AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2026: ಎಂಎಸ್ ಧೋನಿ ಕಮ್​ಕ್ಯಾಕ್: ಸಿಎಸ್​ಕೆ ಅಭಿಮಾನಿಗಳಿಗೆ ಕೊನೆಗೂ ಸಿಕ್ಕಿತು ಗುಡ್​ ನ್ಯೂಸ್

MS Dhoni Injury Update: ಐಪಿಎಲ್ 2026 ಆರಂಭವಾಗುವ ಹೊತ್ತಿಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸ್ಟಾರ್ ಆಟಗಾರ ಎಂಎಸ್ ಧೋನಿ ಮಂಡಿರಜ್ಜು ಗಾಯದಿಂದಾಗಿ ಮೊದಲ ಎರಡು ವಾರಗಳ ಕಾಲ ಆಡಲಾಗುವುದಿಲ್ಲ ಎಂದು ವರದಿ ಆಗಿತ್ತು. ಆದಾಗ್ಯೂ, ಅವರ ಫಿಟ್ನೆಸ್ ಬಗ್ಗೆ ಈಗ ಗುಡ್ ನ್ಯೂಸ್ ಬಂದಿದೆ. ಧೋನಿ ಫಿಟ್ ಆದಂತೆ ಕಾಣುತ್ತಿದ್ದು, ನೆಟ್​ನಲ್ಲಿ ಅಭ್ಯಾಸ ಶುರುಮಾಡಿದ್ದಾರೆ.

IPL 2026: ಎಂಎಸ್ ಧೋನಿ ಕಮ್​ಕ್ಯಾಕ್: ಸಿಎಸ್​ಕೆ ಅಭಿಮಾನಿಗಳಿಗೆ ಕೊನೆಗೂ ಸಿಕ್ಕಿತು ಗುಡ್​ ನ್ಯೂಸ್
Ms Dhoni Injury Update
ಮಾಲಾಶ್ರೀ ಅಂಚನ್​
| Edited By: |

Updated on: Apr 02, 2026 | 9:29 AM

Share

ಬೆಂಗಳೂರು (ಏ. 02): ಇಂಡಿಯನ್ ಪ್ರೀಮಿಯರ್ ಲೀಗ್‌ (Indian Premier League) ಇತಿಹಾಸದಲ್ಲಿ ಐದು ಬಾರಿ ಚಾಂಪಿಯನ್ ಆಗಿರುವ ಚೆನ್ನೈ ಸೂಪರ್ ಕಿಂಗ್ಸ್, ಈ ಬಾರಿಯ 19ನೇ ಸೀಸನ್‌ನಲ್ಲಿ ಕಳಪೆ ಆರಂಭವನ್ನು ಪಡೆದುಕೊಂಡಿದೆ. ಸಿಎಸ್‌ಕೆ ತನ್ನ ಸೀಸನ್‌ನ ಆರಂಭಿಕ ಪಂದ್ಯದಲ್ಲೇ ರಾಜಸ್ಥಾನ ರಾಯಲ್ಸ್ ವಿರುದ್ಧ ಎಂಟು ವಿಕೆಟ್‌ಗಳ ಹೀನಾಯ ಸೋಲನ್ನು ಅನುಭವಿಸಿತು. ಸಿಎಸ್‌ಕೆ ಋತುವಿನ ಆರಂಭಿಕ ಪಂದ್ಯಗಳಲ್ಲಿ ಕೆಲವು ಪ್ರಮುಖ ಆಟಗಾರರಿಲ್ಲದೆ ಕಣಕ್ಕಿಳಿಯುತ್ತಿದೆ. ಮುಖ್ಯವಾಗಿ ತಂಡದ ಸ್ಟಾರ್ ಪ್ಲೇಯರ್, ಮಾಜಿ ನಾಯಕ ಎಂಎಸ್ ಧೋನಿ.

ಧೋನಿ ಐಪಿಎಲ್ 2026 ರ ಸೀಸನ್‌ನ ಮೊದಲ ಎರಡು ವಾರಗಳ ಕಾಲ ಕಣಕ್ಕಿಳಿಯುವುದಿಲ್ಲ. ಅವರು ಮಂಡಿರಜ್ಜು ಗಾಯದಿಂದ ಬಳಲುತ್ತಿದ್ದು, ಪುನರ್ವಸತಿಗೆ ಒಳಗಾಗಿದ್ದಾರೆ. ಪರಿಣಾಮವಾಗಿ, ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯಕ್ಕಾಗಿ ಅವರು ಸಿಎಸ್‌ಕೆ ತಂಡದೊಂದಿಗೆ ಗುವಾಹಟಿಗೆ ಪ್ರಯಾಣಿಸಲಿಲ್ಲ. ಇದರಿಂದ ಅವರ ಅಭಿಮಾನಿಗಳು ತೀರ್ವ ಬೇಸರಗೊಂಡಿದ್ದರು. ಆದರೀಗ ಧೋನಿಯ ಫಿಟ್‌ನೆಸ್‌ಗೆ ಸಂಬಂಧಿಸಿದ ವಿಡಿಯೋ ಹೊರಬಂದಿದೆ, ಇದನ್ನು ಕಂಡು ಸಿಎಸ್‌ಕೆ ಅಭಿಮಾನಿಗಳು ಫುಲ್ ಖುಷಿ ಆಗಿದ್ದಾರೆ.

ನೆಟ್ ಪ್ರಾಕ್ಟೀಸ್ ಶುರು ಮಾಡದ ಧೋನಿ

ಐಪಿಎಲ್ 2026 ರ ಸೀಸನ್ ಆರಂಭಕ್ಕೂ ಮುನ್ನ ಎಂಎಸ್ ಧೋನಿ ಅವರ ಫಿಟ್ನೆಸ್ ಬಗ್ಗೆ ಸಿಎಸ್‌ಕೆ ಬಿಡುಗಡೆ ಮಾಡಿದ ಅಧಿಕೃತ ಮಾಹಿತಿಯಲ್ಲಿ, ಧೋನಿ ಅವರಿಗೆ ಕಾಲಿನ ಸ್ನಾಯು ಸೆಳೆತವಿದ್ದು, ಮೊದಲ ಎರಡು ವಾರಗಳ ಅವರು ಕಣಕ್ಕಿಳಿಯಲು ಸಾಧ್ಯವಿಲ್ಲ ಎಂದು ಹೇಳಲಾಗಿತ್ತು. ಧೋನಿ ಅನುಪಸ್ಥಿತಿ ಸಿಎಸ್‌ಕೆಗೆ ದೊಡ್ಡ ಹೊಡೆತ ಎಂದೇ ಪರಿಗಣಿಸಲಾಗಿತ್ತು. ಅದು ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಕಂಡುಬಂತು ಕೂಡ.

PSL 2026: ಪಾಕ್ ಪ್ರೀಮಿಯರ್ ಲೀಗ್ ಪಂದ್ಯದ ವೇಳೆ ಭಾರೀ ಬಿರುಗಾಳಿ: ಕಂಟ್ರೋಲ್ ತಪ್ಪಿ ಏನೆಲ್ಲ ಆಯಿತು ನೋಡಿ

ಸಿಎಸ್‌ಕೆ ಈಗ ತನ್ನ ಎರಡನೇ ಪಂದ್ಯವನ್ನು ಪಂಜಾಬ್ ಕಿಂಗ್ಸ್ ವಿರುದ್ಧ ಏಪ್ರಿಲ್ 3 ರಂದು ತನ್ನ ತವರು ಮೈದಾನದಲ್ಲಿ ಆಡಲಿದೆ. ಇದಕ್ಕೂ ಮುನ್ನ ಏಪ್ರಿಲ್ 1 ರಂದು ಚೆಪಾಕ್ ಕ್ರೀಡಾಂಗಣದಲ್ಲಿ ಸಿಎಸ್​ಕೆ ಅಭ್ಯಾಸ ನಡೆಸಿತು, ವಿಶೇಷ ಎಂದರೆ ಈ ಪ್ರ್ಯಾಕ್ಟೀಸ್ ಸೆಷನ್​ನಲ್ಲಿ ಎಂಎಸ್ ಧೋನಿ ಕೂಡ ಭಾಗವಹಿಸಿ ನೆಟ್ಸ್‌ನಲ್ಲಿ ಬ್ಯಾಟಿಂಗ್ ಮಾಡಿದರು. ಅವರು ನೆಟ್ಸ್‌ಗೆ ಮರಳಿರುವುದು ಸಿಎಸ್‌ಕೆ ಅಭಿಮಾನಿಗಳಿಗೆ ಒಳ್ಳೆಯ ಸುದ್ದಿಯಾಗಿದೆ. ಧೋನಿ ಶೀಘ್ರದಲ್ಲೇ ಸಂಪೂರ್ಣವಾಗಿ ಫಿಟ್ ಆಗಿ ಮೈದಾನಕ್ಕೆ ಮರಳಲು ಸಿದ್ಧರಾಗುತ್ತಾರೆ ಎಂದು ಹೇಳಲಾಗುತ್ತಿದೆ.

ಧೋನಿ ಅಭ್ಯಾಸಕ್ಕೆ ಆಗಮನಿಸಿದ ವಿಡಿಯೋ:

ಲಯ ಕಳೆದುಕೊಂಡ ಚೆನ್ನೈ

ಕಳೆದ ಕೆಲವು ಐಪಿಎಲ್ ಋತುಗಳು ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ನಿರೀಕ್ಷಿತ ಮಟ್ಟದಲ್ಲಿ ಯಶಸ್ಸು ನೀಡಿಲ್ಲ. ಐಪಿಎಲ್‌ 2026 ರಲ್ಲಿ ಸಿಎಸ್​ಕೆ ತನ್ನ ಮುಂದಿನ ಪಂದ್ಯ ಪಂಜಾಬ್ ಕಿಂಗ್ಸ್ ವಿರುದ್ಧ ಆಡಲಿದೆ. ಆದರೆ ಇವರ ವಿರುದ್ಧವೂ ಸಿಎಸ್‌ಕೆ ತಂಡದ ದಾಖಲೆ ಅದ್ಭುತ ಎಂಬಂತಿಲ್ಲ. ಇಲ್ಲಿಯವರೆಗೆ ಎರಡೂ ತಂಡಗಳ ನಡುವೆ ಒಟ್ಟು 32 ಪಂದ್ಯಗಳು ನಡೆದಿದ್ದು, ಸಿಎಸ್‌ಕೆ 16 ಪಂದ್ಯಗಳಲ್ಲಿ ಗೆದ್ದಿದ್ದರೆ, ಪಂಜಾಬ್ ಕಿಂಗ್ಸ್ ಕೂಡ 16 ಪಂದ್ಯಗಳಲ್ಲಿ ಗೆದ್ದಿದೆ. ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಉಭಯ ತಂಡಗಳ ನಡುವೆ ಒಂಬತ್ತು ಪಂದ್ಯಗಳು ನಡೆದಿದ್ದು, ಸಿಎಸ್‌ಕೆ ನಾಲ್ಕು ಪಂದ್ಯಗಳಲ್ಲಿ ಗೆದ್ದಿದ್ದರೆ, ಪಂಜಾಬ್ ಕಿಂಗ್ಸ್ ಐದು ಪಂದ್ಯಗಳಲ್ಲಿ ಗೆದ್ದಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us