AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Holi 2023: ಶರ್ಟ್​ ಬಿಚ್ಚಿ ಬಣ್ಣ ಸುರಿದ್ರು; ಸಿಎಸ್​ಕೆ ಆಟಗಾರರ ಹೋಳಿ ಆಚರಣೆ ಹೇಗಿತ್ತು ಗೊತ್ತಾ? ವಿಡಿಯೋ ನೋಡಿ

Holi 2023: ಪೋಸ್ಟ್ ಮಾಡಿರುವ ವಿಡಿಯೋ ಶೋಲೆ ಚಿತ್ರದ ಖಳನಾಯಕ ಗಬ್ಬರ್ ಸಿಂಗ್ ಸಂಭಾಷಣೆಯೊಂದಿಗೆ ಆರಂಭವಾಗುತ್ತದೆ. ಇದಾದ ಬಳಿಕ ಆಟಗಾರರ ನಡುವೆ ಪರಸ್ಪರ ಬಣ್ಣ ಹಚ್ಚುವ ಪೈಪೋಟಿ ಏರ್ಪಟ್ಟಿದ್ದು, ನಂತರ ಚೆನ್ನೈ ತಂಡದ ಎಲ್ಲಾ ಯುವ ಆಟಗಾರರು ಮೋಜು ಮಸ್ತಿ ಮಾಡುತ್ತಿರುವುದನ್ನು ಕಾಣಬಹುದಾಗಿದೆ.

Holi 2023: ಶರ್ಟ್​ ಬಿಚ್ಚಿ ಬಣ್ಣ ಸುರಿದ್ರು; ಸಿಎಸ್​ಕೆ ಆಟಗಾರರ ಹೋಳಿ ಆಚರಣೆ ಹೇಗಿತ್ತು ಗೊತ್ತಾ? ವಿಡಿಯೋ ನೋಡಿ
ಸಿಎಸ್​ಕೆ ಆಟಗಾರರ ಹೋಳಿ ಸಂಭ್ರಮ
ಪೃಥ್ವಿಶಂಕರ
|

Updated on:Mar 08, 2023 | 3:05 PM

Share

ಬಣ್ಣಗಳ ಹಬ್ಬ ಹೋಳಿಯನ್ನು (Holi 2023) ದೇಶಾದ್ಯಂತ ಸಡಗರದಿಂದ ಆಚರಿಸಲಾಗುತ್ತಿದೆ. ಸಾಮಾನ್ಯ ಜನರು ಮಾತ್ರವಲ್ಲದೆ ಕ್ರಿಕೆಟ್ ಲೋಕದ ಸ್ಟಾರ್​ ಆಟಗಾರರು ಕೂಡ ಬಣ್ಣದಲ್ಲಿ ಮಿಂದೇಳುತ್ತಿದ್ದಾರೆ. ವಿರಾಟ್ ಕೊಹ್ಲಿಯಾಗಲಿ ಅಥವಾ ರೋಹಿತ್ ಶರ್ಮಾ (Virat Kohli or Rohit Sharma) ಆಗಲಿ ಎಲ್ಲರೂ ಈ ಹಬ್ಬವನ್ನು ಎಂಜಾಯ್ ಮಾಡುತ್ತಿರುವ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಈಗಾಗಲೇ ಹರಿದಾಡುತ್ತಿವೆ. ಇತ್ತ ಐಪಿಎಲ್​ಗೆ (IPL) ಸಿದ್ದತೆ ನಡೆಸುತ್ತಿರುವ ಧೋನಿ (MS Dhoni) ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್‌ (Chennai Super Kings) ಪಾಳಯದಲೂ ಇದೇ ರೀತಿ ಸಂಭ್ರಮ ಕಂಡುಬಂದಿದೆ. ಚೆನ್ನೈ ಸೂಪರ್ ಕಿಂಗ್ಸ್‌ನ ಟ್ವಿಟರ್ ಹ್ಯಾಂಡಲ್‌ನಲ್ಲಿ ವೀಡಿಯೊವನ್ನು ಪೋಸ್ಟ್ ಮಾಡಲಾಗಿದ್ದು, ಇದರಲ್ಲಿ ಈ ಫ್ರಾಂಚೈಸಿಯ ಆಟಗಾರರು ಹೋಳಿಯನ್ನು ಸಂಭ್ರಮದಿಂದ ಆಚರಿಸಿದ್ದಾರೆ. ಆದರೆ ಈ ಬಣ್ಣದಿಂದ ಧೋನಿ ಮಾತ್ರ ಪಾರಾಗಿದ್ದು ಯಾರೂ ಕೂಡ ಅವರಿಗೆ ಬಣ್ಣ ಹಾಕಿದ್ದು, ಕಂಡುಬಂದಿಲ್ಲ

ಫ್ರಾಂಚೈಸಿ ಹಂಚಿಕೊಂಡಿರುವ ವಿಡಿಯೋದಲ್ಲಿ ಧೋನಿಯ ಸಹ ಆಟಗಾರರು ಒಬ್ಬರಿಗೊಬ್ಬರು ಬಣ್ಣ ಹಚ್ಚುವುದನ್ನು ಕಾಣಬಹುದಾಗಿದೆ. ಚೆನ್ನೈ ಪೋಸ್ಟ್ ಮಾಡಿರುವ ವಿಡಿಯೋ ಶೋಲೆ ಚಿತ್ರದ ಖಳನಾಯಕ ಗಬ್ಬರ್ ಸಿಂಗ್ ಸಂಭಾಷಣೆಯೊಂದಿಗೆ ಆರಂಭವಾಗುತ್ತದೆ. ಇದಾದ ಬಳಿಕ ಆಟಗಾರರ ನಡುವೆ ಪರಸ್ಪರ ಬಣ್ಣ ಹಚ್ಚುವ ಪೈಪೋಟಿ ಏರ್ಪಟ್ಟಿದ್ದು, ನಂತರ ಚೆನ್ನೈ ತಂಡದ ಎಲ್ಲಾ ಯುವ ಆಟಗಾರರು ಮೋಜು ಮಸ್ತಿ ಮಾಡುತ್ತಿರುವುದನ್ನು ಕಾಣಬಹುದಾಗಿದೆ.

GG Vs RCB Live Streaming: ಗೆದ್ದರಷ್ಟೇ ಆರ್​ಸಿಬಿಗೆ ಟೂರ್ನಿಯಲ್ಲಿ ಉಳಿಗಾಲ! ಪಂದ್ಯ ಆರಂಭ ಎಷ್ಟು ಗಂಟೆಗೆ?

ಪ್ರಶಾಂತ್ ಸೋಲಂಕಿ ಸ್ಥಿತಿ ಹೇಳತೀರದು

ವಿಡಿಯೋದಲ್ಲಿ ತಂಡದ ಸದಸ್ಯ ಪ್ರಶಾಂತ್ ಸೋಲಂಕಿ ಅವರಿಗೆ ಬಣ್ಣ ಹಚ್ಚುವುದಕ್ಕಾಗಿ ಸಹ ಆಟಗಾರರು ನೆಲದ ಮೇಲೆ ಎಳೆದಾಡಿರುವುದನ್ನು ಕಾಣಬಹುದಾಗಿದೆ. ಹಾಗೆಯೇ ಮತ್ತೊಬ್ಬ ಆಟಗಾರನ ಶರ್ಟ್​ ಬಿಚ್ಚಿ, ಬಣ್ಣ ಸುರಿಯಲಾಗಿದೆ. ಬಳಿಕ ವೀಡಿಯೊದ ಕೊನೆಯಲ್ಲಿ ಧೋನಿ ಕೂಡ ಕಾಣಿಸಿಕೊಂಡಿದ್ದು, ಕೇಕ್ ತಿಂದು ಸಂಭ್ರಮಿಸಿದ್ದಾರೆ. ಆದರೆ ಧೋನಿಗೆ ಮಾತ್ರ ಯಾರು ಬಣ್ಣಬಳಿದಿಲ್ಲ.

ಹೋಳಿಯಲ್ಲಿ ಮಿಂದೇದ್ದ ಟೀಂ ಇಂಡಿಯಾ

ಸದ್ಯ ಆಸೀಸ್​ ವಿರುದ್ಧ ಟೆಸ್ಟ್​ ಸರಣಿ ಆಡುತ್ತಿರುವ ಟೀಂ ಇಂಡಿಯಾದ ಆಟಗಾರರು ಕೂಡ ಅಹಮದಾಬಾದ್‌ನಲ್ಲಿ ಹೋಳಿ ಆಚರಿಸಿದ್ದಾರೆ. ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಶುಬ್ಮನ್ ಗಿಲ್ ತಂಡದ ಬಸ್ಸಿನಲ್ಲಿಯೇ ಬಣ್ಣ ಹಚ್ಚಿಕೊಂಡು ಕುಣಿದಾಡುತ್ತಿರುವ ಬಾರಿ ವೈರಲ್ ಆಗಿದೆ. ಇದೀಗ ಮಾರ್ಚ್ 9 ರಿಂದ ಅಹಮದಾಬಾದ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಆರಂಭವಾಗಲಿರುವ ನಾಲ್ಕನೇ ಟೆಸ್ಟ್​ನಲ್ಲೂ ಕೂಡ ಟೀಮ್ ಇಂಡಿಯಾ ರಂಗುರಂಗಾದ ಪ್ರದರ್ಶನ ನೀಡಬೇಕು ಎಂಬುದು ಅಭಿಮಾನಿಗಳ ಆಶಯವಾಗಿದೆ. ಸದ್ಯ ಟೀಂ ಇಂಡಿಯಾ ಸರಣಿಯಲ್ಲಿ 2-1 ಮುನ್ನಡೆಯಲ್ಲಿದ್ದು, ಅಹಮದಾಬಾದ್‌ನಲ್ಲಿ ಗೆಲ್ಲುವ ಮೂಲಕ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್‌ಗೆ ಟಿಕೆಟ್ ಪಡೆಯುವ ನಿರೀಕ್ಷೆಯಲ್ಲಿದೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 12:43 pm, Wed, 8 March 23