೇಕಿದೆ. ವೈಕ್ತಿಕವಾಗಿ ಎಡವುತ್ತಿದ್ದೀವಾ, ಗುಂಪಿನಲ್ಲಿ ಎಡವುತ್ತಿದ್ದೀವಾ ಅಥವಾ ನಮ್ಮ ಯೋಜನೆ ಸರಿಯಾಗಿ ಆಗುತ್ತಿಲ್ಲವೇ ಎಂಬಿತ್ಯಾದಿ ವಿಷಯಗಳನ್ನು ನೋಡಬೇಕಿದೆ. ಮುಂದೆ ಏನು ಮಾಡಬಹುದು ಎಂದು ನೋಡೋಣ’ ಎಂದು ಅವರು ಹೇಳಿದರು. ಪಾಂಡ್ಯ ಕ್ಯಾಪ್ಟನ್ಸಿ ಬಗ್ಗೆ ಈಗಾಗಲೇ ಅಭಿಮಾನಿಗಳಿಂದ ಸಾಕಷ್ಟು ಟೀಕೆ ಕೇಳಿ ಬಂದಿದೆ. ಅವರು ಪ್ರೀತಿ ಬಗ್ಗೆ ಮಾತ್ರ ಗಂಭೀರವಾಗಿದ್ದಾರೆಯೇ ಹೊರತು ಆಟದ ಬಗ್ಗೆ ಗಂಭೀರವಾಗಿಲ್ಲ ಎಂಬ ಆರೋಪಗಳು ಕೇಳಿ ಬಂದಿವೆ. ಗೆಲುವಿನ ರುಚಿ ಕಾಣಲು ಕ್ಯಾಪ್ಟನ್ಸಿ ಬದಲಿಸಲಾಗುತ್ತದೆಯೇ ಎಂಬ ಪ್ರಶ್ನೆ ಮೂಡಿದೆ.

ಇನ್ನಷ್ಟು ಕ್ರಿಕೆಟ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 8:40 am, Fri, 17 April 26

Follow Us
ರಾಜೇಶ್ ದುಗ್ಗುಮನೆ
ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
ನಾನಾ ಪಾಟೇಕರ್ ಜೊತೆ ಕರಿ ಸುಬ್ಬು ಒಡನಾಟ ಶುರು ಆಗಿದ್ದು ಹೇಗೆ? ವಿವರಿಸಿದ ನಟ
ನಾನಾ ಪಾಟೇಕರ್ ಜೊತೆ ಕರಿ ಸುಬ್ಬು ಒಡನಾಟ ಶುರು ಆಗಿದ್ದು ಹೇಗೆ? ವಿವರಿಸಿದ ನಟ
ಮುಂಬೈನ ಮುಲುಂಡ್ ಕಾರ್ಮಿಕರ ಕ್ಯಾಂಪ್‌ನಲ್ಲಿ ಭೀಕರ ಬೆಂಕಿ ದುರಂತ
ಮುಂಬೈನ ಮುಲುಂಡ್ ಕಾರ್ಮಿಕರ ಕ್ಯಾಂಪ್‌ನಲ್ಲಿ ಭೀಕರ ಬೆಂಕಿ ದುರಂತ
ಚಿಕ್ಕಮಗಳೂರಲ್ಲಿ ಬಿರುಗಾಳಿ ಸಹಿತ ಅಬ್ಬರಿಸಿದ ವರುಣ
ಚಿಕ್ಕಮಗಳೂರಲ್ಲಿ ಬಿರುಗಾಳಿ ಸಹಿತ ಅಬ್ಬರಿಸಿದ ವರುಣ
ವಿಜಯಲಕ್ಷ್ಮಿ ದರ್ಶನ್ ಅರ್ಜಿ ರದ್ದಾಗಿದ್ದೇಕೆ: ವಿವರಿಸಿದ ವಕೀಲ
ವಿಜಯಲಕ್ಷ್ಮಿ ದರ್ಶನ್ ಅರ್ಜಿ ರದ್ದಾಗಿದ್ದೇಕೆ: ವಿವರಿಸಿದ ವಕೀಲ
ಸತತ 2ನೇ ವರ್ಷವೂ ಚಾಮರಾಜನಗರ ದಸರಾ ರದ್ದು; ಜಾನಪದ ಕಲಾವಿದರಲ್ಲಿ ಬೇಸರ
ಸತತ 2ನೇ ವರ್ಷವೂ ಚಾಮರಾಜನಗರ ದಸರಾ ರದ್ದು; ಜಾನಪದ ಕಲಾವಿದರಲ್ಲಿ ಬೇಸರ
ಎಸ್​​​​ಐಆರ್ ವಿರುದ್ಧ ಸಿಜೆಪಿ ಸಮರ: ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ
ಎಸ್​​​​ಐಆರ್ ವಿರುದ್ಧ ಸಿಜೆಪಿ ಸಮರ: ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ
ಕರ್ನಾಟಕ ಸರ್ಕಾರ ಕೆಡವಲು ಕೇಂದ್ರದಿಂದ ಯತ್ನ: ಪ್ರಿಯಾಂಕ್ ಖರ್ಗೆ ಗಂಭೀರ ಆರೋಪ
ಕರ್ನಾಟಕ ಸರ್ಕಾರ ಕೆಡವಲು ಕೇಂದ್ರದಿಂದ ಯತ್ನ: ಪ್ರಿಯಾಂಕ್ ಖರ್ಗೆ ಗಂಭೀರ ಆರೋಪ
ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡದ ಟಿಹೆಚ್ಒಗಳು: ಸಚಿವ ಖಾದರ್ ಗರಂ
ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡದ ಟಿಹೆಚ್ಒಗಳು: ಸಚಿವ ಖಾದರ್ ಗರಂ
ಆಸ್ಪತ್ರೆಯಲ್ಲಿ ಮೊಬೈಲ್ ಟಾರ್ಚ್ ಬೆಳಕಿನಲ್ಲೇ ಚಿಕಿತ್ಸೆ
ಆಸ್ಪತ್ರೆಯಲ್ಲಿ ಮೊಬೈಲ್ ಟಾರ್ಚ್ ಬೆಳಕಿನಲ್ಲೇ ಚಿಕಿತ್ಸೆ
ಬೀಗರೂಟ ಮಾಡಿದ್ರೆ 1 ಲಕ್ಷ, ತಿಂದ್ರೆ 50 ಸಾವಿರ ದಂಡ
ಬೀಗರೂಟ ಮಾಡಿದ್ರೆ 1 ಲಕ್ಷ, ತಿಂದ್ರೆ 50 ಸಾವಿರ ದಂಡ