IND vs NZ: ಮುಂಬೈ ಪಿಚ್ ಯಾರಿಗೆ ಸಹಕಾರಿ? 3ನೇ ಟೆಸ್ಟ್​ಗೂ ಮಳೆಯ ಆತಂಕ..!

Mumbai Pitch, Weather Report: ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೂರನೇ ಮತ್ತು ಅಂತಿಮ ಟೆಸ್ಟ್ ಪಂದ್ಯ ಮುಂಬೈನಲ್ಲಿ ನಡೆಯಲಿದೆ. ಆದರೆ ಪಂದ್ಯಕ್ಕೆ ಮಳೆ ಅಡ್ಡಿಪಡಿಸುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಪಿಚ್ ಬ್ಯಾಟ್ಸ್‌ಮನ್ ಮತ್ತು ಬೌಲರ್‌ಗಳಿಗೆ ಸಮಾನವಾಗಿ ನೆರವಾಗಲಿದೆ.

IND vs NZ: ಮುಂಬೈ ಪಿಚ್ ಯಾರಿಗೆ ಸಹಕಾರಿ? 3ನೇ ಟೆಸ್ಟ್​ಗೂ ಮಳೆಯ ಆತಂಕ..!
ಮುಂಬೈ ಟೆಸ್ಟ್
Follow us
|

Updated on:Oct 31, 2024 | 10:31 PM

ಭಾರತ ಮತ್ತು ನ್ಯೂಜಿಲೆಂಡ್ ಮೂರು ಪಂದ್ಯಗಳ ಟೆಸ್ಟ್ ಸರಣಿಯ ಮೂರನೇ ಮತ್ತು ಕೊನೆಯ ಪಂದ್ಯವು ಶುಕ್ರವಾರ, ನವೆಂಬರ್ 1 ರಿಂದ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಆರಂಭವಾಗಲಿದೆ. ಪ್ರವಾಸಿ ತಂಡ ಈ ಪಂದ್ಯವನ್ನು ಗೆದ್ದು ಟೀಂ ಇಂಡಿಯಾವನ್ನು ವೈಟ್​ವಾಶ್ ಮಾಡುವತ್ತ ಕಣ್ಣಿಟ್ಟಿದೆ. ಸರಣಿಯ ಎರಡು ಪಂದ್ಯಗಳನ್ನು ಗೆಲ್ಲುವ ಮೂಲಕ ನ್ಯೂಜಿಲೆಂಡ್ 2-0 ಮುನ್ನಡೆ ಸಾಧಿಸಿದ್ದು ಸರಣಿಯನ್ನು ಕೈವಶ ಮಾಡಿಕೊಂಡಿದೆ. ಇತ್ತ ಮುಂಬೈನಲ್ಲಿ ಕಿವೀಸ್ ತಂಡವನ್ನು ಸೋಲಿಸುವ ಮೂಲಕ ಹೀನಾಯ ಸೋಲಿನಿಂದ ಪಾರಾಗುವ ಇರಾದೆಯಲ್ಲಿ ರೋಹಿತ್ ಪಡೆ ಇದೆ. ಟೀಮ್ ಇಂಡಿಯಾ ಈಗಾಗಲೇ ತನ್ನ 12 ವರ್ಷಗಳ ಸುದೀರ್ಘ ಗೆಲುವಿನ ಸರಣಿಗೆ ಬ್ರೇಕ್ ಹಾಕಿದ್ದು, ಇದೀಗ ರೋಹಿತ್ ಶರ್ಮಾ ಪಡೆ ಸರಣಿಯನ್ನು 2-1 ಅಂತರದಿಂದ ಕೊನೆಗೊಳಿಸಲು ಬಯಸಿದೆ. ಆದರೆ ಅದಕ್ಕೂ ಮುನ್ನ ಮುಂಬೈ ಪಿಚ್ ಯಾರಿಗೆ ಸಹಕಾರಿ ಹಾಗೂ ಪಂದ್ಯಕ್ಕೆ ಮಳೆ ಅಡ್ಡಿಪಡಿಸುತ್ತಾ ಎಂಬುದನ್ನು ತಿಳಿದುಕೊಳ್ಳಬೇಕಾಗಿದೆ.

ಹವಾಮಾನ ವರದಿ

ಉಭಯ ತಂಡಗಳ ನಡುವೆ ನಡೆದ ಮೊದಲೆರಡು ಟೆಸ್ಟ್ ಪಂದ್ಯಗಳಿಗೆ ಮಳೆ ಸಾಕಷ್ಟು ಅಡ್ಡಿಯನ್ನುಂಟು ಮಾಡಿತ್ತು. ಇದರಿಂದಾಗಿ ಭಾರತ ಸರಣಿಯನ್ನು ಕಳೆದುಕೊಳ್ಳಬೇಕಾಯಿತು. ಇದೀಗ ಮುಂಬೈನಲ್ಲೂ ಮಳೆಯಾಗುವ ಸಾಧ್ಯತೆಗಳು ಹೆಚ್ಚಾಗಿವೆ. ಅಕ್ಯುವೆದರ್ ಪ್ರಕಾರ ಶುಕ್ರವಾರ ಶೇ.65ರಷ್ಟು ಮಳೆಯಾಗುವ ಸಾಧ್ಯತೆ ಇದೆ. ಆದರೆ, ಒಳ್ಳೆಯ ಸುದ್ದಿ ಏನೆಂದರೆ, ಉಳಿದ 4 ದಿನಗಳ ಕಾಲ ಹವಾಮಾನವು ಸ್ಪಷ್ಟವಾಗಿರುತ್ತದೆ ಎಂದು ವರದಿಯಾಗಿದೆ.

ಶುಕ್ರವಾರದಂದು ಮಧ್ಯಾಹ್ನ 1 ಗಂಟೆಯವರೆಗೆ ಹವಾಮಾನವು ಸ್ಪಷ್ಟವಾಗಿರುವ ನಿರೀಕ್ಷೆಯಿದೆ. ಆದರೆ ಮಧ್ಯಾಹ್ನ 2 ಗಂಟೆಯಿಂದ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಆದ್ದರಿಂದ ದಿನದ ಆಟದ ದ್ವಿತೀಯಾರ್ಧದಲ್ಲಿ ನಾವು ಆಟದಲ್ಲಿ ಅಡಚಣೆಗಳನ್ನು ನಿರೀಕ್ಷಿಸಬಹುದು. ಉಳಿದ ನಾಲ್ಕು ದಿನಗಳಲ್ಲಿ ಮಳೆ ಬೀಳುವ ಸಾಧ್ಯತೆ ಶೂನ್ಯವಾಗಿದ್ದು, ಪಂದ್ಯದ ಫಲಿತಾಂಶವನ್ನು ನಾವು ನಿರೀಕ್ಷಿಸಬಹುದು.

ಮುಂಬೈ ಪಿಚ್ ವರದಿ

ವಾಂಖೆಡೆಯ ಕೆಂಪು ಮಣ್ಣಿನ ಪಿಚ್ ಬ್ಯಾಟ್ಸ್‌ಮನ್‌ಗಳು ಮತ್ತು ಬೌಲರ್‌ಗಳಿಗೆ ಸಮನಾಗಿ ನೆರವು ನೀಡಲಿದೆ. ಮೊದಲ ಎರಡು ದಿನಗಳು ಬ್ಯಾಟಿಂಗ್‌ಗೆ ಅನುಕೂಲಕರವಾಗಿದ್ದು, ಆಟ ಮುಂದುವರೆದಂತೆ ಪಿಚ್ ಸ್ಪಿನ್ನರ್‌ಗಳಿಗೆ ಅನುಕೂಲಕರವಾಗಲಿದೆ. ಇಂತಹ ಪರಿಸ್ಥಿತಿಯಲ್ಲಿ ಯಾವ ತಂಡ ಟಾಸ್ ಗೆದ್ದರೂ ಮೊದಲು ಬ್ಯಾಟಿಂಗ್ ಮಾಡಲು ಬಯಸುತ್ತದೆ.

ಮುಖಾಮುಖಿ ವರದಿ

ಭಾರತ ಮತ್ತು ನ್ಯೂಜಿಲೆಂಡ್ ನಡುವೆ ಇದುವರೆಗೆ 64 ಟೆಸ್ಟ್ ಪಂದ್ಯಗಳು ನಡೆದಿದ್ದು, ಇದರಲ್ಲಿ ಟೀಂ ಇಂಡಿಯಾ 22 ಪಂದ್ಯಗಳಲ್ಲಿ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿದೆ. ಉಳಿದಂತೆ ಉಭಯ ತಂಡಗಳ ನಡುವೆ 27 ಪಂದ್ಯಗಳಲ್ಲಿ ಡ್ರಾ ಆಗಿದೆ. ಭಾರತದಲ್ಲಿ ಎರಡು ತಂಡಗಳ ನಡುವೆ 37 ಪಂದ್ಯಗಳು ನಡೆದಿದ್ದು, ಟೀಂ ಇಂಡಿಯಾ 17 ಪಂದ್ಯಗಳನ್ನು ಗೆದ್ದುಕೊಂಡಿದೆ. ವಾಂಖೆಡೆ ಸ್ಟೇಡಿಯಂನಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ನಡುವೆ ಮೂರು ಪಂದ್ಯಗಳು ನಡೆದಿದ್ದು, ಇದರಲ್ಲಿ ಟೀಂ ಇಂಡಿಯಾ ಎರಡು ಪಂದ್ಯಗಳನ್ನು ಗೆದ್ದಿದ್ದರೆ, ನ್ಯೂಜಿಲೆಂಡ್ ಒಂದು ಪಂದ್ಯವನ್ನು ಗೆದ್ದಿದೆ. ಕಿವೀಸ್ ತಂಡ 1988ರಲ್ಲಿ ವಾಂಖೆಡೆಯಲ್ಲಿ ಕೊನೆಯ ಬಾರಿಗೆ ಪಂದ್ಯ ಗೆದ್ದಿತ್ತು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:28 pm, Thu, 31 October 24

ಎಲ್ಲರ ಕ್ರಶ್ ಆಗಿರುವ ನಟಿ ರುಕ್ಮಿಣಿ ವಸಂತ್​ಗೆ ಲವ್ ಬ್ರೇಕಪ್ ಆಗಿದ್ಯಾ?
ಎಲ್ಲರ ಕ್ರಶ್ ಆಗಿರುವ ನಟಿ ರುಕ್ಮಿಣಿ ವಸಂತ್​ಗೆ ಲವ್ ಬ್ರೇಕಪ್ ಆಗಿದ್ಯಾ?
ಬಿಸಿ ಬಿಸಿ ಇಡ್ಲಿಯಲ್ಲಿ ಜಿರಳೆ ಪತ್ತೆ; ಹೋಟೆಲ್ ಗ್ರಾಹಕರ ಆಕ್ರೋಶ
ಬಿಸಿ ಬಿಸಿ ಇಡ್ಲಿಯಲ್ಲಿ ಜಿರಳೆ ಪತ್ತೆ; ಹೋಟೆಲ್ ಗ್ರಾಹಕರ ಆಕ್ರೋಶ
ಗ್ಯಾರಂಟಿ ಯೋಜನೆಗಳ ಬಗ್ಗೆ ಯೋಚನೆ ಮಾಡಿದ್ದೇ ಡಿಕೆ ಶಿವಕುಮಾರ್: ಹೆಬ್ಬಾಳ್ಕರ್
ಗ್ಯಾರಂಟಿ ಯೋಜನೆಗಳ ಬಗ್ಗೆ ಯೋಚನೆ ಮಾಡಿದ್ದೇ ಡಿಕೆ ಶಿವಕುಮಾರ್: ಹೆಬ್ಬಾಳ್ಕರ್
ವೈಟ್​ಹೌಸ್​ನಲ್ಲೂ ದೀಪಾವಳಿ; ಭಕ್ತಿಗೀತೆ ನುಡಿಸಿದ ಮಿಲಿಟರಿ ಬ್ಯಾಂಡ್
ವೈಟ್​ಹೌಸ್​ನಲ್ಲೂ ದೀಪಾವಳಿ; ಭಕ್ತಿಗೀತೆ ನುಡಿಸಿದ ಮಿಲಿಟರಿ ಬ್ಯಾಂಡ್
ದೀಪಾವಳಿಯಂದೇ ಆಂಧ್ರದಲ್ಲಿ ಭಾರೀ ದುರಂತ; ಪಟಾಕಿ ಸ್ಫೋಟವಾಗಿ ಓರ್ವ ಸಾವು
ದೀಪಾವಳಿಯಂದೇ ಆಂಧ್ರದಲ್ಲಿ ಭಾರೀ ದುರಂತ; ಪಟಾಕಿ ಸ್ಫೋಟವಾಗಿ ಓರ್ವ ಸಾವು
ಯೋಜನೆಗಳನ್ನು ಘೋಷಿಸಿದ್ದು ಕಾಂಗ್ರೆಸ್, ಯಾವ ಕಾರಣಕ್ಕೂ ನಿಲ್ಲಿಸಲಾಗದು: ಮಂಜು
ಯೋಜನೆಗಳನ್ನು ಘೋಷಿಸಿದ್ದು ಕಾಂಗ್ರೆಸ್, ಯಾವ ಕಾರಣಕ್ಕೂ ನಿಲ್ಲಿಸಲಾಗದು: ಮಂಜು
ನಟ ದರ್ಶನ್​ ವಿಚಾರದಲ್ಲಿ ಅರ್ಜುನ್ ಗುರೂಜಿ ನುಡಿದಿದ್ದ ಭವಿಷ್ಯ ನಿಜ ಆಯ್ತು
ನಟ ದರ್ಶನ್​ ವಿಚಾರದಲ್ಲಿ ಅರ್ಜುನ್ ಗುರೂಜಿ ನುಡಿದಿದ್ದ ಭವಿಷ್ಯ ನಿಜ ಆಯ್ತು
ಶಕ್ತಿ ಯೋಜನೆ ಪರಿಷ್ಕರಣೆ ಮಾಡುವ ಉದ್ದೇಶ ಸರ್ಕಾರಕ್ಕಿಲ್ಲ: ಸಿದ್ದರಾಮಯ್ಯ
ಶಕ್ತಿ ಯೋಜನೆ ಪರಿಷ್ಕರಣೆ ಮಾಡುವ ಉದ್ದೇಶ ಸರ್ಕಾರಕ್ಕಿಲ್ಲ: ಸಿದ್ದರಾಮಯ್ಯ
ದೇವಿಯ ದೃಷ್ಟಿಯಲ್ಲಿ ಎಲ್ಲರೂ ಒಂದೇ ವಿಐಪಿ ವ್ಯವಸ್ಥೆ ಯಾಕೆ? ಭಕ್ತರು
ದೇವಿಯ ದೃಷ್ಟಿಯಲ್ಲಿ ಎಲ್ಲರೂ ಒಂದೇ ವಿಐಪಿ ವ್ಯವಸ್ಥೆ ಯಾಕೆ? ಭಕ್ತರು
‘ಬಘೀರ’ ಯಶಸ್ಸು: ಪುನೀತ್ ಚಿತ್ರ ಹಿಡಿದು ಡ್ಯಾನ್ಸ್ ಮಾಡಿದ ಶ್ರೀಮುರಳಿ
‘ಬಘೀರ’ ಯಶಸ್ಸು: ಪುನೀತ್ ಚಿತ್ರ ಹಿಡಿದು ಡ್ಯಾನ್ಸ್ ಮಾಡಿದ ಶ್ರೀಮುರಳಿ