IPL 2024: ಈ ಸಲ ಕಪ್ ನಮ್ದೆ; ಆರ್‌ಸಿಬಿ ಮಹಿಳಾ- ಪುರುಷ ತಂಡಗಳ ನಡುವೆ ಹೀಗೊಂದು ಕಾಕತಾಳೀಯ..!
IPL 2024: ಭಿಮಾನಿಗಳ ಮನದಲ್ಲಿ ಈ ಸಲ ಆರ್‌ಸಿಬಿ ಪುರುಷ ತಂಡ ಕಪ್ ಗೆಲ್ಲಲಿದೆ ಎಂಬ ಭರವಸೆ ಮೂಡಿದೆ. ಏಕೆಂದರೆ ಈ ಬಾರಿ ಡಬ್ಲ್ಯುಪಿಎಲ್ ಚಾಂಪಿಯನ್ ಪಟ್ಟಕ್ಕೇರಿದ ಆರ್‌ಸಿಬಿ ಮಹಿಳಾ ತಂಡ ಹಾಗೂ ಪುರುಷ ತಂಡಗಳ ಲೀಗ್ ಜರ್ನಿಯ ನಡುವೆ ಹೀಗೊಂದು ವಿಶೇಷ ಕಾಕತಾಳೀಯ ಕಂಡುಬಂದಿದೆ.

ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 62 ನೇ (IPL 2024) ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಡೆಲ್ಲಿ ಕ್ಯಾಪಿಟಲ್ಸ್ (Royal Challengers Bengaluru vs Delhi Capitals) ತಂಡವನ್ನು ಸೋಲಿಸುವ ಮೂಲಕ ಪ್ಲೇಆಫ್ ತಲುಪುವ ಭರವಸೆಯನ್ನು ಜೀವಂತವಾಗಿರಿಸಿಕೊಂಡಿದೆ. ಈಗ ಮೇ 18 ರಂದು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಆರ್‌ಸಿಬಿ ನಿರ್ಣಾಯಕ ಪಂದ್ಯವನ್ನು ಆಡಬೇಕಾಗಿದೆ. ಈ ಪಂದ್ಯದಲ್ಲಿ ಬೆಂಗಳೂರು ಗೆದ್ದರೆ ಪ್ಲೇಆಫ್‌ಗೆ ಅರ್ಹತೆ ಪಡೆಯಲಿದೆ. ಆದರೆ ಈ ಗೆಲುವಿನೊಂದಿಗೆ ಆರ್‌ಸಿಬಿ ಇತರ ತಂಡಗಳ ಫಲಿತಾಂಶದ ಮೇಲೆ ಅವಲಂಬಿತವಾಗಿದೆ. ಆದರೆ ಈ ನಡುವೆ ಅಭಿಮಾನಿಗಳ ಮನದಲ್ಲಿ ಈ ಸಲ ಆರ್‌ಸಿಬಿ ಪುರುಷ ತಂಡ ಕಪ್ ಗೆಲ್ಲಲಿದೆ ಎಂಬ ಭರವಸೆ ಮೂಡಿದೆ. ಏಕೆಂದರೆ ಈ ಬಾರಿ ಡಬ್ಲ್ಯುಪಿಎಲ್ (WPL 2024) ಚಾಂಪಿಯನ್ ಪಟ್ಟಕ್ಕೇರಿದ ಆರ್‌ಸಿಬಿ ಮಹಿಳಾ ತಂಡ ಹಾಗೂ ಪುರುಷ ತಂಡಗಳ ಲೀಗ್ ಜರ್ನಿಯ ನಡುವೆ ಹೀಗೊಂದು ವಿಶೇಷ ಕಾಕತಾಳೀಯ ಕಂಡುಬಂದಿದೆ.
ಆರ್‌ಸಿಬಿ ಮಹಿಳೆ ತಂಡದ ಪರಿಸ್ಥಿತಿಯೂ ಹೀಗೆ ಇತ್ತು
ಈ ವರ್ಷ ನಡೆದ ಎರಡನೇ ಆವೃತ್ತಿಯ ಮಹಿಳಾ ಪ್ರೀಮಿಯರ್ ಲೀಗ್ ಕೂಡ ಸದ್ಯ ನಡೆಯುತ್ತಿರುವ ಐಪಿಎಲ್ನಂತೆ ಬಹಳ ರೋಚಕವಾಗಿತ್ತು. ಡಬ್ಲ್ಯುಪಿಎಲ್‌ನಲ್ಲೂ, ಆರ್‌ಸಿಬಿ ಮಹಿಳಾ ತಂಡ ಕೂಡ ಲೀಗ್ ಹಂತದಲ್ಲೇ ಹೊರಬೀಳುವ ಆತಂಕದಲ್ಲಿತ್ತು. ಆದರೆ ಆರ್‌ಸಿಬಿ ಮಹಿಳಾ ತಂಡ ಅದ್ಭುತ ಪುನರಾಗಮನವನ್ನು ಮಾಡಿ ಟ್ರೋಫಿ ಗೆದ್ದುಕೊಂಡಿತ್ತು. ವಾಸ್ತವವಾಗಿ ಡಬ್ಲ್ಯುಪಿಎಲ್‌ನ 17ನೇ ಪಂದ್ಯದಲ್ಲಿ ಆರ್‌ಸಿಬಿ ಮಹಿಳಾ ತಂಡ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಒಂದು ರನ್‌ನಿಂದ ಸೋತಿತ್ತು. ಇಲ್ಲಿಂದ ಸ್ಮೃತಿ ಪಡೆ ಪ್ಲೇಆಫ್‌ಗೆ ಅರ್ಹತೆ ಪಡೆಯಲು ಸಾಧ್ಯವಿಲ್ಲ ಎಂದು ತೋರುತ್ತಿತ್ತು. ಆದರೆ ಇದಾದ ನಂತರ ಮತ್ತೆ ಗೆಲುವಿನ ಲಯಕ್ಕೆ ಮರಳಿದ ಆರ್‌ಸಿಬಿ ಮಹಿಳಾ ಪಡೆ ಟ್ರೋಫಿ ಗೆಲ್ಲುವವರೆಗೂ ಎಲ್ಲಾ ಪಂದ್ಯಗಳನ್ನು ಗೆದ್ದುಕೊಂಡಿತು. ಇದೀಗ ಆರ್‌ಸಿಬಿ ಪುರುಷರ ತಂಡದಲ್ಲೂ ಇದೇ ರೀತಿ ಕಂಡು ಬರುತ್ತಿದೆ.
IPL 2024: ಡೆಲ್ಲಿ ಮಣಿಸಿ ಡ್ರೆಸ್ಸಿಂಗ್ ರೂಂನಲ್ಲಿ ಕುಣಿದು ಕುಪ್ಪಳಿಸಿದ ಆರ್‌ಸಿಬಿ ಬಾಯ್ಸ್; ವಿಡಿಯೋ ನೋಡಿ
ಹೀಗೊಂದು ಕಾಕತಾಳೀಯ
ಈ ಸೀಸನ್ನ ಎರಡನೇ ಪಂದ್ಯದಲ್ಲಿ ಆರ್‌ಸಿಬಿ ಗೆದ್ದಿದ್ದು ಬಿಟ್ಟರೆ, ಉಳಿದ ಆರು ಪಂದ್ಯಗಳಲ್ಲಿ ಸತತ ಸೋಲುಕಂಡಿತ್ತು. ಆದರೆ ಐಪಿಎಲ್ನ 36ನೇ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಕೊನೆಯ ಸೋಲು ಕಂಡಿದ್ದ ಆರ್‌ಸಿಬಿ ಅಲ್ಲಿಂದ ಸತತ 5 ಪಂದ್ಯಗಳನ್ನು ಗೆದ್ದಿದೆ. ಅಚ್ಚರಿಯೆಂದರೆ ಆರ್‌ಸಿಬಿ ಪುರುಷರ ತಂಡ ಕೂಡ ಮಹಿಳಾ ತಂಡದಂತೆ ಈ ಪಂದ್ಯದಲ್ಲಿ ಒಂದು ರನ್‌ನಿಂದ ಸೋತಿತ್ತು. ಆದರೆ ಆ 1 ರನ್ಗಳ ಸೋಲಿನ ನಂತರ ಆರ್‌ಸಿಬಿ ಸತತವಾಗಿ ಪಂದ್ಯಗಳನ್ನು ಗೆಲ್ಲುತ್ತಾ ಬರುತ್ತಿದೆ. ಕೆಕೆಆರ್ ವಿರುದ್ಧದ ಸೋಲಿನ ನಂತರ, ಬೆಂಗಳೂರು ಸತತ 5 ಪಂದ್ಯಗಳನ್ನು ಗೆದ್ದಿದೆ. ಈ ಕಾಕತಾಳೀಯ ಸಾಕಷ್ಟು ವಿಶೇಷವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಆರ್‌ಸಿಬಿ ಪುರುಷರ ತಂಡ ಕೂಡ ಮಹಿಳಾ ತಂಡದಂತೆ ಟ್ರೋಫಿ ಗೆಲ್ಲುವವರೆಗೂ ತನ್ನ ಅಜೇಯ ಓಟವನ್ನು ಮುಂದುವರೆಸಲಿ ಎಂಬುದು ಅಭಿಮಾನಿಗಳ ಆಶಯವಾಗಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
