Rohit Sharma: ಪೋಸ್ಟ್ ಮ್ಯಾಚ್​ನಲ್ಲಿ ರೋಹಿತ್ ಶರ್ಮಾರನ್ನು ಹಾಡಿಹೊಗಳಿದ ಹಾರ್ದಿಕ್ ಪಾಂಡ್ಯ: ಏನಂದ್ರು ನೋಡಿ

Hardik Pandya post match presentation: ಪೋಸ್ಟ್ ಮ್ಯಾಚ್ ಪ್ರೆಸೆಂಟೇಷನ್ ವೇಳೆ ಮಾತನಾಡಿದ ಮುಂಬೈ ನಾಯಕ ಹಾರ್ದಿಕ್ ಪಾಂಡ್ಯ, ನಾವು ಆಡುತ್ತಿರುವ ಕ್ರಿಕೆಟ್ ಶೈಲಿ, ದೊಡ್ಡ ಸ್ಕೋರಿಂಗ್ ಪಿಚ್‌ನಲ್ಲಿ ಬೌಲಿಂಗ್ ಮಾಡಿ ನಂತರ ಗುರಿ ತಲುಪಿದ ರೀತಿ ತುಂಬಾ ಚೆನ್ನಾಗಿದೆ. ರೋಹಿತ್ ಶರ್ಮಾ ಅವರು ಫಾರ್ಮ್‌ನಲ್ಲಿರುವಾಗ ಆತ ಎದುರಾಳಿ ತಂಡದ ಕೈಯಿಂದ ಜಯವನ್ನು ಕಸಿದುಕೊಳ್ಳುವ ಆಟಗಾರ ಎಂದು ಹೇಳಿದ್ದಾರೆ.

Rohit Sharma: ಪೋಸ್ಟ್ ಮ್ಯಾಚ್​ನಲ್ಲಿ ರೋಹಿತ್ ಶರ್ಮಾರನ್ನು ಹಾಡಿಹೊಗಳಿದ ಹಾರ್ದಿಕ್ ಪಾಂಡ್ಯ: ಏನಂದ್ರು ನೋಡಿ
Rohit Sharma And Hardik Pandya Post Match

Updated on: Apr 21, 2025 | 8:03 AM

ಬೆಂಗಳೂರು (ಏ, 21): ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಏಕಪಕ್ಷೀಯವಾಗಿ ಸೋಲಿಸಿದ ನಂತರ ಮುಂಬೈ ಇಂಡಿಯನ್ಸ್ (Mumbai Indians vs Chennai Super Kings) ತಂಡದ ನಾಯಕ ಹಾರ್ದಿಕ್ ಪಾಂಡ್ಯ ನಾವು ಸರಳ ಕ್ರಿಕೆಟ್ ಆಡುವತ್ತ ಮತ್ತು ನಮ್ಮ ತಂತ್ರಗಳನ್ನು ಕಾರ್ಯಗತಗೊಳಿಸುವತ್ತ ಗಮನ ಹರಿಸುತ್ತಿರುವುದಾಗಿ ಹೇಳಿದ್ದಾರೆ. ರೋಹಿತ್ ಶರ್ಮಾ (76 ನಾಟ್ ಔಟ್) ಮತ್ತು ಸೂರ್ಯ ಕುಮಾರ್ ಯಾದವ್ (68 ನಾಟ್ ಔಟ್) ಅವರ ಅಜೇಯ ಅರ್ಧಶತಕಗಳು ಮತ್ತು ಎರಡನೇ ವಿಕೆಟ್‌ಗೆ 54 ಎಸೆತಗಳಲ್ಲಿ 114 ರನ್‌ಗಳ ಅಜೇಯ ಜೊತೆಯಾಟದ ನೆರವಿನಿಂದ ಸಿಎಸ್​ಕೆ ತಂಡವನ್ನು ಸೋಲಿಸುವ ಮೂಲಕ ಮುಂಬೈ ಇಂಡಿಯನ್ಸ್ ಸತತ ಮೂರನೇ ಗೆಲುವು ದಾಖಲಿಸಿತು. ರೋಹಿತ್ ಶರ್ಮಾ ಅವರಿಗೆ ಪಂದ್ಯಶ್ರೇಷ್ಠ ಪ್ರಶಸ್ತಿ ನೀಡಲಾಯಿತು.

ಪಂದ್ಯದ ನಂತರ ಹಾರ್ದಿಕ್ ಪಾಂಡ್ಯ ಹೇಳಿದ್ದೇನು?:

ಪೋಸ್ಟ್ ಮ್ಯಾಚ್ ಪ್ರೆಸೆಂಟೇಷನ್ ವೇಳೆ ಮಾತನಾಡಿದ ಮುಂಬೈ ನಾಯಕ ಹಾರ್ದಿಕ್ ಪಾಂಡ್ಯ, “ನಾವು ಆಡುತ್ತಿರುವ ಕ್ರಿಕೆಟ್ ಶೈಲಿ, ದೊಡ್ಡ ಸ್ಕೋರಿಂಗ್ ಪಿಚ್‌ನಲ್ಲಿ ಬೌಲಿಂಗ್ ಮಾಡಿ ನಂತರ ಗುರಿ ತಲುಪಿದ ರೀತಿ ತುಂಬಾ ಚೆನ್ನಾಗಿದೆ. ರೋಹಿತ್ ಶರ್ಮಾ ಅವರು ಫಾರ್ಮ್‌ನಲ್ಲಿರುವಾಗ ಆತ ಎದುರಾಳಿ ತಂಡದ ಕೈಯಿಂದ ಜಯವನ್ನು ಕಸಿದುಕೊಳ್ಳುವ ಆಟಗಾರ. ಪ್ರತಿಯೊಬ್ಬ ಆಟಗಾರನೂ ಕೊಡುಗೆ ನೀಡುತ್ತಿದ್ದಾರೆ. ನಾವು ಸರಳ ಕ್ರಿಕೆಟ್ ಆಡುವ ಮತ್ತು ನಮ್ಮ ಯೋಜನೆಗಳನ್ನು ಕಾರ್ಯಗತಗೊಳಿಸುವತ್ತ ಗಮನ ಹರಿಸುತ್ತಿದ್ದೇವೆ” ಎಂದು ಹೇಳಿದರು.

ಸೋಲಿನ ನಂತರ ಎಂಎಸ್ ಧೋನಿ ಹೇಳಿದ್ದೇನು?:

ಏತನ್ಮಧ್ಯೆ, ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ, ನಾವು ಉತ್ತಮ ಸ್ಕೋರ್ ಗಳಿಸುವಲ್ಲಿ ಬಹಳ ಹಿಂದುಳಿದಿದ್ದೆವು ಮತ್ತು ನಂತರ ಇಬ್ಬನಿ ಬೀಳುತ್ತದೆ ಎಂದು ನಮಗೆ ತಿಳಿದಿತ್ತು ಎಂದು ಹೇಳಿದರು. ನಾವು ಸ್ವಲ್ಪ ಬೇಗ ದಾಳಿ ಆರಂಭಿಸಬೇಕಿತ್ತು. ಬುಮ್ರಾ ಉತ್ತಮ ಬೌಲಿಂಗ್ ಮಾಡಿದರು. ಅವರು ಕೊನೆಯ ಓವರ್ ಬೌಲ್ ಮಾಡುವ ವಿಶ್ವದ ಅತ್ಯುತ್ತಮ ಬೌಲರ್ ಎಂದಿದ್ದಾರೆ.

ಇದನ್ನೂ ಓದಿ
ಮೈದಾನದಲ್ಲೇ ಕ್ಯಾಪ್ಟನ್ ರಜತ್​ಗೆ ಬೈದ ಕೊಹ್ಲಿ: ವಿಡಿಯೋ ನೋಡಿ
ಮುಂಬೈ ವಿರುದ್ಧವೂ ಮುಗ್ಗರಿಸಿದ ಸಿಎಸ್​ಕೆಗೆ 6ನೇ ಸೋಲು
ಗೆಲುವಿಗೆ ಕೊಹ್ಲಿ-ಪಡಿಕ್ಕಲ್ ಕಾರಣ ಅಲ್ವಂತೆ: ರಜತ್ ಪಾಟಿದರ್ ಏನಂದ್ರು ನೋಡಿ
4 ರನ್ ಓಡಿದ ಕೊಹ್ಲಿ: ವಿರಾಟ್ ಬೆಂಕಿ ಓಟಕ್ಕೆ ಸ್ಟೇಡಿಯಂ ಸ್ತಬ್ಧ

Virat Kohli: ಮೈದಾನದಲ್ಲೇ ಕ್ಯಾಪ್ಟನ್ ರಜತ್​ಗೆ ಬೈದ ವಿರಾಟ್ ಕೊಹ್ಲಿ: ವಿಡಿಯೋ ನೋಡಿ

175 ರನ್‌ಗಳ ಸ್ಕೋರ್ ತುಂಬಾ ಕಡಿಮೆಯಾಗಿತ್ತು ಮತ್ತು ಮೊದಲ ಆರು ಓವರ್‌ಗಳಲ್ಲಿ ಹೆಚ್ಚು ರನ್‌ಗಳನ್ನು ನೀಡಿದ ನಂತರ ಮತ್ತೆ ಪಂದ್ಯಕ್ಕೆ ಕಮ್​ಬ್ಯಾಕ್ ಮಾಡುವುದು ಕಷ್ಟ ಎಂದು ಧೋನಿ ಹೇಳಿದ್ದಾರೆ. ನಾವು ಎಲ್ಲಿ ತಪ್ಪು ಮಾಡುತ್ತಿದ್ದೇವೆ ಎಂದು ಯೋಚಿಸಬೇಕು. ನಾವು ಪ್ರತಿ ಪಂದ್ಯವನ್ನೂ ಗೆಲ್ಲಲೇಬೇಕು. ನಾವು ಉತ್ತಮ ಕ್ರಿಕೆಟ್ ಆಡಿದ್ದರಿಂದಲೇ ಇಷ್ಟೊಂದು ಯಶಸ್ವಿ ತಂಡವಾಗಲು ಕಾರಣವೇನೆಂದು ಯೋಚಿಸಬೇಕು. ಆದರೆ ಈ ಸಮಯದಲ್ಲಿ ನಾವು ಭಾವುಕರಾಗಬೇಕಾಗಿಲ್ಲ ಎಂದು ತಂಡಕ್ಕೆ ಧೈರ್ಯ ತುಂಬಿದ್ದಾರೆ.

ಫಾರ್ಮ್​ಗೆ ಮರಳಿದ ಹಿಟ್​ಮ್ಯಾನ್:

ರೋಹಿತ್ ಶರ್ಮಾ ಕೇವಲ 33 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಇಲ್ಲಿಗೆ ನಿಲ್ಲದ ಹಿಟ್​ಮ್ಯಾನ್ ತಮ್ಮ ತಂಡವನ್ನು ಗೆಲುವಿನತ್ತ ಕೊಂಡೊಯ್ದ ನಂತರ ಡಗೌಟ್‌ಗೆ ಮರಳಿದರು. ಎರಡನೇ ಇನ್ನಿಂಗ್ಸ್‌ನಲ್ಲಿ ರೋಹಿತ್ ಪ್ರಮುಖ ಇನ್ನಿಂಗ್ಸ್ ಆಡಿ, 168.89 ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟಿಂಗ್ ಮಾಡಿ 45 ಎಸೆತಗಳಲ್ಲಿ ಆರು ಸಿಕ್ಸರ್‌ಗಳು ಮತ್ತು ನಾಲ್ಕು ಬೌಂಡರಿಗಳ ಸಹಾಯದಿಂದ ಅಜೇಯ 76 ರನ್ ಗಳಿಸಿದರು. ಈ ಮೂಲಕ ಹಿಟ್‌ಮ್ಯಾನ್ ಟೀಕಾಕಾರರಿಗೆ ಸೂಕ್ತ ಉತ್ತರ ನೀಡಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ