IPL 2025: ಐಪಿಎಲ್ ಟಿಕೆಟ್‌ಗಳನ್ನು ಆನ್‌ಲೈನ್ ಹಾಗೂ ಆಫ್‌ಲೈನ್‌ನಲ್ಲಿ ಖರೀದಿಸುವುದು ಹೇಗೆ? ಇಲ್ಲಿದೆ ಪೂರ್ಣ ವಿವರ
How to Buy IPL 2025 Tickets: ಐಪಿಎಲ್ 2025 ರ ಟಿಕೆಟ್‌ಗಳನ್ನು ಆನ್‌ಲೈನ್ (IPLT20.com, BookMyShow, Paytm Insider, TicketGenie) ಮತ್ತು ಆಫ್‌ಲೈನ್‌ನಲ್ಲಿ ಖರೀದಿಸಬಹುದು. ಟಿಕೆಟ್ ಬೆಲೆಗಳು 800 ರಿಂದ 45,000 ರೂಪಾಯಿಗಳವರೆಗೆ ನಿಗದಿಯಾಗಿದ್ದು, ಪಂದ್ಯಕ್ಕನುಗುಣವಾಗಿ ಬದಲಾಗುತ್ತವೆ. ಪಂದ್ಯ, ಸ್ಥಳ ಮತ್ತು ಆಸನದ ಪ್ರಕಾರ ಬೆಲೆ ನಿರ್ಧಾರವಾಗುತ್ತದೆ. ಬುಕಿಂಗ್ ಪ್ರಕ್ರಿಯೆ, ಪಾವತಿ ವಿಧಾನಗಳು ಮತ್ತು ಆಫ್‌ಲೈನ್ ಖರೀದಿ ಸ್ಥಳಗಳ ಬಗ್ಗೆ ಲೇಖನದಲ್ಲಿ ಸಂಪೂರ್ಣ ಮಾಹಿತಿ ನೀಡಲಾಗಿದೆ.

2025 ರ ಐಪಿಎಲ್ (IPL 2025) ಆರಂಭಕ್ಕೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿವೆ. 18ನೇ ಸೀಸನ್‌ನ ಉದ್ಘಾಟನಾ ಪಂದ್ಯ ಮಾರ್ಚ್ 22 ರಂದು ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ನಡುವೆ ನಡೆಯಲಿದೆ. ಇದರೊಂದಿಗೆ ಸುಮಾರು ಎರಡು ತಿಂಗಳ ಕಾಲ ನಡೆಯಲಿರುವ ಈ ಪಂದ್ಯಾವಳಿ ಆರಂಭವಾಗಲಿದೆ. ಅಭಿಮಾನಿಗಳು ತಮ್ಮ ನೆಚ್ಚಿನ ತಂಡದ ಪಂದ್ಯಗಳನ್ನು ವೀಕ್ಷಿಸಲು ಕಾತರದಿಂದ ಕಾಯುತ್ತಿದ್ದಾರೆ. ಆದ್ದರಿಂದ, ಇಂದು ನಾವು ನಿಮಗೆ ಐಪಿಎಲ್ ಟಿಕೆಟ್‌ಗಳಿಗೆ ಸಂಬಂಧಿಸಿದ ಪ್ರತಿಯೊಂದು ಮಾಹಿತಿಯನ್ನು ನೀಡಲಿದ್ದೇವೆ. ಪಂದ್ಯವನ್ನು ವೀಕ್ಷಿಸಲು ನೀವು ಯಾವಾಗ ಮತ್ತು ಹೇಗೆ ಟಿಕೆಟ್‌ಗಳನ್ನು ಖರೀದಿಸಬಹುದು ಮತ್ತು ಅದಕ್ಕೆ ನೀವು ಎಷ್ಟು ಹಣವನ್ನು ಪಾವತಿಸಬೇಕಾಗುತ್ತದೆ ಎಂಬುದರ ಪೂರ್ಣ ವಿವರ ಇಲ್ಲಿದೆ.
ಟಿಕೆಟ್ ಬೆಲೆ ಎಷ್ಟು?
ಐಪಿಎಲ್ 2025 ರಲ್ಲಿ 74 ಪಂದ್ಯಗಳು ನಡೆಯಲಿದ್ದು, ಇದರಲ್ಲಿ 2 ಅರ್ಹತಾ ಪಂದ್ಯಗಳು, 1 ಎಲಿಮಿನೇಟರ್ ಮತ್ತು ಫೈನಲ್ ಪಂದ್ಯ ಸೇರಿವೆ. ಈ ಎಲ್ಲಾ ಪಂದ್ಯಗಳು 13 ಸ್ಥಳಗಳಲ್ಲಿ ನಡೆಯಲಿದ್ದು, ಕ್ರೀಡಾಂಗಣ, ಪಂದ್ಯ ಮತ್ತು ಆಸನ ವಿಭಾಗದ ಆಧಾರದ ಮೇಲೆ ಟಿಕೆಟ್ಗಳ ಬೆಲೆಯನ್ನು ನಿರ್ಧರಿಸಲಾಗುತ್ತದೆ. ಆರ್‌ಸಿಬಿ, ಸಿಎಸ್‌ಕೆ ಮತ್ತು ಮುಂಬೈನಂತಹ ಜನಪ್ರಿಯ ತಂಡಗಳ ಪಂದ್ಯಗಳಿಗೆ ಅಭಿಮಾನಿಗಳು ಹೆಚ್ಚಿನ ಹಣವನ್ನು ಪಾವತಿಸಬೇಕಾಗಬಹುದು. ಸಾಮಾನ್ಯ, ಪ್ರೀಮಿಯಂ ಮತ್ತು ವಿಐಪಿ ವರ್ಗದ ಸೀಟುಗಳಿಗೆ ಅಭಿಮಾನಿಗಳು 800 ರಿಂದ 45,000 ರೂ.ಗಳವರೆಗೆ ಹಣವನ್ನು ಪಾವತಿಸಬೇಕಾಗಬಹುದು. ಪ್ರಸ್ತುತ ಈ ಟಿಕೆಟ್ ಬೆಲೆಗಳನ್ನು ಅಂದಾಜು ಮಾಡಲಾಗಿದ್ದು, ಬುಕಿಂಗ್ ಸಮಯದಲ್ಲಿ ಇದರ ಬೆಲೆ ಹೆಚ್ಚು ಅಥವಾ ಕಡಿಮೆ ಆಗಬಹುದು.
ಆನ್‌ಲೈನ್‌ನಲ್ಲಿ ಟಿಕೆಟ್‌ಗಳನ್ನು ಎಲ್ಲಿ ಖರೀದಿಸಬೇಕು?
ಐಪಿಎಲ್ 2025 ರ ಟಿಕೆಟ್ ಮಾರಾಟ ಈಗಾಗಲೇ ಪ್ರಾರಂಭವಾಗಿದೆ. ಆನ್‌ಲೈನ್ ಟಿಕೆಟ್ ಬುಕಿಂಗ್‌ಗಾಗಿ ಕೆಲವು ಅಧಿಕೃತ ವೆಬ್ಸೈಟ್ಗಳಿದ್ದು, ಅಲ್ಲಿಂದ ನೀವು ಟಿಕೆಟ್‌ಗಳನ್ನು ಖರೀದಿಸಬಹುದು. ಮೊದಲನೆಯದು IPLT20.com, ಇದು IPL ನ ಅಧಿಕೃತ ವೆಬ್‌ಸೈಟ್ ಆಗಿದೆ. ಇದಲ್ಲದೆ, BookMyShow, Paytm Insider ಮತ್ತು TicketGenie ನಲ್ಲಿ ಆನ್‌ಲೈನ್ ಟಿಕೆಟ್ ಬುಕಿಂಗ್ ಸೌಲಭ್ಯ ಲಭ್ಯವಿದೆ.
ಟಿಕೆಟ್ ಬುಕ್ ಮಾಡುವುದು ಹೇಗೆ?
ಪಂದ್ಯವನ್ನು ಆಯ್ಕೆಮಾಡಿ : ಪಂದ್ಯಗಳ ಪಟ್ಟಿಯಿಂದ ನೀವು ವೀಕ್ಷಿಸಲು ಬಯಸುವ ಪಂದ್ಯವನ್ನು ಆಯ್ಕೆಮಾಡಿ.
ಆಸನ : ಸಾಮಾನ್ಯ, ಪ್ರೀಮಿಯಂ ಮತ್ತು ವಿಐಪಿ ಹೀಗೆ 3 ವಿಭಾಗಗಳ ಆಸನ ವ್ಯವಸ್ಥೆ ಇರಲಿದೆ. ಅದರಲ್ಲಿ ನಿಮಗೆ ಬೇಕಾದ ಆಸನಗಳನ್ನು ನೀವು ಆಯ್ಕೆ ಮಾಡಬಹುದು.
ವೈಯಕ್ತಿಕ ವಿವರಗಳು : ಹೆಸರು, ಇಮೇಲ್, ಫೋನ್ ಸಂಖ್ಯೆಯಂತಹ ನಿಮ್ಮ ವೈಯಕ್ತಿಕ ವಿವರಗಳನ್ನು ಭರ್ತಿ ಮಾಡಬೇಕು.
ಪಾವತಿ : ಡೆಬಿಟ್/ಕ್ರೆಡಿಟ್ ಕಾರ್ಡ್, ಯುಪಿಐ ಅಥವಾ ನೆಟ್ ಬ್ಯಾಂಕಿಂಗ್ ಮೂಲಕ ಹಣವನ್ನು ಪಾವತಿಸಬೇಕು.
ಟಿಕೆಟ್ ದೃಢೀಕರಣ : ಟಿಕೆಟ್ ವಿವರಗಳೊಂದಿಗೆ ನೀವು ಇಮೇಲ್ ಅಥವಾ SMS ಮೂಲಕ ದೃಢೀಕರಣವನ್ನು ಸ್ವೀಕರಿಸುತ್ತೀರಿ.
ಆಫ್‌ಲೈನ್‌ನಲ್ಲಿ ಟಿಕೆಟ್‌ಗಳನ್ನು ಖರೀದಿಸುವುದು ಹೇಗೆ?
ಅನೇಕ ಅಭಿಮಾನಿಗಳು ಐಪಿಎಲ್ ಟಿಕೆಟ್‌ಗಳನ್ನು ಆನ್‌ಲೈನ್‌ನಲ್ಲಿ ಖರೀದಿಸುವ ಬದಲು ಆಫ್‌ಲೈನ್‌ನಲ್ಲಿ ಖರೀದಿಸಲು ಬಯಸುತ್ತಾರೆ, ಅಂದರೆ ನೇರವಾಗಿ ಹೋಗಿ ಖರೀದಿಸುತ್ತಾರೆ. ಅಂತಹವರಿಗೂ ಬಿಸಿಸಿಐ ವ್ಯವಸ್ಥೆಗಳನ್ನು ಮಾಡಿದ್ದು, ಆಫ್‌ಲೈನ್‌ನಲ್ಲಿ ಟಿಕೆಟ್‌ಗಳನ್ನು ಖರೀದಿಸುವವರು ಯಾವ ಪಂದ್ಯ ಯಾವ ಕ್ರೀಡಾಂಗಣದಲ್ಲಿ ನಡೆಯುತ್ತದೋ ಆ ಕ್ರೀಡಾಂಗಣಕ್ಕೆ ಹೋಗಿ ಸರತಿ ಸಾಲಿನಲ್ಲಿ ನಿಂತು ಟಿಕೆಟ್ ಖರೀದಿಸಬಹುದಾಗಿದೆ.
IPL 2025: ಐಪಿಎಲ್ ಆರಂಭಕ್ಕೂ ಮುನ್ನವೇ ಹೈವೋಲ್ಟೇಜ್ ಪಂದ್ಯ ಬೇರೆಡೆಗೆ ಶಿಫ್ಟ್..! ಕಾರಣವೇನು?
ಇದನ್ನು ಹೊರತುಪಡಿಸಿ, ಐಪಿಎಲ್ ಟಿಕೆಟ್‌ಗಳನ್ನು ಅಧಿಕೃತ ಮಾರಾಟ ಕೌಂಟರ್ಗಳ ಮೂಲಕ ಆಫ್‌ಲೈನ್‌ನಲ್ಲಿಯೂ ಖರೀದಿಸಬಹುದು. ಇದಕ್ಕಾಗಿ ವಿವಿಧ ನಗರಗಳಲ್ಲಿ ಟಿಕೆಟ್ ಮಾರಾಟ ಕೌಂಟರ್ಗಳನ್ನು ತೆರೆಯಲಾಗಿದೆ. ಈ ಮಳಿಗೆಗಳು ಟಿಕೆಟ್‌ಗಳನ್ನು ಮಾರಾಟ ಮಾಡಲು ಐಪಿಎಲ್‌ನಿಂದ ಅಧಿಕೃತವಾಗಿ ಮಾನ್ಯತೆ ಪಡೆದಿವೆ. ಹೀಗಾಗಿ ಅಭಿಮಾನಿಗಳು ಇಲ್ಲಿಂದಲೂ ಟಿಕೆಟ್ ಖರೀದಿಸಬಹುದು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:38 pm, Wed, 19 March 25