‘ಉತ್ತಮ ಭವಿಷ್ಯಕ್ಕಾಗಿ ಈ ನಿರ್ಧಾರ’; ಪಿಸಿಬಿ ನೋಟಿಸ್‌ಗೆ ಮಾರ್ಮಿಕ ಉತ್ತರ ನೀಡಿದ ಕಾರ್ಬಿನ್ ಬಾಷ್
Corbin Bosch Leaves PSL for Mumbai Indians: ದಕ್ಷಿಣ ಆಫ್ರಿಕಾ ಆಟಗಾರ ಕಾರ್ಬಿನ್ ಬಾಷ್, ಪಾಕಿಸ್ತಾನ ಸೂಪರ್ ಲೀಗ್ ತೊರೆದು ಪಿಎಲ್ ಸೇರಿದಕ್ಕೆ ಪಾಕ್ ಕ್ರಿಕೆಟ್ ಮಂಡಳಿ ಅವರಿಗೆ ನೋಟೀಸ್ ನೀಡಿತ್ತು. ಈ ನೋಟಿಸ್‌ಗೆ ಪ್ರತಿಕ್ರಿಯಿಸಿರುವ ಬಾಷ್, ಉತ್ತಮ ಭವಿಷ್ಯಕ್ಕಾಗಿ ಈ ನಿರ್ಧಾರ ತೆಗೆದುಕೊಂಡಿರುವುದಾಗಿ ತಿಳಿಸಿದ್ದಾರೆ. ಆದಾಗ್ಯೂ ಪಿಎಸ್ಎಲ್ ಫ್ರಾಂಚೈಸಿಗಳು ಬಾಷ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಪಿಸಿಬಿ ಮೇಲೆ ಒತ್ತಡ ಹೇರುತ್ತಿವೆ.

ಮುಂಬೈ ಇಂಡಿಯನ್ಸ್ (Mumbai Indians) ತಂಡದ ಆಫರ್ ಬಂದ ಕೂಡಲೇ ಪಾಕಿಸ್ತಾನ ಸೂಪರ್ ಲೀಗ್ (Pakistan Super League) ತೊರೆದು ಐಪಿಎಲ್ (IPL) ಕಡೆ ಮುಖಾ ಮಾಡಿದ್ದ ದಕ್ಷಿಣ ಆಫ್ರಿಕಾದ ಆಲ್‌ರೌಂಡರ್ ಕಾರ್ಬಿನ್ ಬಾಷ್ಗೆ, ಪಿಸಿಬಿ ನೋಟಿಸ್ ನೀಡಿತ್ತು. ಈ ನೋಟಿಸ್‌ಗೆ ಪ್ರತಿಕ್ರಿಯಿಸಿರುವ ಕಾರ್ಬಿನ್ ಬಾಷ್, ‘ಪಿಎಸ್‌ಎಲ್ ಅನ್ನು ಅಗೌರವಿಸುವ ಉದ್ದೇಶದಿಂದ ನಾನು ಈ ನಿರ್ಧಾರವನ್ನು ತೆಗೆದುಕೊಂಡಿಲ್ಲ. ಬದಲಿಗೆ ನನ್ನ ಮುಂದಿನ ಭವಿಷ್ಯಕ್ಕಾಗಿ ಉತ್ತಮ ನಿರ್ಧಾರ ತೆಗೆದುಕೊಳ್ಳಬೇಕಾಯಿತು ಎಂದಿದ್ದಾರೆ ಎಂದು ವರದಿಯಾಗಿದೆ.
ಭವಿಷ್ಯಕ್ಕಾಗಿ ಈ ನಿರ್ಧಾರ
ಜಿಯೋ ಸೂಪರ್ ವರದಿಯ ಪ್ರಕಾರ, ‘ಪೇಶಾವರ್ ಝಲ್ಮಿ ಮತ್ತು ಮುಂಬೈ ಇಂಡಿಯನ್ಸ್ ಎರಡೂ ತಂಡಗಳು ತನಗೆ ಬಹುತೇಕ ಸಮಾನ ವೇತನವನ್ನು ನೀಡಿದ್ದವು. ಪಾಕಿಸ್ತಾನ ಸೂಪರ್ ಲೀಗ್ನಲ್ಲಿ ಪೇಶಾವರ್ ಝಲ್ಮಿ ತಂಡ ನನಗೆ 50-75 ಲಕ್ಷ ರೂ. ವೇತನ ನೀಡಿತು. ಇತ್ತ ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ನನ್ನನ್ನು 75 ಲಕ್ಷ ರೂ. ನೀಡಿ ಖರೀದಿಸಿದೆ. ಆದಾಗ್ಯೂ, ಈ ಫ್ರ್ಯಾಂಚೈಸ್‌ಗೆ ಸೇರುವುದರಿಂದ ತನ್ನ ವೃತ್ತಿಜೀವನದಲ್ಲಿ ಹೊಸ ಅವಕಾಶಗಳು ತೆರೆದುಕೊಳ್ಳುತ್ತವೆ. ಹೀಗಾಗಿ ನಾನು ಐಪಿಎಲ್ಗೆ ಮನ್ನಣೆ ನೀಡಿದೆ ಎಂದು ಬಾಷ್ ಹೇಳಿದ್ದಾರೆ ಎಂಬುದಾಗಿ ವರದಿಯಾಗಿದೆ.
ಬಾಷ್ ವಿರುದ್ಧ ಪಿಸಿಬಿ ಕ್ರಮ?
ಪಿಎಸ್‌ಎಲ್ ಫ್ರಾಂಚೈಸಿಗಳು ಬಾಷ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಪಿಸಿಬಿ ಮೇಲೆ ಒತ್ತಡ ಹೇರಿವೆ. ಬಾಷ್ ಪಿಎಸ್‌ಎಲ್ ಅನ್ನು ಅವಮಾನಿಸಿದ್ದಾರೆ. ಹೀಗಾಗಿ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಫ್ರಾಂಚೈಸಿಗಳು ಒತ್ತಡ ಹೇರುತ್ತಿವೆ. ಐಪಿಎಲ್ ಆರಂಭಕ್ಕೂ ಮುಂಚಿತವಾಗಿ ತನ್ನ ಹೆಸರನ್ನು ಹಿಂತೆಗೆದುಕೊಂಡ ಹ್ಯಾರಿ ಬ್ರೂಕ್ ಅವರನ್ನು ಬಿಸಿಸಿಐ ನಿಷೇಧಿಸಿದಂತೆ, ಬಾಷ್ ಅವರನ್ನು ನಿಷೇಧಿಸಬೇಕು ಎಂಬುದು ಪಿಎಸ್ಎಲ್ ಫ್ರಾಂಚೈಸಿಗಳ ಆಗ್ರಹವಾಗಿದೆ. ಆದರೆ ಐಪಿಎಲ್ನಂತೆ ಪಿಎಸ್ಎಲ್‌ನಲ್ಲಿ ಬಾಷ್ ಅವರನ್ನು ನಿಷೇಧಿಸುವುದರಿಂದ ಇತರ ವಿದೇಶಿ ಆಟಗಾರರು ಪಿಎಸ್ಎಲ್‌ನಿಂದ ದೂರವಾಗಬಹುದು ಎಂಬ ಭಯ ಪಿಸಿಬಿಗೆ ಕಾಡಲಾರಂಭಿಸಿದೆ.
ಬಾಷ್ ನಿರ್ಧಾರದ ಹಿಂದಿರುವ ಮರ್ಮವೇನು?
ಕಾರ್ಬಿನ್ ಬಾಷ್ ಮುಂಬೈ ಇಂಡಿಯನ್ಸ್ ತಂಡವನ್ನು ಸೇರಿರುವ ನಿರ್ಧಾರವು ಅವರ ವೃತ್ತಿಜೀವನದಲ್ಲಿ ಒಂದು ಪ್ರಮುಖ ತಿರುವು ಎಂದೇ ಹೇಳಬಹುದು. ಮುಂಬೈ ಇಂಡಿಯನ್ಸ್ ಸೇರುವ ಮೂಲಕ, ಅವರು ಐಪಿಎಲ್‌ನಲ್ಲಿ ಮಾತ್ರವಲ್ಲದೆ ಇತರ ಲೀಗ್‌ಗಳಲ್ಲಿ ನಡೆಯುತ್ತಿರುವ ಮುಂಬೈನ ಇತರ ಫ್ರಾಂಚೈಸಿಗಳಲ್ಲಿಯೂ ಆಡಲು ಅವಕಾಶವನ್ನು ಪಡೆಯಬಹುದು.
IPL 2025: ಐಪಿಎಲ್ ಆರಂಭಕ್ಕೂ ಮುನ್ನವೇ ಹೈವೋಲ್ಟೇಜ್ ಪಂದ್ಯ ಬೇರೆಡೆಗೆ ಶಿಫ್ಟ್..! ಕಾರಣವೇನು?
ಕಾರ್ಬಿನ್ ಬಾಷ್ ವೃತ್ತಿಜೀವನ
ಕಾರ್ಬಿನ್ ಬಾಷ್ ವಿವಿಧ ಲೀಗ್‌ಗಳಲ್ಲಿ ಹಲವಾರು ಭಾರತೀಯ ಫ್ರಾಂಚೈಸಿಗಳಿಗಾಗಿ ಆಡುತ್ತಿದ್ದಾರೆ. MI ಕೇಪ್ ಟೌನ್, ಬಾರ್ಬಡೋಸ್ ರಾಯಲ್ಸ್, ಪಾರ್ಲ್ ರಾಯಲ್ಸ್ ಮತ್ತು ಪ್ರಿಟೋರಿಯಾ ಕ್ಯಾಪಿಟಲ್ಸ್ ಪರವೂ ಆಡಿದ್ದಾರೆ. ಇನ್ನು ವೃತ್ತಿಜೀವನದ ಬಗ್ಗೆ ಹೇಳುವುದಾದರೆ, ಅವರು ಟಿ20ಯಲ್ಲಿ 59 ವಿಕೆಟ್‌ಗಳನ್ನು ಪಡೆದಿರುವುದಲ್ಲದೆ, 2 ಅರ್ಧಶತಕಗಳ ಸಹಾಯದಿಂದ 663 ರನ್ಗಳನ್ನು ಕಲೆಹಾಕಿದ್ದಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ