AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

IND A vs AUS A: ಆಸ್ಟ್ರೇಲಿಯಾ ವಿರುದ್ಧ ಸಿಡಿಲಬ್ಬರದ ಶತಕ ಸಿಡಿಸಿದ ಪ್ರಭ್ಸಿಮ್ರಾನ್ ಸಿಂಗ್

Prabhsimran Singh Century: ಭಾರತ ಎ ಮತ್ತು ಆಸ್ಟ್ರೇಲಿಯಾ ಎ ನಡುವಿನ ರೋಚಕ ಏಕದಿನ ಸರಣಿಯ ನಿರ್ಣಾಯಕ ಪಂದ್ಯದಲ್ಲಿ, ಯುವ ಬ್ಯಾಟ್ಸ್‌ಮನ್ ಪ್ರಭ್ಸಿಮ್ರನ್ ಸಿಂಗ್ ಭರ್ಜರಿ ಶತಕ ಬಾರಿಸಿದರು. ಆಸ್ಟ್ರೇಲಿಯಾ ನೀಡಿದ 316 ರನ್‌ಗಳ ಬೃಹತ್ ಗುರಿ ಬೆನ್ನಟ್ಟಿದ ಭಾರತ ಎ ತಂಡಕ್ಕೆ ಪ್ರಭ್ಸಿಮ್ರನ್ ಕೇವಲ 66 ಎಸೆತಗಳಲ್ಲಿ ಶತಕ ಸಿಡಿಸಿ ಆಸರೆಯಾದರು. ಅವರ 102 ರನ್‌ಗಳ ಸ್ಫೋಟಕ ಇನ್ನಿಂಗ್ಸ್ ತಂಡಕ್ಕೆ ಬಲ ನೀಡಿತು.

IND A vs AUS A: ಆಸ್ಟ್ರೇಲಿಯಾ ವಿರುದ್ಧ ಸಿಡಿಲಬ್ಬರದ ಶತಕ ಸಿಡಿಸಿದ ಪ್ರಭ್ಸಿಮ್ರಾನ್ ಸಿಂಗ್
Prabhsimran Singh
ಪೃಥ್ವಿಶಂಕರ
|

Updated on:Oct 05, 2025 | 9:30 PM

Share

ಕಾನ್ಪುರದಲ್ಲಿ ಭಾರತ ಎ ಮತ್ತು ಆಸ್ಟ್ರೇಲಿಯಾ ಎ (India A vs Australia A) ನಡುವೆ ಮೂರು ಅನಧಿಕೃತ ಪಂದ್ಯಗಳ ಏಕದಿನ ಸರಣಿಯನ್ನು ಆಡಲಾಗುತ್ತಿದೆ. ಈ ಸರಣಿಯಲ್ಲಿ ಈಗಾಗಲೇ ಎರಡು ಪಂದ್ಯಗಳು ನಡೆದಿದ್ದು, ಉಭಯ ತಂಡಗಳು ತಲಾ ಒಂದೊಂದು ಪಂದ್ಯವನ್ನು ಗೆದ್ದಿವೆ. ಹೀಗಾಗಿ ಈ ಪಂದ್ಯವನ್ನು ಗೆದ್ದ ತಂಡಕ್ಕೆ ಸರಣಿ ಕೈಸೇರಲಿದೆ. ಇನ್ನು ಈ ಮೂರನೇ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ 316 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಭಾರತ ತಂಡದ ಪರ ಯುವ ಬ್ಯಾಟ್ಸ್‌ಮನ್ ಪ್ರಭ್ಸಿಮ್ರಾನ್ ಸಿಂಗ್ (Prabhsimran Singh) ಭರ್ಜರಿ ಶತಕ ಬಾರಿಸಿದ್ದಾರೆ. ಪ್ರಭ್ಸಿಮ್ರಾನ್ ಸಿಂಗ್ ಕೇವಲ 66 ಎಸೆತಗಳಲ್ಲಿ ಶತಕ ಗಳಿಸುವ ಮೂಲಕ ವಿನಾಶಕಾರಿ ಪ್ರದರ್ಶನ ನೀಡಿದರು.

ಮೂರು ಪಂದ್ಯಗಳ ಸರಣಿಯ ಕೊನೆಯ ಪಂದ್ಯವು ಅಕ್ಟೋಬರ್ 5 ರ ಭಾನುವಾರದಂದು ಕಾನ್ಪುರದ ಗ್ರೀನ್ ಪಾರ್ಕ್ ಕ್ರೀಡಾಂಗಣದಲ್ಲಿ ನಡೆಯಿತು. ಆಸ್ಟ್ರೇಲಿಯಾ ಎ ತಂಡವು ನಾಯಕ ಜ್ಯಾಕ್ ಎಡ್ವರ್ಡ್ಸ್ ಮತ್ತು ಇತರರ ಹೋರಾಟದ ಇನ್ನಿಂಗ್ಸ್‌ನಿಂದ 316 ರನ್‌ಗಳ ಬೃಹತ್ ಮೊತ್ತವನ್ನು ಕಲೆಹಾಕಿತು. ಇದಕ್ಕೆ ಪ್ರತಿಕ್ರಿಯೆಯಾಗಿ, ಅಭಿಷೇಕ್ ಶರ್ಮಾ ಮತ್ತು ಪ್ರಭ್ಸಿಮ್ರಾನ್ ಸಿಂಗ್ ಟೀಂ ಇಂಡಿಯಾ ಪರ ಇನ್ನಿಂಗ್ಸ್ ಆರಂಭಿಸಿ ತ್ವರಿತ ಆರಂಭವನ್ನು ನೀಡಿದರು.

38 ಎಸೆತಗಳಲ್ಲಿ ಅರ್ಧಶತಕ, 66 ಎಸೆತಗಳಲ್ಲಿ ಶತಕ

ಇವರಿಬ್ಬರು ಟೀಂ ಇಂಡಿಯಾ ಪರ 83 ರನ್‌ಗಳ ಅಬ್ಬರದ ಆರಂಭಿಕ ಪಾಲುದಾರಿಕೆಯನ್ನು ನಿರ್ಮಿಸಿದರು, ಆದರೆ ಅಭಿಷೇಕ್ ಅವರ ಕೊಡುಗೆ ಕೇವಲ 22 ರನ್‌ಗಳಷ್ಟೇ ಆಗಿತ್ತು. ಏತನ್ಮಧ್ಯೆ, ಪ್ರಭ್ಸಿಮ್ರಾನ್ ಸಿಂಗ್ ಕೇವಲ 38 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಇಲ್ಲಿಂದ ತಮ್ಮ ಬ್ಯಾಟಿಂಗ್ ಗೇರ ಬದಲಿಸಿದ ಪ್ರಭ್ಸಿಮ್ರಾನ್ ಶೀಘ್ರದಲ್ಲೇ ಕೇವಲ 66 ಎಸೆತಗಳಲ್ಲಿ ತಮ್ಮ ಶತಕವನ್ನು ದಾಖಲಿಸಿದರು.

IND vs AUS: ಶುಭ್​ಮನ್ ಗಿಲ್​ಗೆ ಏಕದಿನ ನಾಯಕತ್ವ; ವಿಶ್ವಕಪ್ ಆಡ್ತಾರಾ ರೋಹಿತ್, ಕೊಹ್ಲಿ?

ಬೌಂಡರಿ ಮತ್ತು ಸಿಕ್ಸರ್‌ಗಳ ಮಳೆ

ಪ್ರಭ್ಸಿಮ್ರಾನ್ ತಮ್ಮ ಆರನೇ ಲಿಸ್ಟ್ ಎ ಶತಕವನ್ನು ಬೌಂಡರಿಯೊಂದಿಗೆ ಪೂರೈಸಿದರು. ಆದಾಗ್ಯೂ ಶತಕದ ನಂತರ ಪ್ರಭ್ಸಿಮ್ರಾನ್ ಅವರ ಇನ್ನಿಂಗ್ಸ್ ಹೆಚ್ಚು ಮುಂದುವರೆಯಲಿಲ್ಲ. ಅಂತಿಮವಾಗಿ ಅವರು 68 ಎಸೆತಗಳಲ್ಲಿ 102 ರನ್ ಗಳಿಸಿ ನಿರ್ಗಮಿಸಿದರು. ತಮ್ಮ ಈ ಶತಕದ ಇನ್ನಿಂಗ್ಸ್​ನಲ್ಲಿ 8 ಬೌಂಡರಿ ಮತ್ತು 7 ಸಿಕ್ಸರ್‌ಗಳನ್ನು ಬಾರಿಸಿದ್ದರು. ಪ್ರಭ್ಸಿಮ್ರಾನ್ ಔಟಾದಾಗ, ತಂಡದ ಸ್ಕೋರ್ 145 ಆಗಿತ್ತು. ಅದರಲ್ಲಿ ಪ್ರಭ್ಸಿಮ್ರಾನ್ ಒಬ್ಬರೇ 102 ರನ್ ಕಲೆಹಾಕಿದ್ದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:19 pm, Sun, 5 October 25

Follow Us