IPL 2023: ಐಪಿಎಲ್ಗೆ ಮರಳಲಿರುವ ಸೌರವ್ ಗಂಗೂಲಿ
Delhi Capitals: ಡಿಸೆಂಬರ್‌ನಲ್ಲಿ ನಡೆದ ಐಪಿಎಲ್ ಹರಾಜಿನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಐದು ಆಟಗಾರರನ್ನು ಖರೀದಿಸಿತು. ಮುಖೇಶ್ ಕುಮಾರ್, ಇಶಾಂತ್ ಶರ್ಮಾ, ಫಿಲ್ ಸಾಲ್ಟ್, ರಿಲೀ ರೌಸ್ಸೊ ಮತ್ತು ಮನೀಶ್ ಪಾಂಡೆ ಡೆಲ್ಲಿ ಬಳಗಕ್ಕೆ ಆಯ್ಕೆಯಾಗಿದ್ದಾರೆ.
IPL 2023: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮಾಜಿ ಅಧ್ಯಕ್ಷ ಸೌರವ್ ಗಂಗೂಲಿ (Sourav Ganguly) ಡೆಲ್ಲಿ ಕ್ಯಾಪಿಟಲ್ಸ್ ಕ್ರಿಕೆಟ್ ನಿರ್ದೇಶಕರಾಗಿ ಮರಳಲಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ. ಈಗಾಗಲೇ ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿ ದಾದಾ ಜೊತೆ ಮಾತುಕತೆ ನಡೆಸಿದ್ದು, ಅತ್ತ ಕಡೆಯಿಂದ ಕೂಡ ಗ್ರೀನ್ ಸಿಗ್ನಲ್ ನೀಡಿದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಸೌರವ್ ಗಂಗೂಲಿ BCCI ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳುವ ಮೊದಲು IPL 2019 ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಸಲಹೆಗಾರರಾಗಿ ಕಾರ್ಯ ನಿರ್ವಹಿಸಿದ್ದರು. ಇದೀಗ ಬಿಸಿಸಿಐ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಗಂಗೂಲಿ ಯಾವುದೇ ಹುದ್ದೆಯನ್ನು ಅಲಂಕರಿಸಿಲ್ಲ. ಹೀಗಾಗಿಯೇ ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿಯು ದಾದಾ ಅವರನ್ನು ನಿರ್ದೇಶಕರನ್ನಾಗಿ ನೇಮಿಸಲು ಮುಂದಾಗಿದೆ.
ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿಯು ಅಂತಾರಾಷ್ಟ್ರೀಯ T20 ಲೀಗ್‌ನಲ್ಲಿ ದುಬೈ ಕ್ಯಾಪಿಟಲ್ಸ್ ಮತ್ತು ದಕ್ಷಿಣ ಆಫ್ರಿಕಾ T20 ಲೀಗ್‌ನಲ್ಲಿ ಪ್ರಿಟೋರಿಯಾ ಕ್ಯಾಪಿಟಲ್ಸ್ ತಂಡಗಳನ್ನು ಹೊಂದಿದೆ. ಈ ಎಲ್ಲಾ ತಂಡಗಳ ಉಸ್ತುವಾರಿಯನ್ನು ಗಂಗೂಲಿಗೆ ವಹಿಸಲು ಫ್ರಾಂಚೈಸಿ ಬಯಸಿದೆ.
ಸೌರವ್ ಗಂಗೂಲಿ ಅವರು ಡೆಲ್ಲಿ ಫ್ರಾಂಚೈಸಿಯೊಂದಿಗೆ ಕೆಲಸ ಮಾಡಿದ್ದಾರೆ. ಅವನು ಮಾಲೀಕರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಇತ್ತೀಚಿನ ಹರಾಜಿನಲ್ಲಿ ಮುಖ್ಯ ಕೋಚ್ ರಿಕಿ ಪಾಂಟಿಂಗ್ ಮತ್ತು ಗಂಗೂಲಿ ಇಬ್ಬರ ಸಲಹೆಯನ್ನು ಫ್ರಾಂಚೈಸಿ ಅನುಸರಿಸಿದೆ. ಹೀಗಾಗಿ ಅವರು ಮತ್ತೆ ಡೆಲ್ಲಿ ಕ್ಯಾಪಿಟಲ್ಸ್ ಭಾಗವಾಗಲಿದ್ದಾರೆ ಎಂದು ಫ್ರಾಂಚೈಸಿ ಮೂಲಗಳು ತಿಳಿಸಿದೆ.
ಇದನ್ನೂ ಓದಿ: Yusuf Pathan: ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿಯ ಹೊಸ ತಂಡಕ್ಕೆ ಯೂಸುಫ್ ಪಠಾಣ್ ಆಯ್ಕೆ..!
ಕಳೆದ ಡಿಸೆಂಬರ್‌ನಲ್ಲಿ ನಡೆದ ಐಪಿಎಲ್ ಹರಾಜಿನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಐದು ಆಟಗಾರರನ್ನು ಖರೀದಿಸಿತು. ಮುಖೇಶ್ ಕುಮಾರ್, ಇಶಾಂತ್ ಶರ್ಮಾ, ಫಿಲ್ ಸಾಲ್ಟ್, ರಿಲೀ ರೌಸ್ಸೊ ಮತ್ತು ಮನೀಶ್ ಪಾಂಡೆ ಡೆಲ್ಲಿ ಬಳಗಕ್ಕೆ ಆಯ್ಕೆಯಾಗಿದ್ದಾರೆ. ಅದರಂತೆ ಐಪಿಎಲ್ ಸೀಸನ್ 16 ಗಾಗಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಈ ಕೆಳಗಿನಂತಿದೆ.
ಇದನ್ನೂ ಓದಿ: RCB ತಂಡದ ಮೊದಲ ಪ್ಲೇಯಿಂಗ್ ಇಲೆವೆನ್ನಲ್ಲಿ ಯಾರೆಲ್ಲಾ ಇದ್ದರು ಗೊತ್ತಾ?
ಡೆಲ್ಲಿ ಕ್ಯಾಪಿಟಲ್ಸ್ ಫುಲ್ ಸ್ಕ್ವಾಡ್: ಡೇವಿಡ್ ವಾರ್ನರ್, ಪೃಥ್ವಿ ಶಾ, ರಿಪ್ಪಲ್ ಪಟೇಲ್, ರೋವ್‌ಮನ್ ಪೊವೆಲ್, ಸರ್ಫರಾಜ್ ಖಾನ್, ಯಶ್ ಧುಲ್, ಮಿಚೆಲ್ ಮಾರ್ಷ್, ಲಲಿತ್ ಯಾದವ್, ಅಕ್ಷರ್ ಪಟೇಲ್, ಅನ್ರಿಕ್ ನೋಕಿಯಾ, ಚೇತನ್ ಸಕಾರಿಯಾ, ಕಮಲೇಶ್ ನಾಗರಕೋಟಿ, ಖಲೀಲ್ ಅಹ್ಮದ್, ಲುಂಗಿ ಎನ್ಗಿಡಿ, ಮುಸ್ತಾಫಿಜುರ್ ರೆಹಮಾನ್, ಅಮನ್ ಖಾನ್, ಕುಲದೀಪ್ ಯಾದವ್, ಪ್ರವೀಣ್ ದುಬೆ, ವಿಕ್ಕಿ ಓಸ್ತ್ವಾಲ್, ಇಶಾಂತ್ ಶರ್ಮಾ, ಫಿಲ್ ಸಾಲ್ಟ್, ಮುಖೇಶ್ ಕುಮಾರ್, ಮನೀಶ್ ಪಾಂಡೆ, ರಿಲೀ ರೌಸ್ಸೊ, ರಿಷಬ್ ಪಂತ್.
Published On - 5:09 pm, Tue, 3 January 23