RCB ಫ್ಯಾನ್ಸ್ ಗೆ ಶುಭ ಸುದ್ದಿ: ಚಿನ್ನಸ್ವಾಮಿ ಸ್ಟೇಡಿಯಂಗೆ ಅಂಟಿದ್ದ ಸೂತಕ ಕೊನೆಗೂ ನಿವಾರಣೆ

ಘೋರ ದುರಂತ ಅದು. 12 ವರ್ಷಗಳ ನಂತರ ಐಪಿಎಲ್ ಗೆದ್ದ ಸಂಭ್ರಮದಲ್ಲಿದ್ದ ಅಭಿಮಾನಿಗಳಿಗೆ ಘೋರಾತಿ ಘೋರ ಕಾಲ್ತುಳಿತಕ್ಕೆ ಬೀದಿ ಹೆಣವಾಗಿದ್ದರು. ಒಂದಲ್ಲ ಎರಡಲ್ಲ, ಬರೋಬ್ಬರಿ 11 ಜನ ಆರ್ ಸಿ ಬಿ ಸಂಭ್ರಮಾಚರಣೆಯ ದಿನವೇ ಜೀವ ಬಿಟ್ಟಿದ್ದರು. ಅಂದು ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಅಂಟಿದ ಸೂತಕ, ಇವತ್ತು ನಿವಾರಣೆ ಆಗಿದೆ. ರಾಜ್ಯ ಸರ್ಕಾರ ಅಧಿಕೃತ ವಾಗಿ ಚಿನ್ನಸ್ವಾಮಿಯಲ್ಲಿ ಐಪಿಎಲ್ ಆಡುವುದಕ್ಕೆ ಅನುಮತಿಯ ಮುದ್ರೆ ಒತ್ತಿದೆ.

RCB ಫ್ಯಾನ್ಸ್ ಗೆ ಶುಭ ಸುದ್ದಿ: ಚಿನ್ನಸ್ವಾಮಿ ಸ್ಟೇಡಿಯಂಗೆ ಅಂಟಿದ್ದ ಸೂತಕ ಕೊನೆಗೂ ನಿವಾರಣೆ
Rcb

Updated on: Mar 16, 2026 | 9:44 PM

ಮಾರ್ಚ್ 28ರಿಂದಲೇ ಐಪಿಎಲ್-2026 (IPL 2026)​ ಶುರುವಾಗಲಿದೆ. ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ (Chinnaswamy Stadium) ಉದ್ಘಾಟನಾ ಪಂದ್ಯ ನಡೆಯಲಿದೆ. ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಸನ್ ರೈಸರ್ಸ್​​ ಹೈದರಾಬಾದ್ ನಡುವೆ ಓಪನಿಂಗ್ ಮ್ಯಾಚ್ ನಡೆಯಲಿದೆ. ಆದ್ರೆ ಇದು ಕನ್ಫರ್ಮ್ ಆಗಿರಲಿಲ್ಲ. ಯಾಕಂದ್ರೆ ರಾಜ್ಯ ಸರ್ಕಾರ ಇದೂವರೆಗೂ ಚಿನ್ನಸ್ವಾಮಿಯಲ್ಲಿ ಐಪಿಎಲ್ ಗೆ ಅನುಮತಿ ನೀಡಿರಲಿಲ್ಲ. ಆದ್ರೆ, ಇಂದು (ಮಾರ್ಚ್ 16) ಬರೋಬ್ಬರಿ 10 ತಿಂಗಳ ಬಳಿಕ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್ ಆಡುವುದಕ್ಕೆ ಸರ್ಕಾರ (Karnataka government )ಗ್ರೀನ್ ಸಿಗ್ನಲ್ ನೀಡಿದೆ. ಇದರೊಂದಿಗೆ ಇಷ್ಟು ದಿನ ಇದ್ದ ಅಡೆತಡೆಗಳು ಕೊನೆಗೂ ದೂರ ಆಗಿವೆ.

ಕೆಎಸ್ಸಿಗೆ ಸರ್ಕಾರದ ಸಲಹೆ

ಗೃಹ ಸಚಿವ ಪರಮೇಶ್ವರ್ ನೇತೃತ್ವದಲ್ಲಿ ಇಂದು (ಮಾರ್ಚ್ 16) ರಾಜ್ಯ ಸರ್ಕಾರ ರಚಿಸಿದ್ದ ತಜ್ಞರ ಸಮಿತಿ, ಪೊಲೀಸ್ ಇಲಾಖೆ, ಮತ್ತು ಕೆಎಸ್‌ಸಿಎ ಪದಾಧಿಕಾರಿಗಳ ಜೊತೆ ಸಭೆ ಮಾಡಿದ್ದು, ಕೆಎಸ್ಸಿಗೆ ಕೆಲಸ ಸಲಹೆ ಸೂಚನೆಗಳನ್ನು ನೀಡಲಾಗಿದೆ. ಚಿನ್ನಸ್ವಾಮಿಯಲ್ಲಿ ಮುಖ್ಯವಾಗಿ ಸುರಕ್ಷತೆ ಇರಬೇಕು, ತಜ್ಞರ ತಂಡ ನೀಡಿದ್ದ ವರದಿಯಂತೆ ಎಲ್ಲಾ ನಿಯಮ ಪಾಲಿಸಬೇಕು, ಗೇಟ್ ದೊಡ್ಡದು ಇರಲಿ,  ಆ್ಯಂಬುಲೆನ್ಸ್ ಇರಬೇಕು, ಫೈರ್ ವಾಹನ ಇರಬೇಕು, ನೀರಿನ ವ್ಯವಸ್ಥೆ ಇರಬೇಕು. ಹೀಗೆ  ಕೆಎಸ್​​ಸಿಎಗೆ ಹತ್ತು ಹಲವು ಸಲಹೆಗಳನ್ನು ನೀಡಲಾಗಿದೆ.

ಇದನ್ನೂ ಓದಿ: IPL 2026: ಇಲ್ಲಿದೆ ಆರ್ ಸಿಬಿ ಪಂದ್ಯಗಳ ವೇಳಾಪಟ್ಟಿ, ಸೇವ್ ಮಾಡಿಟ್ಟುಕೊಳ್ಳಿ

RCBಯ 5 ಪಂದ್ಯಗಳ ಜತೆ ಪ್ಲೇ ಆಫ್‌ -ಸಮಿಸ್

ವಿಶ್ವದ ಅತೀ ದೊಡ್ಡ ಟೂರ್ನಮೆಂಟ್, ಈ ಬಾರಿ ಆರ್ ಸಿಬಿ ಅಭಿಮಾನಿಗಳಿಗೆ ನಿರಾಸೆ ಮೂಡಿಸಿತ್ತು. ಯಾಕಂದ್ರೆ ಹೋಮ್ ಪಂದ್ಯಗಳಲ್ಲಿ ಕೇವಲ 5 ಪಂದ್ಯ ಮಾತ್ರ ಬೆಂಗಳೂರಿನಲ್ಲಿ ಆಡಿಸಲು ಆರ್ ಸಿಬಿ ಮ್ಯಾನೇಜ್ಮೆಂಟ್ ತಿಳಿಸಿತ್ತು. ಆದ್ರೆ ಬಿಸಿಸಿಐ ಮಾತ್ರ ಫ್ಯಾನ್ಸ್ ಶುಭ ಸುದ್ದಿ ನೀಡಿದೆಯಂತೆ. ಆರ್ ಸಿಬಿಯ 5 ಪಂದ್ಯದ ಜತೆ ಒಂದು ಪ್ಲೇ ಆಫ್ ಪಂದ್ಯ ಮತ್ತು ಸೆಮಿ ಫೈನಲ್ ಮ್ಯಾಚ್ ಸಹ ಬೆಂಗಳೂರಿನಲ್ಲಿ ನಡೆಸಲು ತೀರ್ಮಾನಿಸಲಾಗಿದೆಯಂತೆ.

ಇನ್ನಷ್ಟು ಕ್ರಿಕೆಟ್ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

ರಮೇಶ್ ಬಿ. ಜವಳಗೇರಾ

ಟಿವಿ9 ಕನ್ನಡದಲ್ಲಿ ಹಿರಿಯ ಉಪ ಸಂಪಾದಕ. ಕಳೆದ 07 ವರ್ಷಗಳಿಂದ ಮಾಧ್ಯಮ ಪ್ರಪಂಚದಲ್ಲಿದ್ದೇನೆ. ಹುಟ್ಟಿ ಬೆಳೆದದ್ದು, ರಾಯಚೂರು ಜಿಲ್ಲೆಯ ಸಿಂಧನೂರಿನ ಜವಳಗೇರಾದಲ್ಲಿ. ಗುಲ್ಬರ್ಗಾ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಪದವಿ ಪಡೆದಿದ್ದೇನೆ. ನನ್ನ ವೃತ್ತಿ ಆರಂಭವಾಗಿದ್ದೇ ಡಿಜಿಟಲ್​ ಮಾಧ್ಯಮದಿಂದ. ಒನ್​ ಇಂಡಿಯಾ ಕನ್ನಡ, ಏಷ್ಯಾನೆಟ್ ಸುವರ್ಣ ನ್ಯೂಸ್.ಕಾಂನಲ್ಲಿ ಕೆಲಸ ಮಾಡಿದ್ದೇನೆ. ಕ್ರೈಂ, ರಾಜಕೀಯ ಹಾಗೂ ಪ್ರಚಲಿತ ಸುದ್ದಿ ಬಗ್ಗೆ ಆಸಕ್ತಿ. ಪ್ರವಾಸ ಮಾಡುವುದು, ಸಂಗೀತ ಕೇಳುವುದು ನನ್ನ ಹವ್ಯಾಸಗಳು.

Read More
Follow Us