ತನ್ನ ನೆಲದಲ್ಲೇ ತಾನು ಹೊರಹಾಕಿದ ಆಟಗಾರನಿಂದಲೇ ಸೋಲು; ಸಪ್ಪೆ ಮೊರೆ ಹಾಕಿ ಕುಳಿತ ಕಾವ್ಯ ಮಾರನ್
Sunrisers Hyderabad's Crushing IPL Defeat: ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಸನ್‌ರೈಸರ್ಸ್ ಹೈದರಾಬಾದ್‌ನ ಸೋಲು ಕಾವ್ಯಾ ಮಾರನ್ ಅವರಿಗೆ ದೊಡ್ಡ ಆಘಾತ ನೀಡಿದೆ. ಹಿಂದೆ ತಂಡದಿಂದ ಕೈಬಿಡಲಾಗಿದ್ದ ನಿಕೋಲಸ್ ಪೂರನ್ 70 ರನ್ ಗಳಿಸಿ ಮಾಜಿ ತಂಡದ ಸೋಲಿಗೆ ಕಾರಣವಾಗಿರುವುದು ಕಾವ್ಯ ಬೇಸರಗೊಳ್ಳುವಂತೆ ಮಾಡಿದೆ. ಕಾವ್ಯಾ ಅವರ ನಿರಾಶೆಯ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ತನ್ನ ಮೊದಲ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ತಂಡವನ್ನು ಭಾರಿ ಅಂತರದಿಂದ ಸೋಲಿಸಿದ್ದ ಸನ್‌ರೈಸರ್ಸ್ ಹೈದರಾಬಾದ್ ತಂಡ, ಲಕ್ನೋ ಸೂಪರ್ ಜೈಂಟ್ಸ್ (SRH vs LSG) ವಿರುದ್ಧವೂ ಪ್ರಬಲ ಗೆಲುವು ಸಾಧಿಸುತ್ತದೆ ಎಂದು ತಂಡದ ಒಡತಿ ಕಾವ್ಯ ಮಾರನ್ (kavya maran) ಆಶಿಸಿದ್ದರು. ಆದರೆ ಹೈದರಾಬಾದ್‌ನಲ್ಲಿ ನಡೆದ ಈ ಪಂದ್ಯದಲ್ಲಿ ಇದಕ್ಕೆ ತದ್ವಿರುದ್ಧವಾದ ಫಲಿತಾಂಶ ಹೊರಬಿತ್ತು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಹೈದರಾಬಾದ್ 190 ರನ್‌ಗಳನ್ನು ಕಲೆಹಾಕಿದರೆ, ಈ ಗುರಿ ಬೆನ್ನಟ್ಟಿದ ಲಕ್ನೋ ಕೇವಲ 16.1 ಓವರ್‌ಗಳಲ್ಲಿ ಜಯದ ನಗೆ ಬೀರಿತು.
ಇದಕ್ಕಿಂತ ಇನ್ನೊಂದು ನೋವಿನ ಸಂಗತಿಯೆಂದರೆ ಕಾವ್ಯ ಮಾರನ್ ಯಾವ ಆಟಗಾರನನ್ನು ತಂಡದಿಂದ ಹೊರಹಾಕಿದ್ದರೋ ಆ ಆಟಗಾರನೇ ಹೈದರಾಬಾದ್ ತಂಡವನ್ನು ಹೀನಾಯವಾಗಿ ಸೋಲಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ. ಆ ಬ್ಯಾಟ್ಸ್‌ಮನ್ ಮತ್ತ್ಯಾರು ಅಲ್ಲ, ಕೆಲವು ಸೀಸನ್‌ಗಳ ಹಿಂದೆ ಸನ್‌ರೈಸರ್ಸ್ ಹೈದರಾಬಾದ್ ತಂಡದ ಪರ ಆಡಿದ್ದ ನಿಕೋಲಸ್ ಪೂರನ್. ಇದೀಗ ಲಕ್ನೋ ಪರ ಆಡುತ್ತಿರುವ ಪೂರನ್ ತನ್ನ ಹೊಡಿಬಡಿ ಆಟದ ಮೂಲಕ ಹೈದರಾಬಾದ್ ತಂಡದ ಮಾಲಕಿ ಸಪ್ಪೆ ಮೊರೆ ಹಾಕಿ ಕುಳಿತುಕೊಳ್ಳುವಂತೆ ಮಾಡಿದ್ದಾರೆ. ಕಾವ್ಯ ಸೋಲಿನ ನೋವಿನಲ್ಲಿ ಕುಳಿತಿರುವ ಫೋಟೋಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.
@SunRisers are getting a dose of their medicine from ex players Nicholas Pooran + Mitchell Marsh! Kavya Maran enjoying then not enjoying as Lucknow Super Giants are smashing them! Brian Lara released Pooran for Brook #SRHvsLSG #IPL2025 pic.twitter.com/YAoNkkftzj
— ali mohammed (@albie2009) March 27, 2025
ಕಾವ್ಯ ಮಾರನ್ಗೆ ನಿರಾಶೆ
ವಾಸ್ತವವಾಗಿ 191 ರನ್‌ಗಳ ಗುರಿಯನ್ನು ಲಕ್ನೋ ತಂಡ ಬೆನ್ನಟ್ಟಲು ನಮ್ಮ ತಂಡದ ಬೌಲರ್ಗಳು ಬಿಡುವುದಿಲ್ಲ ಎಂಬುದು ಕಾವ್ಯ ಮಾರನ್ ನಿರೀಕ್ಷೆಯಾಗಿತ್ತು. ಆದರೆ ನಿಕೋಲಸ್ ಪೂರನ್, ಕಾವ್ಯ ಅವರ ಭರವಸೆಗಳನ್ನು ಹುಸಿಗೊಳಿಸಿದರು. ಎರಡನೇ ಓವರ್‌ನಲ್ಲಿ ಬ್ಯಾಟಿಂಗ್ ಮಾಡಲು ಬಂದ ಪೂರನ್ ಸಿಕ್ಸರ್ ಮತ್ತು ಬೌಂಡರಿಗಳ ಮಳೆಗರೆದರು. ಪೂರನ್ ಅವರ ಆಕ್ರಮಣಕಾರಿ ಆಟದಿಂದ ಸೋಲು ಖಚಿತ ಎಂಬುದನ್ನು ಅರಿತುಕೊಂಡ ಕಾವ್ಯ ಮಾರನ್ ಸಪ್ಪೆ ಮೊರೆ ಹಾಕಿಕೊಂಡು ಮೌನಕ್ಕೆ ಜಾರಿದರು. ಅವರ ಈ ಫೋಟೋಗಳನ್ನು ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟು ಕಾಲೆಳೆದಿದ್ದಾರೆ.
I wanted LSG to win the match,but I’m worried that Kavya Maran, has become so downcast. She wants SRH to play its next match in West Bengal in the presence of LoP Rahul Gandhi the Pappu.#Trump consoling her,bt what’s done can’t be undone.#SRHvLSG #shardulthakur #KavyaMaran pic.twitter.com/9Y92Bhrple
— Terror 🧢 (@Maturehunnn) March 27, 2025
We can’t see Kavya Maran sad face.😑
NICHOLAS POORAN this is unfair. 🤒#SRHvLSG pic.twitter.com/l6yHRtkekD
— Abhishek Choudhary (@Jaat_Abhishek07) March 27, 2025
Real cricket fans can’t see Kavya Maran like this 💔 pic.twitter.com/pvAoJmPxEg
— Varun Chakaravarthy ❁ (@chakaravarthy_x) March 27, 2025
ಸೇಡು ತೀರಿಸಿಕೊಂಡ ಪೂರನ್
ವಾಸ್ತವವಾಗಿ, ನಿಕೋಲಸ್ ಪೂರನ್ 2019 ರಲ್ಲಿ ಪಂಜಾಬ್ ಕಿಂಗ್ಸ್ ಪರ ಐಪಿಎಲ್‌ಗೆ ಪಾದಾರ್ಪಣೆ ಮಾಡಿದರು. 3 ಸೀಸನ್‌ಗಳ ನಂತರ, ಕಾವ್ಯ ಮಾರನ್ 2022 ರ ಸೀಸನ್ನಲ್ಲಿ 10.75 ಕೋಟಿ ಬೆಲೆಗೆ ಪೂರನ್ ಅವರನ್ನು ತಮ್ಮ ತಂಡಕ್ಕೆ ಸೇರಿಸಿಕೊಂಡರು. ಹೈದರಾಬಾದ್ ಪರ 14 ಪಂದ್ಯಗಳನ್ನಾಡಿದ್ದ ಪೂರನ್ 144 ಸ್ಟ್ರೈಕ್ ರೇಟ್‌ನಲ್ಲಿ 306 ರನ್ ಕಲೆಹಾಕಿದ್ದರು. ಅವರ ಅದ್ಭುತ ಪ್ರದರ್ಶನದ ಹೊರತಾಗಿಯೂ, 2023 ರ ಹರಾಜಿಗೂ ಮುನ್ನ ಅವರನ್ನು ತಂಡದಿಂದ ಕೈಬಿಡಲಾಯಿತು. ನಂತರ ಲಕ್ನೋ ಸೂಪರ್ ಜೈಂಟ್ಸ್ ನಿಕೋಲಸ್ ಪೂರನ್ ಅವರನ್ನು ಖರೀದಿಸಿತು. ಈಗ ಅವರು ಹೈದರಾಬಾದ್ ವಿರುದ್ಧ ಕೇವಲ 26 ಎಸೆತಗಳಲ್ಲಿ 269 ಸ್ಟ್ರೈಕ್ ರೇಟ್‌ನಲ್ಲಿ 70 ರನ್ ಗಳಿಸುವ ಮೂಲಕ ತಮ್ಮ ಸೇಡನ್ನು ತೀರಿಸಿಕೊಂಡಿದ್ದಾರೆ ಎನ್ನಬಹುದು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:15 pm, Fri, 28 March 25