AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

World Cup 2025: ಪಿಚ್ ತುಂಬ ಆವರಿಸಿದ ಹೊಗೆ; 15 ನಿಮಿಷ ನಿಂತ ಭಾರತ- ಪಾಕ್ ಪಂದ್ಯ

India-Pak Women's World Cup Match: ಕೊಲಂಬೊದಲ್ಲಿ ನಡೆದ 2025 ರ ಮಹಿಳಾ ಏಕದಿನ ವಿಶ್ವಕಪ್ ಭಾರತ-ಪಾಕಿಸ್ತಾನ ಪಂದ್ಯದಲ್ಲಿ ಅಸಾಮಾನ್ಯ ಘಟನೆ ನಡೆಯಿತು. ಭಾರತ ಬ್ಯಾಟಿಂಗ್ ಮಾಡುವಾಗ ಕೀಟಗಳ ಕಾಟದಿಂದಾಗಿ 15 ನಿಮಿಷ ಆಟ ನಿಲ್ಲಿಸಲಾಯಿತು. ಮಳೆ ಅಥವಾ ಕೆಟ್ಟ ಹವಾಮಾನವಲ್ಲ, ಬದಲಿಗೆ ಸೊಳ್ಳೆಗಳು ಪಂದ್ಯಕ್ಕೆ ಅಡ್ಡಿಪಡಿಸಿದವು. ಕೀಟನಾಶಕ ಸಿಂಪಡಿಸಿ ಆಟ ಮುಂದುವರೆಯಿತು. ಭಾರತ 247 ರನ್ ಗಳಿಸಿ, ಪಾಕಿಸ್ತಾನಕ್ಕೆ 248 ರನ್‌ಗಳ ಗುರಿ ನೀಡಿದೆ.

World Cup 2025: ಪಿಚ್ ತುಂಬ ಆವರಿಸಿದ ಹೊಗೆ; 15 ನಿಮಿಷ ನಿಂತ ಭಾರತ- ಪಾಕ್ ಪಂದ್ಯ
Ind Vs Pak
ಪೃಥ್ವಿಶಂಕರ
|

Updated on:Oct 05, 2025 | 7:31 PM

Share

ಕೊಲಂಬೊದ ಆರ್ ಪ್ರೇಮದಾಸ ಕ್ರೀಡಾಂಗಣದಲ್ಲಿ ಭಾರತ ಮತ್ತು ಪಾಕಿಸ್ತಾನ (India vs Pakistan) ಮಹಿಳಾ ತಂಡಗಳ ನಡುವೆ 2025 ರ ಏಕದಿನ ವಿಶ್ವಕಪ್ (Women’s World Cup 2025) ಪಂದ್ಯ ನಡೆಯುತ್ತಿದ್ದು, ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ 247 ರನ್ ಕಲೆಹಾಕಿದೆ. ಆದಾಗ್ಯೂ ಈ ಪಂದ್ಯದಲ್ಲಿ ಟೀಂ ಇಂಡಿಯಾದ ಇನ್ನಿಂಗ್ಸ್ ಸಮಯದಲ್ಲಿ ಅಂಪೈರ್‌ಗಳು ಇದ್ದಕ್ಕಿದ್ದಂತೆ 15 ನಿಮಿಷಗಳ ಕಾಲ ಆಟವನ್ನು ನಿಲ್ಲಿಸಬೇಕಾಯಿತು. ಇದಕ್ಕೆ ಕಾರಣ ಮಳೆಯಯೋ ಅಥವಾ ಕೆಟ್ಟ ಹವಾಮಾನವೋ ಕಾರಣವಾಗಿರಲಿಲ್ಲ. ಬದಲಾಗಿ, ಮೈದಾನದಲ್ಲಿ ಬಹಳಷ್ಟು ಸೊಳ್ಳೆಗಳ ಕಾಟವಿದ್ದು, ಇದರಿಂದಾಗಿ ಆಟಕ್ಕೆ ಸಾಕಷ್ಟು ತೊಂದರೆಯಾಗುತ್ತಿತ್ತು. ಹೀಗಾಗಿ ಈ ಸಮಸ್ಯೆಯನ್ನು ನಿವಾರಿಸಲು ಮೈದಾನದಲ್ಲಿ ಕೀಟನಾಶಕವನ್ನು ಸಿಂಪಡಿಸಲು 15 ನಿಮಿಷಗಳ ಕಾಲ ಆಟವನ್ನು ನಿಲ್ಲಿಸಬೇಕಾಯಿತು.

ಆಟಕ್ಕೆ ಸೊಳ್ಳೆಗಳ ಕಾಟ

ಟೀಂ ಇಂಡಿಯಾ ಬ್ಯಾಟಿಂಗ್ ಮಾಡುತ್ತಿದ್ದ ಸಮಯದಲ್ಲಿ ಪಿಚ್​ ಮೇಲೆ ಸಾಕಷ್ಟು ಪ್ರಮಾಣದಲ್ಲಿ ಕೀಟಗಳು ಮತ್ತು ಸೊಳ್ಳೆಗಳು ಹಾರಾಡಲು ಆರಂಭಿಸಿದವು. ಇದರಿಂದ ಟೀಂ ಇಂಡಿಯಾ ಆಟಗಾರ್ತಿಯರಿಗೆ ಬ್ಯಾಟಿಂಗ್ ಮಾಡಲು ಕಷ್ಟವಾಗುತ್ತಿತ್ತು. ಇತ್ತ ಪಾಕಿಸ್ತಾನದ ಆಟಗಾರ್ತಿಯರಿಗೂ ಬೌಲಿಂಗ್ ಮಾಡಲು ಕಷ್ಟವಾಗುತ್ತಿತ್ತು. ಇದರಿಂದ ಪಂದ್ಯವನ್ನು 2-3 ನಿಮಿಷಗಳ ಕಾಲ ನಿಲ್ಲಿಸಬೇಕಾಯಿತು. ಇದಾದ ನಂತರ ಪಂದ್ಯ ಸ್ವಲ್ಪ ಸಮಯದವರೆಗೆ ನಡೆಯಿತು. ಆದರೆ ಕೀಟಗಳ ಕಾಟ ಮುಂದುವರೆದು, 34 ನೇ ಓವರ್ ನಂತರ ಅಂಪೈರ್‌ಗಳು ಮತ್ತೆ ಪಂದ್ಯವನ್ನು ನಿಲ್ಲಿಸಬೇಕಾಯಿತು.

ಈ ಬಾರಿ, ಭಾರತ ಮತ್ತು ಪಾಕಿಸ್ತಾನಿ ಆಟಗಾರ್ತಿಯರು ಮೈದಾನದಿಂದ ಹೊರಹೋಗಬೇಕಾಯಿತು. ತಕ್ಷಣವೇ ಮೈದಾನದ ಮೇಲೆ ಕೀಟ ನಾಶಕವನ್ನು ಸಿಂಪಡಿಸಲಾಯಿತು. ಆಟಗಾರ್ತಿಯರು ಹೊರಟುಹೋದ ತಕ್ಷಣ, ಮುಖವಾಡ ಧರಿಸಿದ ಮೈದಾನದ ಸಿಬ್ಬಂದಿ ಕೀಟಗಳನ್ನು ಅಲ್ಲಿಂದ ಓಡಿಸಲು ಕ್ರೀಡಾಂಗಣದಾದ್ಯಂತ ಯಂತ್ರದಿಂದ ಹೊಗೆಯನ್ನು ಸಿಂಪಡಿಸಲು ಪ್ರಾರಂಭಿಸಿದರು. ಇದು ಪಂದ್ಯವನ್ನು ಪೂರ್ಣ 15 ನಿಮಿಷಗಳ ಕಾಲ ಸ್ಥಗಿತಗೊಳಿಸಿತು.

World Cup 2025: ಕೇವಲ 12 ರನ್​ಗಳಿಂದ ಸ್ಮೃತಿ ಮಂಧಾನ ಕೈತಪ್ಪಿದ ವಿಶ್ವ ದಾಖಲೆ

ಪಾಕಿಸ್ತಾನಕ್ಕೆ 248 ರನ್‌ಗಳ ಗುರಿ

ಪಂದ್ಯದ ಬಗ್ಗೆ ಹೇಳುವುದಾದರೆ, ಮಹಿಳಾ ವಿಶ್ವಕಪ್ ಪಂದ್ಯದಲ್ಲಿ ಭಾರತ, ಪಾಕಿಸ್ತಾನಕ್ಕೆ 248 ರನ್‌ಗಳ ಗುರಿಯನ್ನು ನೀಡಿದೆ. ಟಾಸ್ ಗೆದ್ದ ಪಾಕಿಸ್ತಾನ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿತು. ಹೀಗಾಗಿ ಬ್ಯಾಟಿಂಗ್ ಮಾಡಿದ ಭಾರತ ತಂಡ 50 ಓವರ್‌ಗಳಲ್ಲಿ 247 ರನ್‌ಗಳಿಗೆ ಆಲೌಟ್ ಆಯಿತು. ಈ ಪಂದ್ಯದಲ್ಲಿ ಭಾರತದ ಬ್ಯಾಟಿಂಗ್ ಅಷ್ಟೇನೂ ಉತ್ತಮವಾಗಿರಲಿಲ್ಲ, ಯಾವುದೇ ಆಟಗಾರ್ತಿಗೆ ಅರ್ಧಶತಕ ಗಳಿಸಲು ಸಾಧ್ಯವಾಗಲಿಲ್ಲ. ಹರ್ಲೀನ್ ಡಿಯೋಲ್ ಭಾರತ ಪರ ಅತಿ ಹೆಚ್ಚು 46 ರನ್ ಗಳಿಸಿದರು. ಅವರು 65 ಎಸೆತಗಳಲ್ಲಿ ನಾಲ್ಕು ಬೌಂಡರಿ ಮತ್ತು ಒಂದು ಸಿಕ್ಸರ್ ಬಾರಿಸಿದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:28 pm, Sun, 5 October 25

ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಪರಪ್ಪನ ಅಗ್ರಹಾರ ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ
ಪರಪ್ಪನ ಅಗ್ರಹಾರ ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ