Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಸೂಪರ್’ ಥ್ರಿಲ್ಲರ್ ಮ್ಯಾಚ್: 0 ರನ್​ಗೆ ಆಲೌಟ್..!

ಮಲೇಷ್ಯಾದಲ್ಲಿ ಮೂರು ತಂಡಗಳ ನಡುವಣ ಟಿ20 ಸರಣಿ ನಡೆಯುತ್ತಿದೆ. ಈ ಸರಣಿಯಲ್ಲಿ ಆತಿಥೇಯ ಮಲೇಷ್ಯಾ, ಹಾಂಗ್​ ಕಾಂಗ್ ಹಾಗೂ ಬಹ್ರೇನ್ ತಂಡಗಳು ಕಣಕ್ಕಿಳಿಯುತ್ತಿವೆ. ವಿಶೇಷ ಎಂದರೆ ಈ ಸರಣಿಯ ಐದನೇ ಪಂದ್ಯವು ಸೂಪರ್ ಓವರ್ ಥ್ರಿಲ್ಲರ್ ಫೈಟ್​ಗೆ ಸಾಕ್ಷಿಯಾಗಿತ್ತು. ಆದರೆ ಈ ಸೂಪರ್ ಓವರ್​ನಲ್ಲಿ ಒಂದೇ ಒಂದು ರನ್ ಮೂಡಿಬಂದಿರಲಿಲ್ಲ ಎಂಬುದು ವಿಶೇಷ.

'ಸೂಪರ್' ಥ್ರಿಲ್ಲರ್ ಮ್ಯಾಚ್: 0 ರನ್​ಗೆ ಆಲೌಟ್..!
Hk Vs Bhr
Follow us
ಝಾಹಿರ್ ಯೂಸುಫ್
|

Updated on:Mar 16, 2025 | 12:54 PM

ಕೌಲಾಲಂಪುರ್​ನಲ್ಲಿ ನಡೆಯುತ್ತಿರುವ ತ್ರಿಕೋನ ಸರಣಿಯ 5ನೇ ಪಂದ್ಯವು ರಣರೋಚಕ ಹೋರಾಟಕ್ಕೆ ಸಾಕ್ಷಿಯಾಗಿದೆ. ಬಯುಮಾಸ್ ಓವಲ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಬಹ್ರೇನ್ ಮತ್ತು ಹಾಂಗ್ ಕಾಂಗ್ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಹಾಂಗ್ ಕಾಂಗ್ ಪರ ಜೀಶನ್ ಅಲಿ 29 ರನ್ ಬಾರಿಸಿದರೆ, ಶಾಹಿದ್ ವಾಸಿಫ್ 31 ರನ್​ಗಳ ಕೊಡುಗೆ ನೀಡಿದರು. ಈ ಮೂಲಕ ಹಾಂಗ್ ಕಾಂಗ್ ತಂಡವು 20 ಓವರ್​ಗಳಲ್ಲಿ 7 ವಿಕೆಟ್ ಕಳೆದುಕೊಂಡು 129 ರನ್ ಕಲೆಹಾಕಿತು.

130 ರನ್​ಗಳ ಸುಲಭ ಗುರಿ ಬೆನ್ನತ್ತಿದ ಬಹ್ರೇನ್ ಪರ ವಿಕೆಟ್ ಕೀಪರ್ ಬ್ಯಾಟ್ಸ್​ಮನ್ ಪ್ರಶಾಂತ್ ಕುರುಪ್ 31 ರನ್ ಬಾರಿಸಿದರು. ಇನ್ನು ನಾಯಕ ಅಹ್ಮರ್ ಬಿನ್ ನಾಸಿರ್ 24 ಎಸೆತಗಳಲ್ಲಿ 36 ರನ್ ಚಚ್ಚಿದರು. ಇದಾಗ್ಯೂ ಕೊನೆಯ ಓವರ್​ನಲ್ಲಿ ಗೆಲ್ಲಲು 13 ರನ್​ಗಳ ಅವಶ್ಯಕತೆಯಿತ್ತು.

ನಸ್ರುಲ್ಲಾ ರಾಣಾ ಎಸೆದ 20ನೇ ಓವರ್​ನ ಮೊದಲ 5 ಎಸೆತಗಳಲ್ಲಿ ಬಹ್ರೇನ್ ಬ್ಯಾಟರ್​ಗಳು 12 ರನ್ ಕಲೆಹಾಕಿದರು. ಆದರೆ ಕೊನೆಯ ಎಸೆತದಲ್ಲಿ ಅಹ್ಮರ್ ನಾಸಿರ್‌ ಕ್ಯಾಚ್ ನೀಡಿದರು. ಪರಿಣಾಮ ಪಂದ್ಯವು ಟೈನಲ್ಲಿ ಅಂತ್ಯ ಕಂಡಿತು.

ಇದನ್ನೂ ಓದಿ
Image
IPL 2025: RCB ನೂತನ ಜೆರ್ಸಿ ಫೋಟೋ ಇಲ್ಲಿದೆ
Image
15 ಭರ್ಜರಿ ಸಿಕ್ಸ್​: ವಿಶ್ವ ದಾಖಲೆಯ ಸೆಂಚುರಿ ಸಿಡಿಸಿದ ಎಬಿ ಡಿವಿಲಿಯರ್ಸ್
Image
ಈ ಸಲನೂ RCB ಕಪ್ ಗೆಲ್ಲದಿರಲಿ, ಅದಕ್ಕಾಗಿ ನಾನು ಪ್ರಾರ್ಥಿಸುವೆ..!
Image
ಗಂಭೀರ್ ಅವರ ಒಂದು ದೃಢ ನಿರ್ಧಾರ ಚಾಂಪಿಯನ್ಸ್ ಟ್ರೋಫಿಯ ಚಿತ್ರಣ ಬದಲಿಸಿತು
  • ಹಾಂಗ್ ಕಾಂಗ್- 129/7 (20)

  • ಬಹ್ರೇನ್- 129/8 (20)

ಸೂಪರ್ ಓವರ್ ಥ್ರಿಲ್ಲರ್:

ಪಂದ್ಯವು ಟೈ ಆದ ಕಾರಣ ಫಲಿತಾಂಶಕ್ಕಾಗಿ ಸೂಪರ್ ಓವರ್ ಆಡಿಸಲಾಯಿತು. ಅದರಂತೆ ಮೊದಲು ಬ್ಯಾಟ್ ಮಾಡಿದ ಬಹ್ರೇನ್ ಪರ ಆರಂಭಿಕರಾಗಿ ಅಹ್ಮರ್ ನಾಸಿರ್ ಮತ್ತು ಆಸಿಫ್ ಅಲಿ ಕಣಕ್ಕಿಳಿದರು.

ಹಾಂಗ್​ ಕಾಂಗ್ ಬೌಲರ್ ಎಹ್ಸಾನ್ ಖಾನ್ ಎಸೆದ ಸೂಪರ್ ಓವರ್​ನ ಮೊದಲ ಎಸೆತದಲ್ಲಿ ಯಾವುದೇ ರನ್ ಮೂಡಿಬಂದಿಲ್ಲ. ಎರಡನೇ ಎಸೆತದಲ್ಲಿ ಅಹ್ಮರ್ ನಾಸಿರ್‌ (0) ಔಟಾದರು. ಮೂರನೇ ಎಸೆತದಲ್ಲಿ ಸೊಹೈಲ್ ಅಹ್ಮದ್ (0) ಕೂಡ ಕ್ಯಾಚ್ ನೀಡಿದ್ದಾರೆ. ಇದರೊಂದಿಗೆ ಬಹ್ರೇನ್ ತಂಡ ಸೂಪರ್ ಓವರ್​ನಲ್ಲಿ ಶೂನ್ಯಕ್ಕೆ ಆಲೌಟ್ ಆದ ಅನಗತ್ಯ ದಾಖಲೆಯನ್ನು ಬರೆಯಿತು.

ಇನ್ನು ಒಂದು ರನ್​ಗಳ ಗುರಿ ಪಡೆದ ಹಾಂಗ್ ಕಾಂಗ್ ತಂಡವು ಮೂರು ಎಸೆತಗಳನ್ನು ಎದುರಿಸಿದ್ದರು. ಈ ಮೂಲಕ ರಣರೋಚಕ 0 ರನ್​ಗಳ ಸೂಪರ್ ಓವರ್ ಫೈಟ್​ನಲ್ಲಿ ಕೊನೆಗೂ ಹಾಂಗ್ ಕಾಂಗ್ ತಂಡ ಗೆಲುವು ದಾಖಲಿಸಿತು.

ಇದನ್ನೂ ಓದಿ: ವಿಶ್ವ ದಾಖಲೆ… ಮುಂಬೈ ಇಂಡಿಯನ್ಸ್​ ಮುಡಿಗೆ 12ನೇ ಟ್ರೋಫಿ

ಅನಗತ್ಯ ದಾಖಲೆ:

ಟಿ20 ಕ್ರಿಕೆಟ್ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ತಂಡವೊಂದು ಸೂಪರ್​ ಓವರ್​ನಲ್ಲಿ ಬ್ಯಾಟ್ ಮಾಡಿ 0 ರನ್​ಗಳಿಸಿದೆ. ಅಲ್ಲದೆ ಎದುರಾಳಿ ತಂಡಕ್ಕೆ ಕೇವಲ 1 ರನ್​ಗಳ ಗುರಿ ನೀಡಿದೆ. ಈ ಮೂಲಕ ಬಹ್ರೇನ್ ತಂಡವು ಟಿ20 ಕ್ರಿಕೆಟ್​ನಲ್ಲಿ 0 ರನ್​ಗಳೊಂದಿಗೆ ಅನಗತ್ಯ ದಾಖಲೆಯೊಂದನ್ನು ನಿರ್ಮಿಸಿದ್ದಾರೆ.

Published On - 12:53 pm, Sun, 16 March 25