ನ್ಯೂಜಿಲೆಂಡ್‌ಗೆ ಪ್ರವಾಸಕ್ಕೆ ಭಾರತದ 2 ಏಕದಿನ ತಂಡಗಳ ಪ್ರಯಾಣ

ವೆಸ್ಟ್ ಇಂಡೀಸ್ ಸರಣಿ ಬಳಿಕ ಟೀಂ ಇಂಡಿಯಾ ನ್ಯೂಜಿಲೆಂಡ್ ಪ್ರವಾಸಕ್ಕೆ ಹೊರಡಲಿದ್ದು, 2020ರ ನಂತರ ಮೊದಲ ಸಂಪೂರ್ಣ ಸರಣಿ ಇದಾಗಿದೆ. ಬಿಗಿಯಾದ ವೇಳಾಪಟ್ಟಿಯಿಂದಾಗಿ ಎರಡು ಪ್ರತ್ಯೇಕ ಏಕದಿನ ತಂಡಗಳನ್ನು ಆಯ್ಕೆ ಮಾಡುವ ಸಾಧ್ಯತೆ ಇದೆ. ಶುಭ್​ಮನ್ ಗಿಲ್, ಬುಮ್ರಾ ಅವರಂತಹ ಪ್ರಮುಖ ಆಟಗಾರರಿಗೆ ಟೆಸ್ಟ್ ಸರಣಿಗೆ ಸಿದ್ಧತೆಗಾಗಿ ವಿಶ್ರಾಂತಿ ನೀಡಬಹುದು. ಭಾರತ ಎ ತಂಡದ ಆಟಗಾರರಿಗೆ ಇಲ್ಲಿ ಅವಕಾಶ ಸಿಗಬಹುದು.

ನ್ಯೂಜಿಲೆಂಡ್‌ಗೆ ಪ್ರವಾಸಕ್ಕೆ ಭಾರತದ 2 ಏಕದಿನ ತಂಡಗಳ ಪ್ರಯಾಣ
ಟೀಂ ಇಂಡಿಯಾ

Updated on: Oct 07, 2026 | 7:37 PM

ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸರಣಿಯನ್ನು ಮುಗಿಸಿದ ಬಳಿಕ ಟೀಂ ಇಂಡಿಯಾ, ನ್ಯೂಜಿಲೆಂಡ್ ಪ್ರವಾಸಕ್ಕೆ ಹೊರಡಲಿದೆ. ಈ ಪ್ರವಾಸವು ಬಹುನಿರೀಕ್ಷಿತವಾಗಿದ್ದು, 2020 ರ ನಂತರ ಭಾರತ ತಂಡವು ಎಲ್ಲಾ ಸ್ವರೂಪದ ಸರಣಿಗಾಗಿ ನ್ಯೂಜಿಲೆಂಡ್‌ಗೆ ಪ್ರಯಾಣಿಸುತ್ತಿರುವುದು ಇದೇ ಮೊದಲು. ಈ ಪ್ರವಾಸವು ಟಿ20 ಸರಣಿಯೊಂದಿಗೆ ಪ್ರಾರಂಭವಾಗಲಿದೆ, ಆ ನಂತರ ಏಕದಿನ ಮತ್ತು ಟೆಸ್ಟ್ ಸರಣಿಗಳು ನಡೆಯಲಿದೆ. ಟಿ20 ಸರಣಿಗೆ ಈಗಾಗಲೇ ತಂಡವನ್ನು ಘೋಷಿಸಲಾಗಿದೆ. ಆದರೆ ಏಕದಿನ ಮತ್ತು ಟೆಸ್ಟ್ ಸರಣಿಗೆ ಮಾತ್ರ ತಂಡಗಳನ್ನು ಇನ್ನು ಪ್ರಕಟಿಸಿಲ್ಲ. ವರದಿಗಳ ಪ್ರಕಾರ, ಅಕ್ಟೋಬರ್ 11 ರ ನಂತರ ಈ ಎರಡು ಸರಣಿಗಳಿಗೆ ತಂಡದ ಆಯ್ಕೆ ನಡೆಯಲಿದೆ. ಇಲ್ಲೊಂದು ಅಚ್ಚರಿಯ ಸಂಗತಿಯೆಂದರೆ ಬಿಸಿಸಿಐ ಏಕದಿನ ಸರಣಿಗೆ ಎರಡು ಪ್ರತ್ಯೇಕ ಏಕದಿನ ತಂಡಗಳನ್ನು ಆಯ್ಕೆ ಮಾಡಬಹುದು ಎನ್ನಲಾಗುತ್ತಿದೆ.

ನ್ಯೂಜಿಲೆಂಡ್‌ಗೆ 2 ಏಕದಿನ ತಂಡಗಳು

ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಟಿ20 ಸರಣಿಯು ಅಕ್ಟೋಬರ್ 22 ರಂದು ಆರಂಭವಾಗಲಿದ್ದು, ಇದರೊಂದಿಗೆ ಭಾರತದ 40 ದಿನಗಳ ನ್ಯೂಜಿಲೆಂಡ್ ಪ್ರವಾಸ ಶುರುವಾಗಲಿದೆ. ಐದು ಟಿ20 ಪಂದ್ಯಗಳ ಜೊತೆಗೆ, ಐದು ಏಕದಿನ ಮತ್ತು ಎರಡು ಟೆಸ್ಟ್ ಪಂದ್ಯಗಳನ್ನು ಸಹ ಆಡಲಾಗುವುದು. ಟಿ20 ಸರಣಿಗೆ ತಂಡವನ್ನು ಈಗಾಗಲೇ ಆಯ್ಕೆ ಮಾಡಲಾಗಿದೆ, ಆದರೆ ಏಕದಿನ ಮತ್ತು ಟೆಸ್ಟ್ ತಂಡಗಳನ್ನು ಶೀಘ್ರದಲ್ಲೇ ಆಯ್ಕೆ ಮಾಡಲಾಗುತ್ತದೆ. ಟೈಮ್ಸ್ ಆಫ್ ಇಂಡಿಯಾದ ವರದಿಯ ಪ್ರಕಾರ, ಏಕದಿನ ತಂಡದ ಆಯ್ಕೆ ವಿಳಂಬಕ್ಕೆ ಒಂದು ಕಾರಣ ಭಾರತ ಎ ಮತ್ತು ಆಸ್ಟ್ರೇಲಿಯಾ ಎ ನಡುವಿನ ನಡೆಯುತ್ತಿರುವ ಏಕದಿನ ಸರಣಿಯಾಗಿದೆ.

ವಾಸ್ತವವಾಗಿ, ಆಯ್ಕೆ ಸಮಿತಿಯು ಏಕದಿನ ಸರಣಿಗೆ ಎರಡು ಪ್ರತ್ಯೇಕ ತಂಡಗಳನ್ನು ಆಯ್ಕೆ ಮಾಡುವ ಬಗ್ಗೆ ಯೋಚಿಸುತ್ತಿದೆ ಎಂದು ವರದಿ ಹೇಳುತ್ತದೆ. ಏಕದಿನ ಸರಣಿ ಮತ್ತು ಟೆಸ್ಟ್ ಸರಣಿಯ ನಡುವೆ ಕೇವಲ ನಾಲ್ಕು ದಿನಗಳ ಅಂತರವಿರುವುದೆ. ಆದ್ದರಿಂದ, ನಾಯಕ ಶುಭ್​ಮನ್ ಗಿಲ್ ಮತ್ತು ಜಸ್ಪ್ರೀತ್ ಬುಮ್ರಾ ಅವರಂತಹ ಆಟಗಾರರಿಗೆ ಟೆಸ್ಟ್ ಸರಣಿಗೆ ತಯಾರಿ ನಡೆಸಲು ಕೊನೆಯ ಎರಡು ಏಕದಿನ ಪಂದ್ಯಗಳಿಂದ ವಿಶ್ರಾಂತಿ ನೀಡಬಹುದು.

ಜಿಂಬಾಬ್ವೆ ವಿರುದ್ಧದ ಟಿ20, ಏಕದಿನ ಸರಣಿಗೆ ಭಾರತ ಮಹಿಳಾ ತಂಡ ಪ್ರಕಟ

ಕೊನೆಯ 2 ಪಂದ್ಯಗಳಿಗೆ ಬೇರೆ ತಂಡ

ಇದಕ್ಕಾಗಿಯೇ ಆಯ್ಕೆದಾರರು ಏಕದಿನ ಸರಣಿಗೆ ಎರಡು ತಂಡಗಳನ್ನು ಆಯ್ಕೆ ಮಾಡುತ್ತಾರೆ ಎನ್ನಲಾಗುತ್ತಿದೆ. ಪ್ರಸ್ತುತ ನಡೆಯುತ್ತಿರುವ ಭಾರತ ಎ ಹಾಗೂ ಆಸ್ಟ್ರೇಲಿಯಾ ಎ ನಡುವಿನ ಸರಣಿಯು ಈ ನಿರ್ಧಾರದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಆಯ್ಕೆ ಸಮಿತಿಯು ಈ ಸರಣಿಯಲ್ಲಿ ಭಾಗವಹಿಸುವ ಆಟಗಾರರನ್ನು ಸೂಕ್ಷ್ಮವಾಗಿ ಗಮನಿಸಲಿದ್ದು, ಅವರಲ್ಲಿ ಕೆಲವರನ್ನು ಈ ಎರಡನೇ ತಂಡಕ್ಕೆ ಆಯ್ಕೆ ಮಾಡಲಾಗುತ್ತದೆ. ಈ ತಂಡ ಕೊನೆಯ ಎರಡು ಏಕದಿನ ಪಂದ್ಯಗಳನ್ನು ಆಡಲಿದೆ. ರುತುರಾಜ್ ಗಾಯಕ್ವಾಡ್, ಸೂರ್ಯಾಂಶ್ ಶೆಡ್ಗೆ, ರಜತ್ ಪಾಟಿದಾರ್, ಯಶ್ ಠಾಕೂರ್ ಮತ್ತು ವಿಪ್ರಜ್ ನಿಗಮ್ ಅವರಂತಹ ಆಟಗಾರರನ್ನು ಈ ತಂಡದಲ್ಲಿ ಸೇರಿಸಿಕೊಳ್ಳಬಹುದು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪೃಥ್ವಿಶಂಕರ

ಪೃಥ್ವಿಶಂಕರ ಅವರ ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ. ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ಕೆಲಸ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ಇವರು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ಇವರ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.

Read More
Loading...
Unable to load recommendations.
Follow Us