AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

IND A vs SL A: 2ನೇ ಅನಧಿಕೃತ ಟೆಸ್ಟ್; ಉಭಯ ತಂಡಗಳಿಗೆ ಮೊದಲ ದಿನದ ಗೌರವ

SL A vs IND A: ಭಾರತ ಎ vs ಶ್ರೀಲಂಕಾ ಎ ಎರಡನೇ ಅನಧಿಕೃತ ಟೆಸ್ಟ್‌ನ ಮೊದಲ ದಿನ ಗಾಲೆಯಲ್ಲಿ ಶ್ರೀಲಂಕಾ ಎ 5 ವಿಕೆಟ್‌ಗೆ 288 ರನ್ ಗಳಿಸಿದೆ. ನಾಯಕ ಸಹನ್ ಅರಚ್ಚಿಗೆ ಅಜೇಯ 83 ರನ್ ಗಳಿಸಿ ಮಿಂಚಿದ್ದಾರೆ. ಸರಾಂಶ್ ಜೈನ್ ಮತ್ತು ಯಶ್ ಠಾಕೂರ್ ತಲಾ 2 ವಿಕೆಟ್ ಪಡೆದರು. ಆರಂಭಿಕ ಜೊತೆಯಾಟದ ನಂತರ ಭಾರತೀಯ ಬೌಲರ್‌ಗಳು ಪುನರಾಗಮಿಸಿದರು. ಎರಡನೇ ದಿನದ ಆಟ ಕುತೂಹಲ ಮೂಡಿಸಿದೆ.

IND A vs SL A: 2ನೇ ಅನಧಿಕೃತ ಟೆಸ್ಟ್; ಉಭಯ ತಂಡಗಳಿಗೆ ಮೊದಲ ದಿನದ ಗೌರವ
Ind A Vs Sl A
ಪೃಥ್ವಿಶಂಕರ
|

Updated on:Jul 02, 2026 | 9:24 PM

Share

ಭಾರತ ಎ ಮತ್ತು ಶ್ರೀಲಂಕಾ ಎ (India A vs Sri Lanka A) ನಡುವೆ ಗಾಲೆಯಲ್ಲಿ ಎರಡನೇ ಅನಧಿಕೃತ ಟೆಸ್ಟ್ ಪಂದ್ಯ ನಡೆಯುತ್ತಿದೆ. ಪಂದ್ಯದ ಮೊದಲ ದಿನದಂದು, ಭಾರತದ ನಾಯಕ ಧ್ರುವ್ ಜುರೆಲ್ ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡರು. ಹೀಗಾಗಿ ಮೊದಲು ಬ್ಯಾಟಿಂಗ್‌ ಮಾಡಿದ ಶ್ರೀಲಂಕಾ ತಂಡ ಮೊದಲ ದಿನದಾಟದಂತ್ಯಕ್ಕೆ 5 ವಿಕೆಟ್‌ಗಳನ್ನು ಕಳೆದುಕೊಂಡು 288 ರನ್ ಕಲೆಹಾಕಿದೆ. ತಂಡದ ಪರ ನಾಯಕ ಸಹನ್ ಅರಚ್ಚಿಗೆ ಅಜೇಯ 83 ರನ್​ಗಳ ಇನ್ನಿಂಗ್ಸ್ ಆಡಿದರೆ, ಉಳಿದ ಆಟಗಾರರೂ ಉಪಯುಕ್ತ ಇನ್ನಿಂಗ್ಸ್ ಆಡಿದರು. ಇತ್ತ ಭಾರತದ ಪರ ಸರಾಂಶ್ ಜೈನ್ ಹಾಗೂ ಯಶ್ ಠಾಕೂರ್ ತಲಾ 2 ವಿಕೆಟ್ ಪಡೆದರೆ, ಗುರ್ನೂರ್ ಬ್ರಾರ್ ಒಂದು ವಿಕೆಟ್ ಪಡೆದಿದ್ದಾರೆ.

ಅರಚ್ಛಿಗೆ ಅಜೇಯ 83 ರನ್

ಶ್ರೀಲಂಕಾ ಎ ತಂಡಕ್ಕೆ ಉತ್ತಮ ಆರಂಭವೇ ಲಭಿಸಿತು. ಮೊದಲ ವಿಕೆಟ್​ಗೆ 53 ರನ್​ಗಳ ಜೊತೆಯಾಟ ನೀಡಿದರು. ಆದಾಗ್ಯೂ ಆರಂಭಿಕ ಆಟಗಾರರಿಬ್ಬರನ್ನೂ 86 ರನ್‌ಗಳಿಗೆ ಔಟ್ ಮಾಡುವ ಮೂಲಕ ಭಾರತೀಯ ಬೌಲರ್‌ಗಳು ಪುನರಾಗಮನ ಮಾಡಿದರು. ಯಶ್ ಠಾಕೂರ್ ಮತ್ತು ಗುರ್ನೂರ್ ಬ್ರಾರ್ ಆರಂಭಿಕರಿಬ್ಬರ ವಿಕೆಟ್ ಉರುಳಿಸಿದರು. 3ನೇ ಕ್ರಮಾಂಕದಲ್ಲಿ ಬಂದ ನುವಾನಿಂದು ಫೆರ್ನಾಂಡೊ 44 ರನ್ ಗಳಿಸಿ ಸರಾಂಶ್ ಜೈನ್ ಬೌಲಿಂಗ್‌ನಲ್ಲಿ ಔಟಾದರೆ, ಅಂಜಲಾ ಬಂಡಾರ ಹಾಗೂ ನಾಯಕ ಸಹನ್ ಅರಚ್ಛಿಗೆ 99 ರನ್‌ಗಳ ಉತ್ತಮ ಪಾಲುದಾರಿಕೆಯನ್ನು ಹಂಚಿಕೊಂಡರು. ಬಂಡಾರ42 ರನ್‌ಗಳಿಗೆ ಔಟ್ ಆಗುವ ಮೂಲಕ ಈ ಪಾಲುದಾರಿಕೆ ಮುರಿದುಬಿದ್ದಿತು. ದಿನದ ಅಂತ್ಯಕ್ಕೆ ಅರಚ್ಛಿಗೆ 83 ರನ್ ಮತ್ತು ಗುಣಶೇಖರ 6 ರನ್ ಗಳಿಸಿ ಎರಡನೇ ದಿನದಾಟಕ್ಕೆ ಬ್ಯಾಟಿಂಗ್‌ ಕಾಯ್ದುಕೊಂಡಿದ್ದಾರೆ.

IND vs SL: ಟಿ20 ಸರಣಿ ರದ್ದು; ಭಾರತ- ಲಂಕಾ ನಡುವಿನ ಟೆಸ್ಟ್ ಸರಣಿ ವೇಳಾಪಟ್ಟಿ ಪ್ರಕಟ

ಆಕಿಬ್ ನಬಿಗೆ ವಿಕೆಟ್ ಸಿಗಲಿಲ್ಲ

ಮೊದಲ ಟೆಸ್ಟ್‌ನಲ್ಲಿ ಅದ್ಭುತ ಬೌಲಿಂಗ್ ಮಾಡಿದ್ದ ಆಕಿಬ್ ನಬಿ ದಾರ್ ಮೊದಲ ದಿನದಂದು ಒಂದೇ ಒಂದು ವಿಕೆಟ್ ಪಡೆಯಲಿಲ್ಲ. ಮೊದಲ ದಿನ ನಾಲ್ಕು ಮೇಡನ್ ಸೇರಿದಂತೆ 15 ಓವರ್ ಬೌಲಿಂಗ್ ಮಾಡಿದ ನಬಿ 50 ರನ್ ಬಿಟ್ಟುಕೊಟ್ಟರು. ಉಳಿದಂತೆ ಸರಾಂಶ್ ಜೈನ್ 24 ಓವರ್‌ಗಳಲ್ಲಿ 77 ರನ್ ಬಿಟ್ಟುಕೊಟ್ಟು ಎರಡು ವಿಕೆಟ್ ಪಡೆದರೆ, ಜೀಶನ್ ಅನ್ಸಾರಿ 16 ಓವರ್‌ಗಳಲ್ಲಿ 64 ರನ್ ಬಿಟ್ಟುಕೊಟ್ಟು ವಿಕೆಟ್ ಪಡೆಯಲಿಲ್ಲ. ಶೇಖ್ ರಶೀದ್ ಒಂದು ಓವರ್ ಬೌಲ್ ಮಾಡಿ 10 ರನ್ ಬಿಟ್ಟುಕೊಟ್ಟರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:22 pm, Thu, 2 July 26

Follow Us
ಮಳೆಯಿಂದ ಅಪಾಯದ ಮಟ್ಟ ತಲುಪಿದ ಅಲಕಾನಂದ ನದಿ; ರುದ್ರಪ್ರಯಾಗದಲ್ಲಿ ಹೈ ಅಲರ್ಟ್
ಮಳೆಯಿಂದ ಅಪಾಯದ ಮಟ್ಟ ತಲುಪಿದ ಅಲಕಾನಂದ ನದಿ; ರುದ್ರಪ್ರಯಾಗದಲ್ಲಿ ಹೈ ಅಲರ್ಟ್
ನಟಿ ರಚಿತಾ ರಾಮ್ ನೋಡಲು ಮುಗಿಬಿದ್ದ ಫ್ಯಾನ್ಸ್; ಎಂಥಾ ಕ್ರೇಜ್ ನೋಡಿ..
ನಟಿ ರಚಿತಾ ರಾಮ್ ನೋಡಲು ಮುಗಿಬಿದ್ದ ಫ್ಯಾನ್ಸ್; ಎಂಥಾ ಕ್ರೇಜ್ ನೋಡಿ..
ಖಾಸಗಿ ಲೇಔಟ್ ರಸ್ತೆಗಳು ಇನ್ನು ಸರ್ಕಾರಿ ಸ್ವತ್ತು: ಸಿಎಂ ಡಿಕೆಶಿ ಘೋಷಣೆ
ಖಾಸಗಿ ಲೇಔಟ್ ರಸ್ತೆಗಳು ಇನ್ನು ಸರ್ಕಾರಿ ಸ್ವತ್ತು: ಸಿಎಂ ಡಿಕೆಶಿ ಘೋಷಣೆ
ಕಾಟನ್ ಪೇಟೆಯಲ್ಲಿ ವಾಲಿದ 2 ಅಂತಸ್ತಿನ ಕಟ್ಟಡ, ಅಕ್ಕಪಕ್ಕದವರಿಗೆ ಆತಂಕ
ಕಾಟನ್ ಪೇಟೆಯಲ್ಲಿ ವಾಲಿದ 2 ಅಂತಸ್ತಿನ ಕಟ್ಟಡ, ಅಕ್ಕಪಕ್ಕದವರಿಗೆ ಆತಂಕ
ಹುಟ್ಟುಹಬ್ಬದ ದಿನ ತಿರುಪತಿಗೆ ಭೇಟಿ ನೀಡಿದ ನಟ ‘ಗೋಲ್ಡನ್ ಸ್ಟಾರ್’ ಗಣೇಶ್
ಹುಟ್ಟುಹಬ್ಬದ ದಿನ ತಿರುಪತಿಗೆ ಭೇಟಿ ನೀಡಿದ ನಟ ‘ಗೋಲ್ಡನ್ ಸ್ಟಾರ್’ ಗಣೇಶ್
SIR​ ಪ್ರಕ್ರಿಯೆ: ಬಾಂಗ್ಲಾದಿಂದ ಬಂದವರ ಪೋಷಣೆ, ಕುಮಾರಸ್ವಾಮಿ ಗಂಭೀರ ಆರೋಪ
SIR​ ಪ್ರಕ್ರಿಯೆ: ಬಾಂಗ್ಲಾದಿಂದ ಬಂದವರ ಪೋಷಣೆ, ಕುಮಾರಸ್ವಾಮಿ ಗಂಭೀರ ಆರೋಪ
’ನನ್ನ ತಂಗಿ’; ಭಾರತಕ್ಕೆ ಬಂದಿರುವ ಜಪಾನ್ ಪ್ರಧಾನಿ ತಕೈಚಿಗೆ ಮೋದಿ ಮೆಚ್ಚುಗೆ
’ನನ್ನ ತಂಗಿ’; ಭಾರತಕ್ಕೆ ಬಂದಿರುವ ಜಪಾನ್ ಪ್ರಧಾನಿ ತಕೈಚಿಗೆ ಮೋದಿ ಮೆಚ್ಚುಗೆ
ಗ್ಯಾರಂಟಿ ಪರಿಷ್ಕರಣೆ ಹೆಸರಲ್ಲಿ ಚುನಾವಣೆಗೆ ಮಾಹಿತಿ ಸಂಗ್ರಹ: ಕುಮಾರಸ್ವಾಮಿ
ಗ್ಯಾರಂಟಿ ಪರಿಷ್ಕರಣೆ ಹೆಸರಲ್ಲಿ ಚುನಾವಣೆಗೆ ಮಾಹಿತಿ ಸಂಗ್ರಹ: ಕುಮಾರಸ್ವಾಮಿ
28 ಕೋಟಿ ರೂ. ಪರಿಹಾರದ ಕ್ರೆಡಿಟ್ ವಾರ್
28 ಕೋಟಿ ರೂ. ಪರಿಹಾರದ ಕ್ರೆಡಿಟ್ ವಾರ್
ಭಾರತಕ್ಕೆ ಜಪಾನ್ ಪ್ರಧಾನಿ ಭೇಟಿ
ಭಾರತಕ್ಕೆ ಜಪಾನ್ ಪ್ರಧಾನಿ ಭೇಟಿ