ಏಕದಿನ ಕ್ರಿಕೆಟ್​ನಲ್ಲಿ ಕನ್ನಡಿಗನ ವಿಶ್ವದಾಖಲೆ: 129 ಎಸೆತಗಳಲ್ಲಿ ತ್ರಿಶತಕ!

ಕೆಲ ದಿನಗಳ ಹಿಂದೆ ನಡೆದ ಕಾರ್ಪೊರೇಟ್ ಏಕದಿನ ಪಂದ್ಯದಲ್ಲಿ 21 ವರ್ಷದ ಕರ್ನಾಟಕದ ಬ್ಯಾಟ್ಸ್‌ಮನ್ ಸಿಸೋಡಿಯಾ ಕೇವಲ 129 ಎಸೆತಗಳಲ್ಲಿ ತ್ರಿಶತಕ ಬಾರಿಸಿದ್ದಾರೆ.

ಏಕದಿನ ಕ್ರಿಕೆಟ್​ನಲ್ಲಿ ಕನ್ನಡಿಗನ ವಿಶ್ವದಾಖಲೆ: 129 ಎಸೆತಗಳಲ್ಲಿ ತ್ರಿಶತಕ!
Follow us
ರಾಜೇಶ್ ದುಗ್ಗುಮನೆ
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Feb 07, 2021 | 8:16 PM

ಅಂದಿನ ಮ್ಯಾಚ್​ನಲ್ಲಿ ಮಳೆಯಂತೆ ಬೌಂಡರಿ, ಸಿಕ್ಸರ್​ಗಳು ಸುರಿದಿದ್ದವು. ಫೀಲ್ಡರ್​ಗಳು ಸಿಕ್ಸ್​​ ಗಡಿಯಿಂದ ಚೆಂಡನ್ನು​ ಹೆಕ್ಕಿ ಹೆಕ್ಕಿ ಸುಸ್ತಾಗಿದ್ದರು. ಬೌಲರ್​ಗಳಂತೂ ಬಾಲ್​ ಮಾಡಲು ಹಿಂದೇಟು ಹಾಕುವ ಪರಿಸ್ಥಿತಿ ಬಂದೊದಗಿತ್ತು. ಸಿಕ್ಸ್​​ ಗಡಿಯಲ್ಲಿ ಬಾಲ್​ ಹೆಕ್ಕಿ ಸುಸ್ತಾದ ಆಟಗಾರರು ಆಗಾಗ ನೀರು ಕುಡಿದು ಸುಧಾರಿಸಿಕೊಳ್ಳುತ್ತಿದ್ದರು. ಬ್ಯಾಟಿಂಗ್​ಗೆ ನಿಂತಿದ್ದ ಕನ್ನಡಿಗನ ಬ್ಯಾಟ್​ನಿಂದ 129 ಬಾಲ್​ಗಳಲ್ಲಿ ತ್ರಿಶತಕ ಸಿಡಿದಿತ್ತು.

ಟೀಂ ಇಂಡಿಯಾ ಆಟಗಾರ ರೋಹಿತ್​ ಶರ್ಮಾ 2014ರಲ್ಲಿ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ 173 ಬಾಲ್​ಗಳಲ್ಲಿ 264ರನ್​ ಸಿಡಿಸಿ ದಾಖಲೆ ಬರೆದಿದ್ದರು. 33 ಬೌಂಡರಿ ಮತ್ತು 9 ಸಿಕ್ಸ್​ಗಳನ್ನು ಇದು ಒಳಗೊಂಡಿತ್ತು. ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್​ನಲ್ಲಿ ಅತಿ ಹೆಚ್ಚು ರನ್​ ಗಳಿಸಿದ ದಾಖಲೆ ಇವರ ಹೆಸರಲ್ಲಿದೆ. ಆದರೆ, ಈವರೆಗೆ ಯಾರೊಬ್ಬರಿಗೂ ಏಕದಿನದಲ್ಲಿ ತ್ರಿಶತಕ ಬಾರಿಸಲು ಸಾಧ್ಯವಾಗಿಲ್ಲ. ಈಗ, ಕನ್ನಡಿಗನೋರ್ವ ಈಗ ಇಂಥ ಸಾಧನೆ ಮಾಡಿ ತೋರಿಸಿದ್ದಾರೆ.

ಕನ್ನಡಿಗ ಲವನೀತ್ ಸಿಸೋಡಿಯಾ ಹೀಗೊಂದು ದಾಖಲೆ ಬರೆದಿದ್ದಾರೆ. ಕೆಲ ದಿನಗಳ ಹಿಂದೆ ನಡೆದ ಕಾರ್ಪೊರೇಟ್ ಏಕದಿನ ಪಂದ್ಯದಲ್ಲಿ 21 ವರ್ಷದ ಕರ್ನಾಟಕದ ಬ್ಯಾಟ್ಸ್‌ಮನ್ ಲವನೀತ್ ಸಿಸೋಡಿಯಾ ಕೇವಲ 129 ಎಸೆತಗಳಲ್ಲಿ ತ್ರಿಶತಕ ಬಾರಿಸಿದ್ದಾರೆ. ಲವನೀತ್​ ಸಿಸೋಡಿಯಾ 129 ಬಾಲ್​ಗಳಲ್ಲಿ 312ರನ್​ ಬಾರಿಸಿದ್ದಾರೆ. ಸ್ಟ್ರೈಕ್​ ರೇಟ್​ ಬರೋಬ್ಬರಿ 200. ಇವರು ಆ ಮ್ಯಾಚ್​ನಲ್ಲಿ ಬರೋಬ್ಬರಿ 26 ಸಿಕ್ಸ್​, 26 ಬೌಂಡರಿ ಬಾರಿಸಿದ್ದರು.

ಲವನೀತ್ 2019 ಮತ್ತು 2020 ರಲ್ಲಿ ಸೈಯದ್ ಮುಸ್ತಾಕ್ ಅಲಿ ಟ್ರೋಫಿಯಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ್ದರು. ಆದರೆ, ಅಲ್ಲಿ ಅವರು ಗಮನಾರ್ಹ ಪ್ರದರ್ಶನ ನೀಡಿರಲಿಲ್ಲ. ಆದರೆ, ಈ ಯುವ ಆಟಗಾರ ಈಗ ಹೊಸ ಸಾಧನೆ ಮಾಡಿದ್ದಾರೆ.

India vs England 1st Test | ವಿಚಿತ್ರ ರೀತಿಯಲ್ಲಿ ಔಟ್​ ಆದ ಚೇತೇಶ್ವರ ಪೂಜಾರ; ಇಲ್ಲಿದೆ ವೈರಲ್​ ವಿಡಿಯೋ

ತಾರಾ ಎದುರೇ ಮೋಕ್ಷಿತಾಗೆ ಕೈ ಮುಗಿದು ಕ್ಷಮೆ ಕೇಳಿದ ಮಂಜು
ತಾರಾ ಎದುರೇ ಮೋಕ್ಷಿತಾಗೆ ಕೈ ಮುಗಿದು ಕ್ಷಮೆ ಕೇಳಿದ ಮಂಜು
Daily Devotional: ಸಾಲ ಬಾಧೆ, ಮನೆಯಲ್ಲಿನ ಸಮಸ್ಯೆಗಳಿಗೆ ಇಲ್ಲಿದೆ ಪರಿಹಾರ
Daily Devotional: ಸಾಲ ಬಾಧೆ, ಮನೆಯಲ್ಲಿನ ಸಮಸ್ಯೆಗಳಿಗೆ ಇಲ್ಲಿದೆ ಪರಿಹಾರ
Daily Horoscope: ಈ ರಾಶಿಯವರು ಇಂದು ಮಕ್ಕಳಿಂದ ಶುಭ ಸುದ್ದಿ ಕೇಳುವರು
Daily Horoscope: ಈ ರಾಶಿಯವರು ಇಂದು ಮಕ್ಕಳಿಂದ ಶುಭ ಸುದ್ದಿ ಕೇಳುವರು
ಜಾತ್ರೆಗೆ ನುಗ್ಗಿದ ಕಾರು: ಯುವತಿ ಸಾವು, 8 ಜನರಿಗೆ ಗಂಭೀರ ಗಾಯ..!
ಜಾತ್ರೆಗೆ ನುಗ್ಗಿದ ಕಾರು: ಯುವತಿ ಸಾವು, 8 ಜನರಿಗೆ ಗಂಭೀರ ಗಾಯ..!
ಸರ್ಕಾರದ ಅಸ್ಥಿಪಂಜರ ಮಾತ್ರ ಉಳಿದಿದೆ, ಸುಟ್ಟುಹೋಗೋದು ನಿಶ್ಚಿತ: ಸೋಮಣ್ಣ
ಸರ್ಕಾರದ ಅಸ್ಥಿಪಂಜರ ಮಾತ್ರ ಉಳಿದಿದೆ, ಸುಟ್ಟುಹೋಗೋದು ನಿಶ್ಚಿತ: ಸೋಮಣ್ಣ
ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಮನೆಗೆ ನುಗ್ಗಿದ ಚಿರತೆ, ವಿಡಿಯೋ ನೋಡಿ
ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಮನೆಗೆ ನುಗ್ಗಿದ ಚಿರತೆ, ವಿಡಿಯೋ ನೋಡಿ
ದರ್ಶನ್, ಶಿವಣ್ಣ ಬಳಿಕ ಧ್ರುವ ಸರ್ಜಾಗೆ ಮಚ್ಚು ನೀಡಿದ ಜೋಗಿ ಪ್ರೇಮ್
ದರ್ಶನ್, ಶಿವಣ್ಣ ಬಳಿಕ ಧ್ರುವ ಸರ್ಜಾಗೆ ಮಚ್ಚು ನೀಡಿದ ಜೋಗಿ ಪ್ರೇಮ್
ತ್ರಿವೇಣಿ ಸಂಗಮ ರಸ್ತೆಯಲ್ಲಿ ನಂದಿನಿ ಹಾಲಿಂದ ತಯಾರಾಗುವ ಬಿಸಿಬಿಸಿ ಚಹಾ ಲಭ್ಯ
ತ್ರಿವೇಣಿ ಸಂಗಮ ರಸ್ತೆಯಲ್ಲಿ ನಂದಿನಿ ಹಾಲಿಂದ ತಯಾರಾಗುವ ಬಿಸಿಬಿಸಿ ಚಹಾ ಲಭ್ಯ
ಅಹಮದಾಬಾದ್‌ನಲ್ಲಿ ಮಕರ ಸಂಕ್ರಾಂತಿ ಹಬ್ಬಕ್ಕೆ ಗಾಳಿಪಟ ಹಾರಿಸಿದ ಅಮಿತ್ ಶಾ
ಅಹಮದಾಬಾದ್‌ನಲ್ಲಿ ಮಕರ ಸಂಕ್ರಾಂತಿ ಹಬ್ಬಕ್ಕೆ ಗಾಳಿಪಟ ಹಾರಿಸಿದ ಅಮಿತ್ ಶಾ
ಹಿಂದಿನ ಸರ್ಕಾರ ಸಾಲಗಳನ್ನು ನಮ್ಮ ಸರ್ಕಾರ ತೀರಿಸುತ್ತಿದೆ: ಪ್ರಿಯಾಂಕ್ ಖರ್ಗೆ
ಹಿಂದಿನ ಸರ್ಕಾರ ಸಾಲಗಳನ್ನು ನಮ್ಮ ಸರ್ಕಾರ ತೀರಿಸುತ್ತಿದೆ: ಪ್ರಿಯಾಂಕ್ ಖರ್ಗೆ