ಸದ್ಯ ಭಾರತ ಪ್ರವಾಸದಲ್ಲಿರುವ (India Vs New Zealand) ಕಿವೀಸ್ ಪಡೆಗೆ ಎರಡು ಬ್ಯಾಕ್ ಟು ಬ್ಯಾಕ್ ಆಘಾತ ಎದುರಾಗಿವೆ. ಮೊದಲನೇಯದಾಗಿ ರೋಹಿತ್ (Rohit Sharma) ಪಡೆಯ ವಿರುದ್ಧ ಸತತ ಎರಡು ಪಂದ್ಯಗಳನ್ನು ಸೋತು ಏಕದಿನ ಸರಣಿಯನ್ನು ಕಳೆದುಕೊಂಡಿದ್ದ ಕಿವೀಸ್ ಪಡೆಗೆ ಇದೀಗ ಐಸಿಸಿ ಕೂಡ ಶಾಕ್ ನೀಡಿದೆ. ಎರಡನೇ ಏಕದಿನ ಪಂದ್ಯದಲ್ಲಿ ಭಾರತದ ಎದುರು 8 ವಿಕೆಟ್ಗಲ ಹೀನಾಯ ಸೋಲು ಕಂಡಿದ್ದ ನ್ಯೂಜಿಲೆಂಡ್ ತಂಡ ನೂತನ ಐಸಿಸಿ ಏಕದಿನ ಶ್ರೇಯಾಂಕದಲ್ಲಿ (ICC ODI Ranking) ಭಾರಿ ಹಿನ್ನಡೆ ಅನುಭವಿಸಿದೆ. ಭಾರತಕ್ಕೆ ಬರುವುದಕ್ಕೂ ಮುನ್ನ ಪಾಕಿಸ್ತಾನ ಪ್ರವಾಸ ಮಾಡಿದ್ದ ಕಿವೀಸ್ ತಂಡ ಅಲ್ಲಿ ಏಕದಿನ ಸರಣಿಯನ್ನು 2-1 ಅಂತರದಿಂದ ಗೆದ್ದು ತನ್ನ ನಂ.1 ಪಟ್ಟವನ್ನು ಭದ್ರಪಡಿಸಿಕೊಂಡಿತ್ತು. ಆದರೆ ಇದೀಗ ನಂ.1 ಪಟ್ಟವನ್ನು ಕಳೆದುಕೊಂಡಿರುವ ನ್ಯೂಜಿಲೆಂಡ್ ತನ್ನ ಸ್ಥಾನವನ್ನು ಇಂಗ್ಲೆಂಡ್‌ಗೆ ಬಿಟ್ಟುಕೊಟ್ಟಿದೆ.
ರಾಯ್‌ಪುರದಲ್ಲಿ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಕಿವೀಸ್ ತಂಡ ಕೇವಲ 108 ರನ್ಗಳಿಗೆ ಆಲೌಟ್ ಆಗಿತ್ತು. ಈ ಗುರಿ ಬೆನ್ನಟ್ಟಿದ ಟೀಂ ಇಂಡಿಯಾ ಕೇವಲ 2 ವಿಕೆಟ್ ಕಳೆದುಕೊಂಡು 21ನೇ ಓವರ್ನಲ್ಲಿ ಈ ಗುರಿ ತಲುಪಿತ್ತು. ಇದೀಗ ಈ ಸೋಲಿನ ನಂತರ ನ್ಯೂಜಿಲೆಂಡ್ ತಂಡ ಐಸಿಸಿ ಏಕದಿನ ರ‍್ಯಾಂಕಿಂಗ್‌ನಲ್ಲಿ ಮೊದಲ ಸ್ಥಾನದಿಂದ ಎರಡನೇ ಸ್ಥಾನಕ್ಕೆ ಕುಸಿದಿದೆ.
IND vs NZ: ‘ಸ್ಮೂತ್‌ಮ್ಯಾನ್ ಗಿಲ್’; ಶುಭ್ಮನ್ಗೆ ಹೊಸ ನಿಕ್ ನೇಮ್ ಇಟ್ಟ ಸುನೀಲ್ ಗವಾಸ್ಕರ್
ಇತ್ತ ಭಾರತ ಏಕದಿನ ಸರಣಿ ಗೆದ್ದು ಮಿಂಚಿದರೆ ಆ ಕಡೆ ಒಂದೂ ಪಂದ್ಯವನ್ನಾಡದೆ ಇಂಗ್ಲೆಂಡ್ ತಂಡ ಏಕದಿನ ಶ್ರೇಯಾಂಕದಲ್ಲಿ ನಂಬರ್ ಒನ್ ಪಟ್ಟಕ್ಕೇರಿದೆ. ಹಾಗೆಯೇ ಎರಡನೇ ಏಕದಿನ ಪಂದ್ಯದ ಗೆಲುವಿನ ನಂತರ ಭಾರತ ರ‍್ಯಾಂಕಿಂಗ್‌ನಲ್ಲಿ ನಾಲ್ಕನೇ ಸ್ಥಾನದಿಂದ ಮೂರನೇ ಸ್ಥಾನಕ್ಕೆ ಏರಿದೆ. ಪಂದ್ಯಕ್ಕೂ ಮುನ್ನ ನ್ಯೂಜಿಲೆಂಡ್ 115 ರೇಟಿಂಗ್ ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿತ್ತು. ಇಂಗ್ಲೆಂಡ್ 113 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದರೆ, 112 ಅಂಕಗಳೊಂದಿಗೆ ಆಸ್ಟ್ರೇಲಿಯಾ ಮೂರನೇ ಮತ್ತು 111 ಅಂಕಗಳೊಂದಿಗೆ ಭಾರತ ನಾಲ್ಕನೇ ಸ್ಥಾನದಲ್ಲಿತ್ತು.
There’s a new #1 ranked team in the @MRFWorldwide ICC Men’s ODI Team Rankings following India’s win against New Zealand 📈https://t.co/mSKvaXhFzx
— ICC (@ICC) January 22, 2023
ಭಾರತದ ಎದುರು 8 ವಿಕೆಟ್‌ಗಳ ಸೋಲಿನ ನಂತರ ನ್ಯೂಜಿಲೆಂಡ್ 113 ರೇಟಿಂಗ್ ಪಾಯಿಂಟ್‌ಗಳೊಂದಿಗೆ ಎರಡನೇ ಸ್ಥಾನಕ್ಕೆ ಕುಸಿದಿದೆ. ಈಗ ಇಂಗ್ಲೆಂಡ್, ನ್ಯೂಜಿಲೆಂಡ್ ಮತ್ತು ಭಾರತ ಒಂದೇ ರೇಟಿಂಗ್ (113) ಪಾಯಿಂಟ್ ಹೊಂದಿವೆ. ಅಂದರೆ, ಭಾರತಕ್ಕೆ ಏಕದಿನದಲ್ಲಿ ನಂಬರ್ ಒನ್ ತಂಡವಾಗುವ ಅವಕಾಶವಿದೆ. ಮೂರನೇ ಏಕದಿನ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವನ್ನು ಸೋಲಿಸಿದರೆ ಭಾರತ ನಂಬರ್ ಒನ್ ಸ್ಥಾನ ಪಡೆಯಲಿದೆ. ಸುಮಾರು 4 ವರ್ಷಗಳ ನಂತರ ಭಾರತ ಏಕದಿನ ಮಾದರಿಯಲ್ಲಿ ವಿಶ್ವದ ನಂಬರ್ ಒನ್ ತಂಡವಾಗುವ ಅವಕಾಶ ಪಡೆದಿದೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ