PAK vs SA: ದಾಖಲೆಯ ರನ್ ಚೇಸ್ ಮಾಡಿ ಗೆದ್ದ ಪಾಕಿಸ್ತಾನ್
Pakistan vs South Africa: ಸೌತ್ ಆಫ್ರಿಕಾ ವಿರುದ್ಧದ ಏಕದಿನ ಪಂದ್ಯದಲ್ಲಿ ಪಾಕಿಸ್ತಾನ್ ತಂಡವು 353 ರನ್ಗಳ ಗುರಿ ಬೆನ್ನತ್ತಿದೆ. ಈ ಗೆಲುವಿನೊಂದಿಗೆ ಏಕದಿನ ಕ್ರಿಕೆಟ್ನಲ್ಲಿ ಸೌತ್ ಆಫ್ರಿಕಾ ವಿರುದ್ಧ ಅತ್ಯಧಿಕ ಮೊತ್ತ ಚೇಸ್ ಮಾಡಿ ಗೆದ್ದ ತಂಡವೆಂಬ ಹೆಗ್ಗಳಿಕೆಯನ್ನು ಪಾಕ್ ಪಡೆ ತನ್ನದಾಗಿಸಿಕೊಂಡಿದೆ. ಅಲ್ಲದೆ ಈ ಜಯದೊಂದಿಗೆ ತ್ರಿಕೋನ ಸರಣಿಯ ಫೈನಲ್ಗೆ ಪಾಕಿಸ್ತಾನ್ ತಂಡ ಪ್ರವೇಶಿಸಿದೆ.

ಸೌತ್ ವಿರುದ್ದ ನಡೆದ ಏಕದಿನ ಪಂದ್ಯದಲ್ಲಿ ಪಾಕಿಸ್ತಾನ್ ತಂಡ ಭರ್ಜರಿ ಜಯ ಸಾಧಿಸಿದೆ. ಕರಾಚಿಯ ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ 353 ರನ್ಗಳನ್ನು ಬೆನ್ನತ್ತುವ ಮೂಲಕ ಪಾಕ್ ಪಡೆ ಹೊಸ ಇತಿಹಾಸ ನಿರ್ಮಿಸಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಸೌತ್ ಆಫ್ರಿಕಾ ತಂಡದ ನಾಯಕ ಟೆಂಬಾ ಬವುಮಾ ಬ್ಯಾಟಿಂಗ್ ಆಯ್ದುಕೊಂಡಿದ್ದರು.
ಅದರಂತೆ ಇನಿಂಗ್ಸ್ ಆರಂಭಿಸಿದ ಟೆಂಬಾ ಬವುಮಾ 82 ರನ್ ಬಾರಿಸಿ ತಂಡಕ್ಕೆ ಉತ್ತಮ ಆರಂಭ ಒದಗಿಸಿದ್ದರು. ಇನ್ನು ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಮ್ಯಾಥ್ಯೂ ಬ್ರೀಟ್ಝ್ಕೆ 84 ಎಸೆತಗಳಲ್ಲಿ 1 ಸಿಕ್ಸ್ ಹಾಗೂ 10 ಫೋರ್ಗಳೊಂದಿಗೆ 83 ರನ್ ಚಚ್ಚಿದರು.
ಆ ಬಳಿಕ ಬಂದ ಹೆನ್ರಿಕ್ ಕ್ಲಾಸೆನ್ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸುವ ಮೂಲಕ ಕೇವಲ 56 ಎಸೆತಗಳಲ್ಲಿ 3 ಸಿಕ್ಸ್ ಹಾಗೂ 11 ಫೋರ್ಗಳೊಂದಿಗೆ 87 ರನ್ ಬಾರಿಸಿದರು. ಈ ಮೂಲಕ ಸೌತ್ ಆಫ್ರಿಕಾ ತಂಡವು 50 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು 352 ರನ್ ಕಲೆಹಾಕಿತು.
353 ರನ್ಗಳ ಕಠಿಣ ಗುರಿ:
ಈ ಗುರಿಯನ್ನು ಬೆನ್ನತ್ತಿದ ಪಾಕಿಸ್ತಾನ್ ತಂಡಕ್ಕೆ ಫಖರ್ ಝಮಾನ್ (41) ಉತ್ತಮ ಆರಂಭ ಒದಗಿಸಿದರು. ಆದರೆ ಬಾಬರ್ ಆಝಂ (23) ಹಾಗೂ ಸೌದ್ ಶಕೀಲ್ (15) ಬೇಗನೆ ವಿಕೆಟ್ ಒಪ್ಪಿಸಿದ್ದರು. ಈ ಹಂತದಲ್ಲಿ ಜೊತೆಗೂಡಿದ ನಾಯಕ ಮೊಹಮ್ಮದ್ ರಿಝ್ವಾನ್ ಹಾಗೂ ಸಲ್ಮಾನ್ ಅಘಾ ದ್ವಿಶತಕದ ಜೊತೆಯಾಟದೊಂದಿಗೆ ಇನಿಂಗ್ಸ್ ಕಟ್ಟಿದರು.
ಇದರ ನಡುವೆ ಸಲ್ಮಾನ್ ಅಘಾ 87 ಎಸೆತಗಳಲ್ಲಿ ಶತಕ ಪೂರೈಸಿದರೆ, ಮೊಹಮ್ಮದ್ ರಿಝ್ವಾನ್ 106 ಎಸೆತಗಳಲ್ಲಿ ಸೆಂಚುರಿ ಸಿಡಿಸಿದರು. ಶತಕದ ಬಳಿಕ ಕೂಡ ಪಾಲುದಾರಿಕೆ ಮುಂದುವರೆಸಿದ ಈ ಜೋಡಿಯು ನಿರಾಯಾಸವಾಗಿ ಸೌತ್ ಆಫ್ರಿಕಾ ವೇಗಿಗಳನ್ನು ಎದುರಿಸಿದರು.
ಅಂತಿಮವಾಗಿ ಸಲ್ಮಾನ್ ಅಘಾ ಅಜೇಯ 134 ರನ್ ಬಾರಿಸಿದರೆ, ರಿಝ್ವಾನ್ ಅಜೇಯ 122 ರನ್ ಸಿಡಿಸಿದರು. ಈ ಮೂಲಕ 48.5 ಓವರ್ಗಳಲ್ಲಿ ತಂಡವನ್ನು ಗುರಿ ಮುಟ್ಟಿಸಿ ಪಾಕಿಸ್ತಾನ್ ತಂಡಕ್ಕೆ 7 ವಿಕೆಟ್ಗಳ ಭರ್ಜರಿ ಜಯ ತಂದುಕೊಟ್ಟರು.
ದಾಖಲೆಯ ಗೆಲುವು:
ಈ ವಿಜಯವು ಏಕದಿನ ಕ್ರಿಕೆಟ್ನಲ್ಲಿ ಪಾಕಿಸ್ತಾನ್ ತಂಡದ ದಾಖಲೆಯ ಗೆಲುವು. ಅಂದರೆ ಪಾಕ್ ಪಡೆ ಇದೇ ಮೊದಲ ಬಾರಿಗೆ 350+ ರನ್ಗಳ ಗುರಿಯನ್ನು ಬೆನ್ನತ್ತಿ ಗೆಲುವು ದಾಖಲಿಸಿದೆ.
ಇದಕ್ಕೂ ಮುನ್ನ 2022 ರಲ್ಲಿ ಆಸ್ಟ್ರೇಲಿಯಾ ವಿರುದ್ಧ 349 ರನ್ಗಳನ್ನು ಬೆನ್ನತ್ತಿ ಗೆದ್ದಿರುವುದು ಶ್ರೇಷ್ಠ ಸಾಧನೆಯಾಗಿತ್ತು. ಇದೀಗ ಸೌತ್ ಆಫ್ರಿಕಾ ವಿರುದ್ಧ 355 ರನ್ ಬಾರಿಸಿ ಐತಿಹಾಸಿಕ ಗೆಲುವು ದಾಖಲಿಸುವಲ್ಲಿ ಯಶಸ್ವಿಯಾಗಿದೆ.
RECORDS GALORE 🚨
Highest successful ODI run-chase for Pakistan ✅ Highest successful ODI run-chase for any team against South Africa ✅ Highest ODI total for Pakistan against South Africa ✅#3Nations1Trophy | #PAKvSA pic.twitter.com/Az8S3zPU4d
— Zsports (@_Zsports) February 13, 2025
ಪಾಕಿಸ್ತಾನ್ ಪ್ಲೇಯಿಂಗ್ 11: ಫಖರ್ ಝಮಾನ್ , ಬಾಬರ್ ಆಝಂ, ಸೌದ್ ಶಕೀಲ್ , ಮೊಹಮ್ಮದ್ ರಿಝ್ವಾನ್ (ನಾಯಕ) , ಸಲ್ಮಾನ್ ಅಘಾ , ತಯ್ಯಬ್ ತಾಹಿರ್ , ಖುಷ್ದಿಲ್ ಶಾ , ಶಾಹೀನ್ ಅಫ್ರಿದಿ , ಮೊಹಮ್ಮದ್ ಹಸ್ನೇನ್ , ನಸೀಮ್ ಶಾ , ಅಬ್ರಾರ್ ಅಹ್ಮದ್.
ಇದನ್ನೂ ಓದಿ: ಭಾರತ ತಂಡಕ್ಕೆ ಮೊಹಮ್ಮದ್ ಸಿರಾಜ್ ಮತ್ತೆ ಆಯ್ಕೆ… ಆದರೆ
ಸೌತ್ ಆಫ್ರಿಕಾ ಪ್ಲೇಯಿಂಗ್ 11: ಟೆಂಬಾ ಬವುಮಾ (ನಾಯಕ) , ಟೋನಿ ಡಿ ಝೊರ್ಝಿ , ಮ್ಯಾಥ್ಯೂ ಬ್ರೀಟ್ಝ್ಕೆ , ಕೈಲ್ ವೆರ್ರೆನ್ನೆ , ಹೆನ್ರಿಕ್ ಕ್ಲಾಸೆನ್ (ವಿಕೆಟ್ ಕೀಪರ್) , ವಿಯಾನ್ ಮುಲ್ಡರ್ , ಸೆನುರಾನ್ ಮುತ್ತುಸಾಮಿ , ಕಾರ್ಬಿನ್ ಬಾಷ್ , ಕೇಶವ್ ಮಹಾರಾಜ್ , ಲುಂಗಿ ಎನ್ಗಿಡಿ , ತಬ್ರೇಝ್ ಶಮ್ಸಿ.
