ಫೋಟೋಶೂಟ್ ಬೆನ್ನಲ್ಲೇ ಈ ಸಲ ಕಪ್ ನಮ್ದೆ ಎಂದ ಫ್ಯಾನ್ಸ್: ಇದಕ್ಕಿದೆ ಕಾರಣ
India vs Australia: ಏಕದಿನ ವಿಶ್ವಕಪ್ನ ಫೈನಲ್ ಪಂದ್ಯವು ನವೆಂಬರ್ 19 ರಂದು ಭಾನುವಾರ ನಡೆಯಲಿದೆ. ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿರುವ ಫೈನಲ್ ಫೈಟ್ನಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ಮುಖಾಮುಖಿಯಾಗಲಿದ್ದು, ಈ ಪಂದ್ಯವು ಮಧ್ಯಾಹ್ನ 2 ಗಂಟೆಯಿಂದ ಶುರುವಾಗಲಿದೆ.

ಏಕದಿನ ವಿಶ್ವಕಪ್ 2023ರ ಫೈನಲಿಸ್ಟ್ ತಂಡಗಳ ನಾಯಕರುಗಳ ಫೋಟೋಶೂಟ್ ಬೆನ್ನಲ್ಲೇ ಇದೀಗ ಹೊಸ ಲೆಕ್ಕಾಚಾರವೊಂದು ಶುರುವಾಗಿದೆ. ಈ ಲೆಕ್ಕಾಚಾರದ ಪ್ರಕಾರ ಈ ಸಲ ಕಪ್ ನಮ್ದೆ ಎನ್ನುತ್ತಿದ್ದಾರೆ ಟೀಮ್ ಇಂಡಿಯಾ ಅಭಿಮಾನಿಗಳು. ಇದಕ್ಕೆ ಮುಖ್ಯ ಕಾರಣ ರೋಹಿತ್ ಶರ್ಮಾ ಟ್ರೋಫಿಯ ಎಡಭಾಗದಲ್ಲಿ ನಿಂತಿರುವುದು.
ಹೌದು, ಏಕದಿನ ವಿಶ್ವಕಪ್ನ ಕಳೆದ ಮೂರು ಆವೃತ್ತಿಗಳಲ್ಲಿ ಆತಿಥೇಯ ತಂಡಗಳೇ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಈ ಲೆಕ್ಕಾಚಾರದ ಪ್ರಕಾರ ಈ ಸಲ ಭಾರತ ತಂಡದ ಪಾಲಿಗೆ ಕಪ್ ಒಲಿಯಲಿದೆ. ಇದರ ಜೊತೆಗೆ ಇದೀಗ ಕಾಕತಾಳೀಯ ಎಂಬಂತೆ ಫೋಟೋಶೂಟ್ನಲ್ಲೂ ಟೀಮ್ ಇಂಡಿಯಾ ನಾಯಕ ಎಡಭಾಗದಲ್ಲಿ ಕಾಣಿಸಿಕೊಂಡಿದ್ದಾರೆ.
ಅಂದರೆ ಕಳೆದ ಮೂರು ಏಕದಿನ ವಿಶ್ವಕಪ್ನ ಫೈನಲಿಸ್ಟ್ ನಾಯಕರುಗಳ ಫೋಟೋಶೂಟ್ನಲ್ಲಿ ಎಡಭಾಗದಲ್ಲಿ ನಿಂತಿದ್ದ ಕ್ಯಾಪ್ಟನ್ಗಳೇ ಟ್ರೋಫಿಯನ್ನು ಎತ್ತಿ ಹಿಡಿದಿದ್ದರು. ಇದೀಗ ಫೋಟೋಶೂಟ್ನಲ್ಲಿ ರೋಹಿತ್ ಶರ್ಮಾ ಎಡಭಾಗದಲ್ಲಿ ಕಾಣಿಸಿಕೊಂಡರೆ, ಪ್ಯಾಟ್ ಕಮಿನ್ಸ್ ಬಲಭಾಗದಲ್ಲಿದ್ದಾರೆ.
If we follow the pattern, the World Cup is staying at HOME 🇮🇳🔥#CricketTwitter #CWC23 #India pic.twitter.com/TwZ8tTjf0q
— InsideSport (@InsideSportIND) November 18, 2023
ಹೀಗಾಗಿಯೇ ಈ ಹಿಂದಿನಂತೆ ಈ ಬಾರಿ ಕೂಡ ಎಡಭಾಗದಲ್ಲಿರುವ ನಾಯಕ ಟ್ರೋಫಿ ಎತ್ತಿ ಹಿಡಿಯಲಿದ್ದಾರೆ ಎಂಬ ವಾದಗಳನ್ನು ಟೀಮ್ ಇಂಡಿಯಾ ಅಭಿಮಾನಿಗಳು ಮುಂದಿಡುತ್ತಿದ್ದಾರೆ. ಅದರಂತೆ ನವೆಂಬರ್ 19 ರಂದು ಭಾರತ ತಂಡ ವಿಶ್ವಕಪ್ ಕಿರೀಟವನ್ನು ಮುಡಗೇರಿಸಿಕೊಳ್ಳಲಿದೆಯಾ ಕಾದು ನೋಡಬೇಕಿದೆ.
ಆಸ್ಟ್ರೇಲಿಯಾ ತಂಡ: ಪ್ಯಾಟ್ ಕಮಿನ್ಸ್ (ನಾಯಕ), ಸ್ಟೀವ್ ಸ್ಮಿತ್, ಅಲೆಕ್ಸ್ ಕ್ಯಾರಿ, ಜೋಶ್ ಇಂಗ್ಲಿಸ್, ಶಾನ್ ಅಬಾಟ್, ಮಾರ್ನಸ್ ಲಾಬುಶೇನ್, ಕ್ಯಾಮೆರೋನ್ ಗ್ರೀನ್, ಜೋಶ್ ಹ್ಯಾಝಲ್‌ವುಡ್, ಟ್ರಾವಿಸ್ ಹೆಡ್, ಮಿಚ್ ಮಾರ್ಷ್, ಗ್ಲೆನ್ ಮ್ಯಾಕ್ಸ್‌ವೆಲ್, ಮಾರ್ಕಸ್ ಸ್ಟೊಯಿನಿಸ್, ಡೇವಿಡ್ ವಾರ್ನರ್, ಆ್ಯಡಂ ಝಂಪಾ, ಮಿಚೆಲ್ ಸ್ಟಾರ್ಕ್.
ಇದನ್ನೂ ಓದಿ: Virat Kohli: ಸಚಿನ್ ಅವರ 3 ವಿಶ್ವ ದಾಖಲೆ ಮುರಿದ ಕಿಂಗ್ ಕೊಹ್ಲಿ
ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ಇಶಾನ್ ಕಿಶನ್ (ವಿಕೆಟ್ ಕೀಪರ್), ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ರವಿಚಂದ್ರನ್ ಅಶ್ವಿನ್, ಕುಲ್ದೀಪ್ ಯಾದವ್, ಜಸ್ಪ್ರಿತ್ ಬುಮ್ರಾ, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ.