ಭಾರತವನ್ನು ಭಾರತದಲ್ಲೇ ಬಗ್ಗು ಬಡಿಯುವುದು ಹೇಗೆಂದು ನಾವು ತೋರಿಸಿಕೊಟ್ಟಿದ್ದೇವೆ: ಟಿಮ್ ಸೌಥಿ

New Zealand vs India Test: ಭಾರತ ಮತ್ತು ನ್ಯೂಝಿಲೆಂಡ್ ನಡುವಣ ಮೂರನೇ ಟೆಸ್ಟ್ ಪಂದ್ಯವು ನವೆಂಬರ್ 1 ರಿಂದ ಶುರುವಾಗಲಿದೆ. ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಗೆಲ್ಲುವ ಮೂಲಕ ಟೀಮ್ ಇಂಡಿಯಾ ಕ್ಲೀನ್ ಸ್ವೀಪ್ ಸೋಲನ್ನು ತಪ್ಪಿಸಿಕೊಳ್ಳಬಹುದು.

ಭಾರತವನ್ನು ಭಾರತದಲ್ಲೇ ಬಗ್ಗು ಬಡಿಯುವುದು ಹೇಗೆಂದು ನಾವು ತೋರಿಸಿಕೊಟ್ಟಿದ್ದೇವೆ: ಟಿಮ್ ಸೌಥಿ
Tim Southee
Follow us
|

Updated on: Oct 30, 2024 | 8:32 AM

ಭಾರತದ ವಿರುದ್ಧದ ಮೂರು ಪಂದ್ಯಗಳ ಟೆಸ್ಟ್ ಸರಣಿಯನ್ನು ನ್ಯೂಝಿಲೆಂಡ್ 2-0 ಅಂತರದಿಂದ ವಶಪಡಿಸಿಕೊಂಡಿದೆ. ಬೆಂಗಳೂರಿನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ 8 ವಿಕೆಟ್​ಗಳ ಜಯ ಸಾಧಿಸಿದ್ದ ಕಿವೀಸ್ ಪಡೆ, ಪುಣೆಯಲ್ಲಿ ನಡೆದ ದ್ವಿತೀಯ ಟೆಸ್ಟ್ ಪಂದ್ಯವನ್ನು 113 ರನ್​ಗಳಿಂದ ಗೆದ್ದುಕೊಂಡಿದೆ. ಈ ಐತಿಹಾಸಿಕ ಸರಣಿ ಗೆಲುವಿನ ಬೆನ್ನಲ್ಲೇ ನ್ಯೂಝಿಲೆಂಡ್ ವೇಗಿ ಟಿಮ್ ಸೌಥಿ ನೀಡಿರುವ ಹೇಳಿಕೆಯು ಇದೀಗ ವೈರಲ್ ಆಗಿದೆ.

ಸಂದರ್ಶನವೊಂದರಲ್ಲಿ ಈ ಬಗ್ಗೆ ಮಾತನಾಡಿದ ಟಿಮ್ ಸೌಥಿ, ನಾವು ಭಾರತ ತಂಡವನ್ನು ಭಾರತದಲ್ಲೇ ಸೋಲಿಸಿದ್ದೇವೆ. ಟೀಮ್ ಇಂಡಿಯಾವನ್ನು ತವರಿನಲ್ಲಿ ಹೇಗೆ ಸೋಲಿಸಬೇಕೆಂಬುದನ್ನು ನಾವು ತೋರಿಸಿಕೊಟ್ಟಿದ್ದೇವೆ. ಏಕೆಂದರೆ ಭಾರತ ತಂಡವು ಕಳೆದ 12 ವರ್ಷಗಳಲ್ಲಿ ತವರಿನಲ್ಲಿ ಯಾವುದೇ ಸರಣಿ ಸೋತಿರಲಿಲ್ಲ. ಇದೀಗ ಅವರ ಗೆಲುವಿನ ನಾಗಾಲೋಟಕ್ಕೆ ನಾವು ಬ್ರೇಕ್ ಹಾಕಿದ್ದೇವೆ ಎಂದು ಟಿಮ್ ಸೌಥಿ ಸಂತಸ ವ್ಯಕ್ತಪಡಿಸಿದ್ದಾರೆ.

ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳನ್ನು ಅವರ ತವರಿನಲ್ಲಿ ಸೋಲಿಸುವುದು ಸುಲಭವಲ್ಲ. ಆದರೆ ಇದೀಗ ನಾವು ಟೀಮ್ ಇಂಡಿಯಾವನ್ನು ತವರಿನಲ್ಲಿ ಬ್ಯಾಕ್ ಟು ಬ್ಯಾಕ್ ಸೋಲಿಸಿದ್ದೇವೆ. ಅಲ್ಲದೆ 18 ಸರಣಿಗಳ ಅವರ ಗೆಲುವಿನ ಓಟಕ್ಕೂ ಬ್ರೇಕ್ ಬಿದ್ದಿದೆ.

ಈ ಗೆಲುವುಗಳ ಮೂಲಕ ಭಾರತದಲ್ಲಿ ಭಾರತ ತಂಡವನ್ನು ಸೋಲಿಸಲು ಸಾಧ್ಯ ಎಂಬುದನ್ನು ನಾವು ವಿಶ್ವದಾದ್ಯಂತದ ತಂಡಗಳಿಗೆ ಸಾರಿ ಹೇಳಿದ್ದೇವೆ. ಈ ಮೂಲಕ ತವರಿನಲ್ಲಿ ಟೀಮ್ ಇಂಡಿಯಾವನ್ನು ಹೇಗೆ ಸೋಲಿಸಬೇಕೆಂದು ನಾವೀಗ ತೋರಿಸಿಕೊಟ್ಟಿದ್ದೇವೆ ಎಂದು ಟಿಮ್ ಸೌಥಿ ಹೇಳಿದ್ದಾರೆ.

ನಾವು ಈಗ ಯಾವುದನ್ನು ಹೆಚ್ಚು ಯೋಚಿಸುವುದಿಲ್ಲ. ಅದುವೇ ನಮ್ಮ ತಂಡದ ಶಕ್ತಿ ಎಂದು ನಾನು ಭಾವಿಸುತ್ತೇನೆ. ನಿಮ್ಮ ಮುಂದೆ ಏನಿದೆ, ಅದನ್ನು ನೋಡಿ ಆಡುವುದು ಮತ್ತು ಅಲ್ಲಿಯೇ ಸವಾಲನ್ನು ಸ್ವೀಕರಿಸುವುದು ನಮ್ಮ ಹೊಸ ತಂತ್ರ. ಈ ತಂತ್ರದಿಂದಲೇ ಭಾರತ ತಂಡವನ್ನು ತವರಿನಲ್ಲಿ ಸೋಲಿಸಲು ಸಾಧ್ಯವಾಗಿದೆ ಎಂದು ಟಿಮ್ ಸೌಥಿ ಅಭಿಪ್ರಾಯಪಟ್ಟಿದ್ದಾರೆ.

ಅಂದಹಾಗೆ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ನ್ಯೂಝಿಲೆಂಡ್ ತಂಡವು ಭಾರತದಲ್ಲಿ ಟೆಸ್ಟ್ ಸರಣಿ ಗೆದ್ದಿದೆ. ಅಷ್ಟೇ ಅಲ್ಲದೆ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯಲಿರುವ ಮೂರನೇ ಟೆಸ್ಟ್ ಪಂದ್ಯದಲ್ಲಿ ಗೆಲುವು ದಾಖಲಿಸುವ ಮೂಲಕ ಹೊಸ ಇತಿಹಾಸ ಬರೆಯುವ ಅವಕಾಶ ಕೂಡ ನ್ಯೂಝಿಲೆಂಡ್ ಮುಂದಿದೆ.

ಇದನ್ನೂ ಓದಿ: IPL 2025: RCB ತಂಡಕ್ಕೆ ವಿರಾಟ್ ಕೊಹ್ಲಿ ನಾಯಕ?

ಅಂದರೆ ಭಾರತ ತಂಡವು ತವರಿನಲ್ಲಿ 3-0 ಅಂತರದಿಂದ ಸರಣಿ ಸೋತು 40 ವರ್ಷಗಳೇ ಕಳೆದಿವೆ. ಹೀಗಾಗಿ ಈ ಬಾರಿ ಹೊಸ ಇತಿಹಾಸ ಬರೆಯುವ ಅವಕಾಶ ಕಿವೀಸ್ ಪಡೆ ಮುಂದಿದ್ದು, ಸರಣಿ ಗೆಲುವಿನೊಂದಿಗೆ ನ್ಯೂಝಿಲೆಂಡ್ ತಂಡವು ಟೀಮ್ ಇಂಡಿಯಾವನ್ನು ಕ್ಲೀನ್ ಸ್ವೀಪ್ ಮಾಡಲಿದೆಯಾ ಕಾದು ನೋಡಬೇಕಿದೆ.

ಸಾಲಿಗ್ರಾಮ ಮನೆಯಲ್ಲಿದ್ದರೆ ಪೂಜಿಸುವುದು ಹೇಗೆಂದು ತಿಳಿಯಿರಿ
ಸಾಲಿಗ್ರಾಮ ಮನೆಯಲ್ಲಿದ್ದರೆ ಪೂಜಿಸುವುದು ಹೇಗೆಂದು ತಿಳಿಯಿರಿ
Nithya Bhavishya: ಜಲಪೂರ್ಣ ದಿನದಂದು ಯಾವ ರಾಶಿಗೆಲ್ಲಾ ಶುಭ, ಅಶುಭ
Nithya Bhavishya: ಜಲಪೂರ್ಣ ದಿನದಂದು ಯಾವ ರಾಶಿಗೆಲ್ಲಾ ಶುಭ, ಅಶುಭ
ವಿಡಿಯೋ: ಬೆಂಗಳೂರಿನಲ್ಲಿ ಮತ್ತೆ ಚಿರತೆ ಪ್ರತ್ಯಕ್ಷ: ಭಯಭೀತರಾದ ಜನ
ವಿಡಿಯೋ: ಬೆಂಗಳೂರಿನಲ್ಲಿ ಮತ್ತೆ ಚಿರತೆ ಪ್ರತ್ಯಕ್ಷ: ಭಯಭೀತರಾದ ಜನ
ಬಿಗ್ ಬಾಸ್ ಶೋನಿಂದ ಒಳ್ಳೆಯ ಪೇಮೆಂಟ್ ಸಿಕ್ತಾ? ಉತ್ತರ ನೀಡಿದ ಹಂಸಾ
ಬಿಗ್ ಬಾಸ್ ಶೋನಿಂದ ಒಳ್ಳೆಯ ಪೇಮೆಂಟ್ ಸಿಕ್ತಾ? ಉತ್ತರ ನೀಡಿದ ಹಂಸಾ
ಹಾಲಿನ ಪಾತ್ರೆಯಲ್ಲಿ ಉಗುಳಿದ ಡೆಲಿವರಿ ಬಾಯ್; ಶಾಕಿಂಗ್ ವಿಡಿಯೋ ವೈರಲ್
ಹಾಲಿನ ಪಾತ್ರೆಯಲ್ಲಿ ಉಗುಳಿದ ಡೆಲಿವರಿ ಬಾಯ್; ಶಾಕಿಂಗ್ ವಿಡಿಯೋ ವೈರಲ್
ರಂಗೋಲಿ ಹಾಕುತ್ತಿದ್ದ ಇಬ್ಬರು ಹುಡುಗಿಯರ ಮೇಲೆ ಕಾರು ಚಲಾಯಿಸಿದ ಬಾಲಕ
ರಂಗೋಲಿ ಹಾಕುತ್ತಿದ್ದ ಇಬ್ಬರು ಹುಡುಗಿಯರ ಮೇಲೆ ಕಾರು ಚಲಾಯಿಸಿದ ಬಾಲಕ
ಅಗಲಿದ ಪ್ರೀತಿಯ ಸಹೋದರನ ಸಮಾಧಿಗೆ ಶಿವಣ್ಣ ದಂಪತಿ ಪೂಜೆ
ಅಗಲಿದ ಪ್ರೀತಿಯ ಸಹೋದರನ ಸಮಾಧಿಗೆ ಶಿವಣ್ಣ ದಂಪತಿ ಪೂಜೆ
ಚನ್ನಪಟ್ಟಣ ಟಿಕೆಟ್ ತಪ್ಪಿತು ಯಾಕೆ ಅನ್ನೋದನ್ನು ವಿವರಿಸಿದ ರಘುನಂದನ್ ರಾಮಣ್ಣ
ಚನ್ನಪಟ್ಟಣ ಟಿಕೆಟ್ ತಪ್ಪಿತು ಯಾಕೆ ಅನ್ನೋದನ್ನು ವಿವರಿಸಿದ ರಘುನಂದನ್ ರಾಮಣ್ಣ
ಹಾಸನಾಂಬೆಯ ದರ್ಶನಕ್ಕೆ ಪ್ರತಿದಿನ ಆಗಮಿಸುತ್ತಿರುವ ರಾಜ್ಯದ ಗಣ್ಯರ ದಂಡು
ಹಾಸನಾಂಬೆಯ ದರ್ಶನಕ್ಕೆ ಪ್ರತಿದಿನ ಆಗಮಿಸುತ್ತಿರುವ ರಾಜ್ಯದ ಗಣ್ಯರ ದಂಡು
ಪ್ರಿಯಾಂಕಾ ವಯನಾಡ್​ನಿಂದ ಸ್ಪರ್ಧಿಸುವುದು ಕಾಂಗ್ರೆಸ್​ಗೆ ಸರಿ: ಕುಮಾರಸ್ವಾಮಿ
ಪ್ರಿಯಾಂಕಾ ವಯನಾಡ್​ನಿಂದ ಸ್ಪರ್ಧಿಸುವುದು ಕಾಂಗ್ರೆಸ್​ಗೆ ಸರಿ: ಕುಮಾರಸ್ವಾಮಿ