LSG vs RR IPL 2026: ರಾಜಸ್ಥಾನ್ ರಾಯಲ್ಸ್ಗೆ ಭರ್ಜರಿ ಜಯ
LSG vs RR, IPL 2026 Updates: ಲಕ್ನೋ ಸೂಪರ್ ಜೈಂಟ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ ತಂಡಗಳು ಈವರೆಗೆ 7 ಬಾರಿ ಮುಖಾಮುಖಿಯಾಗಿವೆ. ಈ ವೇಳೆ ಎಲ್ಎಸ್ಜಿ ತಂಡ ಗೆದ್ದಿರುವುದು ಕೇವಲ 2 ಬಾರಿ ಮಾತ್ರ. ಇನ್ನುಳಿದ 5 ಪಂದ್ಯಗಳಲ್ಲಿ ರಾಜಸ್ಥಾನ್ ರಾಯಲ್ಸ್ ತಂಡ ಗೆಲುವು ದಾಖಲಿಸಿದೆ.

ಇಂಡಿಯನ್ ಪ್ರೀಮಿಯರ್ ಲೀಗ್ನ 32ನೇ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಲಕ್ನೋನ ಏಕಾನ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ರಾಜಸ್ಥಾನ್ ರಾಯಲ್ಸ್ ತಂಡವು 20 ಓವರ್ಗಳಲ್ಲಿ 159 ರನ್ಗಳಿಸಿತು. ಈ ಗುರಿ ಬೆನ್ನತ್ತಿದ ಲಕ್ನೋ ಸೂಪರ್ ಜೈಂಟ್ಸ್ ತಂಡವು 18 ಓವರ್ಗಳಲ್ಲಿ 119 ರನ್ಗಳಿಸಿ ಆಲೌಟ್ ಆಗಿದೆ. ಈ ಮೂಲಕ ರಾಜಸ್ಥಾನ್ ರಾಯಲ್ಸ್ ತಂಡ 40 ರನ್ಗಳ ಭರ್ಜರಿ ಜಯ ಸಾಧಿಸಿದೆ.
ಲಕ್ನೋ ಸೂಪರ್ ಜೈಂಟ್ಸ್ (ಪ್ಲೇಯಿಂಗ್ XI): ಮಿಚೆಲ್ ಮಾರ್ಷ್, ಆಯುಷ್ ಬಡೋನಿ, ರಿಷಭ್ ಪಂತ್ (ನಾಯಕ), ನಿಕೋಲಸ್ ಪೂರನ್, ಐಡೆನ್ ಮಾರ್ಕ್ರಾಮ್, ಮುಕುಲ್ ಚೌಧರಿ, ಮೊಹಮ್ಮದ್ ಶಮಿ, ಮೊಹ್ಸಿನ್ ಖಾನ್, ಪ್ರಿನ್ಸ್ ಯಾದವ್, ದಿಗ್ವೇಶ್ ಸಿಂಗ್ ರಾಠಿ, ಮಯಾಂಕ್ ಯಾದವ್.
ರಾಜಸ್ಥಾನ್ ರಾಯಲ್ಸ್ (ಪ್ಲೇಯಿಂಗ್ XI): ಯಶಸ್ವಿ ಜೈಸ್ವಾಲ್, ವೈಭವ್ ಸೂರ್ಯವಂಶಿ, ಧ್ರುವ್ ಜುರೆಲ್, ರಿಯಾನ್ ಪರಾಗ್ (ನಾಯಕ), ಶಿಮ್ರಾನ್ ಹೆಟ್ಮೆಯರ್, ಡೊನೊವನ್ ಫೆರೇರಾ, ರವೀಂದ್ರ ಜಡೇಜಾ, ಜೋಫ್ರಾ ಆರ್ಚರ್, ರವಿ ಬಿಷ್ಣೋಯ್, ಬ್ರಿಜೇಶ್ ಶರ್ಮಾ, ನಾಂಡ್ರೆ ಬರ್ಗರ್.
ಲಕ್ನೋ ಸೂಪರ್ ಜೈಂಟ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ ತಂಡಗಳು ಈವರೆಗೆ 7 ಬಾರಿ ಮುಖಾಮುಖಿಯಾಗಿವೆ. ಈ ವೇಳೆ ಎಲ್ಎಸ್ಜಿ ತಂಡ ಗೆದ್ದಿರುವುದು ಕೇವಲ 2 ಬಾರಿ ಮಾತ್ರ. ಇನ್ನುಳಿದ 5 ಪಂದ್ಯಗಳಲ್ಲಿ ರಾಜಸ್ಥಾನ್ ರಾಯಲ್ಸ್ ತಂಡ ಗೆಲುವು ದಾಖಲಿಸಿದೆ.
LIVE NEWS & UPDATES
-
LSG vs RR IPL 2026 Live Score: ರಾಜಸ್ಥಾನ್ ರಾಯಲ್ಸ್ಗೆ ಭರ್ಜರಿ ಜಯ
- ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಗೆದ್ದು ಬೀಗಿದ ರಾಜಸ್ಥಾನ್ ರಾಯಲ್ಸ್.
- 20 ಓವರ್ಗಳಲ್ಲಿ 159 ರನ್ ಕಲೆಹಾಕಿದ್ದ ರಾಜಸ್ಥಾನ್ ರಾಯಲ್ಸ್
- 18 ಓವರ್ಗಳಲ್ಲಿ 119 ರನ್ಗಳಿಸಿ ಲಕ್ನೋ ಸೂಪರ್ ಜೈಂಟ್ಸ್ ಆಲೌಟ್.
- ರಾಜಸ್ಥಾನ್ ರಾಯಲ್ಸ್ ತಂಡಕ್ಕೆ 40 ರನ್ಗಳ ಭರ್ಜರಿ ಜಯ.
-
LSG vs RR IPL 2026 Live Score: ಕೊನೆಯ 3 ಓವರ್ಗಳು
ಕೊನೆಯ 3 ಓವರ್ಗಳಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡಕ್ಕೆ 46 ರನ್ಗಳ ಅವಶ್ಯಕತೆ.
17 ಓವರ್ಗಳ ಮುಕ್ತಾಯದ ವೇಳೆಗೆ ಲಕ್ನೋ ಸೂಪರ್ ಜೈಂಟ್ಸ್ ಸ್ಕೋರ್ 114 ರನ್ಗಳು.
ಕ್ರೀಸ್ನಲ್ಲಿ ದಿಗ್ವೇಶ್ ರಾಠಿ ಹಾಗೂ ಮಯಾಂಕ್ ಯಾದವ್ ಬ್ಯಾಟಿಂಗ್.
ಸೋಲಿನ ಸುಳಿಯಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡ.
-
-
LSG vs RR IPL 2026 Live Score: ಎಲ್ಎಸ್ಜಿ 6ನೇ ವಿಕೆಟ್ ಪತನ
ನಾಂಡ್ರೆ ಬರ್ಗರ್ ಎಸೆದ 16ನೇ ಓವರ್ನ 3ನೇ ಎಸೆತದಲ್ಲಿ ಭರ್ಜರಿ ಹೊಡೆತಕ್ಕೆ ಮುಂದಾಗಿ ಕ್ಯಾಚ್ ನೀಡಿದ ಮಿಚೆಲ್ ಮಾರ್ಷ್.
41 ಎಸೆತಗಳಲ್ಲಿ 55 ರನ್ ಬಾರಿಸಿ ವಿಕೆಟ್ ಒಪ್ಪಿಸಿದ ಮಿಚೆಲ್ ಮಾರ್ಷ್.
ಕ್ರೀಸ್ನಲ್ಲಿ ಮುಕುಲ್ ಚೌಧರಿ ಹಾಗೂ ಮೊಹಮ್ಮದ್ ಶಮಿ ಬ್ಯಾಟಿಂಗ್.
-
LSG vs RR IPL 2026 Live Score: ಎಲ್ಎಸ್ಜಿ 5ನೇ ವಿಕೆಟ್ ಪತನ
ರವಿ ಬಿಷ್ಣೋಯ್ ಎಸೆದ 15ನೇ ಓವರ್ನ 3ನೇ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆದ ಹಿಮ್ಮತ್ ಸಿಂಗ್.
15 ಎಸೆತಗಳಲ್ಲಿ 15 ರನ್ ಬಾರಿಸಿ ಇನಿಂಗ್ಸ್ ಅಂತ್ಯಗೊಳಿಸಿದ ಹಿಮ್ಮತ್ ಸಿಂಗ್.
ಕ್ರೀಸ್ನಲ್ಲಿ ಮಿಚೆಲ್ ಮಾರ್ಷ್ ಹಾಗೂ ಮುಕುಲ್ ಚೌಧರಿ ಬ್ಯಾಟಿಂಗ್.
ಲಕ್ನೋ ಸೂಪರ್ ಜೈಂಟ್ಸ್ ತಂಡಕ್ಕೆ 30 ಎಸೆತಗಳಲ್ಲಿ 61 ರನ್ಗಳ ಅವಶ್ಯಕತೆ.
-
LSG vs RR IPL 2026 Live Score: ಎಲ್ಎಸ್ಜಿ 4ನೇ ವಿಕೆಟ್ ಪತನ
ರವೀಂದ್ರ ಜಡೇಜಾ ಎಸೆದ 10ನೇ ಓವರ್ನ 4ನೇ ಎಸೆತದಲ್ಲಿ ಬೌಂಡರಿ ಲೈನ್ನಲ್ಲಿ ಕ್ಯಾಚ್ ನೀಡಿದ ಪೂರನ್.
25 ಎಸೆತಗಳಲ್ಲಿ 22 ರನ್ ಬಾರಿಸಿ ವಿಕೆಟ್ ಒಪ್ಪಿಸಿದ ನಿಕೋಲಸ್ ಪೂರನ್.
ಕ್ರೀಸ್ನಲ್ಲಿ ಮಿಚೆಲ್ ಮಾರ್ಷ್ ಹಾಗೂ ಹಿಮ್ಮತ್ ಸಿಂಗ್ ಬ್ಯಾಟಿಂಗ್.
-
-
LSG vs RR IPL 2026 Live Score: ಅರ್ಧಶತಕ ಪೂರೈಸಿದ ಎಲ್ಎಸ್ಜಿ
9 ಓವರ್ಗಳಲ್ಲಿ 50 ರನ್ ಕಲೆಹಾಕಿದ ಲಕ್ನೋ ಸೂಪರ್ ಜೈಂಟ್ಸ್.
ಕ್ರೀಸ್ನಲ್ಲಿ ಮಿಚೆಲ್ ಮಾರ್ಷ್ ಹಾಗೂ ನಿಕೋಲಸ್ ಪೂರನ್ ಬ್ಯಾಟಿಂಗ್.
ಲಕ್ನೋ ಸೂಪರ್ ಜೈಂಟ್ಸ್ ತಂಡಕ್ಕೆ ಗೆಲ್ಲಲು 11 ಓವರ್ಗಳಲ್ಲಿ 110 ರನ್ಗಳ ಅವಶ್ಯಕತೆ.
ರಾಜಸ್ಥಾನ್ ರಾಯಲ್ಸ್ ತಂಡದ ಗೆಲುವಿಗೆ 7 ವಿಕೆಟ್ಗಳ ಅಗತ್ಯತೆ.
-
LSG vs RR IPL 2026 Live Score: ಪವರ್ಪ್ಲೇ ಮುಕ್ತಾಯ
ನಾಂಡ್ರೆ ಬರ್ಗರ್ ಎಸೆದ 6ನೇ ಓವರ್ನ 4ನೇ ಎಸೆತದಲ್ಲಿ ಲೆಗ್ ಸೈಡ್ನತ್ತ ಸಿಕ್ಸ್ ಸಿಡಿಸಿದ ಮಿಚೆಲ್ ಮಾರ್ಷ್.
ಪವರ್ಪ್ಲೇನಲ್ಲಿ 31 ರನ್ ಕಲೆಹಾಕಿದ ಲಕ್ನೋ ಸೂಪರ್ ಜೈಂಟ್ಸ್.
ಮೊದಲ 6 ಓವರ್ಗಳಲ್ಲಿ 3 ವಿಕೆಟ್ ಕಬಳಿಸಿದ ರಾಜಸ್ಥಾನ್ ರಾಯಲ್ಸ್.
ಔಟಾದ ಬ್ಯಾಟರ್ಗಳು:
- ಆಯುಷ್ ಬದೋನಿ (0)
- ರಿಷಭ್ ಪಂತ್ (0)
- ಐಡೆನ್ ಮಾರ್ಕ್ರಾಮ್ (0)
-
LSG vs RR IPL 2026 Live Score: ಲಕ್ನೋ ತಂಡಕ್ಕೆ ಆರಂಭಿಕ ಆಘಾತ
ಜೋಫ್ರಾ ಆರ್ಚರ್ ಎಸೆದ 3ನೇ ಓವರ್ನ 5ನೇ ಎಸೆತದಲ್ಲಿ ಭರ್ಜರಿ ಹೊಡೆತಕ್ಕೆ ಮುಂದಾಗಿ ವಿಕೆಟ್ ಕೀಪರ್ಗೆ ಕ್ಯಾಚ್ ನೀಡಿದ ಐಡೆನ್ ಮಾರ್ಕ್ರಾಮ್ (0).
ಕೇವಲ 11 ರನ್ಗಳಿಗೆ 3 ವಿಕೆಟ್ ಕಳೆದುಕೊಂಡ ಲಕ್ನೋ ಸೂಪರ್ ಜೈಂಟ್ಸ್.
3 ಓವರ್ಗಳ ಮುಕ್ತಾಯದ ವೇಳೆಗೆ ಲಕ್ನೋ ಸೂಪರ್ ಜೈಂಟ್ಸ್ ತಂಡದ ಸ್ಕೋರ್ 16 ರನ್ಗಳು.
ಕ್ರೀಸ್ನಲ್ಲಿ ನಿಕೋಲಸ್ ಪೂರನ್ ಹಾಗೂ ಮಿಚೆಲ್ ಮಾರ್ಷ್ ಬ್ಯಾಟಿಂಗ್.
-
LSG vs RR IPL 2026 Live Score: ಎಲ್ಎಸ್ಜಿ 2ನೇ ವಿಕೆಟ್ ಪತನ
ನಾಂಡ್ರೆ ಬರ್ಗರ್ ಎಸೆದ 2ನೇ ಓವರ್ನ 4ನೇ ಎಸೆತದಲ್ಲಿ ವಿಕೆಟ್ ಕೀಪರ್ಗೆ ಕ್ಯಾಚ್ ನೀಡಿದ ರಿಷಭ್ ಪಂತ್.
ಶೂನ್ಯಕ್ಕೆ ಔಟಾಗಿ ನಿರಾಸೆ ಮೂಡಿಸಿದ ಲಕ್ನೋ ಸೂಪರ್ ಜೈಂಟ್ಸ್ ತಂಡದ ನಾಯಕ.
ಕ್ರೀಸ್ನಲ್ಲಿ ಮಿಚೆಲ್ ಮಾರ್ಷ್ ಹಾಗೂ ಐಡೆನ್ ಮಾರ್ಕ್ರಾಮ್ ಬ್ಯಾಟಿಂಗ್.
2 ಓವರ್ಗಳಲ್ಲಿ 2 ವಿಕೆಟ್ ಕಳೆದುಕೊಂಡು 10 ರನ್ ಕಲೆಹಾಕಿದ ಲಕ್ನೋ ಸೂಪರ್ ಜೈಂಟ್ಸ್.
-
LSG vs RR IPL 2026 Live Score: ಮೊದಲ ವಿಕೆಟ್ ಪತನ
- ಮೊದಲ ಎಸೆತದಲ್ಲಿ ಯಾವುದೇ ರನ್ ಇಲ್ಲ
- ದ್ವಿತೀಯ ಎಸೆತದಲ್ಲಿ ಯಾವುದೇ ರನ್ ನೀಡಿಲ್ಲ.
- ಮೂರನೇ ಎಸೆತದಲ್ಲಿ ಆಫ್ ಸೈಡ್ನತ್ತ ಫೋರ್ ಬಾರಿಸಿದ ಮಿಚೆಲ್ ಮಾರ್ಷ್.
- ನಾಲ್ಕನೇ ಎಸೆತದಲ್ಲಿ ಮಾರ್ಷ್ ಬ್ಯಾಟ್ನಿಂದ ಸ್ಟ್ರೈಟ್ ಹಿಟ್ ಫೋರ್.
- ಐದನೇ ಎಸೆತದಲ್ಲಿ ಒಂದು ರನ್.
- ಕೊನೆಯ ಎಸೆತದಲ್ಲಿ ಆಯುಷ್ ಬದೋನಿ ರನೌಟ್.
ಮೊದಲ ಓವರ್ನಲ್ಲಿ 1 ವಿಕೆಟ್ ಕಳೆದುಕೊಂಡು 9 ರನ್ ಕಲೆಹಾಕಿದ ಲಕ್ನೋ ಸೂಪರ್ ಜೈಂಟ್ಸ್
-
LSG vs RR IPL 2026 Live Score: ಎಲ್ಎಸ್ಜಿ ಇನಿಂಗ್ಸ್ ಶುರು
- ಲಕ್ನೋ ಸೂಪರ್ ಜೈಂಟ್ಸ್ ಆರಂಭಿಕರು: ಮಿಚೆಲ್ ಮಾರ್ಷ್, ಆಯುಷ್ ಬದೋನಿ
- ರಾಜಸ್ಥಾನ್ ರಾಯಲ್ಸ್ ಪರ ಮೊದಲ ಓವರ್: ಜೋಫ್ರಾ ಆರ್ಚರ್.
- ಲಕ್ನೋ ಸೂಪರ್ ಜೈಂಟ್ಸ್ ತಂಡಕ್ಕೆ 160 ರನ್ಗಳ ಗುರಿ.
- ಲಕ್ನೋನ ಏಕಾನ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಪಂದ್ಯ.
-
LSG vs RR IPL 2026 Live Score: ರಾಜಸ್ಥಾನ್ ರಾಯಲ್ಸ್ ಇನಿಂಗ್ಸ್ ಅಂತ್ಯ
- 20 ಓವರ್ಗಳಲ್ಲಿ 159 ರನ್ ಕಲೆಹಾಕಿದ ರಾಜಸ್ಥಾನ್ ರಾಯಲ್ಸ್
- ರಾಜಸ್ಥಾನ್ ರಾಯಲ್ಸ್ ಪರ 29 ಎಸೆತಗಳಲ್ಲಿ 43 ರನ್ ಬಾರಿಸಿ ಮಿಂಚಿದ ರವೀಂದ್ರ ಜಡೇಜಾ
- 6 ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾದ ಲಕ್ನೋ ಸೂಪರ್ ಜೈಂಟ್ಸ್
- ಲಕ್ನೋ ಸೂಪರ್ ಜೈಂಟ್ಸ್ ತಂಡಕ್ಕೆ 160 ರನ್ಗಳ ಗುರಿ ನೀಡಿದ ಆರ್ಆರ್.
-
LSG vs RR IPL 2026 Live Score: ರಾಜಸ್ಥಾನ್ ರಾಯಲ್ಸ್ 6ನೇ ವಿಕೆಟ್ ಪತನ
ಪ್ರಿನ್ ಯಾದವ್ ಎಸೆದ 16ನೇ ಓವರ್ನ 5ನೇ ಎಸೆತದಲ್ಲಿ ಬೌಂಡರಿ ಲೈನ್ನಲ್ಲಿ ಕ್ಯಾಚ್ ನೀಡಿದ ಡೊನಾವನ್ ಪೆರೆರಾ (20).
ಲಕ್ನೋ ಸೂಪರ್ ಜೈಂಟ್ಸ್ ತಂಡಕ್ಕೆ 6ನೇ ಯಶಸ್ಸು.
ಕ್ರೀಸ್ನಲ್ಲಿ ರವೀಂದ್ರ ಜಡೇಜಾ ಹಾಗೂ ಶುಭಂ ದುಬೆ ಬ್ಯಾಟಿಂಗ್.
-
LSG vs RR IPL 2026 Live Score: ಶತಕ ಪೂರೈಸಿದ ರಾಜಸ್ಥಾನ್ ರಾಯಲ್ಸ್
- 14.3 ಓವರ್ಗಳಲ್ಲಿ ಶತಕ ಪೂರೈಸಿದ ರಾಜಸ್ಥಾನ್ ರಾಯಲ್ಸ್.
- ಕ್ರೀಸ್ನಲ್ಲಿ ಡೊನಾವನ್ ಫೆರೆರಾ ಮತ್ತು ರವೀಂದ್ರ ಜಡೇಜಾ ಬ್ಯಾಟಿಂಗ್.
- 15 ಓವರ್ಗಳ ಮುಕ್ತಾಯದ ವೇಳೆಗೆ ಆರ್ಆರ್ ತಂಡದ ಸ್ಕೋರ್ 107 ರನ್ಗಳು.
ಔಟಾದ ಬ್ಯಾಟರ್ಗಳು:
- ವೈಭವ್ ಸೂರ್ಯವಂಶಿ
- ಯಶಸ್ವಿ ಜೈಸ್ವಾಲ್
- ಧ್ರುವ್ ಜುರೆಲ್
- ಶಿಮ್ರಾನ್ ಹೆಟ್ಮೆಯರ್
- ರಿಯಾನ್ ಪರಾಗ್.
-
LSG vs RR IPL 2026 Live Score: ಹೆಟ್ಮೆಯರ್ ಔಟ್
ಮೊಹ್ಸಿನ್ ಖಾನ್ ಎಸೆದ 11ನೇ ಓವರ್ನ 2ನೇ ಎಸೆತದಲ್ಲಿ ಸುಲಭ ಕ್ಯಾಚ್ ನೀಡಿ ಹೊರ ನಡೆದ ಶಿಮ್ರಾನ್ ಹೆಟ್ಮೆಯರ್.
18 ಎಸೆತಗಳಲ್ಲಿ 22 ರನ್ ಬಾರಿಸಿ ಇನಿಂಗ್ಸ್ ಅಂತ್ಯಗೊಳಿಸಿದ ಹೆಟ್ಮೆಯರ್.
ಕ್ರೀಸ್ನಲ್ಲಿ ಡೊನಾವನ್ ಫೆರೆರಾ ಮತ್ತು ರವೀಂದ್ರ ಜಡೇಜಾ ಬ್ಯಾಟಿಂಗ್.
-
LSG vs RR IPL 2026 Live Score: ಆರ್ಆರ್ ತಂಡದ 4ನೇ ವಿಕೆಟ್ ಪತನ
ಪ್ರಿನ್ಸ್ ಯಾದವ್ ಎಸೆದ 9ನೇ ಓವರ್ನ ಕೊನೆಯ ಎಸೆತದಲ್ಲಿ ರಿಯಾನ್ ಪರಾಗ್ ಭರ್ಜರಿ ಹೊಡೆತಕ್ಕೆ ಯತ್ನ.
ಡೀಪ್ ಮಿಡ್ ವಿಕೆಟ್ ಬೌಂಡರಿ ಲೈನ್ನಲ್ಲಿ ಕ್ಯಾಚ್ ಹಿಡಿದ ನಿಕೋಲಸ್ ಪೂರನ್.
19 ಎಸೆತಗಳಲ್ಲಿ 20 ರನ್ ಬಾರಿಸಿ ಇನಿಂಗ್ಸ್ ಅಂತ್ಯಗೊಳಿಸಿದ ರಿಯಾನ್ ಪರಾಗ್.
9 ಓವರ್ ಮುಕ್ತಾಯದ ವೇಳೆಗೆ 4 ವಿಕೆಟ್ ಕಳೆದುಕೊಂಡು 62 ರನ್ ಕಲೆಹಾಕಿರುವ ರಾಜಸ್ಥಾನ್ ರಾಯಲ್ಸ್.
-
LSG vs RR IPL 2026 Live Score: ಮೊದಲ ಸಿಕ್ಸ್
ಮಯಾಂಕ್ ಯಾದವ್ ಎಸೆದ 7ನೇ ಓವರ್ನ ಕೊನೆಯ ಎಸೆತದಲ್ಲಿ ಲೆಗ್ ಸೈಡ್ನತ್ತ ಸಿಕ್ಸ್ ಬಾರಿಸಿದ ರಿಯಾನ್ ಪರಾಗ್.
ಇದು ರಾಜಸ್ಥಾನ್ ರಾಯಲ್ಸ್ ಇನಿಂಗ್ಸ್ನ ಮೊದಲ ಸಿಕ್ಸ್.
7 ಓವರ್ಗಳಲ್ಲಿ 54 ರನ್ ಕಲೆಹಾಕಿರುವ ರಾಜಸ್ಥಾನ್ ರಾಯಲ್ಸ್.
ಕ್ರೀಸ್ನಲ್ಲಿ ಶಿಮ್ರಾನ್ ಹೆಟ್ಮೆಯರ್ ಹಾಗೂ ರಿಯಾನ್ ಪರಾಗ್ ಬ್ಯಾಟಿಂಗ್.
-
LSG vs RR IPL 2026 Live Score: ಪವರ್ಪ್ಲೇ ಮುಕ್ತಾಯ
- ಪವರ್ಪ್ಲೇನಲ್ಲಿ 44 ರನ್ ಕಲೆಹಾಕಿದ ರಾಜಸ್ಥಾನ್ ರಾಯಲ್ಸ್
- ಮೊದಲ 6 ಓವರ್ಗಳಲ್ಲಿ 3 ವಿಕೆಟ್ ಕಬಳಿಸಿದ ಲಕ್ನೋ ಸೂಪರ್ ಜೈಂಟ್ಸ್
- ಕ್ರೀಸ್ನಲ್ಲಿ ರಿಯಾನ್ ಪರಾಗ್ ಮತ್ತು ಶಿಮ್ರಾನ್ ಹೆಟ್ಮೆಯರ್ ಬ್ಯಾಟಿಂಗ್
ಔಟಾದ ಬ್ಯಾಟರ್ಗಳು:
- ಯಶಸ್ವಿ ಜೈಸ್ವಾಲ್ (22)
- ವೈಭವ್ ಸೂರ್ಯವಂಶಿ (8)
- ಧ್ರುವ್ ಜುರೆಲ್ (0)
-
LSG vs RR IPL 2026 Live Score: ಲಕ್ನೋ ಸೂಪರ್ ಜೈಂಟ್ಸ್ ಉತ್ತಮ ಬೌಲಿಂಗ್
5 ಓವರ್ಗಳಲ್ಲಿ ಕೇವಲ 37 ರನ್ ಮಾತ್ರ ನೀಡಿರುವ ಲಕ್ನೋ ಸೂಪರ್ ಜೈಂಟ್ಸ್.
3 ವಿಕೆಟ್ ಕಳೆದುಕೊಂಡಿರುವ ರಾಜಸ್ಥಾನ್ ರಾಯಲ್ಸ್.
ಕ್ರೀಸ್ನಲ್ಲಿ ರಿಯಾನ್ ಪರಾಗ್ ಮತ್ತು ಶಿಮ್ರಾನ್ ಹೆಟ್ಮೆಯರ್ ಬ್ಯಾಟಿಂಗ್.
ಔಟಾದ ಬ್ಯಾಟರ್ಗಳು:
- ಯಶಸ್ವಿ ಜೈಸ್ವಾಲ್
- ವೈಭವ್ ಸೂರ್ಯವಂಶಿ
- ಧ್ರುವ್ ಜುರೆಲ್
-
LSG vs RR IPL 2026 Live Score: ವೈಭವ್ ಸೂರ್ಯವಂಶಿ ಔಟ್
ಮೊಹ್ಸಿನ್ ಖಾನ್ ಎಸೆದ ನಾಲ್ಕನೇ ಓವರ್ನ ಕೊನೆಯ ಎಸೆತದಲ್ಲಿ ಭರ್ಜರಿ ಹೊಡೆತಕ್ಕೆ ಯತ್ನ.
ದಿಗ್ವೇಶ್ ರಾಠಿ ಅತ್ಯುತ್ತಮ ರನ್ನಿಂಗ್ ಕ್ಯಾಚ್… ವೈಭವ್ ಸೂರ್ಯವಂಶಿ (8) ಔಟ್.
ಲಕ್ನೋ ಸೂಪರ್ ಜೈಂಟ್ಸ್ ತಂಡಕ್ಕೆ ಮೂರನೇ ಯಶಸ್ಸು.
4 ಓವರ್ಗಳಲ್ಲಿ 3 ವಿಕೆಟ್ ಕಳೆದುಕೊಂಡು 32 ರನ್ ಕಲೆಹಾಕಿರುವ ರಾಜಸ್ಥಾನ್ ರಾಯಲ್ಸ್.
-
LSG vs RR IPL 2026 Live Score: ಶಮಿ ಬೆಂಕಿ ಬೌಲಿಂಗ್
ಶಮಿ ಎಸೆದ 3ನೇ ಓವರ್ನ 2ನೇ ಎಸೆತದಲ್ಲಿ ಕವರ್ ಪಾಯಿಂಟ್ನತ್ತ ಆಕರ್ಷಕ ಫೋರ್ ಬಾರಿಸಿದ ಯಶಸ್ವಿ ಜೈಸ್ವಾಲ್.
ಮೂರನೇ ಮತ್ತು ನಾಲ್ಕನೇ ಎಸೆತಗಳಲ್ಲೂ ಜೈಸ್ವಾಲ್ ಬ್ಯಾಟ್ನಿಂದ ಫೋರ್.
ಐದನೇ ಎಸೆತದಲ್ಲಿ ವಿಕೆಟ್ ಕೀಪರ್ಗೆ ಕ್ಯಾಚ್ ನೀಡಿದ ಯಶಸ್ವಿ ಜೈಸ್ವಾಲ್, ಅದ್ಭುತವಾಗಿ ಜಿಗಿದು ಚೆಂಡು ಹಿಡಿದ ರಿಷಭ್ ಪಂತ್.
ಆರನೇ ಎಸೆತದಲ್ಲಿ ರಿಷಭ್ ಪಂತ್ಗೆ ಕ್ಯಾಚ್ ನೀಡಿದ ಧ್ರುವ್ ಜುರೆಲ್ (0).
ಬ್ಯಾಕ್ ಟು ಬ್ಯಾಕ್ ವಿಕೆಟ್ ಕಬಳಿಸಿದ ಮೊಹಮ್ಮದ್ ಶಮಿ.
3 ಓವರ್ಗಳ ಮುಕ್ತಾಯದ ವೇಳೆಗೆ 3 ವಿಕೆಟ್ ಕಳೆದುಕೊಂಡು 32 ರನ್ ಕಲೆಹಾಕಿದ ರಾಜಸ್ಥಾನ್ ರಾಯಲ್ಸ್.
-
LSG vs RR IPL 2026 Live Score: ಒಂದೇ ಎಸೆತದಲ್ಲಿ 5 ರನ್
ಪ್ರಿನ್ಸ್ ಯಾದವ್ ಎಸೆದ 2ನೇ ಓವರ್ನ ಮೊದಲ ಎಸೆತದಲ್ಲಿ 1 ರನ್ ಕಲೆಹಾಕಿದ ಯಶಸ್ವಿ ಜೈಸ್ವಾಲ್.
ರನೌಟ್ಗಾಗಿ ಎಸೆದ ಚೆಂಡು ಬೌಂಡರಿಗೆ… ಓವರ್ ಥ್ರೋ ಮೂಲಕ ಆರ್ಆರ್ ಪಾಲಿಗೆ 4 ರನ್ ಸೇರ್ಪಡೆ.
ಎರಡನೇ ಮತ್ತು ಮೂರನೇ ಎಸೆತಗಳಲ್ಲಿ ಫೋರ್ ಬಾರಿಸಿದ ವೈಭವ್ ಸೂರ್ಯವಂಶಿ.
ಕ್ರೀಸ್ನಲ್ಲಿ ಯಶಸ್ವಿ ಜೈಸ್ವಾಲ್ ಹಾಗೂ ವೈಭವ್ ಸೂರ್ಯವಂಶಿ ಬ್ಯಾಟಿಂಗ್.
-
LSG vs RR IPL 2026 Live Score: ಮೊಹಮ್ಮದ್ ಶಮಿ ಮೊದಲ ಓವರ್
- ಮೊದಲ ಎಸೆತ ವೈಡ್, ಮರು ಎಸೆತದಲ್ಲಿ ಯಾವುದೇ ರನ್ ನೀಡಿಲ್ಲ.
- ಎರಡನೇ ಎಸೆತದಲ್ಲಿ ಯಾವುದೇ ರನ್ ನೀಡಿಲ್ಲ.
- ಮೂರನೇ ಎಸೆತ ವೈಡ್, ಮರು ಎಸೆತದಲ್ಲಿ ಯಾವುದೇ ರನ್ ಬಿಟ್ಟು ಕೊಟ್ಟಿಲ್ಲ.
- ನಾಲ್ಕನೇ ಎಸೆತದಲ್ಲಿ ಡೀಪ್ ಫೈನ್ ಲೆಗ್ನತ್ತ ಫೋರ್ ಬಾರಿಸಿದ ಯಶಸ್ವಿ ಜೈಸ್ವಾಲ್
- ಐದನೇ ಎಸೆತದಲ್ಲಿ ಯಾವುದೇ ರನ್ ನೀಡಿಲ್ಲ.
- ಕೊನೆಯ ಎಸೆತದಲ್ಲಿ ಒಂದು ರನ್ ಕಲೆಹಾಕಿದ ಯಶಸ್ವಿ ಜೈಸ್ವಾಲ್.
ಮೊದಲ ಓವರ್ನಲ್ಲಿ 7 ರನ್ಗಳಿಸಿದ ರಾಜಸ್ಥಾನ್ ರಾಯಲ್ಸ್.
ಕ್ರೀಸ್ನಲ್ಲಿ ಯಶಸ್ವಿ ಜೈಸ್ವಾಲ್ ಹಾಗೂ ವೈಭವ್ ಸೂರ್ಯವಂಶಿ ಬ್ಯಾಟಿಂಗ್.
-
LSG vs RR IPL 2026 Live Score: ರಾಜಸ್ಥಾನ್ ರಾಯಲ್ಸ್ ಇನಿಂಗ್ಸ್ ಶುರು
- ರಾಜಸ್ಥಾನ್ ರಾಯಲ್ಸ್ ಆರಂಭಿಕರು: ಯಶಸ್ವಿ ಜೈಸ್ವಾಲ್, ವೈಭವ್ ಸೂರ್ಯವಂಶಿ
- ಲಕ್ನೋ ಸೂಪರ್ ಜೈಂಟ್ಸ್ ಮೊದಲ ಓವರ್: ಮೊಹಮ್ಮದ್ ಶಮಿ
- ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡಿರುವ ಲಕ್ನೋ ಸೂಪರ್ ಜೈಂಟ್ಸ್
- ಸ್ಥಳ: ಏಕಾನ ಕ್ರಿಕೆಟ್ ಸ್ಟೇಡಿಯಂ, ಲಕ್ನೋ
-
LSG vs RR IPL 2026 Live Score: ಲಕ್ನೋ ಸೂಪರ್ ಜೈಂಟ್ಸ್ ಪ್ಲೇಯಿಂಗ್ 11
ಲಕ್ನೋ ಸೂಪರ್ ಜೈಂಟ್ಸ್ (ಪ್ಲೇಯಿಂಗ್ XI): ಮಿಚೆಲ್ ಮಾರ್ಷ್, ಆಯುಷ್ ಬಡೋನಿ, ರಿಷಭ್ ಪಂತ್ (ನಾಯಕ), ನಿಕೋಲಸ್ ಪೂರನ್, ಐಡೆನ್ ಮಾರ್ಕ್ರಾಮ್, ಮುಕುಲ್ ಚೌಧರಿ, ಮೊಹಮ್ಮದ್ ಶಮಿ, ಮೊಹ್ಸಿನ್ ಖಾನ್, ಪ್ರಿನ್ಸ್ ಯಾದವ್, ದಿಗ್ವೇಶ್ ಸಿಂಗ್ ರಾಠಿ, ಮಯಾಂಕ್ ಯಾದವ್.
-
LSG vs RR IPL 2026 Live Score: ರಾಜಸ್ಥಾನ್ ರಾಯಲ್ಸ್ ಪ್ಲೇಯಿಂಗ್ 11
ರಾಜಸ್ಥಾನ್ ರಾಯಲ್ಸ್ (ಪ್ಲೇಯಿಂಗ್ XI): ಯಶಸ್ವಿ ಜೈಸ್ವಾಲ್, ವೈಭವ್ ಸೂರ್ಯವಂಶಿ, ಧ್ರುವ್ ಜುರೆಲ್, ರಿಯಾನ್ ಪರಾಗ್ (ನಾಯಕ), ಶಿಮ್ರಾನ್ ಹೆಟ್ಮೆಯರ್, ಡೊನೊವನ್ ಫೆರೇರಾ, ರವೀಂದ್ರ ಜಡೇಜಾ, ಜೋಫ್ರಾ ಆರ್ಚರ್, ರವಿ ಬಿಷ್ಣೋಯ್, ಬ್ರಿಜೇಶ್ ಶರ್ಮಾ, ನಾಂಡ್ರೆ ಬರ್ಗರ್.
-
LSG vs RR IPL 2026 Live Score: ಟಾಸ್ ಗೆದ್ದ ಲಕ್ನೋ ಸೂಪರ್ ಜೈಂಟ್ಸ್
ಈ ಪಂದ್ಯದಲ್ಲಿ ಟಾಸ್ ಗೆದ್ದಿರುವ ಲಕ್ನೋ ಸೂಪರ್ ಜೈಂಟ್ಸ್ ತಂಡದ ನಾಯಕ ರಿಷಭ್ ಪಂತ್ ಬೌಲಿಂಗ್ ಆಯ್ದುಕೊಂಡಿದ್ದಾರೆ. ಅದರಂತೆ ರಾಜಸ್ಥಾನ್ ರಾಯಲ್ಸ್ ತಂಡವು ಮೊದಲು ಬ್ಯಾಟ್ ಮಾಡಲಿದೆ.
-
LSG vs RR IPL 2026 Live Score: ಲಕ್ನೋ ಸೂಪರ್ ಜೈಂಟ್ಸ್ ತಂಡ
ಲಕ್ನೋ ಸೂಪರ್ ಜೈಂಟ್ಸ್ ತಂಡ: ರಿಷಭ್ ಪಂತ್ (ನಾಯಕ), ಅಬ್ದುಲ್ ಸಮದ್, ಆಯುಷ್ ಬದೋನಿ, ಐಡೆನ್ ಮರ್ಕ್ರಾಮ್, ಮ್ಯಾಥ್ಯೂ ಬ್ರೀಟ್ಝ್ಕ್, ಹಿಮ್ಮತ್ ಸಿಂಗ್, ನಿಕೋಲಸ್ ಪೂರನ್, ಮಿಚೆಲ್ ಮಾರ್ಷ್, ಶಹಬಾಝ್ ಅಹ್ಮದ್, ಅರ್ಶಿನ್ ಕುಲಕರ್ಣಿ, ಮಯಾಂಕ್ ಯಾದವ್, ಅವೇಶ್ ಖಾನ್, ಮೊಹ್ಸಿನ್ ಖಾನ್, ಮಣಿಮಾರನ್ ಸಿದ್ಧಾರ್ಥ್, ದಿಗ್ವೇಶ್ ರಾಠಿ, ಪ್ರಿನ್ಸ್ ಯಾದವ್, ಆಕಾಶ್ ಸಿಂಗ್, ಮೊಹಮ್ಮದ್ ಶಮಿ, ಅರ್ಜುನ್ ತೆಂಡೂಲ್ಕರ್, ಅನ್ರಿಕ್ ನೋಕಿಯ, ಮುಕುಲ್ ಚೌಧರಿ, ನಮನ್ ತಿವಾರಿ, ಅಕ್ಷತ್ ರಘುವಂಶಿ, ಜೋಶ್ ಇಂಗ್ಲಿಸ್.
-
LSG vs RR IPL 2026 Live Score: ರಾಜಸ್ಥಾನ್ ರಾಯಲ್ಸ್ ತಂಡ
ರಾಜಸ್ಥಾನ್ ರಾಯಲ್ಸ್ ತಂಡ: ರಿಯಾನ್ ಪರಾಗ್ (ನಾಯಕ), ರವೀಂದ್ರ ಜಡೇಜಾ, ಸ್ಯಾಮ್ ಕರನ್, ಡೊನೊವನ್ ಫೆರೇರಾ, ಸಂದೀಪ್ ಶರ್ಮಾ, ಶುಭಂ ದುಬೆ, ವೈಭವ್ ಸೂರ್ಯವಂಶಿ, ಲುವಾನ್-ಡ್ರೆ ಪ್ರಿಟೋರಿಯಸ್, ಶಿಮ್ರಾನ್ ಹೆಟ್ಮೆಯರ್, ಯಶಸ್ವಿ ಜೈಸ್ವಾಲ್, ಧ್ರುವ ಜುರೆಲ್, ಯುಧ್ವೀರ್ ಸಿಂಗ್ ಚರಕ್, ಜೋಫ್ರಾ ಆರ್ಚರ್, ತುಷಾರ್ ದೇಶಪಾಂಡೆ, ಕ್ವೇನಾ ಮಫಾಕ, ನಾಂಡ್ರೆ ಬರ್ಗರ್, ರವಿ ಬಿಷ್ಣೋಯ್, ಸುಶಾಂತ್ ಮಿಶ್ರಾ, ಯಶ್ ರಾಜ್ ಪುಂಜಾ, ವಿಘ್ನೇಶ್ ಪುತ್ತೂರ್, ರವಿ ಸಿಂಗ್, ಅಮನ್ ರಾವ್, ಬ್ರಿಜೇಶ್ ಶರ್ಮಾ, ಆಡಮ್ ಮಿಲ್ನ್, ಕುಲದೀಪ್ ಸೇನ್.
-
LSG vs RR IPL 2026 Live Score: ದಾಖಲೆಯ ಮುಖಾಮುಖಿ
ಲಕ್ನೋ ಸೂಪರ್ ಜೈಂಟ್ಸ್ ತಂಡದ ಮೊಹಮ್ಮದ್ ಶಮಿ ಹಾಗೂ ರಾಜಸ್ಥಾನ್ ರಾಯಲ್ಸ್ ತಂಡದ ಜೋಫ್ರಾ ಆರ್ಚರ್ ಐಪಿಎಲ್ ಇತಿಹಾಸದಲ್ಲೇ ಮೊದಲ ಎಸೆತದಲ್ಲೇ ವಿಕೆಟ್ ಉರುಳಿಸಿದ ದಾಖಲೆ ಹೊಂದಿದ್ದಾರೆ. ಇಬ್ಬರು ವೇಗಿಗಳು ತಲಾ 5 ಬಾರಿ ಇನಿಂಗ್ಸ್ನ ಮೊದಲ ಎಸೆತದಲ್ಲಿ ವಿಕೆಟ್ ಕಬಳಿಸಿ ಈ ದಾಖಲೆ ಬರೆದಿದ್ದಾರೆ. ಇದೀಗ ಇಬ್ಬರ ನಡುವಣ ಮುಖಾಮುಖಿಯಲ್ಲಿ ಯಾರು ಅಗ್ರಸ್ಥಾನಕ್ಕೇರಲಿದ್ದಾರೆ ಎಂಬುದೇ ಕುತೂಹಲ.
Warming up with wickets 🔥 \|/
Another first ball wicket in store tonight for Mohd. Shami or Jofra Archer? 👀#TATAIPL | #KhelBindaas | #LSGvRR | @LucknowIPL | @rajasthanroyals pic.twitter.com/AGV8g8wLuh
— IndianPremierLeague (@IPL) April 22, 2026
-
LSG vs RR IPL 2026 Live Score: ವೈಭವ್ vs ಪಂತ್
A 𝗚𝗜𝗔𝗡𝗧 clash of 𝗥𝗢𝗬𝗔𝗟𝗧𝗬 awaits ⏳
Who’ll get back to winning ways tonight? 🤔#TATAIPL | #KhelBindaas | #LSGvRR | @LucknowIPL | @rajasthanroyals pic.twitter.com/QzyuAYEpLN
— IndianPremierLeague (@IPL) April 22, 2026
-
LSG vs RR IPL 2026 Live Score: ರಾಯಲ್ಸ್ vs ಜೈಂಟ್ಸ್
- ಐಪಿಎಲ್ನ 32ನೇ ಪಂದ್ಯ
- ಲಕ್ನೋ ಸೂಪರ್ ಜೈಂಟ್ಸ್ vs ರಾಜಸ್ಥಾನ್ ರಾಯಲ್ಸ್
- ಲಕ್ನೋನ ಏಕಾನ ಸ್ಟೇಡಿಯಂನಲ್ಲಿ ಪಂದ್ಯ
- ರಾತ್ರಿ 7 ಗಂಟೆಗೆ ಟಾಸ್ ಪ್ರಕ್ರಿಯೆ
- 7.30 ರಿಂದ ಪಂದ್ಯ ಶುರು
Published On - Apr 22,2026 6:03 PM
