AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IND vs PAK: ಟೀಂ ಇಂಡಿಯಾ ನಾಯಕನನ್ನು ಹಂದಿ ಎಂದು ಕರೆದು ತನ್ನದೇ ಕಾರಣ ನೀಡಿದ ಪಾಕ್ ಆಟಗಾರ

India vs Pakistan Asia Cup 2025: ಏಷ್ಯಾಕಪ್ ಪಂದ್ಯದ ನಂತರ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಮೊಹಮ್ಮದ್ ಯೂಸುಫ್ ಅವರು ಸೂರ್ಯಕುಮಾರ್ ಯಾದವ್ ಅವರನ್ನು ಅವಮಾನಿಸಿದ್ದು ವಿವಾದಕ್ಕೆ ಕಾರಣವಾಗಿದೆ. ಭಾರತದ ಮೇಲೆ ಸುಳ್ಳು ಆರೋಪಗಳನ್ನು ಹೊರಿಸಿದ ಯೂಸುಫ್ ಅವರ ಹೇಳಿಕೆಗೆ ಭಾರತೀಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ವರ್ತನೆಯೂ ವಿವಾದವನ್ನು ಹೆಚ್ಚಿಸಿದೆ. ಯೂಸುಫ್ ಅವರ ಕ್ಷಮೆಯಾಚನೆಗೆ ಒತ್ತಾಯವಿದೆ.

IND vs PAK: ಟೀಂ ಇಂಡಿಯಾ ನಾಯಕನನ್ನು ಹಂದಿ ಎಂದು ಕರೆದು ತನ್ನದೇ ಕಾರಣ ನೀಡಿದ ಪಾಕ್ ಆಟಗಾರ
Surya
ಪೃಥ್ವಿಶಂಕರ
|

Updated on:Sep 17, 2025 | 2:59 PM

Share

ಭಾರತ ಮತ್ತು ಪಾಕಿಸ್ತಾನ (India vs Pakistan) ನಡುವಿನ ಏಷ್ಯಾಕಪ್ (Asia Cup 2025) ಪಂದ್ಯ ಮುಗಿದು ನಾಲ್ಕು ದಿನಗಳು ಕಳೆದರೂ ಈ ಪಂದ್ಯದ ವೇಳೆ ಹುಟ್ಟಿಕೊಂಡ ವಿವಾದಕ್ಕೆ ಮಾತ್ರ ಇನ್ನು ತೆರೆ ಬಿದ್ದಿಲ್ಲ. ಪಾಕಿಸ್ತಾನ ಕ್ರಿಕೆಟ್ ಮಂಡಳಿ ಇಲ್ಲ ಸಲ್ಲದ ಆರೋಪಗಳನ್ನು ಮಾಡುತ್ತ ವಿವಾದವನ್ನು ತಮ್ಮ ಮೈಮೇಲೆಯೇ ಎಳೆದುಕೊಳ್ಳುತ್ತಿದೆ. ಇದೆಲ್ಲದರ ಪಾಕಿಸ್ತಾನದ ಮಾಜಿ ಆಟಗಾರರು ತಮ್ಮ ನಾಲಿಗೆಯನ್ನ ಹರಿಬಿಡುವ ಮೂಲಕ ಭಾರತೀಯರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಮೊಹಮ್ಮದ್ ಯೂಸುಫ್ ಟಿವಿ ಕಾರ್ಯಕ್ರಮವೊಂದರಲ್ಲಿ ಟೀಂ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್ (Suryakumar Yadav) ಅವರನ್ನು ಹಂದಿ ಎಂದು ಕರೆದಿದ್ದು, ಭಾರತದ ವಿರುದ್ಧವೂ ಸುಳ್ಳು ಆರೋಪಗಳನ್ನು ಹೊರಿಸಿದ್ದಾರೆ. ಭಾರತವು ಅಂಪೈರ್‌ಗಳು ಮತ್ತು ಮ್ಯಾಚ್ ರೆಫರಿಗಳನ್ನು ಬಳಸಿಕೊಂಡು ಪಾಕಿಸ್ತಾನಕ್ಕೆ ಅವಮಾನ ಮಾಡುತ್ತಿದೆ ಎಂದು ಯೂಸುಫ್ ಆರೋಪಿಸಿದ್ದಾರೆ.

ನಾಲಿಗೆ ಹರಿಬಿಟ್ಟ ಮೊಹಮ್ಮದ್ ಯೂಸುಫ್

ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಮೊಹಮ್ಮದ್ ಯೂಸುಫ್ ಟಿವಿ ಕಾರ್ಯಕ್ರಮವೊಂದರಲ್ಲಿ ಉದ್ದೇಶಪೂರ್ವಕವಾಗಿ ಸೂರ್ಯಕುಮಾರ್ ಯಾದವ್ ಅವರ ಹೆಸರನ್ನು ತಪ್ಪಾಗಿ ತೆಗೆದುಕೊಂಡು ಅವರನ್ನು ಹಂದಿ ಎಂದು ಕರೆದಿದ್ದಾರೆ. ಹಾಗೆಯೇ ಭಾರತದ ಮೇಲೂ ಆರೋಪಗಳನ್ನು ಹೊರಿಸಿರುವ ಯೂಸುಫ್, ಟೀಂ ಇಂಡಿಯಾ ಪಂದ್ಯವನ್ನು ಗೆಲ್ಲಲು ಪ್ರಯತ್ನಿಸುತ್ತಿರುವ ರೀತಿ, ಅಂಪೈರ್‌ಗಳನ್ನು ಬಳಸಿಕೊಂಡು, ಮ್ಯಾಚ್ ರೆಫರಿಗಳ ಮೂಲಕ ಪಾಕಿಸ್ತಾನಕ್ಕೆ ಅವಮಾನ ಮಾಡುತ್ತಿದೆ. ಇದಕ್ಕಾಗಿ ಭಾರತ ನಾಚಿಕೆಪಡಬೇಕು ಎಂದಿದ್ದಾರೆ.

ಈ ಹೇಳಿಕೆಯ ನಂತರ ಮೊಹಮ್ಮದ್ ಯೂಸುಫ್​ಗೆ ಭಾರತದಲ್ಲಿ ಛಿಮಾರಿ ಹಾಕಲಾಗುತ್ತಿದೆ. ಅಲ್ಲದೆ ಯೂಸುಫ್, ಸೂರ್ಯ ಅವರ ಕ್ಷಮೆಯಾಚಿಸಬೇಕು ಎಂಬ ಒತ್ತಾಯ ಹೆಚ್ಚಾಗಿದೆ. ಇದೀಗ ಕ್ಷಮೆಯಾಚಿಸುವ ಬಗ್ಗೆಯೂ ಉದ್ಧಟತನ ತೊರಿರುವ ಯೂಸುಫ್, ‘ತನ್ನ ದೇಶಕ್ಕಾಗಿ ಉತ್ಸಾಹ ಮತ್ತು ಔದಾರ್ಯದಿಂದ ಆಡುವ ಯಾವುದೇ ಕ್ರೀಡಾಪಟುವಿಗೆ ಅಗೌರವ ತೋರುವ ಉದ್ದೇಶ ನನಗಿಲ್ಲ. ಆದರೆ ಶಾಹಿದ್ ಖಾನ್ ಅಫ್ರಿದಿ ನಾಯಿಯಂತೆ ಬೊಗಳುತ್ತಿದ್ದಾರೆ ಎಂದು ಇರ್ಫಾನ್ ಪಠಾಣ್ ಹೇಳಿದಾಗ ಭಾರತೀಯ ಮಾಧ್ಯಮಗಳು ಮತ್ತು ಜನರು ಅವರನ್ನು ಏಕೆ ಹೊಗಳುತ್ತಿದ್ದರು? ಘನತೆ ಮತ್ತು ಗೌರವದ ಬಗ್ಗೆ ಮಾತನಾಡುವ ಪ್ರತಿಯೊಬ್ಬರೂ ಅದನ್ನು ತಿರಸ್ಕರಿಸಬೇಕಲ್ಲವೇ?’ ಎಂದು ತಮ್ಮ ಎಕ್ಸ್​ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಮೊಹಮ್ಮದ್ ಯೂಸುಫ್ ಪೋಸ್ಟ್

Surya (1)

ಪಾಕಿಸ್ತಾನಕ್ಕೆ ಮುಜುಗರ

ಪಾಕಿಸ್ತಾನ ತಂಡ ಭಾರತದ ವಿರುದ್ಧದ ಏಷ್ಯಾಕಪ್ ಪಂದ್ಯವನ್ನು ಏಕಪಕ್ಷೀಯ ರೀತಿಯಲ್ಲಿ ಸೋತಿದ್ದು ಮಾತ್ರವಲ್ಲದೆ, ಈಗ ತಂಡವು ಮೈದಾನದ ಹೊರಗೆಯೂ ಮುಜುಗರಕ್ಕೆ ಒಳಗಾಗಿದೆ. ವಾಸ್ತವವಾಗಿ ಭಾರತ ಮತ್ತು ಪಾಕಿಸ್ತಾನಿ ಆಟಗಾರರು ಕೈಕುಲುಕದಂತೆ ಮ್ಯಾಚ್ ರೆಫರಿ ಆಂಡಿ ಪೈಕ್ರಾಫ್ಟ್ ಆದೇಶ ನೀಡಿದ್ದಾರೆ ಎಂದು ಪಾಕಿಸ್ತಾನ ತಂಡ ಆರೋಪಿಸಿತ್ತು. ಇದರ ನಂತರ, ಈ ಬಗ್ಗೆ ಐಸಿಸಿಗೂ ಲಿಖಿತ ದೂರು ಸಲ್ಲಿಸಿ, ಪೈಕ್ರಾಫ್ಟ್ ಅವರನ್ನು ಪಾಕಿಸ್ತಾನದ ಮುಂದಿನ ಪಂದ್ಯದಿಂದ ತೆಗೆದುಹಾಕಬೇಕೆಂದು ಒತ್ತಾಯಿಸಿತು. ಆದಾಗ್ಯೂ, ಐಸಿಸಿ ಇದನ್ನು ನಿರಾಕರಿಸಿದ್ದು, ಪೈಕ್ರಾಫ್ಟ್ ಆ ರೀತಿಯ ಆದೇಶ ನೀಡಿಲ್ಲ. ಮ್ಯಾಚ್ ರೆಫರಿ ತಮಗೆ ಆ ರೀತಿಯಾಗಿ ಯಾವ ಆದೇಶವನ್ನು ನೀಡಿಲ್ಲ ಎಂದು ಭಾರತ ತಂಡ ಹೇಳಿದೆ. ಹೀಗಾಗಿ ಅವರನ್ನು ಪಂದ್ಯಾವಳಿಯಿಂದ ಹೊರಗಿಡುವುದಿಲ್ಲ ಎಂದು ಹೇಳಿದೆ. ಆದಾಗ್ಯೂ ಅವರಿಗೆ ಪಾಕಿಸ್ತಾನ ಹಾಗೂ ಯುಎಇ ನಡುವಿನ ಪಂದ್ಯದಿಂದ ವಿಶ್ರಾಂತಿ ನೀಡಲಾಗಿದೆ ಎಂದು ವರದಿಯಾಗಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:54 pm, Wed, 17 September 25