ಬಿಸಿಸಿಐ vs ಪಾಕ್ ಕ್ರಿಕೆಟ್ ಮಂಡಳಿ; ಕೇಂದ್ರ ಒಪ್ಪಂದ ಮೊತ್ತದಲ್ಲಿ ಎಷ್ಟು ವ್ಯತ್ಯಾಸವಿದೆ ಗೊತ್ತಾ?
BCCI vs PCB: ಏಪ್ರಿಲ್ 21ರಂದು ಬಿಸಿಸಿಐ 34 ಆಟಗಾರರ ಕೇಂದ್ರ ಒಪ್ಪಂದವನ್ನು ಘೋಷಿಸಿದೆ. ಇದರಲ್ಲಿ ನಾಲ್ಕು ಶ್ರೇಣಿಗಳಿದ್ದು, ಇದರಲ್ಲಿ ಸ್ಥಾನ ಪಡೆದಿರುವ ಆಟಗಾರರಿಗೆ ಕೋಟಿ ವೇತನ ಸಿಗಲಿದೆ. ಇತ್ತ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಕೂಡ ಕಳೆದ ವರ್ಷ ತನ್ನ ಒಪ್ಪಂದವನ್ನು ಬಿಡುಗಡೆ ಮಾಡಿತ್ತು. ಈ ಒಪ್ಪಂದದಲ್ಲಿ ಸ್ಥಾನ ಪಡೆದ ಆಟಗಾರರಿಗೆ ಸಿಗುವ ಭಾರತಕ್ಕೆ ಹೋಲಿಸಿದರೆ ತೀರ ಕಡಿಮೆ ಇದೆ.

ಏಪ್ರಿಲ್ 21 ರಂದು ಬಿಸಿಸಿಐ (BCCI), ಆಟಗಾರರ ನೂತನ ಕೇಂದ್ರ ಒಪ್ಪಂದವನ್ನು ಘೋಷಿಸಿದೆ. ಇದರಲ್ಲಿ ಒಟ್ಟು 34 ಆಟಗಾರರಿಗೆ ಸ್ಥಾನ ನೀಡಲಾಗಿದೆ. ಈ 34 ಆಟಗಾರರನ್ನು 4 ಶ್ರೇಣಿಗಳಾಗಿ ವಿಂಗಡಿಸಲಾಗಿದೆ. ಬಿಸಿಸಿಐನಂತೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ (PCB) ಕೂಡ ಕಳೆದ ವರ್ಷ ತನ್ನ ಆಟಗಾರರ ಕೇಂದ್ರ ಒಪ್ಪಂದ ಪಟ್ಟಿಯನ್ನು ಬಿಡುಗಡೆ ಮಾಡಿತ್ತು. ಈ ಪಟ್ಟಿಯಲ್ಲಿ 25 ಆಟಗಾರರಿಗೆ ಸ್ಥಾನ ನೀಡಲಾಗಿತ್ತು. ಅಂತಹ ಪರಿಸ್ಥಿತಿಯಲ್ಲಿ, ಈ ಎರಡು ದೇಶಗಳ ಕ್ರಿಕೆಟಿಗರ ಕೇಂದ್ರ ಒಪ್ಪಂದಗಳ ನಡುವಿನ ವ್ಯತ್ಯಾಸವೇನು ಮತ್ತು ಭಾರತಕ್ಕೆ ಹೋಲಿಸಿದರೆ ಪಾಕಿಸ್ತಾನಿ ಆಟಗಾರರು ಎಷ್ಟು ಹಣವನ್ನು ಪಡೆಯುತ್ತಾರೆ ಎಂಬುದರ ಬಗ್ಗೆ ಪೂರ್ಣ ವಿವರ ಇಲ್ಲಿದೆ.
ಭಾರತೀಯ ಆಟಗಾರರ ಕೇಂದ್ರ ಒಪ್ಪಂದ
ಬಿಸಿಸಿಐ ಈ 34 ಆಟಗಾರರನ್ನು 4 ಶ್ರೇಣಿಗಳಾಗಿ ವಿಂಗಡಿಸಿದೆ. ಭಾರತದಲ್ಲಿ, ಎ+ ಗ್ರೇಡ್‌ನಲ್ಲಿರುವ ಆಟಗಾರನಿಗೆ ಪ್ರತಿ ವರ್ಷ 7 ಕೋಟಿ ರೂ. ವೇತನ ನೀಡಲಾಗುತ್ತದೆ. ಅಂದರೆ ಅವರು ಪ್ರತಿ ತಿಂಗಳಿಗೆ 58.3 ಲಕ್ಷ ರೂ. ವೇತನ ಪಡೆಯಲಿದ್ದಾರೆ. ‘ಎ’ ದರ್ಜೆಯ ಆಟಗಾರರಿಗೆ ಪ್ರತಿ ವರ್ಷ 5 ಕೋಟಿ ರೂ. ಸಿಕ್ಕರೆ, ‘ಬಿ’ ದರ್ಜೆಯ ಆಟಗಾರರಿಗೆ 3 ಕೋಟಿ ರೂ. ಮತ್ತು ‘ಸಿ’ ದರ್ಜೆಯ ಆಟಗಾರರಿಗೆ 1 ಕೋಟಿ ರೂ. ವೇತನ ನೀಡಲಾಗುತ್ತದೆ. ಬಿಸಿಸಿಐನ ಕೇಂದ್ರ ಒಪ್ಪಂದ ಪಟ್ಟಿಯಲ್ಲಿ, 4 ಆಟಗಾರರು ಗ್ರೇಡ್ ಎ+ ಭಾಗವಾಗಿದ್ದಾರೆ. ಗ್ರೇಡ್ ಎ ನಲ್ಲಿ 6 ಆಟಗಾರರು ಸ್ಥಾನ ಪಡೆದಿದ್ದಾರೆ. ಬಿ ಗ್ರೇಡ್ನಲ್ಲಿ 5 ಆಟಗಾರರಿದ್ದರೆ, ಗ್ರೇಡ್ ಸಿ ನಲ್ಲಿ 19 ಆಟಗಾರರಿದ್ದಾರೆ.
ಪಾಕಿಸ್ತಾನಿ ಆಟಗಾರರ ಕೇಂದ್ರ ಒಪ್ಪಂದ
ಪಾಕಿಸ್ತಾನ ಕ್ರಿಕೆಟ್ ಮಂಡಳಿಯು ಕೇಂದ್ರ ಗುತ್ತಿಗೆ ಆಟಗಾರರನ್ನು 4 ವಿಭಾಗಗಳಾಗಿ ವಿಂಗಡಿಸಿದೆ. ಅದರಂತೆ ಎ ವಿಭಾಗದಲ್ಲಿ 2 ಆಟಗಾರರು, ಬಿ ವಿಭಾಗದಲ್ಲಿ 3 ಆಟಗಾರರು, ಸಿ ವಿಭಾಗದಲ್ಲಿ 9 ಆಟಗಾರರು ಮತ್ತು ಡಿ ವಿಭಾಗದಲ್ಲಿ 11 ಆಟಗಾರರು ಸ್ಥಾನ ಪಡೆದಿದ್ದಾರೆ. ಪಾಕ್ ಕ್ರಿಕೆಟ್ ಮಂಡಳಿ ತನ್ನ ಗ್ರೇಡ್ ಎ ಆಟಗಾರರಿಗೆ ಪ್ರತಿ ತಿಂಗಳು 4.5 ಮಿಲಿಯನ್ PKR ಅಂದರೆ 13.69 ಲಕ್ಷ ಭಾರತೀಯ ರೂಪಾಯಿಗಳನ್ನು ವೇತನವಾಗಿ ಪಾವತಿಸುತ್ತದೆ. ಇದರ ಪ್ರಕಾರ, ಎ ಗ್ರೇಡ್ ಆಟಗಾರನಿಗೆ ವಾರ್ಷಿಕವಾಗಿ ಕೇವಲ 1.65 ಕೋಟಿ ರೂ. ವೇತನ ಸಿಗುತ್ತದೆ. ಇದು ಬಿ ಗ್ರೇಡ್ ಭಾರತೀಯ ಆಟಗಾರರಿಗಿಂತ ಕಡಿಮೆಯಾಗಿದೆ. ಬಿ ದರ್ಜೆಯ ಆಟಗಾರರಿಗೆ ಪಿಕೆಆರ್ 3 ಮಿಲಿಯನ್ ಅಂದರೆ ಸರಿಸುಮಾರು 9 ಲಕ್ಷ ಭಾರತೀಯ ರೂಪಾಯಿ ವೇತನ ನೀಡಲಾಗುತ್ತದೆ. ಸಿ ಮತ್ತು ಡಿ ಶ್ರೇಣಿಯಲ್ಲಿ ಬರುವ ಆಟಗಾರರು ಪ್ರತಿ ತಿಂಗಳು 0.75-1.5 ಮಿಲಿಯನ್ ಪಿಕೆಆರ್ ಅಂದರೆ ಸುಮಾರು 2 ಲಕ್ಷದಿಂದ 4.5 ಲಕ್ಷ ರೂಪಾಯಿಗಳನ್ನು ವೇತನವಾಗಿ ಪಡೆಯುತ್ತಾರೆ.
ಪಿಸಿಬಿಯ ಕೇಂದ್ರ ಒಪ್ಪಂದ ಪಟ್ಟಿ
- ಎ ಗ್ರೇಡ್: ಬಾಬರ್ ಆಝಂ ಮತ್ತು ಮೊಹಮ್ಮದ್ ರಿಜ್ವಾನ್
- ಬಿ ಗ್ರೇಡ್: ನಸೀಮ್ ಶಾ, ಶಾಹೀನ್ ಶಾ ಅಫ್ರಿದಿ ಮತ್ತು ಶಾನ್ ಮಸೂದ್
- ಸಿ ಗ್ರೇಡ್: ಅಬ್ದುಲ್ಲಾ ಶಫೀಕ್, ಅಬ್ರಾರ್ ಅಹ್ಮದ್, ಹಾರಿಸ್ ರೌಫ್, ನೋಮನ್ ಅಲಿ, ಸೈಮ್ ಅಯೂಬ್, ಸಾಜಿದ್ ಖಾನ್, ಸಲ್ಮಾನ್ ಅಲಿ ಅಘಾ, ಸೌದ್ ಶಕೀಲ್ ಮತ್ತು ಶಾದಾಬ್ ಖಾನ್
BCCI Central Contracts: ನಿಯಮ ಉಲ್ಲಂಘಿಸಿದ್ದ ಇಬ್ಬರು ಆಟಗಾರರಿಗೆ ಕ್ಷಮಾದಾನ ನೀಡಿದ ಬಿಸಿಸಿಐ
ಬಿಸಿಸಿಐ ಕೇಂದ್ರ ಒಪ್ಪಂದ ಪಟ್ಟಿ
- ಗ್ರೇಡ್ ಎ+: ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಜಸ್ಪ್ರೀತ್ ಬುಮ್ರಾ ಮತ್ತು ರವೀಂದ್ರ ಜಡೇಜಾ.
- ಗ್ರೇಡ್ ಎ: ಮೊಹಮ್ಮದ್ ಸಿರಾಜ್, ಕೆಎಲ್ ರಾಹುಲ್, ಶುಭ್ಮನ್ ಗಿಲ್, ಹಾರ್ದಿಕ್ ಪಾಂಡ್ಯ, ಮೊಹಮ್ಮದ್ ಶಮಿ, ರಿಷಭ್ ಪಂತ್.
- ಗ್ರೇಡ್ ಬಿ: ಸೂರ್ಯಕುಮಾರ್ ಯಾದವ್, ಕುಲ್ದೀಪ್ ಯಾದವ್, ಅಕ್ಷರ್ ಪಟೇಲ್, ಯಶಸ್ವಿ ಜೈಸ್ವಾಲ್ ಮತ್ತು ಶ್ರೇಯಸ್ ಅಯ್ಯರ್.
- ಗ್ರೇಡ್ ಸಿ: ರಿಂಕು ಸಿಂಗ್, ತಿಲಕ್ ವರ್ಮಾ, ರುತುರಾಜ್ ಗಾಯಕ್ವಾಡ್, ಶಿವಂ ದುಬೆ, ರವಿ ಬಿಷ್ಣೋಯ್, ವಾಷಿಂಗ್ಟನ್ ಸುಂದರ್, ಮುಖೇಶ್ ಕುಮಾರ್, ಸಂಜು ಸ್ಯಾಮ್ಸನ್, ಅರ್ಷ್‌ದೀಪ್ ಸಿಂಗ್, ಪ್ರಸಿದ್ಧ್ ಕೃಷ್ಣ, ರಜತ್ ಪಾಟಿದಾರ್, ಧ್ರುವ್ ಜುರೆಲ್, ಸರ್ಫರಾಜ್ ಖಾನ್, ನಿತೀಶ್ ಕುಮಾರ್ ರೆಡ್ಡಿ, ಇಶಾನ್ ಕಿಶನ್, ಅಭಿಷೇಕ್ ಶರ್ಮಾ, ಆಕಾಶ್ ದೀಪ್, ವರುಣ್ ಚಕ್ರವರ್ತಿ, ಹರ್ಷಿತ್ ರಾಣಾ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ