Virat Kohli: ಮೊದಲ ಪಂದ್ಯದಲ್ಲೇ 5 ಭರ್ಜರಿ ದಾಖಲೆ ಬರೆದ ವಿರಾಟ್ ಕೊಹ್ಲಿ

|

Updated on: Mar 23, 2025 | 1:54 PM

Virat Kohli Records: IPL 2025 ರ ಮೊದಲ ಪಂದ್ಯದಲ್ಲಿ ಕೆಕೆಆರ್ ನೀಡಿದ 175 ರನ್​ಗಳ ಗುರಿಯನ್ನು ಆರ್​ಸಿಬಿ 16.2 ಓವರ್​ಗಳಲ್ಲಿ ಚೇಸ್ ಮಾಡಿ 7 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಆರಂಭಿಕನಾಗಿ ಕಣಕ್ಕಿಳಿದ ವಿರಾಟ್ ಕೊಹ್ಲಿ 36 ಎಸೆತಗಳಲ್ಲಿ ಅಜೇಯ 59 ರನ್ ಬಾರಿಸಿದ್ದರು. ಈ 59 ರನ್​ಗಳೊಂದಿಗೆ ಕಿಂಗ್ ಕೊಹ್ಲಿ ಹಲವು ದಾಖಲೆಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.

Virat Kohli: ಮೊದಲ ಪಂದ್ಯದಲ್ಲೇ 5 ಭರ್ಜರಿ ದಾಖಲೆ ಬರೆದ ವಿರಾಟ್ ಕೊಹ್ಲಿ
Virat Kohli
Follow us on

IPL 2025: ಇಂಡಿಯನ್ ಪ್ರೀಮಿಯರ್ ಲೀಗ್​ ಸೀಸನ್-18ರ ಮೊದಲ ಪಂದ್ಯದಲ್ಲೇ ದಾಖಲೆಗಳ ಸರದಾರ ವಿರಾಟ್ ಕೊಹ್ಲಿ (Virat Kohli) 5 ಭರ್ಜರಿ ದಾಖಲೆಗಳನ್ನು ಬರೆದಿದ್ದಾರೆ. ಅದು ಸಹ ಆಕರ್ಷಕ ಅರ್ಧಶತಕ ಸಿಡಿಸುವ ಮೂಲಕ ಎಂಬುದು ವಿಶೇಷ. ಕೊಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಕೆಕೆಆರ್ ತಂಡವು 20 ಓವರ್​ಗಳಲ್ಲಿ 8 ವಿಕೆಟ್ ಕಳೆದುಕೊಂಡು 174 ರನ್ ಕಲೆಹಾಕಿತು.

175 ರನ್​ಗಳ ಗುರಿಯನ್ನು ಬೆನ್ನತ್ತಿದ ಆರ್​​ಸಿಬಿ ಪರ ಫಿಲ್ ಸಾಲ್ಟ್ (56) ಹಾಗೂ ವಿರಾಟ್ ಕೊಹ್ಲಿ ಅರ್ಧಶತಕ ಬಾರಿಸಿ ಮಿಂಚಿದ್ದರು. ಅದರಲ್ಲೂ 36 ಎಸೆತಗಳನ್ನು ಎದುರಿಸಿದ ಕಿಂಗ್ ಕೊಹ್ಲಿ 3 ಸಿಕ್ಸ್ ಹಾಗೂ 4 ಫೋರ್​ಗಳೊಂದಿಗೆ ಅಜೇಯ 59 ರನ್ ಬಾರಿಸಿದರು. ಈ 59 ರನ್​ಗಳೊಂದಿಗೆ ಕೊಹ್ಲಿ ಹಲವು ದಾಖಲೆ ಬರೆದರು. ಆ ದಾಖಲೆಗಳ ಸಂಪೂರ್ಣ ಮಾಹಿತಿ ಈ ಕೆಳಗಿನಂತಿದೆ…

  1. 1000 ರನ್ ಸರದಾರ: ಐಪಿಎಲ್ ಇತಿಹಾಸದಲ್ಲಿ 4 ತಂಡಗಳ ವಿರುದ್ಧ 1000+ ರನ್​ ಕಲೆಹಾಕಿದ ಏಕೈಕ ಬ್ಯಾಟರ್ ಎಂಬ ಹೆಗ್ಗಳಿಕೆಯನ್ನು ವಿರಾಟ್ ಕೊಹ್ಲಿ ತಮ್ಮದಾಗಿಸಿಕೊಂಡಿದ್ದಾರೆ. ಕೊಹ್ಲಿ, ಚೆನ್ನೈ ಸೂಪರ್ ಕಿಂಗ್ಸ್ (1053), ಡೆಲ್ಲಿ ಕ್ಯಾಪಿಟಲ್ಸ್ (1057) ಮತ್ತು ಪಂಜಾಬ್ ಕಿಂಗ್ಸ್ (1030) ಮತ್ತು ಕೊಲ್ಕತ್ತಾ ನೈಟ್ ರೈಡರ್ಸ್ (1021) ವಿರುದ್ಧ ಈ ಸಾಧನೆ ಮಾಡಿದ್ದಾರೆ.
  2. ಅತ್ಯಧಿಕ ಅರ್ಧಶತಕ: ಐಪಿಎಲ್ ಇತಿಹಾಸದಲ್ಲಿ ಅತೀ ಹೆಚ್ಚು ಅರ್ಧಶತಕ ಬಾರಿಸಿದ ಬ್ಯಾಟರ್​ಗಳ ಪಟ್ಟಿಯಲ್ಲಿ ಕೊಹ್ಲಿ 2ನೇ ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಪಟ್ಟಿಯಲ್ಲಿ ಡೇವಿಡ್ ವಾರ್ನರ್ (66) ಮೊದಲ ಸ್ಥಾನದಲ್ಲಿದ್ದರೆ, ಇದೀಗ 64 ಅರ್ಧಶತಕಗಳೊಂದಿಗೆ ವಿರಾಟ್ ಕೊಹ್ಲಿ ದ್ವಿತೀಯ ಸ್ಥಾನಕ್ಕೇರಿದ್ದಾರೆ.
  3. ಇದನ್ನೂ ಓದಿ
    RCBಯಲ್ಲಿ ಬ್ರಿಟಿಷ್ ಪಡೆ... ಸೋತು ಸುಣ್ಣವಾಗಲಿದೆ ಎಂದ ಗಿಲ್​ಕ್ರಿಸ್ಟ್
    IPL 2025: ಐಪಿಎಲ್​ ಕಣದಲ್ಲಿದ್ದಾರೆ 13 ಕನ್ನಡಿಗರು
    IPL 2025: ಬ್ಯಾನ್ ಬ್ಯಾನ್ ಬ್ಯಾನ್... ಐಪಿಎಲ್ ಆಟಗಾರರಿಗೆ ಬ್ಯಾನ್ ಭೀತಿ
    IPL 2025: ಐಪಿಎಲ್​ನಲ್ಲಿ 10 ನಿಮಯಗಳು ಬದಲಾವಣೆ
  4. ಕೆಕೆಆರ್ ವಿರುದ್ಧ ದರ್ಬಾರ್: ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ಕೆಕೆಆರ್ ವಿರುದ್ಧ 1000 ರನ್ ಕಲೆಹಾಕಿದ ಮೂರನೇ ಬ್ಯಾಟರ್ ಎನಿಸಿಕೊಂಡಿದ್ದಾರೆ. ವಿರಾಟ್ ಕೊಹ್ಲಿಗೂ ಮುನ್ನ ರೋಹಿತ್ ಶರ್ಮಾ (1070) ಮತ್ತು ಡೇವಿಡ್ ವಾರ್ನರ್ (1093) ಮಾತ್ರ ಈ ಸಾಧನೆ ಮಾಡಿದ್ದರು.
  5. 400 ಟಿ20 ಪಂದ್ಯಗಳು: ಟಿ20 ಕ್ರಿಕೆಟ್​ನಲ್ಲಿ 400 ಪಂದ್ಯಗಳನ್ನಾಡಿದ ಮೂರನೇ ಭಾರತೀಯ ಎಂಬ ಹೆಗ್ಗಳಿಕೆಗೂ ವಿರಾಟ್ ಕೊಹ್ಲಿ ಪಾತ್ರರಾಗಿದ್ದಾರೆ. ಕೊಹ್ಲಿಗೂ ಮುನ್ನ ರೋಹಿತ್ ಶರ್ಮಾ (448) ಹಾಗೂ ದಿನೇಶ್ ಕಾರ್ತಿಕ್ (412) ಮಾತ್ರ ನಾನ್ನೂರು ಪಂದ್ಯಗಳನ್ನಾಡಿದ್ದರು.
  6. ನಾನೂರನೇ ಪಂದ್ಯದಲ್ಲಿ ಮಿಂಚಿಂಗ್: 400ನೇ ಟಿ20 ಪಂದ್ಯದಲ್ಲಿ ಅರ್ಧಶತಕ ಬಾರಿಸಿದ ಭಾರತದ ಮೊದಲ ಬ್ಯಾಟರ್ ಎಂಬ ಹೆಗ್ಗಳಿಕೆಯನ್ನು ಸಹ ವಿರಾಟ್ ಕೊಹ್ಲಿ ತಮ್ಮದಾಗಿಸಿಕೊಂಡಿದ್ದಾರೆ.

ಇದನ್ನೂ ಓದಿ: VIDEO: ಅವನು ನನ್ನ ಫ್ಯಾನ್, ಏನೂ ಮಾಡ್ಬೇಡಿ… ಅಭಿಮಾನಿಯ ಬೆಂಬಲಕ್ಕೆ ನಿಂತ ವಿರಾಟ್ ಕೊಹ್ಲಿ

ಒಟ್ಟಿನಲ್ಲಿ ಐಪಿಎಲ್ ಸೀಸನ್-18ರ ಮೊದಲ ಪಂದ್ಯದಲ್ಲೇ ಆಕರ್ಷಕ ಬ್ಯಾಟಿಂಗ್ ಪ್ರದರ್ಶಿಸಿ ವಿರಾಟ್ ಕೊಹ್ಲಿ ಐದು ದಾಖಲೆಗಳನ್ನು ತಮ್ಮದಾಗಿಸಿಕೊಂಡಿದ್ದು, ಮುಂಬರುವ ಪಂದ್ಯಗಳ ಮೂಲಕ ಮತ್ತಷ್ಟು ರೆಕಾರ್ಡ್​ಗಳನ್ನು ನಿರ್ಮಿಸುವ ನಿರೀಕ್ಷೆಯಿದೆ.