AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Dog Bite: ವಿಡಿಯೋ -ಅರ್ಜುನ್ ತೆಂಡೂಲ್ಕರ್ ಗೆ ನಾಯಿ ಕಚ್ಚಿ, ಅಬ್ಬೂ ಆಗಿದೆಯಂತೆ ಆದರೂ ಐಪಿಎಲ್​​ ಪಂದ್ಯ ಆಡ್ತಿದ್ದಾರೆ! ಯಾಕೆ, ಏನಾಯ್ತು?

Arjun Tendulkar: ಅರ್ಜುನ್ ತೆಂಡೂಲ್ಕರ್ ಪ್ರಸಕ್ತ ಐಪಿಎಲ್ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್‌ ಪರ ಆಡುತ್ತಿದ್ದು, ನಾಲ್ಕು ಪಂದ್ಯಗಳಲ್ಲಿ, ಅವರು 9.35 ರನ್​ ರೇಟ್​​ನಲ್ಲಿ ಮೂರು ವಿಕೆಟ್​​ ಕಬಳಿಸಿದ್ದಾರೆ.

Dog Bite: ವಿಡಿಯೋ -ಅರ್ಜುನ್ ತೆಂಡೂಲ್ಕರ್ ಗೆ ನಾಯಿ ಕಚ್ಚಿ, ಅಬ್ಬೂ ಆಗಿದೆಯಂತೆ ಆದರೂ ಐಪಿಎಲ್​​ ಪಂದ್ಯ ಆಡ್ತಿದ್ದಾರೆ! ಯಾಕೆ, ಏನಾಯ್ತು?
ಅರ್ಜುನ್ ತೆಂಡೂಲ್ಕರ್ ಗೆ ನಾಯಿ ಕಚ್ಚಿದೆ
ಸಾಧು ಶ್ರೀನಾಥ್​
|

Updated on:May 16, 2023 | 12:25 PM

Share

ಲಕ್ನೋದ ಎಕಾನಾ ಕ್ರಿಕೆಟ್ ಸ್ಟೇಡಿಯಂನಲ್ಲಿ (Ekana Cricket Stadium) ನಡೆಯುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್ Indian Premier League -IPL) ನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಮುಂಬೈ ಇಂಡಿಯನ್ಸ್‌ನ ಮುಂದಿನ ಪಂದ್ಯಕ್ಕೆ ಮುನ್ನ, ಯುವ ಬೌಲರ್ ಅರ್ಜುನ್ ತೆಂಡೂಲ್ಕರ್ (Arjun Tendulkar) ಆತಂಕಕಾರಿ ಮಾಹಿತಿ ಬಹಿರಂಗಪಡಿಸಿದ್ದಾರೆ. ಅಭ್ಯಾಸದ ಅವಧಿಯೊಂದರಲ್ಲಿ LSG ಬೌಲರ್‌ಗಳೊಂದಿಗೆ ಮಾತನಾಡುವಾಗ ಯುವ ಶಕ್ತಿ ಅರ್ಜುನ್​ ತನಗೆ ನಾಯಿಯೊಂದು ಕಚ್ಚಿದೆ (dog bite) ಎಂಬ ಮಾಹಿತಿ ಬಹಿರಂಗಪಡಿಸಿದ್ದಾರೆ.

ಯುಧ್ವೀರ್ ಸಿಂಗ್ (LSG) ಮತ್ತು ಅರ್ಜುನ್ ತೆಂಡೂಲ್ಕರ್ ನಲ್ಲಿರುವ ಇಬ್ಬರು ಯುವ ತಾರೆಗಳು ಅಭ್ಯಾಸದ ಅವಧಿಯಲ್ಲಿ ಪರಸ್ಪರ ಶುಭಾಶಯ ಕೋರಿದಾಗ ಮೇ 13 ರಂದು ತನಗೆ ನಾಯಿಯೊಂದು ಕಚ್ಚಿದೆ ಎಂದು ಬಹಿರಂಗಪಡಿಸಿದರು.

ಭಾರತೀಯ ಕ್ರಿಕೆಟ್​ ಜಗತ್ತಿನ ಮಹಾರಾಜ ಸಚಿನ್​ ತೆಂಡೂಲ್ಕರ್​​ ಅವರ ಸುಪುತ್ರ 23 ವರ್ಷದ ಅರ್ಜುನ್ ತೆಂಡೂಲ್ಕರ್ ಗೆ ಅಸಲಿಗೆ ನಾಯಿ ಕಚ್ಚಿದ್ದಾದರೂ ಹೇಗೆ? ಇಷ್ಟಕ್ಕೂ ಯಾವ ನಾಯಿ ಕಚ್ಚಿತು? ಬೀದಿ ನಾಯೀನಾ? ಮನೆಯ ಸಾಕು ನಾಯಿನಾ? ಅದಕ್ಕೆ ಅರ್ಜುನ್​​ ತಗೊಂಡ ಟ್ರೀಟ್ಮೆಂಟ್​​ ಏನು ಎಂಬಿತ್ಯಾದಿ ವಿವರಗಳು ಇನ್ನಷ್ಟೇ ಬಹಿರಂಗಗೊಳ್ಳಬೇಕಿದೆ.

23 ವರ್ಷದ ಅರ್ಜುನ್ ತೆಂಡೂಲ್ಕರ್ ಅವರು ಮೊಹ್ಸಿನ್ ಖಾನ್ ಅವರನ್ನು ಭೇಟಿಯಾಗಿ ತಮ್ಮ ಇತ್ತೀಚಿನ ಸಾಧನೆಗಳ ಬಗ್ಗೆ ಮಾತನಾಡುತ್ತಿದ್ದರು. ಪ್ರಸಕ್ತ ನಡೆಯುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್‌ ಆವೃತ್ತಿಯಲ್ಲಿ, ಅರ್ಜುನ್ ತೆಂಡೂಲ್ಕರ್ ಕೊನೆಗೂ MI ಪರ ಅಂಗಳಕ್ಕೆ ಪಾದಾರ್ಪಣೆ ಮಾಡಿದರು.. ಭುವನೇಶ್ವರ್ ಕುಮಾರ್ ಅವರ ವಿಕೆಟ್ ಪಡೆಯುವ ಮೂಲಕ ಭರ್ಜರಿ ಆರಂಭ ಪಡೆದರು. ಇದು ಶ್ರೀಮಂತ ಐಪಿಎಲ್ ಲೀಗ್‌ನಲ್ಲಿ ಅವರ ಮೊದಲ ವಿಕೆಟ್ ಆಗಿತ್ತು. MI ಗಾಗಿ ಅವರು ಕಾಣಿಸಿಕೊಂಡಿರುವ ನಾಲ್ಕು ಪಂದ್ಯಗಳಲ್ಲಿ, ಅವರು 9.35 ರನ್​ ರೇಟ್​​ನಲ್ಲಿ ಮೂರು ವಿಕೆಟ್‌ಗಳನ್ನು ಉರುಳಿಸಿದ್ದಾರೆ. ಇನ್ನು ಬ್ಯಾಟಿಂಗ್​​ನಲ್ಲಿ 19.66 ಸರಾಸರಿಯಲ್ಲಿ ರನ್​ ಸಿಡಿಸಿದ್ದಾರೆ.

ಇಂಡಿಯನ್ ಪ್ರೀಮಿಯರ್ ಲೀಗ್ ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 10:28 am, Tue, 16 May 23