IPL 2025: RCB ತಂಡಕ್ಕೆ ಮೇಜರ್ ಸರ್ಜರಿ: ಕೆರಿಬಿಯನ್ ದೈತ್ಯನಿಗೆ ಅವಕಾಶ ಸಾಧ್ಯತೆ
IPL 2025 PBKS vs RCB: ಇಂಡಿಯನ್ ಪ್ರೀಮಿಯರ್ ಲೀಗ್ನ (ಐಪಿಎಲ್ 2025) 37ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಮುಖಾಮುಖಿಯಾಗಲಿದೆ. ಚಂಡೀಗಢ್ನ ಮುಲ್ಲನ್ಪುರ್ನ ಎಂವೈಎಸ್ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯದ ಮೂಲಕ ಆರ್ಸಿಬಿ ತಂಡ ದ್ವಿತೀಯಾರ್ಧವನ್ನು ಆರಂಭಿಸಲಿದೆ.

IPL 2025: ಐಪಿಎಲ್ ಸೀಸನ್-18ರ ಮೊದಲಾರ್ಧ ಮುಗಿಸಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವು ಇದೀಗ ದ್ವಿತೀಯಾರ್ಧಕ್ಕಾಗಿ ಸಜ್ಜಾಗುತ್ತಿದೆ. ಏಪ್ರಿಲ್ 20 ರಂದು ಚಂಡೀಗಢ್ನಲ್ಲಿ ನಡೆಯಲಿರುವ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದ ಮೂಲಕ ಆರ್ಸಿಬಿ ತನ್ನ ದ್ವಿತೀಯ ಸುತ್ತನ್ನು ಆರಂಭಿಸಲಿದೆ. ಆದರೆ ಈ ಪಂದ್ಯಕ್ಕೂ ಮುನ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಒಂದು ಮಹತ್ವದ ಬದಲಾವಣೆ ಕಂಡು ಬರುವ ಸಾಧ್ಯತೆಯಿದೆ.
ಏಕೆಂದರೆ ಕಳೆದ 7 ಪಂದ್ಯಗಳಲ್ಲಿ ಆರ್ಸಿಬಿ ಪರ ಕಣಕ್ಕಿಳಿದಿರುವ ಲಿಯಾಮ್ ಲಿವಿಂಗ್‌ಸ್ಟೋನ್ ಕಡೆಯಿಂದ ನಿರೀಕ್ಷಿತ ಪ್ರದರ್ಶನ ಮೂಡಿಬಂದಿಲ್ಲ. ಅಲ್ಲದೆ ಕಳೆದ 6 ಇನಿಂಗ್ಸ್ಗಳಲ್ಲಿ ಬ್ಯಾಟ್ ಬೀಸಿರುವ ಅವರು ಕಲೆಹಾಕಿರುವುದು ಕೇವಲ 87 ರನ್ಗಳು ಮಾತ್ರ. ಹೀಗಾಗಿ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಆರ್ಸಿಬಿ ವೆಸ್ಟ್ ಇಂಡೀಸ್ ದೈತ್ಯ ರೊಮೊರಿಯೊ ಶೆಫರ್ಡ್ಗೆ ಚಾನ್ಸ್ ನೀಡಬಹುದು.
ಅದರಲ್ಲೂ ಮುಲ್ಲನ್ಪುರ್ನ ಪಿಚ್ ಬ್ಯಾಟರ್ಗಳಿಗೆ ಸಹಕಾರಿ. ಹೀಗಾಗಿ ಶೆರ್ಫಡ್ ಅವರನ್ನು ಕಣಕ್ಕಿಳಿಸಿದರೆ ಬಿಗ್ ಹಿಟ್ಟರ್ ಆಯ್ಕೆಯೊಂದಿಗೆ ಆರ್ಸಿಬಿ ಹೆಚ್ಚುವರಿ ವೇಗಿಯ ನೆರವು ಪಡೆದುಕೊಳ್ಳಬಹುದು. ಹೀಗಾಗಿ ಲಿವಿಂಗ್‌ಸ್ಟೋನ್ ಬದಲಿಗೆ ರೊಮೊರಿಯೊಗೆ ಚಾನ್ಸ್ ನೀಡುವ ಸಾಧ್ಯತೆಯಿದೆ.
ಇನ್ನು ಈ ಪಂದ್ಯದಲ್ಲೂ ಆರ್ಸಿಬಿ ತಂಡದ ಆರಂಭಿಕರಾಗಿ ಫಿಲ್ ಸಾಲ್ಟ್ ಹಾಗೂ ವಿರಾಟ್ ಕೊಹ್ಲಿ ಮುಂದುವರೆಯಲಿದ್ದಾರೆ. ಮೂರನೇ ಕ್ರಮಾಂಕದಲ್ಲಿ ದೇವದತ್ ಪಡಿಕ್ಕಲ್ ಕಣಕ್ಕಿಳಿಯಲಿದ್ದು, ನಾಲ್ಕನೇ ಕ್ರಮಾಂಕದಲ್ಲಿ ರಜತ್ ಪಾಟಿದಾರ್ ಬ್ಯಾಟ್ ಬೀಸಲಿದ್ದಾರೆ.
ಐದನೇ ಕ್ರಮಾಂಕದಲ್ಲಿ ಲಿಯಾಮ್ ಲಿವಿಂಗ್‌ಸ್ಟೋನ್ ಬದಲಿಗೆ ರೊಮೊರಿಯೊ ಶೆಫರ್ಡ್ ಅವರನ್ನು ಕಣಕ್ಕಿಳಿಸುವ ಸಾಧ್ಯತೆ ಹೆಚ್ಚಿದೆ. ಆರನೇ ಕ್ರಮಾಂಕದಲ್ಲಿ ವಿಕೆಟ್ ಕೀಪರ್ ಬ್ಯಾಟರ್ ಜಿತೇಶ್ ಶರ್ಮಾಗೆ ಕಣಕ್ಕಿಳಿಯಲಿದ್ದಾರೆ. ಏಳು ಮತ್ತು ಎಂಟನೇ ಕ್ರಮಾಂಕಗಳಲ್ಲಿ ಟಿಮ್ ಡೇವಿಡ್ ಹಾಗೂ ಕೃನಾಲ್ ಪಾಂಡ್ಯ ಕಾಣಿಸಿಕೊಳ್ಳಲಿದ್ದಾರೆ.
ಇನ್ನು ಬೌಲರ್ಗಳಾಗಿ ಜೋಶ್ ಹ್ಯಾಝಲ್‌ವುಡ್, ಯಶ್ ದಯಾಳ್ ಹಾಗೂ ಭುವನೇಶ್ವರ್ ಕುಮಾರ್ ಕಣಕ್ಕಿಳಿಯಲಿದ್ದಾರೆ. ಅದರಂತೆ ಆರ್ಸಿಬಿ ತಂಡದ ಸಂಭಾವ್ಯ ಪ್ಲೇಯಿಂಗ್ ಇಲೆವೆನ್ ಈ ಕೆಳಗಿನಂತಿರಲಿದೆ…
1. ಫಿಲ್ ಸಾಲ್ಟ್ (ಬ್ಯಾಟರ್) 2. ವಿರಾಟ್ ಕೊಹ್ಲಿ (ಬ್ಯಾಟರ್) 3. ದೇವದತ್ ಪಡಿಕ್ಕಲ್ (ಬ್ಯಾಟರ್) 4. ರಜತ್ ಪಾಟಿದಾರ್ (ನಾಯಕ, ಬ್ಯಾಟರ್) 5. ರೊಮಾರಿಯೊ ಶೆಫರ್ಡ್ 6. ಜಿತೇಶ್ ಶರ್ಮಾ (ಬ್ಯಾಟರ್) 7. ಟಿಮ್ ಡೇವಿಡ್ (ಆಲ್-ರೌಂಡರ್) 8. ಕೃನಾಲ್ ಪಾಂಡ್ಯ (ಆಲ್-ರೌಂಡರ್) 9. ಭುವನೇಶ್ವರ್ ಕುಮಾರ್ (ಬೌಲರ್) 10. ಜೋಶ್ ಹ್ಯಾಝಲ್‌ವುಡ್ (ಬೌಲರ್) 11. ಯಶ್ ದಯಾಳ್ (ಬೌಲರ್)
ಇದನ್ನೂ ಓದಿ: Tim David: ಟಿಮ್ ಡೇವಿಡ್ ಆರ್ಭಟಕ್ಕೆ ವಿಶ್ವ ದಾಖಲೆಯೇ ಉಡೀಸ್
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ: ಫಿಲಿಪ್ ಸಾಲ್ಟ್, ವಿರಾಟ್ ಕೊಹ್ಲಿ, ದೇವದತ್ ಪಡಿಕ್ಕಲ್, ರಜತ್ ಪಾಟಿದಾರ್ (ನಾಯಕ), ಲಿಯಾಮ್ ಲಿವಿಂಗ್‌ಸ್ಟೋನ್, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಟಿಮ್ ಡೇವಿಡ್, ಕೃನಾಲ್ ಪಾಂಡ್ಯ, ಭುವನೇಶ್ವರ್ ಕುಮಾರ್, ಜೋಶ್ ಹ್ಯಾಝಲ್‌ವುಡ್, ಯಶ್ ದಯಾಳ್, ಸುಯಶ್ ಶರ್ಮಾ, ಸ್ವಪ್ನಿಲ್ ಸಿಂಗ್, ರಾಸಿಖ್ ದರ್ ಸಲಾಮ್, ಜೇಕಬ್ ಬೆಥೆಲ್, ರೊಮಾರಿಯೊ ಶೆಫರ್ಡ್, ಲುಂಗಿ ಎನ್‌ಗಿಡಿ, ನುವಾನ್ ತುಷಾರ, ಮೋಹಿತ್ ರಾಠಿ, ಸ್ವಸ್ತಿಕ್ ಚಿಕಾರ, ಅಭಿನಂದನ್ ಸಿಂಗ್.