ENG vs AUS: ಇಂಗ್ಲೆಂಡ್ ತಂಡಕ್ಕೆ ಹೊಸ ನಾಯಕ

England vs Australia: ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ನಡುವಣ ಏಕದಿನ ಸರಣಿಯು ಸೆಪ್ಟೆಂಬರ್ 19 ರಿಂದ ಶುರುವಾಗಲಿದೆ. ಈ ಸರಣಿಯ ಮೊದಲ ಪಂದ್ಯವು ನಾಟಿಂಗ್​ಹ್ಯಾಮ್​ನ ಟ್ರೆಂಟ್ ಬ್ರಿಡ್ಜ್​ ಮೈದಾನದಲ್ಲಿ ನಡೆದರೆ, ಎರಡನೇ ಪಂದ್ಯವು ಲೀಡ್ಸ್​ನಲ್ಲಿ ಜರುಗಲಿದೆ. ಹಾಗೆಯೇ ಮೂರನೇ ಪಂದ್ಯಕ್ಕೆ ರಿವರ್ಸ್ ಸೈಡ್​ ಗ್ರೌಂಡ್ ಆತಿಥ್ಯವಹಿಸಲಿದೆ.

ENG vs AUS: ಇಂಗ್ಲೆಂಡ್ ತಂಡಕ್ಕೆ ಹೊಸ ನಾಯಕ
Harry Brook
Follow us
| Updated By: ಝಾಹಿರ್ ಯೂಸುಫ್

Updated on: Sep 17, 2024 | 7:49 AM

ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯಲ್ಲಿ ಇಂಗ್ಲೆಂಡ್ ತಂಡವನ್ನು ಹ್ಯಾರಿ ಬ್ರೂಕ್ ಮುನ್ನಡೆಸಲಿದ್ದಾರೆ. ತಂಡದ ನಾಯಕ ಜೋಸ್ ಬಟ್ಲರ್ ಗಾಯದ ಕಾರಣ ಈ ಸರಣಿಯಿಂದಲೂ ಹೊರಗುಳಿದಿದ್ದು, ಹೀಗಾಗಿ ಬ್ರೂಕ್ ಅವರಿಗೆ ತಂಡದ ಸಾರಥ್ಯ ನೀಡಲಾಗಿದೆ. ಇದಕ್ಕೂ ಮುನ್ನ ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಗೆ ಜೋಸ್ ಬಟ್ಲರ್ ಅಲಭ್ಯರಾಗಿದ್ದರು. ಅವರ ಅನುಪಸ್ಥಿತಿಯಲ್ಲಿ ಇಂಗ್ಲೆಂಡ್ ತಂಡವನ್ನು ಫಿಲ್ ಸಾಲ್ಟ್ ಮುನ್ನಡೆಸಿದ್ದರು. ಇದೀಗ ಐದು ಪಂದ್ಯಗಳ ಏಕದಿನ ಸರಣಿಯಿಂದಲೂ ಬಟ್ಲರ್ ಹೊರಗುಳಿದಿದ್ದು, ಹೀಗಾಗಿ ಯುವ ಸ್ಪೋಟಕ ದಾಂಡಿಗನಿಗೆ ನಾಯಕತ್ವವನ್ನು ವಹಿಸಲಾಗಿದೆ.

ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ನಡುವಣ ಏಕದಿನ ಸರಣಿಯು ಸೆಪ್ಟೆಂಬರ್ 19 ರಿಂದ ಶುರುವಾಗಲಿದೆ. ಈ ಸರಣಿಯ ಮೊದಲ ಪಂದ್ಯವು ನಾಟಿಂಗ್​ಹ್ಯಾಮ್​ನ ಟ್ರೆಂಟ್ ಬ್ರಿಡ್ಜ್​ ಮೈದಾನದಲ್ಲಿ ನಡೆದರೆ, ಎರಡನೇ ಪಂದ್ಯವು ಲೀಡ್ಸ್​ನಲ್ಲಿ ಜರುಗಲಿದೆ. ಹಾಗೆಯೇ ಮೂರನೇ ಪಂದ್ಯಕ್ಕೆ ರಿವರ್ಸ್ ಸೈಡ್​ ಗ್ರೌಂಡ್ ಆತಿಥ್ಯವಹಿಸಲಿದೆ. ಇನ್ನು ನಾಲ್ಕನೇ ಪಂದ್ಯ ಲಾರ್ಡ್ಸ್​ನಲ್ಲಿ ನಡೆಯಲಿದ್ದು, ಕೊನೆಯ ಪಂದ್ಯಕ್ಕೆ ಬ್ರಿಸ್ಟಲ್​ನ ಕೌಂಟಿ ಗ್ರೌಂಡ್ ಆತಿಥ್ಯವಹಿಸಲಿದೆ.

ಇಂಗ್ಲೆಂಡ್ vs ಆಸ್ಟ್ರೇಲಿಯಾ ಏಕದಿನ ಸರಣಿ ವೇಳಾಪಟ್ಟಿ:

  • ಇಂಗ್ಲೆಂಡ್ vs ಆಸ್ಟ್ರೇಲಿಯಾ ಮೊದಲ ಏಕದಿನ: ಸೆಪ್ಟೆಂಬರ್ 19 – ಟ್ರೆಂಟ್ ಬ್ರಿಡ್ಜ್, ನಾಟಿಂಗ್​ಹ್ಯಾಮ್- 3:30 PM IST
  • ಇಂಗ್ಲೆಂಡ್ vs ಆಸ್ಟ್ರೇಲಿಯಾ ಎರಡನೇ ಏಕದಿನ: ಸೆಪ್ಟೆಂಬರ್ 21 – ಹೆಡಿಂಗ್ಲಿ, ಲೀಡ್ಸ್- 6:30 PM IST
  • ಇಂಗ್ಲೆಂಡ್ vs ಆಸ್ಟ್ರೇಲಿಯಾ ಮೂರನೇ ಏಕದಿನ: : ಸೆಪ್ಟೆಂಬರ್ 24 – ರಿವರ್‌ಸೈಡ್ ಗ್ರೌಂಡ್, ಚೆಸ್ಟರ್-ಲೆ-ಸ್ಟ್ರೀಟ್ – 3:30 PM IST
  • ಇಂಗ್ಲೆಂಡ್ vs ಆಸ್ಟ್ರೇಲಿಯಾ ನಾಲ್ಕನೇ ಏಕದಿನ: ಸೆಪ್ಟೆಂಬರ್ 27 – ಲಾರ್ಡ್ಸ್, ಲಂಡನ್- 6:30 PM IST
  • ಇಂಗ್ಲೆಂಡ್ vs ಆಸ್ಟ್ರೇಲಿಯಾ ಐದನೇ ಏಕದಿನ : ಸೆಪ್ಟೆಂಬರ್ 29 – ಕೌಂಟಿ ಗ್ರೌಂಡ್, ಬ್ರಿಸ್ಟಲ್- 3:30 PM IST

ಇಂಗ್ಲೆಂಡ್ ಏಕದಿನ ತಂಡ: ಹ್ಯಾರಿ ಬ್ರೂಕ್ (ನಾಯಕ), ಜೋಫ್ರಾ ಆರ್ಚರ್, ಜಾಕೋಬ್ ಬೆಥೆಲ್, ಬ್ರೈಡನ್ ಕಾರ್ಸೆ, ಜೋರ್ಡನ್ ಕಾಕ್ಸ್, ಬೆನ್ ಡಕೆಟ್, ಜೋಶ್ ಹಲ್, ವಿಲ್ ಜಾಕ್ಸ್, ಮ್ಯಾಥ್ಯೂ ಪಾಟ್ಸ್, ಆದಿಲ್ ರಶೀದ್, ಫಿಲ್ ಸಾಲ್ಟ್, ಜೇಮೀ ಸ್ಮಿತ್, ಓಲಿ ಸ್ಟೋನ್, ರೀಸ್ ಟೋಪ್ಲಿ, ಜಾನ್ ಟರ್ನರ್.

ಇದನ್ನೂ ಓದಿ: ಒಂದೇ ವರ್ಷ ಟೀಮ್ ಇಂಡಿಯಾದ 8 ಆಟಗಾರರು ನಿವೃತ್ತಿ..!

ಆಸ್ಟ್ರೇಲಿಯಾ ಏಕದಿನ ತಂಡ: ಮಿಚೆಲ್ ಮಾರ್ಷ್ (ನಾಯಕ), ಗ್ಲೆನ್ ಮ್ಯಾಕ್ಸ್‌ವೆಲ್, ಅಲೆಕ್ಸ್ ಕ್ಯಾರಿ (ವಿಕೆಟ್ ಕೀಪರ್), ಟ್ರಾವಿಸ್ ಹೆಡ್, ಜೇಕ್ ಫ್ರೇಸರ್-ಮೆಕ್‌ಗುರ್ಕ್, ಆರೋನ್ ಹಾರ್ಡಿ, ಜೋಶ್ ಹ್ಯಾಝಲ್‌ವುಡ್, ಜೋಶ್ ಇಂಗ್ಲಿಸ್, ಶಾನ್ ಅಬಾಟ್, ಮಾರ್ನಸ್ ಲಾಬುಶೇನ್, ಕ್ಯಾಮರೋನ್ ಗ್ರೀನ್, ಮ್ಯಾಥ್ಯೂ ಶಾರ್ಟ್, ಸ್ಟೀವ್ ಸ್ಮಿತ್, ಮಿಚೆಲ್ ಸ್ಟಾರ್ಕ್, ಆ್ಯಡಂ ಝಂಪಾ.