AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದಿ ಹಂಡ್ರೆಡ್ ಲೀಗ್​ನಿಂದ ಜೇಕಬ್ ಬೆಥೆಲ್ ಔಟ್

THE Hundred 2026: ದಿ ಹಂಡ್ರೆಡ್ ಲೀಗ್ ಶುರುವಾಗಿದ್ದು 2021 ರಲ್ಲಿ. ಈವರೆಗೆ ಐದು ಸೀಸನ್ ಆಡಲಾಗಿದೆ. ಮೊದಲ ಸೀಸನ್​ನಲ್ಲಿ ಸದರ್ನ್ ಬ್ರೇವ್ ಚಾಂಪಿಯನ್ ಪಟ್ಟ ಅಲಂಕರಿಸಿದರೆ, ದ್ವಿತೀಯ ಸೀಸನ್​ನಲ್ಲಿ ಟ್ರೆಂಟ್ ರಾಕೆಟ್ಸ್ ಕಿರೀಟ ಮುಡಿಗೇರಿಸಿಕೊಂಡಿತ್ತು. ಇನ್ನು 2023, 2024 ಮತ್ತು 2025 ರಲ್ಲಿ ಓವಲ್ ಇನ್ವಿನ್ಸಿಬಲ್ಸ್ ತಂಡ ಚಾಂಪಿಯನ್ ಪಟ್ಟಕ್ಕೇರಿದ್ದರು. ಇದೀಗ ದಿ ಹಂಡ್ರೆಡ್ ಲೀಗ್​ನ 6ನೇ ಸೀಸನ್ ಶುರುವಾಗಿದೆ.

ದಿ ಹಂಡ್ರೆಡ್ ಲೀಗ್​ನಿಂದ ಜೇಕಬ್ ಬೆಥೆಲ್ ಔಟ್
Jacob Bethell
ಝಾಹಿರ್ ಯೂಸುಫ್
|

Updated on: Jul 22, 2026 | 7:28 AM

Share

ಇಂಗ್ಲೆಂಡ್ ತಂಡದ ಉದಯೋನ್ಮುಖ ಆಲ್‌ರೌಂಡರ್ ಜೇಕಬ್ ಬೆಥೆಲ್ ಬಲ ಮೊಣಕಾಲಿನ ಗಾಯದ  ಕಾರಣದಿಂದಾಗಿ 2026ರ ‘ದಿ ಹಂಡ್ರೆಡ್’ ಕ್ರಿಕೆಟ್ ಟೂರ್ನಿಯಿಂದ ಹೊರಗುಳಿದಿದ್ದಾರೆ. ಈ ವರ್ಷದ ಟೂರ್ನಿಯಲ್ಲಿ ಬರ್ಮಿಂಗ್​ಹ್ಯಾಮ್​ ಫೀನಿಕ್ಸ್ ತಂಡವನ್ನು ಮುನ್ನಡೆಸಬೇಕಾಗಿದ್ದ ಬೆಥೆಲ್ ಅವರ ಅನುಪಸ್ಥಿತಿ, ಟೂರ್ನಿ ಆರಂಭಕ್ಕೂ ಮುನ್ನವೇ ಫ್ರಾಂಚೈಸಿಗೆ ದೊಡ್ಡ ಹಿನ್ನಡೆಯನ್ನುಂಟು ಮಾಡಿದೆ.

ಗಾಯದ ಹಿನ್ನಲೆ:

ಭಾರತದ ವಿರುದ್ಧ ಇತ್ತೀಚೆಗಷ್ಟೇ ಮುಕ್ತಾಯಗೊಂಡ ಏಕದಿನ ಸರಣಿಯ ವೇಳೆ ಜೇಕಬ್ ಬೆಥೆಲ್ ಗಾಯಗೊಂಡಿದ್ದರು. ಸರಣಿಯ ಅಂತಿಮ ಪಂದ್ಯದಲ್ಲಿ 91 ರನ್ ಬಾರಿಸಿ ಹಾಗೂ 1 ವಿಕೆಟ್ ಪಡೆದು ‘ಪ್ಲೇಯರ್ ಆಫ್ ದಿ ಮ್ಯಾಚ್’ ಪ್ರಶಸ್ತಿ ಗೆದ್ದಿದ್ದ ಬೆಥೆಲ್, ಆ ಪಂದ್ಯದ ಬಳಿಕ ತೀವ್ರ ನೋವಿನಿಂದ ಬಳಲುತ್ತಿದ್ದರು. ಹೀಗಾಗಿ ಅವರು ಎಂಆರ್​ಐ ಸ್ಕ್ಯಾನಿಂಗ್​ಗೆ ಒಳಗಾಗಿದ್ದರು. ಎಂಆರ್‌ಐ ಸ್ಕ್ಯಾನಿಂಗ್ ವರದಿಯಲ್ಲಿ ಗಾಯದ ತೀವ್ರತೆ ಹೆಚ್ಚಿರುವುದು ದೃಢಪಟ್ಟ ಹಿನ್ನೆಲೆಯಲ್ಲಿ ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ  ಅವರಿಗೆ ವಿಶ್ರಾಂತಿ ಪಡೆಯಲು ಸೂಚಿಸಿದೆ.

ಬರ್ಮಿಂಗ್​ಹ್ಯಾಮ್​ ಫೀನಿಕ್ಸ್ ತಂಡಕ್ಕೆ ಹಿನ್ನಡೆ:

  • ಭಾರಿ ಮೊತ್ತದ ಒಪ್ಪಂದ: ಬರ್ಮಿಂಗ್​ಹ್ಯಾಮ್ ಫೀನಿಕ್ಸ್ ಫ್ರಾಂಚೈಸಿಯು ಜೇಕಬ್ ಬೆಥೆಲ್ ಅವರನ್ನು ಬರೋಬ್ಬರಿ £340,000 (ಸುಮಾರು 3.6 ಕೋಟಿ ರೂ.) ಭಾರಿ ಮೊತ್ತಕ್ಕೆ ತಂಡದಲ್ಲೇ ಉಳಿಸಿಕೊಂಡಿತ್ತು.
  • ನಾಯಕತ್ವದ ಜವಾಬ್ದಾರಿ: ಕೇವಲ 22 ವರ್ಷದ ಬೆಥೆಲ್ ಅವರನ್ನು ಈ ಸೀಸನ್‌ನ ನಾಯಕನನ್ನಾಗಿ ನೇಮಿಸಲಾಗಿತ್ತು. ಆದರೆ ಪಂದ್ಯಾವಳಿ ಆರಂಭಕ್ಕೆ ಕೆಲವೇ ದಿನಗಳು ಬಾಕಿ ಇರುವಾಗ ಅವರು ಹೊರಬಿದ್ದಿರುವುದು ತಂಡದ ಯೋಜನೆಗಳನ್ನು ತಲೆಕೆಳಗಾಗಿಸಿದೆ.

ಹೊಸ ನಾಯಕ ಯಾರು?

ಜೇಕಬ್ ಬೆಥೆಲ್ ಅಲಭ್ಯತೆಯಿಂದಾಗಿ ಬರ್ಮಿಂಗ್​​ಹ್ಯಾಮ್ ಫೀನಿಕ್ಸ್​ ಮ್ಯಾನೇಜ್‌ಮೆಂಟ್, ಸೌತ್ ಆಫ್ರಿಕಾದ ಅನುಭವಿ ಆಲ್‌ರೌಂಡರ್ ಡೊನೊವನ್ ಫೆರೇರಾ ಅವರನ್ನು ನೂತನ ನಾಯಕನನ್ನಾಗಿ ಘೋಷಿಸಿದೆ. ಫೆರೇರಾ ಈ ಹಿಂದೆ ಓವಲ್ ಇನ್ವಿಸಿಬಲ್ಸ್ ತಂಡದ ಪರ ಆಡಿ ಎರಡು ಬಾರಿ ‘ದಿ ಹಂಡ್ರೆಡ್’ ಪ್ರಶಸ್ತಿ ಗೆದ್ದ ಅನುಭವ ಹೊಂದಿದ್ದಾರೆ. ಇದೀಗ ಬರ್ಮಿಂಗ್​​ಹ್ಯಾಮ್ ಫೀನಿಕ್ಸ್ ಪರ ನಾಯಕನಾಗಿ ಹೊಸ ಇನಿಂಗ್ಸ್ ಆರಂಭಿಸಲಿದ್ದಾರೆ.

ಇದನ್ನೂ ಓದಿ: ಓವರ್ ಇಲ್ಲ, ಸೂಪರ್ ಫೈವ್, ಬೋನಸ್ ರನ್: ದಿ ಹಂಡ್ರೆಡ್ ಲೀಗ್ ಹೊಸ ನಿಯಮ

ಬರ್ಮಿಂಗ್​ಹ್ಯಾಮ್ ಫೀನಿಕ್ಸ್ ತಂಡ: ಡೊನೊವನ್ ಫೆರೇರಾ (ನಾಯಕ), ರೆಹಾನ್ ಅಹ್ಮದ್, ಮಿಚೆಲ್ ಓವನ್, ಜೋ ಕ್ಲಾರ್ಕ್, ಸಾಕಿಬ್ ಮಹಮೂದ್, ಉಸ್ಮಾನ್ ತಾರಿಖ್, ವಿಲ್ ಸ್ಮೀಡ್, ಜೋರ್ಡನ್ ಥಾಂಪ್ಸನ್, ಸ್ಕಾಟ್ ಕ್ಯೂರಿ, ಲಾರಿ ಇವಾನ್ಸ್, ಕ್ರಿಸ್ ವುಡ್, ಎಥಾನ್ ಬ್ರೂಕ್ಸ್, ಮುಸ್ತಾಫಿಝುರ್ ರೆಹಮಾನ್.

Follow Us
ಝಾಹಿರ್ ಯೂಸುಫ್
ಝಾಹಿರ್ ಯೂಸುಫ್

ಟಿವಿ9 ಡಿಜಿಟಲ್ ಮುಖ್ಯ ಉಪ ಸಂಪಾದಕ. 10 ವರ್ಷಗಳಿಂದ ಕನ್ನಡ ಡಿಜಿಟಲ್​ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್​​ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.

Read More
ಕಬ್ಬು ಬೆಳೆಗಾರರ ಪ್ರತಿಭಟನೆ: ಹಿರೇಬಾಗೇವಾಡಿ ಟೋಲ್​​ ಬಂದ್ ಮಾಡಿ ಆಕ್ರೋಶ
ಕಬ್ಬು ಬೆಳೆಗಾರರ ಪ್ರತಿಭಟನೆ: ಹಿರೇಬಾಗೇವಾಡಿ ಟೋಲ್​​ ಬಂದ್ ಮಾಡಿ ಆಕ್ರೋಶ
ಹಿರಿಯ IPS ಅಧಿಕಾರಿ ಎಸ್.ರವಿ ರಾಜೀನಾಮೆ: ಕಾರಣ ಇಲ್ಲಿದೆ
ಹಿರಿಯ IPS ಅಧಿಕಾರಿ ಎಸ್.ರವಿ ರಾಜೀನಾಮೆ: ಕಾರಣ ಇಲ್ಲಿದೆ
ಗಜೇಂದ್ರಗಡ: ಹೈಟೆಕ್ ಅಗ್ನಿಶಾಮಕ ಠಾಣೆ ಇದ್ದರೂ ಸಿಬ್ಬಂದಿ ಇಲ್ಲದೆ ವ್ಯರ್ಥ!
ಗಜೇಂದ್ರಗಡ: ಹೈಟೆಕ್ ಅಗ್ನಿಶಾಮಕ ಠಾಣೆ ಇದ್ದರೂ ಸಿಬ್ಬಂದಿ ಇಲ್ಲದೆ ವ್ಯರ್ಥ!
ಭಾರತ ಪ್ರಜಾತಂತ್ರದ ತಾಯಿ: ಬ್ಲೂಮ್​ಬರ್ಗ್ ಫೋರಂನಲ್ಲಿ ನರೇಂದ್ರ ಮೋದಿ
ಭಾರತ ಪ್ರಜಾತಂತ್ರದ ತಾಯಿ: ಬ್ಲೂಮ್​ಬರ್ಗ್ ಫೋರಂನಲ್ಲಿ ನರೇಂದ್ರ ಮೋದಿ
ಇಂಡಿಯಾ- ವೆಸ್ಟ್ ಇಂಡೀಸ್ ಪಂದ್ಯಕ್ಕೆ  ಡಿಸಿಎಂಗೆ ವೆಂಕಟೇಶ್ ಪ್ರಸಾದ್ ಆಹ್ವಾನ
ಇಂಡಿಯಾ- ವೆಸ್ಟ್ ಇಂಡೀಸ್ ಪಂದ್ಯಕ್ಕೆ  ಡಿಸಿಎಂಗೆ ವೆಂಕಟೇಶ್ ಪ್ರಸಾದ್ ಆಹ್ವಾನ
ಸರ್ಕಾರ ನಿಮ್ಮೊಂದಿಗಿದೆ ಪ್ರತಿಭಟನೆ ಕೈಬಿಡಿ ಎಂದು ರೈತರಿಗೆ ಜೋಶಿ ಮನವಿ!
ಸರ್ಕಾರ ನಿಮ್ಮೊಂದಿಗಿದೆ ಪ್ರತಿಭಟನೆ ಕೈಬಿಡಿ ಎಂದು ರೈತರಿಗೆ ಜೋಶಿ ಮನವಿ!
ಹೈಕಮಾಂಡ್ ತಲುಪಿದ ಸ್ಟಿಂಗ್ ವಿಚಾರ: ಕ್ಯಾಬಿನೆಟ್ ಪ್ರಸ್ತಾಪಕ್ಕೆ ಗರಂ
ಹೈಕಮಾಂಡ್ ತಲುಪಿದ ಸ್ಟಿಂಗ್ ವಿಚಾರ: ಕ್ಯಾಬಿನೆಟ್ ಪ್ರಸ್ತಾಪಕ್ಕೆ ಗರಂ
ಹುನಗುಂದದಲ್ಲಿ ರೈತರ ಪ್ರತಿಭಟನೆ: ರಾಯಚೂರು-ಸೊಲ್ಲಾಪುರ ಹೆದ್ದಾರಿ ಬಂದ್
ಹುನಗುಂದದಲ್ಲಿ ರೈತರ ಪ್ರತಿಭಟನೆ: ರಾಯಚೂರು-ಸೊಲ್ಲಾಪುರ ಹೆದ್ದಾರಿ ಬಂದ್
ರಾಹುಲ್ ಗಾಂಧಿ ನಿವಾಸದಲ್ಲಿ ವಿಪಕ್ಷ ನಾಯಕರ ಹೈ-ಟೀ
ರಾಹುಲ್ ಗಾಂಧಿ ನಿವಾಸದಲ್ಲಿ ವಿಪಕ್ಷ ನಾಯಕರ ಹೈ-ಟೀ
ಕ್ಯಾಪ್ಟನ್ ಟೀಕಿಸಿದ ತಂಡವನ್ನೇ ಆಯ್ಕೆ ಮಾಡಿಕೊಂಡ ಕುಮಾರಿ
ಕ್ಯಾಪ್ಟನ್ ಟೀಕಿಸಿದ ತಂಡವನ್ನೇ ಆಯ್ಕೆ ಮಾಡಿಕೊಂಡ ಕುಮಾರಿ