AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

PBKS vs SRH: ಐಪಿಎಲ್‌ನಲ್ಲಿ ಅತಿ ವೇಗದ ಅರ್ಧಶತಕ ಬಾರಿಸಿದ ಪ್ರಿಯಾಂಶ್ ಆರ್ಯ

Priyansh Arya fastest fifty: ಮುಲ್ಲನ್‌ಪುರದಲ್ಲಿ ನಡೆದ ಐಪಿಎಲ್ 2026 ರ ಪಂದ್ಯದಲ್ಲಿ, ಸನ್‌ರೈಸರ್ಸ್ ಹೈದರಾಬಾದ್ ನೀಡಿದ 220 ರನ್‌ಗಳ ಗುರಿಯನ್ನು ಪಂಜಾಬ್ ಕಿಂಗ್ಸ್ ಭರ್ಜರಿಯಾಗಿ ಬೆನ್ನಟ್ಟಿತು. ಆರಂಭಿಕರಾದ ಪ್ರಿಯಾಂಶ ಆರ್ಯ ಕೇವಲ 16 ಎಸೆತಗಳಲ್ಲಿ ಸ್ಫೋಟಕ ಅರ್ಧಶತಕ ಬಾರಿಸಿದರು. ಪ್ರಭ್ಸಿಮ್ರಾನ್ ಸಿಂಗ್ ಕೂಡ ವೇಗದ 50 ರನ್ ಗಳಿಸಿ ತಂಡಕ್ಕೆ ಉತ್ತಮ ಅಡಿಪಾಯ ಹಾಕಿದರು. ಈ ಇಬ್ಬರು ಬ್ಯಾಟ್ಸ್‌ಮನ್‌ಗಳು ಮೊದಲ ವಿಕೆಟ್‌ಗೆ 99 ರನ್‌ಗಳ ಬೃಹತ್ ಜೊತೆಗಾರಿಕೆ ನಿರ್ಮಿಸಿ ಪಂಜಾಬ್‌ಗೆ ಬಲವಾದ ಆರಂಭ ನೀಡಿದರು.

PBKS vs SRH: ಐಪಿಎಲ್‌ನಲ್ಲಿ ಅತಿ ವೇಗದ ಅರ್ಧಶತಕ ಬಾರಿಸಿದ ಪ್ರಿಯಾಂಶ್ ಆರ್ಯ
Priyansh Arya
ಪೃಥ್ವಿಶಂಕರ
|

Updated on: Apr 11, 2026 | 7:08 PM

Share

ಮುಲ್ಲನ್‌ಪುರದಲ್ಲಿ ನಡೆದ ಐಪಿಎಲ್ 2026 (IPL 2026) ರ 17ನೇ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಸನ್‌ರೈಸರ್ಸ್ ಹೈದರಾಬಾದ್, ಪಂಜಾಬ್ ಕಿಂಗ್ಸ್‌ (SRH vs PBKS) ತಂಡಕ್ಕೆ 220 ರನ್‌ಗಳ ಗುರಿ ನೀಡಿತು. ಇದಕ್ಕೆ ಪ್ರತಿಯಾಗಿ ಈ ಗುರಿ ಬೆನ್ನಟ್ಟಿದ ಪಂಜಾಬ್ ಉತ್ತಮ ಆರಂಭ ಪಡೆಯಿತು. ಆರಂಭಿಕರಾದ ಪ್ರಿಯಾಂಶ್ ಆರ್ಯ (Priyansh Arya ) ಮತ್ತು ಪ್ರಭ್ಸಿಮ್ರಾನ್ ಸಿಂಗ್ ಜೋಡಿ ಸನ್‌ರೈಸರ್ಸ್ ಹೈದರಾಬಾದ್ ಬೌಲಿಂಗ್ ದಾಳಿಯನ್ನು ಸಮರ್ಥವಾಗಿ ಎದುರಿಸಿ ತಂಡಕ್ಕೆ ಉತ್ತಮ ಆರಂಭ ಒದಗಿಸಿಕೊಟ್ಟರು. ಇಬ್ಬರು ಆರಂಭಿಕರು ಕೇವಲ 6.2 ಓವರ್‌ಗಳಲ್ಲಿ ಮೊದಲ ವಿಕೆಟ್‌ಗೆ 99 ರನ್‌ಗಳನ್ನು ಸೇರಿಸಿದರು.

ಪ್ರಿಯಾಂಶ್ ಸ್ಫೋಟಕ ಅರ್ಧಶತಕ

ಎಂದಿನಂತೆ ಹೊಡಿಬಡಿ ಆಟದೊಂದಿಗೆ ಇನ್ನಿಂಗ್ಸ್ ಆರಂಭಿಸಿದ ಪ್ರಿಯಾಂಶ್ ಆರ್ಯ 20 ಎಸೆತಗಳಲ್ಲಿ 5 ಬೌಂಡರಿ ಮತ್ತು 5 ಸಿಕ್ಸರ್‌ಗಳೊಂದಿಗೆ 57 ರನ್ ಗಳಿಸುವ ಮೂಲಕ ಅಬ್ಬರದ ಇನ್ನಿಂಗ್ಸ್ ಆಡಿದರು. ಮುಖ್ಯವಾಗಿ, ಅವರು ಕೇವಲ 16 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ್ದು ಅವರ ಸ್ಫೋಟಕ ಬ್ಯಾಟಿಂಗ್​ಗೆ ಹಿಡಿದ ಕೈಗನ್ನಡಿಯಾಗಿತ್ತು. ಇದು ಮೊದಲ ಇನ್ನಿಂಗ್ಸ್‌ನಲ್ಲಿ 18 ಎಸೆತಗಳಲ್ಲಿ 50 ರನ್ ಗಳಿಸಿದ ಅಭಿಷೇಕ್ ಶರ್ಮಾ ಅವರಿಗಿಂತ ವೇಗವಾಗಿತ್ತು. ಹಾಗೆಯೇ ಐಪಿಎಲ್ ವೃತ್ತಿಜೀವನದಲ್ಲಿ ಇದು ಪ್ರಿಯಾಂಶ್ ಅವರ ವೇಗದ ಅರ್ಧಶತಕವೂ ಆಗಿದೆ.

ಅರ್ಧಶತಕ ಬಾರಿಸಿದ ಪ್ರಭಸಿಮ್ರನ್ ಸಿಂಗ್

ಪ್ರಿಯಾಂಶ್ ಜೊತೆಗೆ ಪ್ರಭ್ಸಿಮ್ರನ್ ಸಿಂಗ್ ಕೂಡ 25 ಎಸೆತಗಳಲ್ಲಿ 51 ರನ್ ಬಾರಿಸಿದರು. ಅವರ ಇನ್ನಿಂಗ್ಸ್‌ನಲ್ಲಿ ನಾಲ್ಕು ಬೌಂಡರಿ ಮತ್ತು ನಾಲ್ಕು ಸಿಕ್ಸರ್‌ಗಳು ಸೇರಿದ್ದವು. ಈ ಇಬ್ಬರು ಬ್ಯಾಟ್ಸ್‌ಮನ್‌ಗಳ ನಡುವಿನ ಪಾಲುದಾರಿಕೆಯು ಪಂಜಾಬ್ ಕಿಂಗ್ಸ್‌ಗೆ 220 ರನ್‌ಗಳ ಗುರಿಯತ್ತ ಬಲವಾದ ಆರಂಭವನ್ನು ನೀಡಿತು. 6.2 ಓವರ್‌ಗಳಲ್ಲಿ 99 ರನ್‌ಗಳ ಈ ಪಾಲುದಾರಿಕೆ SRH ಗೆ ದೊಡ್ಡ ಹೊಡೆತವಾಗಿ ಪರಿಣಮಿಸಿತು.

PBKS vs SRH: 18 ಎಸೆತಗಳಲ್ಲಿ ಅರ್ಧಶತಕ; ಅಭಿಷೇಕ್ ಅಬ್ಬರ ಹೇಗಿತ್ತು ನೋಡಿ

ಆವೃತ್ತಿಯ ಮೊದಲ ಅರ್ಧಶತಕ

ಗಮನಾರ್ಹವಾಗಿ, ಇದು ಪ್ರಿಯಾಂಶ್ ಆರ್ಯ ಮತ್ತು ಪ್ರಭ್ಸಿಮ್ರಾನ್ ಸಿಂಗ್ ಅವರ ಈ ಸೀಸನ್​ನ ಮೊದಲ ಅರ್ಧಶತಕವಾಗಿದೆ. ಇದಕ್ಕೂ ಮೊದಲು, ಪ್ರಭ್ಸಿಮ್ರಾನ್ ಸಿಂಗ್ ಸಿಎಸ್‌ಕೆ ವಿರುದ್ಧ 43 ರನ್ ಮತ್ತು ಗುಜರಾತ್ ವಿರುದ್ಧ 37 ರನ್ ಗಳಿಸಿದ್ದರೆ, ಪ್ರಿಯಾಂಶ್ ಆರ್ಯ ಸಿಎಸ್‌ಕೆ ವಿರುದ್ಧ 39 ರನ್ ಮತ್ತು ಗುಜರಾತ್ ವಿರುದ್ಧ 7 ರನ್ ಬಾರಿಸಿದ್ದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us