IND vs BAN: ಡಿಆರ್ಎಸ್ ಇದ್ದರೂ ತೆಗೆದುಕೊಳ್ಳದ ಕೊಹ್ಲಿ; ಅಂಪೈರ್ಗೆ ನಗು, ರೋಹಿತ್ಗೆ ಕೋಪ
Virat Kohli: ಬಾಂಗ್ಲಾದೇಶ ಸ್ಪಿನ್ನರ್ ಮೆಹದಿ ಹಸನ್ ಬೌಲಿಂಗ್ನಲ್ಲಿ ಕೊಹ್ಲಿ ಎಲ್ಬಿಡಬ್ಲ್ಯೂ ಆದರು. ಈ ವೇಳೆ ಕೊಹ್ಲಿ ವಿರುದ್ಧ ಬಾಂಗ್ಲಾ ಬೌಲರ್ಗಳು ಅಂಪೈರ್ ಬಳಿ ಮನವಿ ಮಾಡಿದರು ಸ್ಪಲ್ಪ ಸಮಯ ಸುಮ್ಮನಿದ್ದ ಅಂಪೈರ್, ಕೊಹ್ಲಿ ಔಟೆಂದು ತೀರ್ಪು ನೀಡಿದರು.
ಬರೋಬ್ಬರಿ 9 ತಿಂಗಳ ನಂತರ ಟೆಸ್ಟ್ ಸ್ವರೂಪಕ್ಕೆ ಮರಳಿರುವ ವಿರಾಟ್ ಕೊಹ್ಲಿಗೆ ಚೆನ್ನೈ ಟೆಸ್ಟ್ ವಿಶೇಷವೇನೂ ಆಗಿರಲಿಲ್ಲ. ಮೊದಲ ಇನಿಂಗ್ಸ್‌ನಂತೆ ಎರಡನೇ ಇನಿಂಗ್ಸ್‌ನಲ್ಲೂ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ಉಳಿಯಲು ಕೊಹ್ಲಿಗೆ ಸಾಧ್ಯವಾಗಲಿಲ್ಲ. ಮೊದಲ ಇನ್ನಿಂಗ್ಸ್ನಲ್ಲಿ ಬೇಡದ ಶಾಟ್ ಆಡಲು ಹೋಗಿ ವಿಕೆಟ್ ಒಪ್ಪಿಸಿದ್ದ ಕೊಹ್ಲಿ, ಎರಡನೇ ಇನ್ನಿಂಗ್ಸ್ನಲ್ಲಿ ಔಟಿಲ್ಲದಿದ್ದರೂ, ತಾನು ಮಾಡಿಕೊಂಡ ಎಡವಟ್ಟಿನಿಂದಾಗಿ ವಿಕೆಟ್ ಕಳೆದುಕೊಂಡರು. ಹೀಗಾಗಿ ಚೆನ್ನೈ ಟೆಸ್ಟ್ನಲ್ಲಿ ತನ್ನದೇ ತಪ್ಪುಗಳಿಂದ ವಿಕೆಟ್ ಕೈಚೆಲ್ಲಿದ ಕೊಹ್ಲಿಗೆ ಎರಡೂ ಇನ್ನಿಂಗ್ಸ್ಗಳಿಂದ ಕಲೆಹಾಕಲು ಸಾಧ್ಯವಾಗಿದ್ದು ಕೇವಲ 23 ರನ್ ಮಾತ್ರ. ಇನ್ನು ಎರಡನೇ ಇನ್ನಿಂಗ್ಸ್ನಲ್ಲಿ ಔಟಾಗುವುದರಿಂದ ಬಚಾವ್ ಆಗಲು ಮೂರು ಮೂರು ಅವಕಾಶಗಳಿದ್ದರೂ ಅದನ್ನು ಸರಿಯಾಗಿ ಬಳಸಿಕೊಳ್ಳದ ಕೊಹ್ಲಿಯ ನಡೆಗೆ ನಾಯಕ ರೋಹಿತ್ ಶರ್ಮಾ ಕೂಡ ಅಚ್ಚರಿ ವ್ಯಕ್ತಪಡಿಸಿದರು. ಅದರ ವಿಡಿಯೋ ಇದೀಗ ಎಲ್ಲೆಡೆ ವೈರಲ್ ಆಗುತ್ತಿದೆ. ಅಷ್ಟಕ್ಕೂ ಕೊಹ್ಲಿ ಮಾಡಿದ ಎಡವಟ್ಟಾದರೂ ಏನು? ಮೂರು ಡಿಆರ್ಎಸ್ ಇದ್ದರೂ ಕೊಹ್ಲಿ ಏಕೆ ಅದನ್ನು ಬಳಸಿಕೊಳ್ಳಲಿಲ್ಲ? ಎಂಬುದಕ್ಕೆಲ್ಲ ವಿವರ ಇಲ್ಲಿದೆ.
ವಾಸ್ತವವಾಗಿ ಯಶಸ್ವಿ ಜೈಸ್ವಾಲ್ ವಿಕೆಟ್ ಪತನದ ಬಳಿಕ ಕ್ರೀಸ್ಗೆ ಬಂದ ಕೊಹ್ಲಿ, ಮತ್ತೊಮ್ಮೆ ಉತ್ತಮ ಆರಂಭ ಪಡೆದುಕೊಂಡರು. ಎಚ್ಚರಿಕೆಯಿಂದ ಬ್ಯಾಟ್ ಬೀಸಿದ ಕೊಹ್ಲಿ, ಗಿಲ್ ಜೊತೆಗೆ ಉತ್ತಮ ಜೊತೆಯಾಟ ಕಟ್ಟುತ್ತಿದ್ದರು. ಆದರೆ ಈ ವೇಳೆ ಬಾಂಗ್ಲಾದೇಶ ಸ್ಪಿನ್ನರ್ ಮೆಹದಿ ಹಸನ್ ಬೌಲಿಂಗ್ನಲ್ಲಿ ಕೊಹ್ಲಿ ಎಲ್ಬಿಡಬ್ಲ್ಯೂ ಆದರು. ಈ ವೇಳೆ ಕೊಹ್ಲಿ ವಿರುದ್ಧ ಬಾಂಗ್ಲಾ ಬೌಲರ್ಗಳು ಅಂಪೈರ್ ಬಳಿ ಮನವಿ ಮಾಡಿದರು. ಸ್ಪಲ್ಪ ಸಮಯ ಸುಮ್ಮನಿದ್ದ ಅಂಪೈರ್, ಕೊಹ್ಲಿ ಔಟೆಂದು ತೀರ್ಪು ನೀಡಿದರು.
Kohli was not out… DRS Lena th n yaar#Kohli #IndiaVsBangladesh pic.twitter.com/rOizu7eEEZ
— AP (@AdhyatmPandey) September 20, 2024
ಡಿಆರ್ಎಸ್ ತೆಗೆದುಕೊಳ್ಳದ ಕೊಹ್ಲಿ
ಇದನ್ನು ಗಮನಿಸಿದ ಕೊಹ್ಲಿ, ನಾನ್ ಸ್ಟ್ರೈಕ್ನಲ್ಲಿ ನಿಂತಿದ್ದ ಶುಭ್ಮನ್ ಗಿಲ್ ಬಳಿ ಬಂದು ಡಿಆರ್ಎಸ್ ತೆಗದುಕೊಳ್ಳುವ ಬಗ್ಗೆ ಚರ್ಚಿಸಿದರು. ಈ ವೇಳೆ ಗಿಲ್, ಚೆಂಡು ಬ್ಯಾಟ್ಗೆ ತಾಗಿದೆಯೋ, ಇಲ್ಲವೋ ಎಂಬುದನ್ನು ಕೊಹ್ಲಿ ಬಳಿ ಕೇಳಿದರು. ಇದಕ್ಕೆ ಕೊಹ್ಲಿ, ಚೆಂಡು ಬ್ಯಾಟಿಗೆ ತಾಗಿಲವೆಂಬ ಉತ್ತರ ನೀಡಿದರು. ಹಾಗಾಗಿ ಚೆಂಡು ವಿಕೆಟ್ಗೆ ಹೋಗುತ್ತಿದ್ದ ಕಾರಣ ಗಿಲ್, ಅದು ಔಟೆಂದು ಹೇಳಿದರು. ಇದನ್ನು ಕೇಳಿದ ಕೊಹ್ಲಿ ಕೂಡ ಡಿಆರ್ಎಸ್ ತೆಗೆದುಕೊಳ್ಳದೆ ಪೆವಿಲಿಯನ್ ಸೇರಿಕೊಂಡರು.
It was clearly not out. This is so frustrating to see. Shubman Gill, from the non-striker’s end, should have asked Virat Kohli to take DRS. pic.twitter.com/mtnoqPuaho
— K¹⁸. (@KrishnaVK_18) September 20, 2024
ರೋಹಿತ್ ಅಸಮಾಧಾನ
ಆದರೆ ಸ್ವಲ್ಪ ಸಮಯದ ನಂತರ ತೋರಿದ ರಿವ್ಯೂನಲ್ಲಿ ಚೆಂಡು, ಕೊಹ್ಲಿಯ ಬ್ಯಾಟ್ಗೆ ತಾಗಿರುವುದು ಸ್ಪಷ್ಟವಾಗಿ ಗೋಚರಿಸಿತು. ಇದನ್ನು ನೋಡಿದ ನಾಯಕ ರೋಹಿತ್, ಡಗೌಟ್ನಲ್ಲೇ ಅಸಮಾಧಾನ ಹೊರಹಾಕಿದರು. ಕೊಹ್ಲಿ ಡಿಆರ್ಎಸ್ ತೆಗೆದುಕೊಳ್ಳಬೇಕಿತ್ತು ಎಂಬುದು ಅವರ ಮುಖಭಾವದಲ್ಲಿ ಕಾಣಿಸುತ್ತಿತ್ತು. ಇತ್ತ ಕೊಹ್ಲಿ ವಿರುದ್ಧ ತೀರ್ಪು ನೀಡಿದ ಅಂಪೈರ್ ಕೂಡ, ಕೊಹ್ಲಿ ಡಿಆರ್ಎಸ್ ತೆಗೆದುಕೊಳ್ಳದಿರುವುದರ ಬಗ್ಗೆ ತಮಾಷೆಯಾಗಿ ನಕ್ಕರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:51 pm, Fri, 20 September 24