MI vs RCB Predicted Playing 11: ರಾಯಲ್ ಚಾಲೆಂಜರ್ಸ್ ಮತ್ತು ಮುಂಬೈ ಇಂಡಿಯನ್ಸ್ ನಡುವಿನ ಮೊದಲ ಪಂದ್ಯದ ಸಂಭಾವ್ಯ ಆಟಗಾರರು ಇವರು
Mumbai vs Bengaluru Playing XI: ಎರಡೂ ತಂಡಗಳ ಬಲಾಬಲವೇನು? ಯಾವ ತಂಡ ಎಷ್ಟು ಸ್ಟ್ರಾಂಗ್ ಎಂಬುದು ಕ್ರಿಕೆಟ್ ಅಭಿಮಾನಿಗಳ ಲೆಕ್ಕಾಚಾರ. ಈ ನಡುವೆ ಸಂಭಾವ್ಯ ಆಟಗಾರರು ಯಾರು ಎಂದು ನಮ್ಮ ಆಯ್ಕೆ ಇಲ್ಲಿದೆ.
ಕ್ರಿಕೆಟ್ ಅಭಿಮಾನಿಗಳ ಬಹುನಿರೀಕ್ಷಿತ ಐಪಿಎಲ್ ಟೂರ್ನಿ ಇಂದಿನಿಂದ ಆರಂಭಗೊಳ್ಳಲಿದೆ. ಮುಂಬೈ ಇಂಡಿಯನ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧ ಆಟ ನಡೆಯಲಿದ್ದು ಯಾರು ಉದ್ಘಾಟನಾ ಪಂದ್ಯವನ್ನು ಗೆಲ್ಲುತ್ತಾರೆ ಎಂದು ಕುತೂಹಲ ಮನೆಮಾಡಿದೆ. ಆರ್‌ಸಿಬಿ ಅಭಿಮಾನಿಗಳಿಗೆ ಕಪ್ ನಮ್ದೇ ಎಂದು ಹೇಳುತ್ತಿದ್ದರೆ, ಮುಂಬೈ ಇಂಡಿಯನ್ಸ್ ಕಳೆದ ಬಾರಿ ಚಾಂಪಿಯನ್ಸ್ ನಾವು, ಈ ಬಾರಿಯೂ ಗೆಲುವಿನ ಮೂಲಕ ಲೀಗ್ನ್ನು ಶುಭಾರಂಭ ಮಾಡುತ್ತೇವೆ ಎಂಬ ಉತ್ಸಾಹದಲ್ಲಿದ್ದಾರೆ. ಎರಡೂ ತಂಡಗಳ ಬಲಾಬಲವೇನು? ಯಾವ ತಂಡ ಎಷ್ಟು ಸ್ಟ್ರಾಂಗ್ ಎಂಬುದು ಕ್ರಿಕೆಟ್ ಅಭಿಮಾನಿಗಳ ಲೆಕ್ಕಾಚಾರ. ಈ ನಡುವೆ ಸಂಭಾವ್ಯ ಆಟಗಾರರು ಯಾರು ಎಂದು ನಮ್ಮ ಆಯ್ಕೆ ಇಲ್ಲಿದೆ.
ಮುಂಬೈ ಇಂಡಿಯನ್ಸ್ ಸಂಭಾವ್ಯ ಪ್ಲೇಯಿಂಗ್ ಇಲೆವೆನ್: ರೋಹಿತ್ ಶರ್ಮಾ (ನಾಯಕ) ಕ್ರಿಸ್ ಲಿನ್ ಸೂರ್ಯಕುಮಾರ್ ಯಾದವ್ ಇಶಾನ್ ಕಿಶನ್ ಕೈರನ್ ಪೊಲಾರ್ಡ್ ಹಾರ್ದಿಕ್ ಪಾಂಡ್ಯ ಕೃನಾಲ್ ಪಾಂಡ್ಯ/ ಅರ್ಜುನ್ ತೆಂಡೂಲ್ಕರ್ ಆಡಮ್ ಮಿಲ್ನೆ/ ಮಾರ್ಕೊ ಜಾನ್ಸೆನ್ ರಾಹುಲ್ ಚಹರ್/ ಪಿಯೂಷ್ ಚಾವ್ಲ ಜಸ್ಪ್ರೀತ್ ಬುಮ್ರಾ ಟ್ರೆಂಟ್ ಬೋಲ್ಟ್
ರಾಯಲ್ ಚಾಲೆಂಜರ್ಸ್ ಬೆಂಗಳೂರು ಸಂಭಾವ್ಯ ಪ್ಲೇಯಿಂಗ್ ಇಲೆವೆನ್: ದೇವದತ್ ಪಡಿಕ್ಕಲ್ ವಿರಾಟ್ ಕೊಹ್ಲಿ (ನಾಯಕ) ಎ.ಬಿ. ಡಿವಿಲಿಯರ್ಸ್ ಗ್ಲೆನ್ ಮ್ಯಾಕ್ಸ್ವೆಲ್ ಮೊಹಮದ್ ಅಜರುದ್ದೀನ್ ಡೇನಿಯಲ್ ಕ್ರಿಶ್ಚಿಯನ್ ವಾಷಿಂಗ್ಟನ್ ಸುಂದರ್ ಕೈಲ್ ಜೆಮಿಸನ್ ನವದೀಪ್ ಸೈನಿ ಮೊಹಮದ್ ಸಿರಾಜ್ ಯಜುವೇಂದ್ರ ಚಹಾಲ್
ಪಂದ್ಯ ಆರಂಭವಾಗುವ ಸಮಯ? ಎಂಐ ಮತ್ತು ಆರ್‌ಸಿಬಿ ನಡುವಿನ ಐಪಿಎಲ್ 2021 ಆರಂಭಿಕ ಪಂದ್ಯವು ಸಂಜೆ 07:30 ಕ್ಕೆ ಪ್ರಾರಂಭವಾಗಲಿದೆ. ಟಾಸ್ 07:00 ಗಂಟೆಗೆ ನಡೆಯಲಿದೆ.
ಯಾವ ಟಿವಿ ಚಾನೆಲ್‌ಗಳು ಪ್ರಸಾರ ಮಾಡುತ್ತವೆ? ಎಂಐ ಮತ್ತು ಆರ್‌ಸಿಬಿ ನಡುವಿನ ಐಪಿಎಲ್ 2021 ಆರಂಭಿಕ ಪಂದ್ಯವು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ಪ್ರಸಾರವಾಗಲಿದೆ.
ಲೈವ್ ಸ್ಟ್ರೀಮಿಂಗ್ ಅನ್ನು ನಾನು ಹೇಗೆ ನೋಡುವುದು? ಎಂಐ ಮತ್ತು ಆರ್‌ಸಿಬಿ ಪಂದ್ಯದ ನಡುವಿನ ಐಪಿಎಲ್ 2021 ಆರಂಭಿಕ ಪಂದ್ಯದ ಲೈವ್ ಸ್ಟ್ರೀಮಿಂಗ್ ಡಿಸ್ನಿ + ಹಾಟ್‌ಸ್ಟಾರ್‌ನಲ್ಲಿ ಲಭ್ಯವಿರುತ್ತದೆ. ಜೊತೆಗೆ ಟಿವಿ9 ಡಿಜಿಟಲ್ ಲೈವ್ ಅಪ್ಡೆಟ್ನಲ್ಲಿ ನೀವು ಲೈವ್ ಸ್ಕೋರ್ ಮತ್ತು ನವೀಕರಣಗಳನ್ನು ಸಹ ಕಾಣಬಹುದಾಗಿದೆ.
ಪೂರ್ಣ ತಂಡಗಳು ಮುಂಬೈ ಇಂಡಿಯನ್ಸ್ (ಎಂಐ): ರೋಹಿತ್ ಶರ್ಮಾ, ಕ್ವಿಂಟನ್ ಡಿ ಕಾಕ್ (ವಿಕೆಟ್ ಕೀಪರ್), ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್ (ವಿಕೆಟ್ ಕೀಪರ್), ಕ್ರಿಸ್ ಲಿನ್, ಅನ್ಮೊಲ್ಪ್ರೀತ್ ಸಿಂಗ್, ಸೌರಭ್ ತಿವಾರಿ, ಆದಿತ್ಯ ತಾರೆ, ಕೀರನ್ ಪೊಲಾರ್ಡ್, ಹಾರ್ದಿಕ್ ಪಾಂಡ್ಯ, ಕ್ರುನಾಲ್ ಪಾಂಡ್ಯ, ಅನುಕುಲ್ ರಾಯ್, ಬುಮ್ರಾ, ಟ್ರೆಂಟ್ ಬೌಲ್ಟ್, ರಾಹುಲ್ ಚಹರ್, ಜಯಂತ್ ಯಾದವ್, ಧವಲ್ ಕುಲಕರ್ಣಿ, ಮೊಹ್ಸಿನ್ ಖಾನ್, ಆಡಮ್ ಮಿಲ್ನೆ, ನಾಥನ್ ಕೌಲ್ಟರ್-ನೈಲ್, ಪಿಯೂಷ್ ಚಾವ್ಲಾ, ಜೇಮ್ಸ್ ನೀಶಮ್, ಯುಧ್ವೀರ್ ಚರಕ್, ಮಾರ್ಕೊ ಜಾನ್ಸೆನ್, ಮತ್ತು ಅರ್ಜುನ್ ತೆಂಡೂಲ್ಕರ್
ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ): ವಿರಾಟ್ ಕೊಹ್ಲಿ, ಎಬಿ ಡಿವಿಲಿಯರ್ಸ್, ನವದೀಪ್ ಸೈನಿ, ಕೇನ್ ರಿಚರ್ಡ್‌ಸನ್, ಆಡಮ್ ಜಂಪಾ, ಶಹಬಾಜ್ ಅಹ್ಮದ್, ಜೋಶ್ ಫಿಲಿಪ್, ಪವನ್ ದೇಶಪಾಂಡೆ, ಯುಜ್ವೇಂದ್ರ ಚಾಹಲ್, ವಾಷಿಂಗ್ಟನ್ ಸುಂದರ್, ಮೊಹಮ್ಮದ್ ಸಿರಾಜ್, ದೇವದತ್ ಪಡಿಕಲ್, ಡೇನಿಯಲ್ ಕ್ರಿಶ್ಚಿಯನ್, ಕೈಲ್ ಜಾಮಿಸನ್, ಮೊಹಮ್ಮದ್ ಅಜರುದ್ದೀನ್, ರಜತ್ ಪಾಟಿದಾರ್, ಸಚಿನ್ ಬೇಬಿ, ಗ್ಲೆನ್ ಮ್ಯಾಕ್ಸ್ ವೆಲ್.
ಇದನ್ನೂ ಓದಿ: MI vs RCB: ನಮ್ಮ ಆರ್‌ಸಿಬಿ ಗೆದ್ದರೆ ಕಿಚ್ಚ ಸುದೀಪ್ ಹೀಗೆ ಮಾಡ್ತಾರಂತೆ!
Published On - 4:03 pm, Fri, 9 April 21