AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಧಾನಸೌಧ–ವಿಕಾಸಸೌಧದಲ್ಲಿ ಸೌರಶಕ್ತಿ ಅಳವಡಿಕೆ; ವರ್ಷಕ್ಕೆ ಈ ಯೋಜನೆಯಿಂದಾಗುವ ಉಳಿತಾಯವೆಷ್ಟು ಗೊತ್ತಾ?

ಕರ್ನಾಟಕ ಸರ್ಕಾರವು ವಿಧಾನಸೌಧ ಮತ್ತು ವಿಕಾಸಸೌಧದಲ್ಲಿ ಸೌರಫಲಕಗಳನ್ನು ಅಳವಡಿಸಿದೆ. ಇದು ಸೌರಶಕ್ತಿ ಬಳಕೆಗೆ ಪ್ರೇರಣೆ ನೀಡುವ ಹಾಗೂ ಇತರ ಸರ್ಕಾರಿ ಕಟ್ಟಡಗಳಲ್ಲಿಯೂ ಅಳವಡಿಕೆಗೆ ಮಾದರಿಯಾಗುವ ಉದ್ದೇಶ ಹೊಂದಿದೆ. ಸೆಲ್ಕೋ ಫೌಂಡೇಶನ್ ಸಹಭಾಗಿತ್ವದಲ್ಲಿ ಈ ಯೋಜನೆ ಜಾರಿಯಾಗಿದ್ದು, ಇದರಿಂದ ವರ್ಷಕ್ಕೆ 20 ಲಕ್ಷ ರೂ. ವಿದ್ಯುತ್ ಬಿಲ್ ಉಳಿತಾಯವಾಗುವ ನಿರೀಕ್ಷೆಯಿದೆ.

ವಿಧಾನಸೌಧ–ವಿಕಾಸಸೌಧದಲ್ಲಿ ಸೌರಶಕ್ತಿ ಅಳವಡಿಕೆ; ವರ್ಷಕ್ಕೆ ಈ ಯೋಜನೆಯಿಂದಾಗುವ ಉಳಿತಾಯವೆಷ್ಟು ಗೊತ್ತಾ?
ವಿಧಾನಸೌಧ–ವಿಕಾಸಸೌಧದಲ್ಲಿ ಸೌರಶಕ್ತಿ ಅಳವಡಿಕೆImage Credit source: The New Indian Express
ಭಾವನಾ ಹೆಗಡೆ
|

Updated on:Feb 07, 2026 | 10:36 AM

Share

ಬೆಂಗಳೂರು, ಫೆಬ್ರುವರಿ 07: ರಾಜ್ಯದಲ್ಲಿ ಸೌರಶಕ್ತಿ ಬಳಕೆಗೆ ಉತ್ತೇಜನ ನೀಡುವ ಉದ್ದೇಶದಿಂದ ರಾಜ್ಯ ಸರ್ಕಾರ ವಿಧಾನಸೌಧ (Solar at Vidhana Soudha, Vikasa Soudha) ಹಾಗೂ ವಿಕಾಸಸೌಧ ಆವರಣದಲ್ಲಿ ಸೌರ ಫಲಕಗಳನ್ನು ಅಳವಡಿಸುವ ಕಾರ್ಯಕ್ಕೆ ಚಾಲನೆ ನೀಡಿದೆ. ರಾಜ್ಯದ ಇತರೆ ಸರ್ಕಾರಿ ಕಟ್ಟಡಗಳಲ್ಲಿಯೂ, ವಿಶೇಷವಾಗಿ ಪಂಚಾಯತ್ ಕಚೇರಿಗಳಲ್ಲಿ ಸೌರಶಕ್ತಿ ಅಳವಡಿಕೆಗೆ ಪ್ರೇರಣೆ ಸಿಗಬೇಕೆನ್ನುವ ಉದ್ದೇಶದಿಂದ ಸರ್ಕಾರ ಈ ಕೆಲಸ ಕೈಗೆತ್ತಿಕೊಂಡಿದ್ದು, ಇದರಿಂದ ವಿಧಾನಸೌಧ ಹಾಗೂ ವಿಕಾಸಸೌಧಗಳಿಗೆ ಬರುವ ವಿದ್ಯುತ್​ ಬಿಲ್​ನಲ್ಲಿ ವರ್ಷಕ್ಕೆ ಲಕ್ಷಾಂತರ ರೂ. ಉಳಿತಾಯವಾಗುವ ನಿರೀಕ್ಷೆಯಿದೆ.

ಕಟ್ಟಡಕ್ಕೆ ಸುಮಾರು ಶೇ 12ರಷ್ಟು ವಿದ್ಯುತ್ ಪೂರೈಕೆ ಸೌರಫಲಕದಿಂದಲೇ!

ಈ ಯೋಜನೆಯನ್ನು ಸಾರ್ವಜನಿಕ–ಖಾಸಗಿ ಸಹಭಾಗಿತ್ವದಡಿ ಸುಸ್ಥಿರ ಇಂಧನ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುವ ಸೆಲ್ಕೋ ಫೌಂಡೇಶನ್ ಮೂಲಕ ಜಾರಿಗೊಳಿಸಲಾಗುತ್ತಿದೆ. ಐತಿಹಾಸಿಕ ಮಹತ್ವ ಹೊಂದಿರುವ ವಿಧಾನಸೌಧದಲ್ಲಿ ಜಾಗದ ಕೊರತೆ ಹಾಗೂ ಪರಂಪರಾ ಕಟ್ಟಡದ ಸ್ವರೂಪಕ್ಕೆ ಧಕ್ಕೆಯಾಗಬಾರದೆಂಬ ಕಾರಣದಿಂದ ಮೇಲ್ಛಾವಣಿಯಲ್ಲಿ ಸೌರ ಫಲಕಗಳನ್ನು ಅಳವಡಿಸಲಾಗಿಲ್ಲ. ಬದಲಾಗಿ, ಮುಖ್ಯ ಕಟ್ಟಡದ ಹೊರಭಾಗದಲ್ಲಿರುವ ಪಾರ್ಕಿಂಗ್ ಪ್ರದೇಶ ಸೇರಿದಂತೆ ಆವರಣದ ವಿವಿಧ ಭಾಗಗಳಲ್ಲಿ ಸೌರ ಫಲಕಗಳನ್ನು ಸ್ಥಾಪಿಸಲಾಗುತ್ತಿದೆ.

ಪ್ರಸ್ತುತ ವಿಧಾನಸೌಧ ಮತ್ತು ವಿಕಾಸಸೌಧ ಆವರಣದಲ್ಲಿ ವಿವಿಧ ಸ್ಥಳಗಳಲ್ಲಿ ಫಲಕ ಅಳವಡಿಕೆ ನಡೆಯುತ್ತಿದ್ದು, ಇದರಿಂದ ಸುಮಾರು 300 ಕಿಲೋವಾಟ್ ವಿದ್ಯುತ್ ಉತ್ಪಾದನೆಯಾಗಲಿದೆ. ಇದು ಈ ಕಟ್ಟಡಗಳಿಗೆ ಅಗತ್ಯವಿರುವ ಒಟ್ಟು ವಿದ್ಯುತ್ ಬೇಡಿಕೆಯ ಸುಮಾರು 12 ಶೇಕಡಾ ಮಾತ್ರವಾಗಿದ್ದು, ಕಟ್ಟಡದ ವಿಸ್ತೀರ್ಣ ದೊಡ್ಡದಾದರೂ ಸಂಪೂರ್ಣವಾಗಿ ಸೌರ ಫಲಕ ಅಳವಡಿಸಲು ಸಾಧ್ಯವಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಯೋಜನೆಯಿಂದ ವರ್ಷಕ್ಕೆ 20 ಲಕ್ಷ ರೂ. ಉಳಿತಾಯವಾಗುತ್ತಾ?

ವಿಧಾನಸೌಧ ಮತ್ತು ವಿಕಾಸಸೌಧದಲ್ಲಿ ಅಳವಡಿಸಲಾಗುತ್ತಿರುವ ಸೌರ ಫಲಕಗಳಿಂದ ಸರ್ಕಾರಕ್ಕೆ ಮಹತ್ವದ ಆರ್ಥಿಕ ಉಳಿತಾಯವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಎರಡು ಭವ್ಯ ಕಟ್ಟಡಗಳಲ್ಲಿ ಸುಮಾರು ಸಾವಿರಕ್ಕೂ ಹೆಚ್ಚು ಕೊಠಡಿಗಳಿದ್ದು, ಪ್ರತಿ ತಿಂಗಳು 12 ಲಕ್ಷದಿಂದ 15 ಲಕ್ಷ ರೂ.ವರೆಗೆ ವಿದ್ಯುತ್ ಬಿಲ್ ಬರುತ್ತಿದೆ. ಇದೀಗ 300 ಕಿಲೋವಾಟ್ ಸಾಮರ್ಥ್ಯದ ಸೌರ ಫಲಕ ಅಳವಡಿಕೆಯಿಂದ ವರ್ಷಕ್ಕೆ ಸುಮಾರು 20 ಲಕ್ಷ ರೂ. ಉಳಿತಾಯವಾಗುವ ನಿರೀಕ್ಷೆ ಇದೆ. ಯೋಜನೆಯಿಂದ ಎರಡು ವರ್ಷಗಳೊಳಗೆ ಹೂಡಿಕೆಯ ಲಾಭ ದೊರಕಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 10:35 am, Sat, 7 February 26

Follow Us
ವಚನಾನಂದ ಸ್ವಾಮೀಜಿ ಉಚ್ಚಾಟನೆ ಮಠದಲ್ಲಿ ತಳ್ಳಾಟ, ನೂಕಾಟ: ಶ್ರೀಗಳಿಗೆ ಗಾಯ
ವಚನಾನಂದ ಸ್ವಾಮೀಜಿ ಉಚ್ಚಾಟನೆ ಮಠದಲ್ಲಿ ತಳ್ಳಾಟ, ನೂಕಾಟ: ಶ್ರೀಗಳಿಗೆ ಗಾಯ
ಹೇಗಿದೆ ನೋಡಿ ಕುಂದಾಪುರದ ವಂಡ್ಸೆ ಶಾಲೆಯ ರೋಬೋಟ್​​ ಟೀಚರ್​​ ಪಾಠ
ಹೇಗಿದೆ ನೋಡಿ ಕುಂದಾಪುರದ ವಂಡ್ಸೆ ಶಾಲೆಯ ರೋಬೋಟ್​​ ಟೀಚರ್​​ ಪಾಠ
ಪತ್ನಿ ಗರ್ಭಿಣಿಯಾಗುತ್ತಿದ್ದಂತೆ ಪತಿಯ ರಂಗೀನಾಟ: ಹೆರಿಗೆಗೆ ಹೋದಾಗ ಮತ್ತೊಂದು
ಪತ್ನಿ ಗರ್ಭಿಣಿಯಾಗುತ್ತಿದ್ದಂತೆ ಪತಿಯ ರಂಗೀನಾಟ: ಹೆರಿಗೆಗೆ ಹೋದಾಗ ಮತ್ತೊಂದು
ಪಂಚಮಸಾಲಿ ಗುರುಪೀಠದಿಂದ ಉಚ್ಛಾಟನೆ ಮಾಡಿರುವ ಬಗ್ಗೆ ವಚನಾನಂದ ಸ್ವಾಮೀಜಿ ಮಾತು
ಪಂಚಮಸಾಲಿ ಗುರುಪೀಠದಿಂದ ಉಚ್ಛಾಟನೆ ಮಾಡಿರುವ ಬಗ್ಗೆ ವಚನಾನಂದ ಸ್ವಾಮೀಜಿ ಮಾತು
ಪಾದಚಾರಿಗಳ ಮೇಲೆ ಎರಗಿದ ಕಾರು; ಸಿಸಿಟಿವಿಯಲ್ಲಿ ಸೆರೆಯಾಯ್ತು ಭೀಕರ ದೃಶ್ಯ
ಪಾದಚಾರಿಗಳ ಮೇಲೆ ಎರಗಿದ ಕಾರು; ಸಿಸಿಟಿವಿಯಲ್ಲಿ ಸೆರೆಯಾಯ್ತು ಭೀಕರ ದೃಶ್ಯ
ಬಸವಜಯ ಮೃತ್ಯುಂಜಯಶ್ರೀ ಲೈಂಗಿಕ ಕಿರುಕುಳ ಪ್ರಕರಣಕ್ಕೆ ಬಿಗ್​​ ಟ್ವಿಸ್ಟ್
ಬಸವಜಯ ಮೃತ್ಯುಂಜಯಶ್ರೀ ಲೈಂಗಿಕ ಕಿರುಕುಳ ಪ್ರಕರಣಕ್ಕೆ ಬಿಗ್​​ ಟ್ವಿಸ್ಟ್
ಹರಿಹರ ಪಂಚಮಸಾಲಿ ಮಠದ ಮುಂದೆ ಭಕ್ತರ ಗಲಾಟೆ!
ಹರಿಹರ ಪಂಚಮಸಾಲಿ ಮಠದ ಮುಂದೆ ಭಕ್ತರ ಗಲಾಟೆ!
ಅಂಕ ಮುಖ್ಯವಲ್ಲ, ಮಗ ಪಾಸಾಗಿದ್ದೇ ದೊಡ್ಡ ಸಂಭ್ರಮ
ಅಂಕ ಮುಖ್ಯವಲ್ಲ, ಮಗ ಪಾಸಾಗಿದ್ದೇ ದೊಡ್ಡ ಸಂಭ್ರಮ
ನ್ಯೂಸ್ ಪೇಪರ್ ವಿತರಕನ ಮೇಲೆ ಬೀದಿ ನಾಯಿ ದಾಳಿ
ನ್ಯೂಸ್ ಪೇಪರ್ ವಿತರಕನ ಮೇಲೆ ಬೀದಿ ನಾಯಿ ದಾಳಿ
ಚಿಕ್ಕಮಗಳೂರು: ತಮ್ಮದೇ ಹೆಸರಿನ ಸೇತುವೆ ಉದ್ಘಾಟಿಸಿದ ಸಿಎಂ ಸಿದ್ದರಾಮಯ್ಯ
ಚಿಕ್ಕಮಗಳೂರು: ತಮ್ಮದೇ ಹೆಸರಿನ ಸೇತುವೆ ಉದ್ಘಾಟಿಸಿದ ಸಿಎಂ ಸಿದ್ದರಾಮಯ್ಯ