AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಕನಸಲ್ಲೂ ಊಹಿಸಿರಲಿಲ್ಲ’; ಸೂರ್ಯವಂಶಿಯನ್ನು ಹಾಡಿ ಹೊಗಳಿದ ಕೆಎಲ್ ರಾಹುಲ್

KL Rahul Praises Vaibhav Suryavanshi: ಕೆಎಲ್ ರಾಹುಲ್ ಐಪಿಎಲ್‌ನ ಯುವ ತಾರೆ ವೈಭವ್ ಸೂರ್ಯವಂಶಿ ಅವರ ಅದ್ಭುತ ಪ್ರದರ್ಶನವನ್ನು ಶ್ಲಾಘಿಸಿದ್ದಾರೆ. 15 ನೇ ವಯಸ್ಸಿನಲ್ಲಿ ಎರಡು ಶತಕಗಳನ್ನು ಗಳಿಸಿದ ವೈಭವ್ ಹೊಸ ಯುಗದ ಕ್ರಿಕೆಟಿಗ ಎಂದು ಕರೆದಿದ್ದಾರೆ. ಭಾರತದಲ್ಲಿ ಉದಯೋನ್ಮುಖ ಪ್ರತಿಭೆಗಳು ಐಪಿಎಲ್ ಮೂಲಕ ಟಿ20 ಕ್ರಿಕೆಟ್ ಬದಲಿಸುತ್ತಿವೆ ಎಂದು ರಾಹುಲ್ ಹೇಳಿದರು. ವೈಯಕ್ತಿಕ ಸಾಧನೆಗಳಿಗಿಂತ ಐಪಿಎಲ್ ಪ್ರಶಸ್ತಿಗಳಿಗೆ ಆದ್ಯತೆ ನೀಡಿ, ಎಂ.ಎಸ್. ಧೋನಿ ಗೆದ್ದಷ್ಟು ಟ್ರೋಫಿಗಳನ್ನು ಗೆಲ್ಲುವ ಗುರಿ ಹೊಂದಿದ್ದೇನೆ ಎಂದರು.

‘ಕನಸಲ್ಲೂ ಊಹಿಸಿರಲಿಲ್ಲ’; ಸೂರ್ಯವಂಶಿಯನ್ನು ಹಾಡಿ ಹೊಗಳಿದ ಕೆಎಲ್ ರಾಹುಲ್
Rahul, Vaibhav
ಪೃಥ್ವಿಶಂಕರ
|

Updated on: May 01, 2026 | 7:14 PM

Share

15 ವರ್ಷದ ವೈಭವ್ ಸೂರ್ಯವಂಶಿ (Vaibhav Sooryavanshi) ಕ್ರಿಕೆಟ್ ಲೋಕದಲ್ಲಿ ಎಬ್ಬಿಸಿರುವ ಸುನಾಮಿ ಭಾರತ ಕ್ರಿಕೆಟ್​ನ ಹೊಸ ಅಧ್ಯಾಯಕ್ಕೆ ನಾಂದಿ ಹಾಡಿದೆ. ಅಂಡರ್19 ತಂಡದಲ್ಲಿ ಅಬ್ಬರಿಸಿ ಭಾರತಕ್ಕೆ ವಿಶ್ವಕಪ್ ಗೆಲ್ಲಿಸಿಕೊಟ್ಟಿದ್ದ ವೈಭವ್ ಸೂರ್ಯವಂಶಿ ಇದೀಗ 2026 ರ ಐಪಿಎಲ್​ನಲ್ಲಿ (IPL 2026) ತಮ್ಮ ಸ್ಫೋಟಕ ಬ್ಯಾಟಿಂಗ್ ಮೂಲಕ ಹೃದಯಗಳನ್ನು ಗೆದ್ದಿದ್ದಾರೆ. ತಮ್ಮ ಅಬ್ಬರದ ಬ್ಯಾಟಿಂಗ್‌ ಮೂಲಕ ಇಲ್ಲಿಯವರೆಗೆ 400 ರನ್ ಗಳಿಸಿದ್ದಾರೆ. ಇಲ್ಲಿಯವರೆಗೆ 37 ಸಿಕ್ಸರ್​ಗಳನ್ನು ಹೊಡೆದಿರುವ ಸೂರ್ಯವಂಶಿ ಇದೀಗ ದೆಹಲಿ ಕ್ಯಾಪಿಟಲ್ಸ್ ವಿರುದ್ಧ ಆರ್ಭಟಿಸಲು ಸಜ್ಜಾಗಿದ್ದಾರೆ. ವಾಸ್ತವವಾಗಿ ಐಪಿಎಲ್ 2026 ರ 43ನೇ ಪಂದ್ಯ ರಾಜಸ್ಥಾನ್ ರಾಯಲ್ಸ್ ಮತ್ತು ದೆಹಲಿ ಕ್ಯಾಪಿಟಲ್ಸ್ ನಡುವೆ ನಡೆಯಲಿದೆ. ಈ ಪಂದ್ಯಕ್ಕೂ ಮೊದಲು ಸೂರ್ಯವಂಶಿ ಬಗ್ಗೆ ಮಹತ್ವದ ಸಂಗತಿಯನ್ನು ಹಂಚಿಕೊಂಡಿರುವ ದೆಹಲಿ ವಿಕೆಟ್ ಕೀಪರ್ ಕೆಎಲ್ ರಾಹುಲ್ (KL Rahul), ವೈಭವ್ ಐಪಿಎಲ್‌ನಲ್ಲಿ ಎರಡು ಶತಕಗಳನ್ನು ಗಳಿಸುವ ಮೂಲಕ ಇಂತಹ ಸಾಧನೆ ಮಾಡುತ್ತಾರೆ ಎಂದು ನಾನು ಕನಸಿನಲ್ಲಿಯೂ ಊಹಿಸಿರಲಿಲ್ಲ ಎಂದಿದ್ದಾರೆ.

ಸೂರ್ಯವಂಶಿಯನ್ನು ಹೊಗಳಿದ ರಾಹುಲ್

ವೈಭವ್ ಸೂರ್ಯವಂಶಿ ಹೊಸ ಯುಗದ ಕ್ರಿಕೆಟಿಗ ಮತ್ತು ಅವರು ಮಾಡುತ್ತಿರುವುದು ಅದ್ಭುತವಾಗಿದೆ ಎಂದಿರುವ ಕೆ.ಎಲ್. ರಾಹುಲ್, ‘ವೈಭವ್ ಸೂರ್ಯವಂಶಿ ವಿಶ್ವ ಕ್ರಿಕೆಟ್ ಅನ್ನು ಬಿರುಗಾಳಿಯಂತೆ ತೆಗೆದುಕೊಂಡಿದ್ದಾರೆ. 15 ನೇ ವಯಸ್ಸಿನಲ್ಲಿ ಎರಡು ಶತಕಗಳನ್ನು ಬಾರಿಸುವುದನ್ನು ನಾನು ಕನಸು ಕೂಡ ಕಂಡಿಲ್ಲ. ವೈಭವ್ ಜೊತೆ ಆಯುಷ್ ಮ್ಹಾತ್ರೆ ಕೂಡ ಉತ್ತಮ ಪ್ರದರ್ಶನ ನೀಡಿದ್ದಾರೆ ಮತ್ತು ಚೆನ್ನೈ ತಂಡವು ವೇಗವಾಗಿ ರನ್ ಗಳಿಸಲು ಸಹಾಯ ಮಾಡಿದ್ದಾರೆ. ಭಾರತದಲ್ಲಿ ಉದಯೋನ್ಮುಖ ಪ್ರತಿಭೆಗಳ ಸಂಖ್ಯೆ ಆಶ್ಚರ್ಯಕರವಾಗಿದೆ. ನಾಲ್ಕೈದು ವರ್ಷಗಳ ಹಿಂದೆ, ನಮಗೆ ಸಿಕ್ಸ್-ಹಿಟ್ಟಿಂಗ್ ಆಟಗಾರರ ಕೊರತೆಯಿದೆ ಎಂಬ ಕಳವಳವಿತ್ತು. ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್‌ನ ಬ್ಯಾಟಿಂಗ್‌ನಿಂದ ಎಲ್ಲರೂ ಆಶ್ಚರ್ಯಚಕಿತರಾಗಿದ್ದರು, ಆದರೆ ಇಂದು ಭಾರತೀಯ ಆಟಗಾರರು ಮುಂಚೂಣಿಯಲ್ಲಿದ್ದಾರೆ. ಇದೆಲ್ಲವೂ ಐಪಿಎಲ್‌ನಿಂದಾಗಿ. ಈ ನಿರ್ಭೀತ ಆಟಗಾರರು ಟಿ20 ಆಡುವ ವಿಧಾನವನ್ನು ಬದಲಾಯಿಸುತ್ತಿದ್ದಾರೆ ಎಂದಿದ್ದಾರೆ.

IPL 2026: ಒಂದು ಫೋಟೋಗೆ 100 ರೂ. ಕೇಳಿದ ವೈಭವ್; ವಿಡಿಯೋ ವೈರಲ್

ಧೋನಿಗೆ ಸರಿಸಾಟಿಯಾಗಬೇಕು- ರಾಹುಲ್

ಸ್ಟಾರ್ ಸ್ಪೋರ್ಟ್ಸ್ ಜೊತೆ ಮಾತನಾಡಿದ ಕೆ.ಎಲ್. ರಾಹುಲ್, ‘ವೈಯಕ್ತಿಕ ಮೈಲಿಗಲ್ಲುಗಳಲ್ಲಿ ಅರ್ಥವಿಲ್ಲ. ಧೋನಿಯ ಐದು ಐಪಿಎಲ್ ಪ್ರಶಸ್ತಿಗಳನ್ನು ಸರಿಗಟ್ಟಲು ಬಯಸುತ್ತೇನೆ. ನಾನು ರನ್‌ಗಳ ಬದಲು, ಟ್ರೋಫಿಗಳನ್ನು ಗೆಲ್ಲುವುದರ ಬಗ್ಗೆ ಹೆಚ್ಚಿನ ಗಮನ ಹರಿಸುತ್ತೇನೆ. ಇದರ ಜೊತೆಗೆ ವೈಯಕ್ತಿಕ ಸಾಧನೆಗಳು ಕೂಡ ನಾನು ಸರಿಯಾದ ಹಾದಿಯಲ್ಲಿದ್ದೇನೆ ಎಂಬ ವಿಶ್ವಾಸವನ್ನು ನೀಡುತ್ತವೆ. ಆದರೆ ನನಗೆ ಸಂತೋಷವನ್ನುಂಟುಮಾಡುವುದು ಎಂ.ಎಸ್. ಧೋನಿ ಗೆದ್ದಷ್ಟು ಟ್ರೋಫಿಗಳನ್ನು ಗೆಲ್ಲುವುದು ಎಂದಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
‘ವಸುದೇವ ಕುಟುಂಬ’ ಧಾರಾವಾಹಿ ನಿರ್ಮಾಪಕರ ಮೇಲೆ ಉರಿದು ಬಿದ್ದ ನಟಿ ಹಂಸ
‘ವಸುದೇವ ಕುಟುಂಬ’ ಧಾರಾವಾಹಿ ನಿರ್ಮಾಪಕರ ಮೇಲೆ ಉರಿದು ಬಿದ್ದ ನಟಿ ಹಂಸ
ಶಾಲಾ ಬಸ್‌ನಿಂದ ಇಳಿದು ರಸ್ತೆ ದಾಟುತ್ತಿದ್ದ ಮಗುವಿಗೆ ಬೈಕ್ ಡಿಕ್ಕಿ
ಶಾಲಾ ಬಸ್‌ನಿಂದ ಇಳಿದು ರಸ್ತೆ ದಾಟುತ್ತಿದ್ದ ಮಗುವಿಗೆ ಬೈಕ್ ಡಿಕ್ಕಿ
ಚಲಿಸುತ್ತಿದ್ದ ರೈಲಿನಿಂದ ಇಳಿಯಲು ಯತ್ನಿಸಿದ ಮಹಿಳೆ; ಸಿಸಿಟಿವಿ ದೃಶ್ಯ ವೈರಲ್
ಚಲಿಸುತ್ತಿದ್ದ ರೈಲಿನಿಂದ ಇಳಿಯಲು ಯತ್ನಿಸಿದ ಮಹಿಳೆ; ಸಿಸಿಟಿವಿ ದೃಶ್ಯ ವೈರಲ್
ಕೇದಾರನಾಥ ವಿಐಪಿ ದರ್ಶನ; ಬಿಕೆಟಿಸಿ ಮುಖ್ಯಸ್ಥರ ವಿರುದ್ಧ ಅರ್ಚಕರ ಪ್ರತಿಭಟನೆ
ಕೇದಾರನಾಥ ವಿಐಪಿ ದರ್ಶನ; ಬಿಕೆಟಿಸಿ ಮುಖ್ಯಸ್ಥರ ವಿರುದ್ಧ ಅರ್ಚಕರ ಪ್ರತಿಭಟನೆ
ನಿಧಿ ಆಸೆಗೆ ತಾಯಿಯನ್ನೇ ಬಲಿ ಕೊಡಲು ಯತ್ನ!: ಚಾಮರಾಜನಗರದಲ್ಲಿ ಶಾಕಿಂಗ್ ಘಟನೆ
ನಿಧಿ ಆಸೆಗೆ ತಾಯಿಯನ್ನೇ ಬಲಿ ಕೊಡಲು ಯತ್ನ!: ಚಾಮರಾಜನಗರದಲ್ಲಿ ಶಾಕಿಂಗ್ ಘಟನೆ
ಎಕ್ಸಿಟ್ ಪೋಲ್ ಬೆನ್ನಲ್ಲೇ ಬಾಂಗ್ಲಾದೇಶಕ್ಕೆ ನಡುಕ
ಎಕ್ಸಿಟ್ ಪೋಲ್ ಬೆನ್ನಲ್ಲೇ ಬಾಂಗ್ಲಾದೇಶಕ್ಕೆ ನಡುಕ
ಮಳೆ ಬಂದು ನಿಂತರೂ 2 ದಿನದಿಂದ ನಡೆಯುತ್ತಲೇ ಇದೆ ಅಂಡರ್ ಪಾಸ್ ಕ್ಲೀನ್ ಕಾರ್ಯ
ಮಳೆ ಬಂದು ನಿಂತರೂ 2 ದಿನದಿಂದ ನಡೆಯುತ್ತಲೇ ಇದೆ ಅಂಡರ್ ಪಾಸ್ ಕ್ಲೀನ್ ಕಾರ್ಯ
‘ವಸುದೇವ ಕುಟುಂಬ’ ಧಾರಾವಾಹಿ ಸಂಭಾವನೆ ವಿವಾದ: ವಿವರಿಸಿದ ನಟಿ ಚೈತ್ರಾ
‘ವಸುದೇವ ಕುಟುಂಬ’ ಧಾರಾವಾಹಿ ಸಂಭಾವನೆ ವಿವಾದ: ವಿವರಿಸಿದ ನಟಿ ಚೈತ್ರಾ
ಬೆಂಗಳೂರಿನ ಈ ಆಟೋ ಚಾಲಕನಿಗೆ ಆಟೋವೇ ಮನೆ, ಮೆಟ್ರೋ ನಿಲ್ದಾಣವೇ ಆಸರೆ
ಬೆಂಗಳೂರಿನ ಈ ಆಟೋ ಚಾಲಕನಿಗೆ ಆಟೋವೇ ಮನೆ, ಮೆಟ್ರೋ ನಿಲ್ದಾಣವೇ ಆಸರೆ
ಲೋಡ್ ಆಗಿದ್ದ ಬಂದೂಕು ಹಿಡಿದು ಯುವಕರ ಹುಚ್ಚಾಟ! ವಿಡಿಯೋ ವೈರಲ್
ಲೋಡ್ ಆಗಿದ್ದ ಬಂದೂಕು ಹಿಡಿದು ಯುವಕರ ಹುಚ್ಚಾಟ! ವಿಡಿಯೋ ವೈರಲ್