IND vs ENG: ಇಂಗ್ಲೆಂಡ್ ಬ್ಯಾಟರ್ಗಳ ಅಬ್ಬರ; ಭಾರತಕ್ಕೆ ದಾಖಲೆಯ ಗುರಿ
England Scores Record 387 at Lord's vs India ODI: ಲಾರ್ಡ್ಸ್‌ನಲ್ಲಿ ನಡೆದ ಭಾರತ-ಇಂಗ್ಲೆಂಡ್ ಅಂತಿಮ ODI ಪಂದ್ಯದಲ್ಲಿ ಇಂಗ್ಲೆಂಡ್ 3 ವಿಕೆಟ್‌ಗೆ ದಾಖಲೆಯ 387 ರನ್ ಗಳಿಸಿದೆ. ದುರ್ಬಲ ಭಾರತೀಯ ಬೌಲಿಂಗ್ ಅನ್ನು ಸವಾರಿ ಮಾಡಿದ ಇಂಗ್ಲೆಂಡ್ ತಂಡ, ಡಕೆಟ್ ಶತಕ, ಬೆಥೆಲ್ ಮತ್ತು ರೂಟ್ ಅರ್ಧಶತಕದ ನೆರವಿನಿಂದ ಈ ಬೃಹತ್ ಮೊತ್ತ ಪೇರಿಸಿದೆ. ಲಾರ್ಡ್ಸ್‌ನಲ್ಲಿ ಹಿಂದೆಂದೂ ದಾಖಲಾಗದ ಮೊತ್ತ ಇದಾಗಿದೆ, ಭಾರತಕ್ಕೆ ಕಠಿಣ ಸವಾಲು.

ಲಾರ್ಡ್ಸ್‌ನಲ್ಲಿ ನಡೆಯುತ್ತಿರುವ ಭಾರತ ಮತ್ತು ಇಂಗ್ಲೆಂಡ್ (England vs India) ನಡುವಿನ ಮೂರನೇ ಮತ್ತು ಅಂತಿಮ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಆತಿಥೇಯ ಇಂಗ್ಲೆಂಡ್ ಲಾರ್ಡ್ಸ್ ಅಂಗಳದಲ್ಲಿ ಹಿಂದೆಂದೂ ದಾಖಲಾಗದ ಮೊತ್ತವನ್ನು ದಾಖಲಿಸಿದೆ. ಭಾರತದ ದುರ್ಬಲ ಬೌಲಿಂಗ್ ವಿಭಾಗದ ಮೇಲೆ ಆರಂಭದಿಂದಲೂ ಸವಾರಿ ಮಾಡಿದ ಇಂಗ್ಲೆಂಡ್ ಬ್ಯಾಟರ್ಗಳು ನಿಗದಿತ 50 ಓವರ್‌ಗಳಲ್ಲಿ ದಾಖಲೆಯ 387 ರನ್ ಕಲೆಹಾಕಿದ್ದಾರೆ. ಅದು ಕೇವಲ 3 ವಿಕೆಟ್‌ಗಳನ್ನು ಕಳೆದುಕೊಂಡು. ಇಂಗ್ಲೆಂಡ್ ಪರ ಡಕೆಟ್ ಸ್ಫೋಟಕ ಶತಕ ಬಾರಿಸಿದರೆ. ಬೆಥೆಲ್ ಹಾಗೂ ರೂಟ್ ಅರ್ಧಶತಕದ ಇನ್ನಿಂಗ್ಸ್ ಆಡಿದರು. ಇತ್ತ ಭಾರತದ ಪರ ಪ್ರಸಿದ್ಧ್ ಹೊರತುಪಡಿಸಿ ಬೇರೆ ಯಾವ ಬೌಲರ್ಗೂ ಯಶಸ್ವಿಯಾಗಲು ಸಾಧ್ಯವಾಗಲಿಲ್ಲ.
ಬೆನ್ ಡಕೆಟ್ ದಾಖಲೆಯ ಶತಕ
ಇಂಗ್ಲೆಂಡ್ ಪರ ಬೆನ್ ಡಕೆಟ್ ಮತ್ತು ಜಾಕೋಬ್ ಬೆಥೆಲ್ ಉತ್ತಮ ಆರಂಭ ನೀಡಿದರು . ಈ ಜೋಡಿ ಮೊದಲ ವಿಕೆಟ್‌ಗೆ 192 ರನ್‌ಗಳ ಪಾಲುದಾರಿಕೆಯನ್ನು ಹಂಚಿಕೊಂಡಿತು. ಜಾಕೋಬ್ ಬೆಥೆಲ್ 93 ಎಸೆತಗಳಲ್ಲಿ 91 ರನ್ ಗಳಿಸಿ ಔಟಾದರು. ಅವರ ಈ ಇನ್ನಿಂಗ್ಸ್‌ನಲ್ಲಿ 11 ಬೌಂಡರಿ ಮತ್ತು 2 ಸಿಕ್ಸರ್‌ಗಳು ಸೇರಿದ್ದವು. ನಂತರ ಜೊತೆಯಾದ ಬೆನ್ ಡಕೆಟ್ ಮತ್ತು ಜೋ ರೂಟ್ ಭಾರತೀಯ ಬೌಲರ್‌ಗಳ ಮೇಲೆ ವಾರಿ ನಡೆಸಿದರು. ಈ ಜೋಡಿ 80 ಎಸೆತಗಳಲ್ಲಿ 101 ರನ್‌ಗಳ ಪಾಲುದಾರಿಕೆಯನ್ನು ಹಂಚಿಕೊಂಡಿತು.
ಕೊನೆಯಲ್ಲಿ ಅಬ್ಬರಿಸಿದ ಬಟ್ಲರ್
ಈ ಸಮಯದಲ್ಲಿ, ಬೆನ್ ಡಕೆಟ್ ಶತಕ ಕೂಡ ಪೂರೈಸಿದರು. ಅಂತಿಮವಾಗಿ ಡಕೆಟ್ 135 ಎಸೆತಗಳಲ್ಲಿ 18 ಬೌಂಡರಿ ಮತ್ತು 1 ಸಿಕ್ಸರ್‌ಗಳೊಂದಿಗೆ 141 ರನ್‌ಗಳಿಸಿ ಔಟಾದರು. ಜೋ ರೂಟ್ ಒಂದು ಕಡೆ ತಾಳ್ಮೆಯಿಂದ ಬ್ಯಾಟಿಂಗ್ ಮಾಡಿ ಅರ್ಧಶತಕವನ್ನೂ ಸಿಡಿಸಿದರು. ಆದರೆ ನಾಯಕ ಹ್ಯಾರಿ ಬ್ರೂಕ್ 12 ಎಸೆತಗಳಲ್ಲಿ 14 ರನ್ ಗಳಿಸಿ ಔಟಾದರು. ಕೊನೆಯಲ್ಲಿ ಬಟ್ಲರ್ 13 ಎಸೆತಗಳಲ್ಲಿ 41 ರನ್ ಬಾರಿಸಿ ಇಂಗ್ಲೆಂಡ್ ತಂಡವನ್ನು ದಾಖಲೆಯ ಮೊತ್ತಕ್ಕೆ ಕೊಂಡೊಯ್ದರು.
IND vs ENG: ಲಾರ್ಡ್ಸ್‌ನಲ್ಲಿ ಆಂಗ್ಲರ ಆರ್ಭಟ; 36 ವರ್ಷಗಳ ದಾಖಲೆ ಉಡೀಸ್
ಭಾರತದ ಕಳಪೆ ಬೌಲಿಂಗ್
ಇಂಗ್ಲೆಂಡ್ ವಿರುದ್ಧ ಭಾರತದ ಐದು ಬೌಲರ್‌ಗಳು ಬೌಲಿಂಗ್ ಮಾಡಿದರು. ಆದರೆ ಪ್ರಸಿದ್ಧ್ ಕೃಷ್ಣ ಮತ್ತು ಪ್ರಿನ್ಸ್ ಯಾದವ್ ಹೊರತುಪಡಿಸಿ, ಯಾವುದೇ ಬೌಲರ್ ಯಶಸ್ವಿಯಾಗಲಿಲ್ಲ. ಅರ್ಶ್ದೀಪ್ ಸಿಂಗ್ 10 ಓವರ್‌ಗಳಲ್ಲಿ 72 ರನ್‌ಗಳನ್ನು ಬಿಟ್ಟುಕೊಟ್ಟರೆ, ಗುರ್ನೂರ್ ಬ್ರಾರ್ ಅತ್ಯಂತ ದುಬಾರಿ ಬೌಲರ್ ಆದರು. ಅವರು 10 ಓವರ್‌ಗಳಲ್ಲಿ 97 ರನ್‌ಗಳನ್ನು ಬಿಟ್ಟುಕೊಟ್ಟರು. ಅಕ್ಷರ್ ಪಟೇಲ್ ಸ್ಪಿನ್‌ನ ಶಕ್ತಿಯಿಂದ ಇಂಗ್ಲೆಂಡ್‌ನ ರನ್‌ರೇಟ್‌ಗೆ ಸ್ವಲ್ಪ ಮಟ್ಟಿಗೆ ಬ್ರೇಕ್ ಹಾಕಿದರು. ಅವರು 10 ಓವರ್‌ಗಳಲ್ಲಿ 61 ರನ್‌ಗಳನ್ನು ನೀಡಿದರು. ಈ ಪಂದ್ಯದಲ್ಲಿ ಪ್ರಸಿದ್ಧ್ ಕೃಷ್ಣ ಅವರ ಬೌಲಿಂಗ್ ಪರಿಣಾಮಕಾರಿಯಾಗಿತ್ತು. ಪ್ರಸಿದ್ಧ್ ಕೃಷ್ಣ 10 ಓವರ್‌ಗಳಲ್ಲಿ 69 ರನ್‌ಗಳನ್ನು ನೀಡಿ ಎರಡು ವಿಕೆಟ್‌ಗಳನ್ನು ಪಡೆದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:32 pm, Sun, 19 July 26




