AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

IND vs AUS: ಆಸೀಸ್ ತಂಡಕ್ಕೆ ಆಘಾತ; ಏಕದಿನ ಸರಣಿಯಿಂದ ಹೊರಬಿದ್ದ ಸ್ಟಾರ್ ಆಲ್‌ರೌಂಡರ್

India vs Australia ODI series: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಏಕದಿನ ಸರಣಿಗೆ ಮುನ್ನ ಆಸೀಸ್ ತಂಡಕ್ಕೆ ದೊಡ್ಡ ಆಘಾತ ಎದುರಾಗಿದೆ. ಸ್ಟಾರ್ ಆಲ್‌ರೌಂಡರ್ ಕ್ಯಾಮರೂನ್ ಗ್ರೀನ್ ಬೆನ್ನು ನೋವಿನಿಂದಾಗಿ ಸರಣಿಯಿಂದ ಹೊರಗುಳಿದಿದ್ದಾರೆ. ಅವರ ಸ್ಥಾನಕ್ಕೆ ಉತ್ತಮ ಫಾರ್ಮ್‌ನಲ್ಲಿರುವ ಮಾರ್ನಸ್ ಲಬುಶೇನ್ ಆಯ್ಕೆಯಾಗಿದ್ದಾರೆ. ಲಬುಶೇನ್ ಇತ್ತೀಚೆಗೆ ದೇಶೀಯ ಪಂದ್ಯಾವಳಿಗಳಲ್ಲಿ ಭರ್ಜರಿ ಪ್ರದರ್ಶನ ನೀಡಿದ್ದು, ಇದು ಆಸ್ಟ್ರೇಲಿಯಾ ತಂಡಕ್ಕೆ ಬಲ ನೀಡಲಿದೆ.

ಪೃಥ್ವಿಶಂಕರ
|

Updated on: Oct 17, 2025 | 8:12 PM

Share
ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿ ಅಕ್ಟೋಬರ್ 19 ರಂದು ಆರಂಭವಾಗಲಿದೆ. ಸರಣಿಗೆ ಸಿದ್ಧತೆ ನಡೆಸುತ್ತಿರುವ ಟೀಂ ಇಂಡಿಯಾ ಮೈದಾನದಲ್ಲಿ ಸಾಕಷ್ಟು ಬೆವರು ಹರಿಸುತ್ತಿದೆ. ಏತನ್ಮಧ್ಯೆ, ಆತಿಥೇಯ ಆಸ್ಟ್ರೇಲಿಯಾ ತಂಡಕ್ಕೆ ದೊಡ್ಡ ಆಘಾತ ಎದುರಾಗಿದೆ. ತಂಡದ ಸ್ಟಾರ್ ಆಲ್‌ರೌಂಡರ್ ಕ್ಯಾಮರೂನ್ ಗ್ರೀನ್ ಗಾಯದಿಂದಾಗಿ ಸರಣಿಯಿಂದ ಬಿದ್ದಿದ್ದಾರೆ.

1 / 5
ಫಿಟ್ನೆಸ್ ಸಮಸ್ಯೆಗಳಿಂದಾಗಿ ಸುಮಾರು 12 ತಿಂಗಳ ಕಾಲ ತಂಡದಿಂದ ಹೊರಗುಳಿದಿದ್ದ ಗ್ರೀನ್, ಈ ವರ್ಷದ ಆಗಸ್ಟ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಯೊಂದಿಗೆ ತಂಡಕ್ಕೆ ಮರಳಿದ್ದರು. ಆದಾಗ್ಯೂ ಅವರಿಗೆ ಬೆನ್ನು ನೋವಿನ ಸಮಸ್ಯೆ ಮತ್ತೆ ಕಂಡುಬಂದಿದ್ದು, ಇದರಿಂದಾಗಿ ಅವರ ಏಕದಿನ ಸರಣಿಯಿಂದ ಹೊರಬಿದಿದ್ದಾರೆ.

2 / 5
ಹೀಗಾಗಿ ಕ್ರಿಕೆಟ್ ಆಸ್ಟ್ರೇಲಿಯಾ ಕ್ಯಾಮರೂನ್ ಗ್ರೀನ್ ಬದಲಿಗೆ ಸ್ಟಾರ್ ಬ್ಯಾಟ್ಸ್‌ಮನ್ ಮಾರ್ನಸ್ ಲಬುಶೇನ್ ಅವರನ್ನು ತಂಡಕ್ಕೆ ಆಯ್ಕೆ ಮಾಡಿದೆ. ಇತ್ತೀಚಿನ ದಿನಗಳಲ್ಲಿ ಕಳಪೆ ಪ್ರದರ್ಶನ ನೀಡಿದ್ದಕ್ಕಾಗಿ ಲಬುಶೇನ್ ಅವರನ್ನು ಭಾರತದ ವಿರುದ್ಧದ ಏಕದಿನ ಸರಣಿಗೆ ಆಯ್ಕೆದಾರರು ಆಯ್ಕೆ ಮಾಡಲಿಲ್ಲ. ಆದಾಗ್ಯೂ, ಇತ್ತೀಚಿನ ಶೆಫೀಲ್ಡ್ ಶೀಲ್ಡ್ ಮತ್ತು ದೇಶೀಯ ಏಕದಿನ ಪಂದ್ಯಾವಳಿಗಳಲ್ಲಿ ಅದ್ಭುತ ಪ್ರದರ್ಶನ ನೀಡಿದ ಲಬುಶೇನ್​ಗೆ ಮತ್ತೊಮ್ಮೆ ಆಸೀಸ್ ತಂಡದ ಬಾಗಿಲು ತೆರೆದಿದೆ.

3 / 5
ಏಕದಿನ ಕಪ್‌ನಲ್ಲಿ ಕ್ವೀನ್ಸ್‌ಲ್ಯಾಂಡ್ ಪರ ಆಡುತ್ತಿದ್ದ ಲಬುಶೇನ್ ಮೂರು ಇನ್ನಿಂಗ್ಸ್‌ಗಳಲ್ಲಿ ಎರಡು ಶತಕಗಳು ಸೇರಿದಂತೆ 79 ರ ಸರಾಸರಿಯಲ್ಲಿ 237 ರನ್ ಗಳಿಸಿದರು. ಆ ನಂತರ ನಡೆದ ಶೆಫೀಲ್ಡ್ ಶೀಲ್ಡ್‌ನಲ್ಲಿ ದಕ್ಷಿಣ ಆಸ್ಟ್ರೇಲಿಯಾ ವಿರುದ್ಧ 197 ಎಸೆತಗಳಲ್ಲಿ 159 ರನ್ ಗಳಿಸಿದರು. ಇದು ಐದು ಪಂದ್ಯಗಳಲ್ಲಿ ಅವರ ನಾಲ್ಕನೇ ಶತಕವಾಗಿದೆ.

4 / 5
ಆಸ್ಟ್ರೇಲಿಯಾ ತಂಡ: ಮಿಚೆಲ್ ಮಾರ್ಷ್ (ನಾಯಕ), ಕ್ಸೇವಿಯರ್ ಬಾರ್ಟ್ಲೆಟ್, ಅಲೆಕ್ಸ್ ಕ್ಯಾರಿ (ವಿಕೆಟ್ ಕೀಪರ್), ಕೂಪರ್ ಕಾನೊಲಿ, ಬೆನ್ ದ್ವಾರ್ಶುಯಿಸ್, ನಾಥನ್ ಎಲ್ಲಿಸ್, ಲಬುಶೇನ್, ಜೋಶ್ ಹೇಜಲ್‌ವುಡ್, ಟ್ರಾವಿಸ್ ಹೆಡ್, ಮ್ಯಾಥ್ಯೂ ಕುಹ್ನೆಮನ್, ಮಿಚೆಲ್ ಓವನ್, ಜೋಶ್ ಫಿಲಿಪ್ (ವಿಕೆಟ್ ಕೀಪರ್), ಮ್ಯಾಟ್ ರೆನ್‌ಶಾ, ಮ್ಯಾಥ್ಯೂ ಶಾರ್ಟ್, ಮಿಚೆಲ್ ಸ್ಟಾರ್ಕ್

5 / 5
pruthvi Shankar
pruthvi Shankar

ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ, ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ನೆಲೆ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ನಾನು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ನನ್ನ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ನನ್ನ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.

Read More
Follow Us
ಚಂದನವನದಲ್ಲಿ ಹಲವು ಸಮಸ್ಯೆ: ಪರಿಹಾರ ಹುಡುಕಲು ಮುಂದಾದ ವಾಣಿಜ್ಯ ಮಂಡಳಿ

ಕಾಕ್ರೋಚ್‌ ಪಕ್ಷದ ಸಂಸ್ಥಾಪಕ ಯಾರು?ಭಾರತದ ಬಗ್ಗೆ ಧ್ವನಿ ಎತ್ತಿದ್ದೇಕೆ?

ಕೋರ್ಟ್​ ಮುಂದೆ ಶರಣಾದ ತ್ವಿಶಾ ಶರ್ಮಾ ಗಂಡನ ಕಾನೂನು ಲೈಸೆನ್ಸ್ ರದ್ದು

ಕೇದಾರನಾಥ ಮಾರ್ಗದ ಸೋನ್‌ಪ್ರಯಾಗ್ ಬಳಿ ಪ್ರವಾಸಿಗರ ಮೇಲೆ ಉರುಳಿದ ಬಂಡೆಗಳು

3 ಜೀವದಾನಗಳ ಲಾಭ ಪಡೆದು ಅರ್ಧಶತಕ ಬಾರಿಸಿದ ಅಭಿಷೇಕ್

4 ವರ್ಷಗಳ ಬಳಿಕ ಸಿಕ್ಕ ಮಗನನ್ನು ನೋಡಿ ಕಣ್ಣೀರು ಹಾಕಿದ ಅಮ್ಮ

ಹೊಸಕೋಟೆಯ ಟೋಲ್ ಪ್ಲಾಜಾ ಬಳಿ ಭಾರಿ ಗಾಳಿಗೆ ಮುರಿದು ಬಿದ್ದ ಬೃಹತ್ ಫಲಕ

ನೋರಾ ಫತೇಹಿ ಮ್ಯೂಸಿಕ್ ವಿಡಿಯೋ, ತೆರೆ ಹಿಂದಿನ ಶ್ರಮ ತೋರಿಸಿದ ನಟಿ

ವಿಶ್ವದ ಅತ್ಯಂತ ದುಬಾರಿ ಮಾವಿನ ಹಣ್ಣು ಬೆಳೆದು ಸೈ ಎನಿಸಿಕೊಂಡ ಬೀದರ್ ರೈತ

ನಿಯಂತ್ರಣ ತಪ್ಪಿದ ಬೈಕ್‌ನ ಅಬ್ಬರ; ಕಬ್ಬಿಣದ ಗೇಟ್ ಪುಡಿ ಪುಡಿ, CCTVನಲ್ಲಿ ಸ