IPL 2025: ಬಿಗ್ ಹಿಟ್ಟರ್ ಎಂಟ್ರಿ: ಹೀಗಿರಲಿದೆ RCB ಪ್ಲೇಯಿಂಗ್ 11

IPL 2025 RCB vs RR: ಈ ಬಾರಿಯ ಐಪಿಎಲ್​ನಲ್ಲಿ ಈವರೆಗೆ 5 ಪಂದ್ಯಗಳನ್ನಾಡಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಮೂರು ಮ್ಯಾಚ್​ಗಳಲ್ಲಿ ಜಯ ಸಾಧಿಸಿದೆ. ಇದೀಗ 6ನೇ ಪಂದ್ಯದಲ್ಲಿ ಆರ್​ಸಿಬಿ ತಂಡವು ರಾಜಸ್ಥಾನ್ ರಾಯಲ್ಸ್ ತಂಡವನ್ನು ಎದುರಿಸಲು ಸಜ್ಜಾಗಿದೆ. ಈ ಪಂದ್ಯಕ್ಕಾಗಿ ಆರ್​ಸಿಬಿ ಪ್ಲೇಯಿಂಗ್ ಇಲೆವೆನ್​ನಲ್ಲಿ ಬದಲಾವಣೆ ಕಂಡು ಬರುವ ಸಾಧ್ಯತೆಯಿದೆ.

IPL 2025: ಬಿಗ್ ಹಿಟ್ಟರ್ ಎಂಟ್ರಿ: ಹೀಗಿರಲಿದೆ RCB ಪ್ಲೇಯಿಂಗ್ 11
Rcb

Updated on: Apr 12, 2025 | 1:54 PM

IPL 2025: ಇಂಡಿಯನ್ ಪ್ರೀಮಿಯರ್ ಲೀಗ್​ನ  28ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಹಾಗೂ ರಾಜಸ್ಥಾನ್ ರಾಯಲ್ಸ್ (DC) ತಂಡಗಳು ಮುಖಾಮುಖಿಯಾಗಲಿದೆ. ಜೈಪುರದ ಸವಾಯಿ ಮಾನ್​ಸಿಂಗ್ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯಕ್ಕಾಗಿ ಆರ್​ಸಿಬಿ ತನ್ನ ಪ್ಲೇಯಿಂಗ್ ಇಲೆವೆನ್​ನಲ್ಲಿ ಒಂದು ಬದಲಾವಣೆ ಸಾಧ್ಯತೆಯಿದೆ. ಏಕೆಂದರೆ ಕಳೆದ 5 ಪಂದ್ಯಗಳಲ್ಲಿ ಆರ್​ಸಿಬಿ ಪರ ಕಣಕ್ಕಿಳಿದಿರುವ ಲಿಯಾಮ್ ಲಿವಿಂಗ್​ಸ್ಟೋನ್ ಅತ್ಯಂತ ಕಳಪೆ ಪ್ರದರ್ಶನ ನೀಡಿದ್ದಾರೆ.

ಈವರೆಗೆ ಐದು ಪಂದ್ಯಗಳಲ್ಲಿ ಬ್ಯಾಟ್ ಬೀಸಿರುವ ಲಿಯಾಮ್ ಲಿವಿಂಗ್​ಸ್ಟೋನ್ ಕೇವಲ 83 ರನ್​ ಮಾತ್ರ ಕಲೆಹಾಕಿದ್ದಾರೆ. ಹಾಗೆಯೇ 8 ಓವರ್​ಗಳನ್ನು ಎಸೆದಿರುವ ಅವರು ಪಡೆದಿರುವುದು ಕೇವಲ 2 ವಿಕೆಟ್ ಮಾತ್ರ. ಹೀಗಾಗಿ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಿಂದ ಲಿಯಾಮ್ ಲಿವಿಂಗ್​ಸ್ಟೋನ್ ಅವರನ್ನು ಪ್ಲೇಯಿಂಗ್ ಇಲೆವೆನ್​ನಿಂದ ಕೈ ಬಿಡುವ ಸಾಧ್ಯತೆಯಿದೆ.

RCB  ತಂಡದಲ್ಲಿ ಯಾರಿಗೆ ಅವಕಾಶ?

ಲಿಯಾಮ್ ಲಿವಿಂಗ್​ಸ್ಟೋನ್ ಅವರನ್ನು ಕೈ ಬಿಟ್ಟರೆ ರೊಮೆರಿಯೊ ಶೆಫರ್ಡ್ ಅಥವಾ ಜೇಕಬ್ ಬೆಥೆಲ್ ಅವರನ್ನು ಕಣಕ್ಕಿಳಿಸಬಹುದು. ಇಲ್ಲಿ ರೊಮೆರಿಯೊ ಶೆಫರ್ಡ್ ಬಿಗ್ ಹಿಟ್ಟರ್. ಹಾಗೆಯೇ ವೇಗದ ಬೌಲರ್​. ಹೀಗಾಗಿ ಮಧ್ಯಮ ಕ್ರಮಾಂಕದಲ್ಲಿ ರೊಮೊರಿಯೊ ಅವರನ್ನು ಕಣಕ್ಕಿಳಿಸಿದರೆ ರನ್​ ಗತಿಯನ್ನು ಹೆಚ್ಚಿಸಬಹುದು. ಹಾಗೆಯೇ ಮಿಡಲ್ ಓವರ್​ಗಳಲ್ಲಿ ವೇಗದ ಬೌಲರ್ ಆಗಿಯೂ ಬಳಸಿಕೊಳ್ಳಬಹುದು. ಹೀಗಾಗಿ ಲಿಯಾಮ್ ಬದಲಿಗೆ ರೊಮೆರಿಯೊ ಶೆಫರ್ಡ್ ಕಣಕ್ಕಿಳಿಯುವ ಸಾಧ್ಯತೆ ಹೆಚ್ಚಿದೆ.

ಹೇಗಿರಲಿದೆ RCB  ಪ್ಲೇಯಿಂಗ್ 11?

ಈ ಪಂದ್ಯದಲ್ಲೂ ಆರ್​ಸಿಬಿ ತಂಡದ ಆರಂಭಿಕರಾಗಿ ಫಿಲ್ ಸಾಲ್ಟ್ ಹಾಗೂ ವಿರಾಟ್ ಕೊಹ್ಲಿ ಮುಂದುವರೆಯಲಿದ್ದಾರೆ. ಮೂರನೇ ಕ್ರಮಾಂಕದಲ್ಲಿ ದೇವದತ್ ಪಡಿಕ್ಕಲ್ ಕಣಕ್ಕಿಳಿಯಲಿದ್ದು, ನಾಲ್ಕನೇ ಕ್ರಮಾಂಕದಲ್ಲಿ ರಜತ್ ಪಾಟಿದಾರ್ ಬ್ಯಾಟ್ ಬೀಸಲಿದ್ದಾರೆ.

ಇದನ್ನೂ ಓದಿ
PSL 2025: ಪಾಕಿಸ್ತಾನ್ ಸೂಪರ್ ಲೀಗ್​ನಲ್ಲಿ RCB ಮಾಜಿ ಆಟಗಾರರು
ಪ್ರಿಯಾಂಶ್ ಆರ್ಯನ ಆರ್ಭಟಕ್ಕೆ ವಿಶ್ವ ದಾಖಲೆಯೇ ಉಡೀಸ್
ಕ್ರಿಸ್​ ಗೇಲ್ ದಾಖಲೆ ಜಸ್ಟ್ ಮಿಸ್: ವಿಶ್ವ ದಾಖಲೆ ಬರೆದ ವಿರಾಟ್ ಕೊಹ್ಲಿ
ಉಲ್ಟಾ ಹೊಡೆದ RCB ಕಪ್ ಗೆಲ್ಲಬಾರದು ಎಂದಿದ್ದ ಅಂಬಾಟಿ ರಾಯುಡು

ಐದನೇ ಕ್ರಮಾಂಕದಲ್ಲಿ ರೊಮೊರಿಯೊ ಶೆಫರ್ಡ್​ ಅವರನ್ನು ಕಣಕ್ಕಿಳಿಸುವ ಸಾಧ್ಯತೆಯಿದೆ. ಆರನೇ ಕ್ರಮಾಂಕದಲ್ಲಿ ವಿಕೆಟ್ ಕೀಪರ್ ಬ್ಯಾಟರ್ ಜಿತೇಶ್ ಶರ್ಮಾಗೆ ಕಣಕ್ಕಿಳಿಯಲಿದ್ದಾರೆ. ಏಳು ಮತ್ತು ಎಂಟನೇ ಕ್ರಮಾಂಕಗಳಲ್ಲಿ ಟಿಮ್ ಡೇವಿಡ್ ಹಾಗೂ ಕೃನಾಲ್ ಪಾಂಡ್ಯ ಕಾಣಿಸಿಕೊಳ್ಳಲಿದ್ದಾರೆ.

ಇದನ್ನೂ ಓದಿ: IPL 2025: ಮುಂಬೈ ಇಂಡಿಯನ್ಸ್ ಆಟಗಾರನ ಬ್ಯಾನ್ ಮಾಡಿದ ಪಾಕಿಸ್ತಾನ್

ಇನ್ನು ಬೌಲರ್​ಗಳಾಗಿ ಜೋಶ್ ಹ್ಯಾಝಲ್​ವುಡ್, ಯಶ್ ದಯಾಳ್ ಹಾಗೂ ಭುವನೇಶ್ವರ್ ಕುಮಾರ್ ಕಣಕ್ಕಿಳಿಯಲಿದ್ದಾರೆ. ಅದರಂತೆ ಆರ್​ಸಿಬಿ ತಂಡದ ಪ್ಲೇಯಿಂಗ್ ಇಲೆವೆನ್ ಈ ಕೆಳಗಿನಂತಿರಲಿದೆ…

  1. ವಿರಾಟ್ ಕೊಹ್ಲಿ
  2. ಫಿಲ್ ಸಾಲ್ಟ್
  3. ದೇವದತ್ ಪಡಿಕ್ಕಲ್
  4. ರಜತ್ ಪಾಟಿದಾರ್
  5. ರೊಮೊರಿಯೊ ಶೆಫರ್ಡ್
  6. ಜಿತೇಶ್ ಶರ್ಮಾ (ವಿಕೆಟ್ ಕೀಪರ್)
  7. ಟಿಮ್ ಡೇವಿಡ್
  8. ಕೃನಾಲ್ ಪಾಂಡ್ಯ
  9. ಭುವನೇಶ್ವರ್ ಕುಮಾರ್
  10. ಜೋಶ್ ಹ್ಯಾಝಲ್​ವುಡ್
  11. ಯಶ್ ದಯಾಳ್.