Karun Nair: ಕರುಣ್ ನಾಯರ್​ನಿಂದ ಒಂದಲ್ಲ ಎರಡು ಕ್ಯಾಚ್ ಡ್ರಾಪ್: ಕೆಎಲ್ ರಾಹುಲ್ ಸ್ಫೋಟಕ ಆಟ ವ್ಯರ್ಥ

DC vs PBKS, IPL 2026: ಐಪಿಎಲ್ 2026 ರಲ್ಲಿ ನಡೆದ 35ನೇ ಪಂದ್ಯದಲ್ಲಿ ಕರುಣ್ ನಾಯರ್ ಅವರು ಶ್ರೇಯಸ್ ಅಯ್ಯರ್ ಅವರ ಎರಡು ಸುಲಭ ಕ್ಯಾಚ್‌ಗಳನ್ನು ಕೈಬಿಟ್ಟಿದ್ದು ಡೆಲ್ಲಿ ಕ್ಯಾಪಿಟಲ್ಸ್‌ಗೆ ಮಹತ್ವದ ತಿರುವು ನೀಡಿತು. ಇದು ಪಂಜಾಬ್ ಕಿಂಗ್ಸ್ ತಂಡಕ್ಕೆ 265 ರನ್‌ಗಳ ವಿಶ್ವ ದಾಖಲೆಯ ಗುರಿಯನ್ನು ತಲುಪಲು ಸಹಾಯ ಮಾಡಿತು. ಮತ್ತೊಂದೆಡೆ ಕೆಎಲ್ ರಾಹುಲ್ ಅವರ ಮನಮೋಹಕ ಇನ್ನಿಂಗ್ಸ್ ವ್ಯರ್ಥವಾಯಿತು.

Karun Nair: ಕರುಣ್ ನಾಯರ್​ನಿಂದ ಒಂದಲ್ಲ ಎರಡು ಕ್ಯಾಚ್ ಡ್ರಾಪ್: ಕೆಎಲ್ ರಾಹುಲ್ ಸ್ಫೋಟಕ ಆಟ ವ್ಯರ್ಥ
Shreyas Iyer Catch Drop And Kl Rahul
Edited By:

Updated on: Apr 26, 2026 | 8:39 AM

ಬೆಂಗಳೂರು (ಏ. 26): ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ 2026 ರ 35ನೇ ಪಂದ್ಯ ಐತಿಹಾಸಿಕ ಘಟನೆಗೆ ಸಾಕ್ಷಿಯಾಯಿತು. ಪಂಜಾಬ್ ಕಿಂಗ್ಸ್ ತಂಡವು 265 ರನ್‌ಗಳ ಬೃಹತ್ ಗುರಿಯನ್ನು ಬೆನ್ನಟ್ಟುವ ಮೂಲಕ ವಿಶ್ವ ದಾಖಲೆಯನ್ನು ನಿರ್ಮಿಸಿತು, ಆದರೆ ಈ ಸೋಲು ಡೆಲ್ಲಿ ಕ್ಯಾಪಿಟಲ್ಸ್‌ನ ಗಾಯಗಳಿಗೆ ಉಪ್ಪು ಸವರಿತು. ಇಲ್ಲಿ ಇಡೀ ಪಂದ್ಯದ ಗತಿಯನ್ನು ಬದಲಾಯಿಸಿದ್ದು ಬ್ಯಾಟಿಂಗ್ ಅಲ್ಲ, ಡೆಲ್ಲಿಯ ಕಳಪೆ ಫೀಲ್ಡಿಂಗ್. ಕರುಣ್ ನಾಯರ್ (Karun Nair) ಈ ಪಂದ್ಯದಲ್ಲಿ ಎರಡು ದೊಡ್ಡ ತಪ್ಪುಗಳನ್ನು ಮಾಡಿ ಡೆಲ್ಲಿ ಕ್ಯಾಪಿಟಲ್ಸ್​ನ ಹೀನಾಯ ಸೋಲಿಗೆ ಕಾರಣರಾದರು.

ಕರುಣ್ ನಾಯರ್ ಪಂಜಾಬ್ ನಾಯಕ ಶ್ರೇಯಸ್ ಅಯ್ಯರ್ ಅವರ ಎರಡು ಸುಲಭ ಕ್ಯಾಚ್‌ಗಳನ್ನು ಕೈಬಿಟ್ಟಿದ್ದು ಪಂದ್ಯಕ್ಕೆ ದೊಡ್ಡ ತಿರುವು ಸಿಕ್ಕಿತು. ಮೊದಲನೆಯದು 16 ನೇ ಓವರ್‌ನಲ್ಲಿ ವಿಪ್ರಜ್ ನಿಗಮ್ ಎಸೆತದಲ್ಲಿ ಲಾಂಗ್-ಆಫ್‌ನಲ್ಲಿ ಕರುಣ್ ಕ್ಯಾಚ್ ಬಿಟ್ಟರು. ನಂತರ, ಮುಂದಿನ ಓವರ್‌ನಲ್ಲಿ, ನಾಯರ್ ಕುಲದೀಪ್ ಯಾದವ್ ಎಸೆತದಲ್ಲಿ ಲಾಂಗ್-ಆನ್‌ನಲ್ಲಿ ಅಯ್ಯರ್‌ಗೆ ಮತ್ತೊಂದು ಜೀವದಾನ ನೀಡಿದರು. ಈ ಎರಡೂ ಜೀವದಾನವನ್ನು ಎರಡೂ ಕೈಗಳಿಂದ ಬಾಚಿಕೊಂಡ ಅಯ್ಯರ್ ದೆಹಲಿ ಬೌಲರ್‌ಗಳ ಬೆವರಿಳಿಸಿಬಿಟ್ಟರು. ಕೇವಲ 26 ಎಸೆತಗಳಲ್ಲಿ ಅರ್ಧಶತಕವನ್ನು ತಲುಪಿ ಅಜೇಯ 71 ರನ್ ಗಳಿಸಿ ತಂಡವನ್ನು ಕೇವಲ 18.5 ಓವರ್‌ಗಳಲ್ಲಿ ಗೆಲುವಿನತ್ತ ಕೊಂಡೊಯ್ದರು.

ಕರುಣ್ ನಾಯರ್ ಕ್ಯಾಚ್ ಡ್ರಾಪ್ ಮಾಡಿದ ವಿಡಿಯೋ:

 

ಕೆಎಲ್ ರಾಹುಲ್ ಐತಿಹಾಸಿಕ ಇನ್ನಿಂಗ್ಸ್ ವ್ಯರ್ಥ

ಈ ಪಂದ್ಯದಲ್ಲಿ ಡೆಲ್ಲಿ ನಾಯಕ ಕೆ.ಎಲ್. ರಾಹುಲ್ ಅಜೇಯ 152 ರನ್ ಗಳಿಸಿ ಐಪಿಎಲ್ ಇತಿಹಾಸದಲ್ಲಿ ದಾಖಲೆಯ ವೈಯಕ್ತಿಕ ಸ್ಕೋರ್‌ ಗಳಿಸಿದರು. ಆದರೆ ನಾಯರ್ ಅವರ ಕಳಪೆ ಫೀಲ್ಡಿಂಗ್ ಈ ಮಾಸ್ಟರ್‌ಕ್ಲಾಸ್ ಇನ್ನಿಂಗ್ಸ್ ಅನ್ನು ನೆನಪಿನಲ್ಲಿಟ್ಟುಕೊಳ್ಳುವಂತೆ ಮಾಡಲಿಲ್ಲ. ಪಂಜಾಬ್ ಕಿಂಗ್ಸ್ 265 ರನ್ ಗಳಿಸಿ, ಟಿ20 ಕ್ರಿಕೆಟ್ ಇತಿಹಾಸದಲ್ಲಿ ಅತ್ಯಧಿಕ ಯಶಸ್ವಿ ರನ್-ಚೇಸ್ ಅನ್ನು ಪೂರ್ಣಗೊಳಿಸಿತು. ಪ್ರಿಯಾಂಶ್ ಆರ್ಯ ಮತ್ತು ಪ್ರಭ್ಸಿಮ್ರಾನ್ ಸಿಂಗ್ ಪವರ್‌ಪ್ಲೇನಲ್ಲಿಯೇ 116 ರನ್ ಗಳಿಸುವ ಮೂಲಕ ದೆಹಲಿಯನ್ನು ಹಿಮ್ಮೆಟ್ಟಿಸಿದರು. ಇದರ ನಂತರ, ನಾಯರ್ ಅವರ ಕಳಪೆ ಫೀಲ್ಡಿಂಗ್ ಡೆಲ್ಲಿಯ ಉಳಿದ ಕೆಲಸವನ್ನು ಪೂರ್ಣಗೊಳಿಸಿತು.

RR vs SRH: ವೈಭವ್ ಅಬ್ಬರದ ಶತಕಕ್ಕೂ ಒಲಿಯದ ಜಯ; ಸನ್‌ರೈಸರ್ಸ್​ಗೆ ಸುಲಭ ಗೆಲುವು

ಕರುಣ್ ನಾಯರ್ ವಿರುದ್ಧ ಸಿಟ್ಟಾದ ಫ್ಯಾನ್ಸ್

ಕರುಣ್ ನಾಯರ್ ಸಾಮಾಜಿಕ ಮಾಧ್ಯಮದಲ್ಲಿ ಭಾರೀ ಟ್ರೋಲಿಂಗ್​ಗೆ ಗುರಿಯಾಗಿದ್ದಾರೆ. ಅಯ್ಯರ್ ಕ್ಯಾಚ್ ಸಕಾಲದಲ್ಲಿ ಪಡೆದಿದ್ದರೆ ಡೆಲ್ಲಿ ಸುಲಭವಾಗಿ ಪಂದ್ಯ ಗೆಲ್ಲಬಹುದಿತ್ತು ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ. ಡೆಲ್ಲಿ ತಂಡ ಈ ಋತುವಿನಲ್ಲಿ ಎದುರಿಸಿದ ನಾಲ್ಕನೇ ಸೋಲು ಇದಾಗಿದ್ದು, ಪಂಜಾಬ್ ತಂಡ ಅಜೇಯವಾಗಿ ಉಳಿದಿದ್ದು, ಪ್ಲೇಆಫ್ ತಲುಪುವ ಹಂತದಲ್ಲಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:12 am, Sun, 26 April 26

Follow Us