IND vs NZ: ಔಟ್ ಆದರೂ ನಾಟೌಟ್: ಮೈದಾನದಲ್ಲೇ ಆಕ್ರೋಶ ಹೊರಹಾಕಿದ ಅಶ್ವಿನ್

TV9 Digital Desk

| Edited By: Zahir Yusuf

Updated on: Nov 27, 2021 | 7:37 PM

India vs New Zealand 1st Test: ಟೀಮ್ ಇಂಡಿಯಾ ಪರ ಅಕ್ಷರ್ ಪಟೇಲ್ 62 ರನ್ ನೀಡಿ ವಿಕೆಟ್ ಪಡೆದರೆ, ಆರ್​ ಅಶ್ವಿನ್ 82 ರನ್ ನೀಡಿ 3 ವಿಕೆಟ್ ಕಬಳಿಸಿದರು. ಇನ್ನು ಜಡೇಜಾ ಹಾಗೂ ಉಮೇಶ್ ಯಾದವ್ ಒಂದೊಂದು ವಿಕೆಟ್ ಪಡೆದರು.

IND vs NZ: ಔಟ್ ಆದರೂ ನಾಟೌಟ್: ಮೈದಾನದಲ್ಲೇ ಆಕ್ರೋಶ ಹೊರಹಾಕಿದ ಅಶ್ವಿನ್
IND vs NZ

ಕಾನ್ಪುರದಲ್ಲಿ ನಡೆಯುತ್ತಿರುವ ನ್ಯೂಜಿಲೆಂಡ್‌ ವಿರುದ್ದದ ಟೆಸ್ಟ್ ಪಂದ್ಯದಲ್ಲಿ ಆರಂಭಿಕ ಆಟಗಾರ ಟಾಮ್ ಲ್ಯಾಥಮ್ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶಿಸಿದ್ದರು. ಟೀಮ್ ಇಂಡಿಯಾ ನೀಡಿದ 345 ರನ್‌ಗಳ ಗುರಿಗೆ ಪ್ರತ್ಯುತ್ತರವಾಗಿ ಬ್ಯಾಟ್ ಬೀಸಿದ ಲಾಥಮ್ ಮತ್ತು ವಿಲ್ ಯಂಗ್ ಉತ್ತಮ ಆರಂಭ ಒದಗಿಸಿದ್ದರು. ಇವರಿಬ್ಬರು ಮೊದಲ ವಿಕೆಟ್‌ಗೆ 151 ರನ್‌ಗಳ ಜೊತೆಯಾಟವಾಡುವ ಮೂಲಕ ನ್ಯೂಜಿಲೆಂಡ್​ಗೆ ಬೃಹತ್ ಮೊತ್ತಕ್ಕೆ ಉತ್ತಮ ಅಡಿಪಾಯ ಹಾಕಿಕೊಟ್ಟಿದ್ದರು. ಇನ್ನು ಯಂಗ್ 89 ರನ್ ಗಳಿಸಿದರೆ, ಲಾಥಮ್ 95 ರನ್ ಗಳಿಸಿ ಅಕ್ಷರ್ ಪಟೇಲ್ ಎಸೆತದಲ್ಲಿ ಔಟಾದರು.

ಆದರೆ ಇದಕ್ಕೂ ಮುನ್ನ ಲಾಥಮ್​ಗೆ ಜೀವದಾನ ಸಿಕ್ಕಿದ್ದು ವರದಾನವಾಯಿತು. 66 ರನ್ ಗಳಿಸಿದ್ದ ವೇಳೆ ಲಾಥಮ್ ಅಶ್ವಿನ್ ಎಸೆತದಲ್ಲಿ ಎಲ್​ಬಿಡಬ್ಲ್ಯೂ ಆಗಿದ್ದರು. ಅಶ್ವಿನ್ ಸೇರಿದಂತೆ ಭಾರತೀಯ ಫೀಲ್ಡರ್‌ಗಳೂ ಅಂಪೈರ್​ಗೆ ಬಲವಾದ ಮನವಿ ಮಾಡಿದ್ದರು. ಆದರೆ, ಫೀಲ್ಡ್ ಅಂಪೈರ್ ನಾಟೌಟ್ ಎಂದು ತೀರ್ಪು ನೀಡಿದ್ದರು. ಇದಾಗ್ಯೂ ಅಜಿಂಕ್ಯ ರಹಾನೆ ಕೂಡ ಡಿಆರ್​ಎಸ್​ ಮೊರೆ ಹೋಗಲು ಆಸಕ್ತಿ ತೋರಿಸಲಿಲ್ಲ.

ಆದರೆ ಡಿಆರ್​ಎಸ್​ ಟೈಮ್ ಮುಗಿದ ಬಳಿಕ ಬಿಗ್​ ಸ್ಕ್ರೀನ್ ಪರದೆಯ ಮೇಲೆ ರೀಪ್ಲೇ ತೋರಿಸಲಾಗಿತ್ತು. ಆದರೆ ರೀಪ್ಲೇನಲ್ಲಿ ಲಾಥಮ್ ಕ್ಲೀನ್ ಔಟ್​ ಆಗಿರುವುದು ಕಂಡು ಬಂತು. ಇತ್ತ ಡಿಆರ್​ಎಸ್​ ತೆಗೆದುಕೊಳ್ಳದ ಕಾರಣ ಅಶ್ವಿನ್ ಮೈದಾನದಲ್ಲಿಯೇ ತಮ್ಮ ಕೋಪವನ್ನು ಹೊರಹಾಕಿದರು. ಹತಾಶೆಯಿಂದ ಆಕ್ರೋಶ ವ್ಯಕ್ತಪಡಿಸಿದರು. ಇದೇ ವೇಳೆ ಕಾಮೆಂಟರಿ ಬಾಕ್ಸ್​ನಲ್ಲಿದ್ದ ಸುನಿಲ್ ಗವಾಸ್ಕರ್ ಹಾಗೂ ಮಾಜಿ ವೇಗಿ ಸೈಮನ್ ಡೂಲ್ ಕೂಡ ಅಶ್ವಿನ್ ಸಿಟ್ಟನ್ನು ಪ್ರಸ್ತಾಪಿಸಿ, ಕೆಲವೊಮ್ಮೆ ಗಟ್ಟಿ ನಿರ್ಧಾರ ಮಾಡಿ, ಡಿಆರ್​ಎಸ್​ ತೆಗೆದುಕೊಳ್ಳಬೇಕು. ಇದರಿಂದ ಬೌಲರ್​ಗಳಿಗೂ ಹೆಚ್ಚಿನ ವಿಶ್ವಾಸ ಮೂಡುತ್ತೆ ಎಂದರು. ಇದಾಗ್ಯೂ ಭಾರತ ತಂಡವು ಮೊದಲ ಇನಿಂಗ್ಸ್​ನಲ್ಲಿ ನ್ಯೂಜಿಲೆಂಡ್‌ ತಂಡವನ್ನು 296 ರನ್‌ಗಳಿಗೆ ಆಲೌಟ್ ಮಾಡಿದರು.

ಟೀಮ್ ಇಂಡಿಯಾ ಪರ ಅಕ್ಷರ್ ಪಟೇಲ್ 62 ರನ್ ನೀಡಿ ವಿಕೆಟ್ ಪಡೆದರೆ, ಆರ್​ ಅಶ್ವಿನ್ 82 ರನ್ ನೀಡಿ 3 ವಿಕೆಟ್ ಕಬಳಿಸಿದರು. ಇನ್ನು ಜಡೇಜಾ ಹಾಗೂ ಉಮೇಶ್ ಯಾದವ್ ಒಂದೊಂದು ವಿಕೆಟ್ ಪಡೆದರು.

ಇದನ್ನೂ ಓದಿ:IPL 2022: RCB ಇಬ್ಬರನ್ನು ಮಾತ್ರ ಉಳಿಸಿಕೊಳ್ಳುವ ಸಾಧ್ಯತೆ..! 

ಇದನ್ನೂ ಓದಿ: IPL 2022: 16 ಕೋಟಿ ನೀಡಿ, ಇಲ್ಲ ಬಿಟ್ಬಿಡಿ: ಸಂಕಷ್ಟದಲ್ಲಿ SRH ಫ್ರಾಂಚೈಸಿ

ಇದನ್ನೂ ಓದಿ: Vijay Hazare Trophy 2021-22: ವಿಜಯ್ ಹಝಾರೆ ಟೂರ್ನಿಗೆ ಕರ್ನಾಟಕ ತಂಡ ಪ್ರಕಟ

(IND vs NZ: Ravi Ashwin kicks turf in frustration as India misses DRS call)

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada