DC vs KKR Highlights, IPL 2024: ಡೆಲ್ಲಿ ವಿರುದ್ಧ ಕೆಕೆಆರ್ಗೆ 106 ರನ್‌ಗಳ ಜಯ
Delhi Capitals Vs Kolkata Knight Riders Highlights in Kannada: ಐಪಿಎಲ್ 2024 ರ 16 ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು 106 ರನ್‌ಗಳಿಂದ ಮಣಿಸಿದ ಕೋಲ್ಕತ್ತಾ ನೈಟ್ ರೈಡರ್ಸ್ ಲೀಗ್ನಲ್ಲಿ ಸತತ ಮೂರನೇ ಗೆಲುವು ದಾಖಲಿಸಿದೆ.

ಐಪಿಎಲ್ 2024 ರ 16 ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು 106 ರನ್‌ಗಳಿಂದ ಮಣಿಸಿದ ಕೋಲ್ಕತ್ತಾ ನೈಟ್ ರೈಡರ್ಸ್ ಲೀಗ್ನಲ್ಲಿ ಸತತ ಮೂರನೇ ಗೆಲುವು ದಾಖಲಿಸಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಕೆಕೆಆರ್ 20 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 272 ರನ್ ಗಳಿಸಿತು. ತಂಡದ ಪರ ಸ್ಫೋಟಕ ಬ್ಯಾಟಿಂಗ್ ಮಾಡಿದ ಸುನಿಲ್ ನರೈನ್ 7 ಬೌಂಡರಿ ಮತ್ತು 7 ಸಿಕ್ಸರ್‌ಗಳ ಸಹಿತ 85 ರನ್‌ಗಳ ಬಿರುಸಿನ ಇನ್ನಿಂಗ್ಸ್ ಆಡಿದರೆ ಇವರ ಹೊರತಾಗಿ ಆಂಡ್ರೆ ರಸೆಲ್ 41 ರನ್ ಮತ್ತು ರಿಂಕು ಸಿಂಗ್ 26 ರನ್‌ಗಳ ಇನಿಂಗ್ಸ್ ಆಡಿದರು. ಗುರಿ ಬೆನ್ನಟ್ಟಿದ ಡೆಲ್ಲಿ ಆರಂಭದಲ್ಲೇ ಪ್ರಮುಖ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಮಧ್ಯಮ ಕ್ರಮಾಂಕದಲ್ಲಿ ನಾಯಕ ರಿಷಬ್ ಪಂತ್ ಹಾಗೂ ಸ್ಟಬ್ಸ್ ಅರ್ಧಶತಕ ಸಿಡಿಸುವ ಮೂಲಕ ತಂಡ 100 ರನ್‌ಗಳ ಒಳಗೆ ಆಲೌಟ್ ಆಗುವುದನ್ನು ತಪ್ಪಿಸಿದರು. ಅಂತಿಮವಾಗಿ ಡೆಲ್ಲಿ ತಂಡ ಪೂರ್ಣ 20 ಓವರ್ಗಳನ್ನು ಆಡದೆ 17.2 ಓವರ್‌ಗಳಲ್ಲಿ ತನ್ನೆಲ್ಲ ವಿಕೆಟ್ ಕಳೆದುಕೊಂಡು 166 ರನ್ ಕಲೆಹಾಕಲಷ್ಟೇ ಶಕ್ತವಾಯಿತು.
LIVE NEWS & UPDATES
-
ಕೋಲ್ಕತ್ತಾಗೆ 106 ರನ್‌ಗಳ ಜಯ
ಐಪಿಎಲ್ 2024ರ 16ನೇ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ, ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು 106 ರನ್‌ಗಳಿಂದ ಸೋಲಿಸಿದೆ.
-
ಅರ್ಧ ಶತಕ ಸಿಡಿಸಿ ಸ್ಟಬ್ಸ್ ಔಟ್
15 ನೇ ಓವರ್‌ನಲ್ಲಿ ಡೆಲ್ಲಿ ಏಳನೇ ವಿಕೆಟ್ ಕಳೆದುಕೊಂಡಿದೆ. ಸ್ಟಬ್ಸ್ 32 ಎಸೆತಗಳಲ್ಲಿ ನಾಲ್ಕು ಬೌಂಡರಿ ಹಾಗೂ ನಾಲ್ಕು ಸಿಕ್ಸರ್‌ಗಳ ನೆರವಿನಿಂದ 54 ರನ್ ಗಳಿಸಿದರು. ಇದಾದ ಬಳಿಕ 16ನೇ ಓವರ್ನ ಮೊದಲ ಎಸೆತದಲ್ಲಿ ಕ್ಯಾಚ್ ನೀಡಿ ಔಟಾದರು.
-
-
ಸತತ ಎರಡು ವಿಕೆಟ್
ಡೆಲ್ಲಿ ಕ್ಯಾಪಿಟಲ್ಸ್ 13ನೇ ಓವರ್‌ನಲ್ಲಿ ಎರಡು ಪ್ರಮುಖ ವಿಕೆಟ್‌ಗಳನ್ನು ಕಳೆದುಕೊಂಡಿತು. ಈ ಓವರ್‌ನಲ್ಲಿ ಅರ್ಧಶತಕ ಸಿಡಿಸಿದ್ದ ಪಂತ್ ಹಾಗೂ ಅಕ್ಷರ್ ಪಟೇಲ್ ಪೆವಿಲಿಯನ್ ಸೇರಿಕೊಂಡಿದ್ದಾರೆ. ಡೆಲ್ಲಿ 13 ಓವರ್‌ಗಳಲ್ಲಿ 6 ವಿಕೆಟ್ ನಷ್ಟದಲ್ಲಿ 135 ರನ್ ಗಳಿಸಿದೆ.
-
ಪಂತ್ ಅರ್ಧಶತಕ
ಡೆಲ್ಲಿ ಕ್ಯಾಪಿಟಲ್ಸ್ ಪರ ನಾಯಕ ರಿಷಬ್ ಪಂತ್ ಬಿರುಸಿನ ಬ್ಯಾಟಿಂಗ್ ಮಾಡಿ ತಮ್ಮ ಐಪಿಎಲ್ ವೃತ್ತಿಜೀವನದ 17 ನೇ ಅರ್ಧಶತಕವನ್ನು 23 ಎಸೆತಗಳಲ್ಲಿ ಪೂರ್ಣಗೊಳಿಸಿದ್ದಾರೆ. ಇದು ಅವರ ಸತತ ಎರಡನೇ ಅರ್ಧಶತಕವಾಗಿದೆ. ಇದಕ್ಕೂ ಮುನ್ನ ಪಂತ್ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧವೂ ಬಿರುಸಿನ ಅರ್ಧಶತಕ ಸಿಡಿಸಿದ್ದರು.
-
28 ರನ್ ಚಚ್ಚಿದ ಪಂತ್
ವೆಂಕಟೇಶ್ ಅಯ್ಯರ್ ಓವರ್‌ನಲ್ಲಿ ಡೆಲ್ಲಿ 28 ರನ್ ಗಳಿಸಿತ್ತು. ಈ ಓವರ್‌ನಲ್ಲಿ ರಿಷಬ್ ಪಂತ್ 4 ಬೌಂಡರಿ ಮತ್ತು 2 ಸಿಕ್ಸರ್‌ಗಳನ್ನು ಬಾರಿಸಿದರು.
-
-
10 ಓವರ್ ಮುಕ್ತಾಯ
ಡೆಲ್ಲಿ 10 ಓವರ್‌ಗಳಲ್ಲಿ 92 ರನ್ ಗಳಿಸಿ ಆಡುತ್ತಿದೆ. ಡೆಲ್ಲಿ ಗೆಲುವಿಗೆ 56 ಎಸೆತಗಳಲ್ಲಿ 181 ರನ್‌ಗಳ ಅಗತ್ಯವಿದೆ. ಸ್ಟಬ್ಸ್ ಮತ್ತು ಪಂತ್ 50ಕ್ಕೂ ಹೆಚ್ಚು ರನ್‌ಗಳ ಜೊತೆಯಾಟ ನಡೆಸಿದ್ದಾರೆ.
-
ಸ್ಟಬ್ಸ್-ಪಂತ್ ಇನ್ನಿಂಗ್ಸ್ ಆಸರೆ
ಒಂಬತ್ತು ಓವರ್‌ಗಳಲ್ಲಿ ಡೆಲ್ಲಿ ನಾಲ್ಕು ವಿಕೆಟ್ ಕಳೆದುಕೊಂಡು 83 ರನ್ ಗಳಿಸಿದೆ. ಸದ್ಯ ಟ್ರಿಸ್ಟಾನ್ ಸ್ಟಬ್ಸ್ 16 ಎಸೆತಗಳಲ್ಲಿ 25 ರನ್ ಹಾಗೂ ರಿಷಬ್ ಪಂತ್ 11 ಎಸೆತಗಳಲ್ಲಿ 23 ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದಾರೆ. ಇವರಿಬ್ಬರ ನಡುವೆ 27 ಎಸೆತಗಳಲ್ಲಿ ಅರ್ಧಶತಕದ ಜೊತೆಯಾಟ ನಡೆದಿದೆ. ತಂಡಕ್ಕೆ 66 ಎಸೆತಗಳಲ್ಲಿ 190 ರನ್‌ಗಳ ಅಗತ್ಯವಿದೆ.
-
ವಾರ್ನರ್ ಕೂಡ ಔಟ್
ನಂಬಿಕಸ್ಥ ಬ್ಯಾಟರ್ ವಾರ್ನರ್ ಕೂಡ ವಿಕೆಟ್ ಒಪ್ಪಿಸಿದ್ದಾರೆ. ವಾರ್ನರ್ 13 ಎಸೆತಗಳಲ್ಲಿ 18 ರನ್ ಗಳಿಸಿ ಔಟಾದರು.
ಆರು ಓವರ್‌ಗಳ ನಂತರ ದೆಹಲಿಯ ಸ್ಕೋರ್ ನಾಲ್ಕು ವಿಕೆಟ್‌ಗೆ 51 ರನ್ ಆಗಿದೆ.
ಪಂತ್ ಏಳು ರನ್ ಮತ್ತು ಸ್ಟಬ್ಸ್ 10 ರನ್ ಗಳಿಸಿ ಕ್ರೀಸ್‌ನಲ್ಲಿದ್ದಾರೆ.
-
ಪೊರೆಲ್ ಶೂನ್ಯಕ್ಕೆ ಔಟ್
ನಾಲ್ಕನೇ ಓವರ್‌ನಲ್ಲಿ ಡೆಲ್ಲಿ 3ನೇ ವಿಕೆಟ್ ಕಳೆದುಕೊಂಡಿದೆ.
ಇಂಪ್ಯಾಕ್ಟ್ ಪ್ಲೇಯರ್ ಅಭಿಷೇಕ್ ಪೊರೆಲ್ ಕೂಡ ಖಾತೆ ತೆರೆಯದೆ ಔಟಾದರು.
ಸದ್ಯ ಡೇವಿಡ್ ವಾರ್ನರ್ ಮತ್ತು ನಾಯಕ ರಿಷಬ್ ಪಂತ್ ಕ್ರೀಸ್‌ನಲ್ಲಿದ್ದಾರೆ.
-
ಎರಡನೇ ವಿಕೆಟ್ ಪತನ
ಮೂರನೇ ಓವರ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಎರಡನೇ ವಿಕೆಟ್ ಕಳೆದುಕೊಂಡಿದೆ. ಮಿಚೆಲ್ ಮಾರ್ಷ್ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದ್ದಾರೆ.
ಇದು ಈ ಸೀಸನ್ನಲ್ಲಿ ಸ್ಟಾರ್ಕ್ ಅವರ ಮೊದಲ ವಿಕೆಟ್ ಆಗಿದೆ.
ಮೂರು ಓವರ್‌ಗಳ ನಂತರ ದೆಹಲಿಯ ಸ್ಕೋರ್ ಎರಡು ವಿಕೆಟ್‌ಗೆ 26 ರನ್ ಆಗಿದೆ.
ಸದ್ಯ ಡೇವಿಡ್ ವಾರ್ನರ್ ಮತ್ತು ಅಭಿಷೇಕ್ ಪೊರೆಲ್ ಕ್ರೀಸ್‌ನಲ್ಲಿದ್ದಾರೆ.
-
ಪೃಥ್ವಿ ಔಟ್
ಡೆಲ್ಲಿ ಕ್ಯಾಪಿಟಲ್‌ಗೆ ಉತ್ತಮ ಆರಂಭ ಸಿಗಲಿಲ್ಲ. ಎರಡನೇ ಓವರ್‌ನಲ್ಲಿ ವೈಭವ್ ಅರೋರಾ ಪೃಥ್ವಿ ಶಾಗೆ ಪೆವಿಲಿಯನ್ ಹಾದಿ ತೋರಿಸಿದರು.
ಎರಡು ಓವರ್‌ಗಳ ನಂತರ ಡಿಲ್ಲಾ ಸ್ಕೋರ್ ಒಂದು ವಿಕೆಟ್‌ಗೆ 21 ರನ್ ಆಗಿದೆ.
ಸದ್ಯ ಡೇವಿಡ್ ವಾರ್ನರ್ ಮತ್ತು ಮಿಚೆಲ್ ಮಾರ್ಷ್ ಕ್ರೀಸ್‌ನಲ್ಲಿದ್ದಾರೆ.
-
273 ರನ್ ಟಾರ್ಗೆಟ್
ವಿಶಾಖಪಟ್ಟಣಂನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಬೃಹತ್ ಸ್ಕೋರ್ ಗಳಿಸಿದೆ. 20 ಓವರ್‌ಗಳಲ್ಲಿ ಏಳು ವಿಕೆಟ್ ಕಳೆದುಕೊಂಡು 272 ರನ್ ಕಲೆಹಾಕಿದೆ. ಈ ಮೂಲಕ ಡೆಲ್ಲಿಗೆ 273 ರನ್‌ಗಳ ಬೃಹತ್ ಗುರಿ ನೀಡಿದೆ.
-
ಎರಡು ಓವರ್‌ಗಳಲ್ಲಿ 3 ವಿಕೆಟ್
ಕೆಕೆಆರ್ ಕೊನೆಯ ಓವರ್‌ನಲ್ಲಿ ರಿಂಕು ಸಿಂಗ್ ಮತ್ತು ಈ ಓವರ್‌ನಲ್ಲಿ ರಸೆಲ್ ಮತ್ತು ರಮಣದೀಪ್ ಅವರ ವಿಕೆಟ್‌ಗಳನ್ನು ಕಳೆದುಕೊಂಡಿತು. ಕೆಕೆಆರ್ 19 ಓವರ್‌ಗಳಲ್ಲಿ 270 ರನ್ ಗಳಿಸಿ ಆಡುತ್ತಿದೆ.
-
ಶ್ರೇಯಸ್ ಅಯ್ಯರ್ ಔಟ್
ನಾಯಕ ಶ್ರೇಯಸ್ ಅಯ್ಯರ್ 11 ಎಸೆತಗಳಲ್ಲಿ 18 ರನ್ ಗಳಿಸಿ ವಿಕೆಟ್ ಒಪ್ಪಿಸಿದ್ದಾರೆ.
ಸದ್ಯ ಆಂಡ್ರೆ ರಸೆಲ್ ಅವರ ಬಿರುಸಿನ ಬ್ಯಾಟಿಂಗ್ ಕಂಡು ಬರುತ್ತಿದೆ.
18 ಓವರ್‌ಗಳ ನಂತರ ಕೋಲ್ಕತ್ತಾ ಸ್ಕೋರ್ ನಾಲ್ಕು ವಿಕೆಟ್‌ಗೆ 239 ರನ್ ಆಗಿದೆ.
-
ರಘುವಂಶಿ ಔಟ್
ಕೆಕೆಆರ್ ಮೂರನೇ ವಿಕೆಟ್ ಕಳೆದುಕೊಂಡಿದೆ. ಆಂಗ್ಕ್ರಿಶ್ ರಘುವಂಶಿ 54 ರನ್ ಗಳಿಸಿ ವಿಕೆಟ್ ಒಪ್ಪಿಸಿದ್ದಾರೆ. ಕೆಕೆಆರ್ 14 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 184 ರನ್ ಕಲೆಹಾಕಿದೆ.
-
ರಘುವಂಶಿ ಅರ್ಧಶತಕ
ಆಂಗ್ಕ್ರಿಶ್ ರಘುವಂಶಿ ತಮ್ಮ ಚೊಚ್ಚಲ ಐಪಿಎಲ್ ಪಂದ್ಯದಲ್ಲಿ ಕೇವಲ 25 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ್ದಾರೆ. 13 ಓವರ್‌ಗಳ ನಂತರ ಕೋಲ್ಕತ್ತಾ ಸ್ಕೋರ್ ಎರಡು ವಿಕೆಟ್‌ಗೆ 171 ರನ್ ಆಗಿದೆ. ಸದ್ಯ ಆಂಡ್ರೆ ರಸೆಲ್ ಮತ್ತು ರಘುವಂಶಿ ಕ್ರೀಸ್‌ನಲ್ಲಿದ್ದಾರೆ.
-
ನರೈನ್ ಔಟ್
ಮಿಚೆಲ್ ಮಾರ್ಷ್ ಕೆಕೆಆರ್‌ನ ಪ್ರಮುಖ ಬ್ಯಾಟ್ಸ್‌ಮನ್ ಸುನಿಲ್ ನರೈನ್ ಅವರ ವಿಕೆಟ್ ಉರುಳಿಸಿದ್ದಾರೆ. ನರೈನ್ 85 ರನ್ ಗಳಿಸಿ ಪೆವಿಲಿಯನ್ ಹಾದಿ ಹಿಡಿದಿದ್ದಾರೆ. ಕೆಕೆಆರ್ 13 ಓವರ್‌ಗಳಲ್ಲಿ 171 ರನ್ ಗಳಿಸಿ ಆಡುತ್ತಿದೆ.
-
ನರೈನ್-ರಘುವಂಶಿ ಬಿರುಸಿನ ಬ್ಯಾಟಿಂಗ್
ಒಂಬತ್ತು ಓವರ್‌ಗಳಲ್ಲಿ ಕೋಲ್ಕತ್ತಾ 1 ವಿಕೆಟ್ ಕಳೆದುಕೊಂಡು 126 ರನ್ ಗಳಿಸಿದೆ. ಸದ್ಯ ಸುನಿಲ್ ನರೈನ್ 28 ಎಸೆತಗಳಲ್ಲಿ 68 ರನ್ ಹಾಗೂ ಆಂಗ್‌ಕ್ರಿಶ್ ರಘುವಂಶಿ 14 ಎಸೆತಗಳಲ್ಲಿ 31 ರನ್ ಗಳಿಸಿ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಇಲ್ಲಿಯವರೆಗೆ ಇವರಿಬ್ಬರ ನಡುವೆ ಎರಡನೇ ವಿಕೆಟ್‌ಗೆ 27 ಎಸೆತಗಳಲ್ಲಿ 66 ರನ್‌ಗಳ ಜೊತೆಯಾಟವಿದೆ.
-
ನರೈನ್ ಅರ್ಧಶತಕ
ಸುನಿಲ್ ನರೈನ್ 21 ಎಸೆತಗಳಲ್ಲಿ ಅರ್ಧಶತಕ ಗಳಿಸಿದ್ದಾರೆ. ಇದು ಅವರ ಐಪಿಎಲ್ ವೃತ್ತಿಜೀವನದ ಆರನೇ ಅರ್ಧಶತಕವಾಗಿದೆ.
-
ಸಾಲ್ಟ್ ಔಟ್
ಐದನೇ ಓವರ್‌ನಲ್ಲಿ ಕೆಕೆಆರ್ ಮೊದಲ ವಿಕೆಟ್ ಕಳೆದುಕೊಂಡಿದೆ. ನೋಕಿಯಾ, ಫಿಲ್ ಸಾಲ್ಟ್ ಅವರನ್ನು ಔಟ್ ಮಾಡಿದರು.
ಐದು ಓವರ್‌ಗಳ ನಂತರ ಕೋಲ್ಕತ್ತಾದ ಸ್ಕೋರ್ ಒಂದು ವಿಕೆಟ್‌ಗೆ 70 ರನ್ ಆಗಿದೆ.
ಸದ್ಯ ರಘುವಂಶಿ ಮೂರು ಎಸೆತಗಳಲ್ಲಿ 10 ರನ್ ಹಾಗೂ ಸುನಿಲ್ ನರೈನ್ 15 ಎಸೆತಗಳಲ್ಲಿ 34 ರನ್ ಗಳಿಸಿ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ನರೈನ್ ಬಿರುಸಿನ ಬ್ಯಾಟಿಂಗ್ ಮಾಡುತ್ತಿದ್ದಾರೆ.
-
ನರೈನ್ ಬಿರುಸಿನ ಬ್ಯಾಟಿಂಗ್
ಕೋಲ್ಕತ್ತಾ ನಾಲ್ಕು ಓವರ್‌ಗಳಲ್ಲಿ ಯಾವುದೇ ವಿಕೆಟ್ ನಷ್ಟವಿಲ್ಲದೆ 58 ರನ್ ಗಳಿಸಿದೆ. ಸದ್ಯ ಫಿಲಿಪ್ ಸಾಲ್ಟ್ ಒಂಬತ್ತು ಎಸೆತಗಳಲ್ಲಿ 16 ರನ್ ಹಾಗೂ ಸುನಿಲ್ ನರೈನ್ 15 ಎಸೆತಗಳಲ್ಲಿ 34 ರನ್ ಗಳಿಸಿ ಆಡುತ್ತಿದ್ದಾರೆ. ಈ ಇನ್ನಿಂಗ್ಸ್‌ನಲ್ಲಿ ಇಲ್ಲಿಯವರೆಗೆ, ನರೈನ್ ಮೂರು ಬೌಂಡರಿ ಮತ್ತು ಮೂರು ಸಿಕ್ಸರ್‌ಗಳನ್ನು ಬಾರಿಸಿದ್ದಾರೆ. ನರೇನ್ ಬೌಂಡರಿ ಹಾಗೂ ಸಿಕ್ಸರ್‌ಗಳ ಸುರಿಮಳೆಗೈಯುತ್ತಿದ್ದಾರೆ.
-
ಕೋಲ್ಕತ್ತಾ ನೈಟ್ ರೈಡರ್ಸ್
ಫಿಲ್ ಸಾಲ್ಟ್, ಸುನಿಲ್ ನರೈನ್, ವೆಂಕಟೇಶ್ ಅಯ್ಯರ್, ಶ್ರೇಯಸ್ ಅಯ್ಯರ್ (ನಾಯಕ), ರಿಂಕು ಸಿಂಗ್, ಆಂಗ್ಕ್ರಿಶ್ ರಘುವಂಶಿ, ಆಂಡ್ರೆ ರಸೆಲ್, ರಮಣದೀಪ್ ಸಿಂಗ್, ಮಿಚೆಲ್ ಸ್ಟಾರ್ಕ್, ಹರ್ಷಿತ್ ರಾಣಾ, ವರುಣ್ ಚಕ್ರವರ್ತಿ.
ಇಂಪ್ಯಾಕ್ ಪ್ಲೇಯರ್: ಸುಯ್ಯಾಶ್ ಶರ್ಮಾ, ಅನುಕುಲ್ ರಾಯ್, ಮನೀಶ್ ಪಾಂಡೆ, ವೈಭವ್ ಅರೋರಾ, ರಹಮಾನುಲ್ಲಾ ಗುರ್ಬಾಜ್.
-
ಡೆಲ್ಲಿ ಕ್ಯಾಪಿಟಲ್ಸ್
ಪೃಥ್ವಿ ಶಾ, ಡೇವಿಡ್ ವಾರ್ನರ್, ರಿಷಭ್ ಪಂತ್ (ನಾಯಕ ಮತ್ತು ವಿಕೆಟ್ ಕೀಪರ್), ಮಿಚೆಲ್ ಮಾರ್ಷ್, ಟ್ರಿಸ್ಟಾನ್ ಸ್ಟಬ್ಸ್, ಅಕ್ಷರ್ ಪಟೇಲ್, ರಸಿಖ್ ದಾರ್ ಸಲಾಮ್, ಅನ್ರಿಚ್ ನೋಕಿಯಾ, ಇಶಾಂತ್ ಶರ್ಮಾ, ಸುಮಿತ್ ಕುಮಾರ್, ಖಲೀಲ್ ಅಹ್ಮದ್.
ಇಂಪ್ಯಾಕ್ಟ್ ಪ್ಲೇಯರ್: ಅಭಿಷೇಕ್ ಪೊರೆಲ್, ಕುಮಾರ್ ಕುಶಾಗ್ರಾ, ಪ್ರವೀಣ್ ದುಬೆ, ಲಲಿತ್ ಯಾದವ್, ಜೇಕ್ ಫ್ರೇಸರ್-ಮೆಕ್‌ಗುರ್ಕ್.
-
ಟಾಸ್ ಗೆದ್ದ ಕೆಕೆಆರ್
ಟಾಸ್ ಗೆದ್ದ ಕೆಕೆಆರ್ ನಾಯಕ ಶ್ರೇಯಸ್ ಅಯ್ಯರ್ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದ್ದಾರೆ.
Published On - Apr 03,2024 7:01 PM
