IND vs PAK: ಅವರು ನಮ್ಮ ಕೈಕುಲುಕಲಿಲ್ಲ: ಟೀಮ್ ಇಂಡಿಯಾ ವಿರುದ್ಧ ದೂರು ನೀಡಿದ ಪಾಕಿಸ್ತಾನ
India vs Pakistan Handshake Controversy: ಸೂರ್ಯಕುಮಾರ್ ಯಾದವ್ ನೇತೃತ್ವದ ಭಾರತ ತಂಡ ಪಂದ್ಯದ ನಂತರ ಹಸ್ತಲಾಘವ ಮಾಡಲು ನಿರಾಕರಿಸಿದಕ್ಕಾಗಿ ಪಾಕಿಸ್ತಾನ ಅಧಿಕೃತ ದೂರು ದಾಖಲಿಸಿತು. ಪಿಸಿಬಿ ಇದು ಕ್ರೀಡಾ ಮನೋಭಾವಕ್ಕೆ ವಿರುದ್ಧವಾಗಿದೆ ಎಂದು ಹೇಳಿದೆ. ಟಾಸ್ ಸಮಯದಲ್ಲಿ ಮತ್ತು ಪಂದ್ಯ ಗೆದ್ದ ನಂತರವೂ ಭಾರತ ತಂಡವು ಪಾಕಿಸ್ತಾನ ತಂಡದೊಂದಿಗೆ ಕೈಕುಲುಕಲಿಲ್ಲ.

ಬೆಂಗಳೂರು (ಸೆ. 15): ದುಬೈ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಏಷ್ಯಾ ಕಪ್ 2025 ರ ಗ್ರೂಪ್ ಎ ಪಂದ್ಯದಲ್ಲಿ ಏಳು ವಿಕೆಟ್‌ಗಳ ಅಮೋಘ ಜಯಗಳಿಸಿದ ನಂತರ ಟೀಮ್ ಇಂಡಿಯಾ (Indian Cricket Team) ಎದುರಾಳಿ ಪಾಕಿಸ್ತಾನ ತಂಡದೊಂದಿಗೆ ಕೈಕುಲುಕಲು ನಿರಾಕರಿಸಿಯಿ. ಇದಾದ ನಂತರ ಪಾಕಿಸ್ತಾನ ತಂಡದ ವ್ಯವಸ್ಥಾಪಕ ನವೀದ್ ಅಕ್ರಮ್ ಚೀಮಾ ಅವರು ಮ್ಯಾಚ್ ರೆಫರಿ ಆಂಡಿ ಪೈಕ್ರಾಫ್ಟ್‌ಗೆ ಈ ಕುರಿತು ದೂರು ಸಲ್ಲಿಸಿದ್ದಾರೆ ಎಂದು ವರದಿ ಆಗಿದೆ.
ವಾಸ್ತವವಾಗಿ, ಟಾಸ್ ಸಮಯದಲ್ಲಿ ಮತ್ತು ಪಂದ್ಯ ಗೆದ್ದ ನಂತರವೂ ಭಾರತ ತಂಡವು ಪಾಕಿಸ್ತಾನ ತಂಡದೊಂದಿಗೆ ಕೈಕುಲುಕಲಿಲ್ಲ. ಇದು ಸಲ್ಮಾನ್ ಅಲಿ ಅಘಾ ಅವರಿಗೆ ನೋವುಂಟು ಮಾಡಿತು. ಪಹಲ್ಗಾಮ್ ದಾಳಿಯನ್ನು ಪ್ರತಿಭಟಿಸಿ ಭಾರತ ತಂಡ ಈ ನಿರ್ಧಾರವನ್ನು ತೆಗೆದುಕೊಂಡಿತ್ತು. ಭಾರತೀಯ ಆಟಗಾರರು ಕೈಕುಲುಕದೇ ವರ್ತಿಸಿದ್ದಕ್ಕೆ ತಂಡದ ವ್ಯವಸ್ಥಾಪಕ ನವೀದ್ ಚೀಮಾ ತೀವ್ರ ವಿರೋಧ ವ್ಯಕ್ತಪಡಿಸಿದರು. ಇದನ್ನು ಅನುಚಿತ ಮತ್ತು ಆಟದ ಉತ್ಸಾಹಕ್ಕೆ ವಿರುದ್ಧವೆಂದು ಪರಿಗಣಿಸಲಾಗಿದೆ. ಇದನ್ನು ವಿರೋಧಿಸಿ, ನಾವು ನಮ್ಮ ನಾಯಕನನ್ನು ಪಂದ್ಯದ ನಂತರದ ಬಹುಮಾನ ವಿತರಣಾ ಸಮಾರಂಭಕ್ಕೆ ಕಳುಹಿಸಲಿಲ್ಲ ಎಂದಿದ್ದಾರೆ.
ಪಾಕಿಸ್ತಾನ ಕ್ರಿಕೆಟ್ ಮಂಡಳಿಯು ವಾಟ್ಸ್ಆ್ಯಪ್ ಮೂಲಕ ಹಂಚಿಕೊಂಡ ಅಧಿಕೃತ ಹೇಳಿಕೆಯು, ಟಾಸ್ ಸಮಯದಲ್ಲಿ ಸೂರ್ಯಕುಮಾರ್ ಯಾದವ್ ಅವರೊಂದಿಗೆ ಕೈಕುಲುಕದಂತೆ ಮ್ಯಾಚ್ ರೆಫರಿ ಪೈಕ್ರಾಫ್ಟ್ ಸಲ್ಮಾನ್ ಆಘಾ ಅವರಿಗೆ ತಿಳಿಸಿರುವುದಾಗಿ ದೃಢಪಡಿಸಿದೆ. “ಭಾರತೀಯ ಕ್ರಿಕೆಟ್ ತಂಡದ ವರ್ತನೆ ಕ್ರೀಡಾ ಮನೋಭಾವಕ್ಕೆ ವಿರುದ್ಧವಾಗಿದೆ ಎಂದು ಪಾಕಿಸ್ತಾನ ಕ್ರಿಕೆಟ್ ತಂಡದ ವ್ಯವಸ್ಥಾಪಕ ನವೀದ್ ಅಕ್ರಮ್ ಚೀಮಾ ಅಧಿಕೃತವಾಗಿ ಪ್ರತಿಭಟನೆ ದಾಖಲಿಸಿದ್ದಾರೆ” ಎಂದು ಅಧಿಕೃತ ಹೇಳಿಕೆ ತಿಳಿಸಿದೆ.
IND vs PAK: ಯಾಕೆ ಕೈಕುಲುಕಲಿಲ್ಲ ಎಂದು ಕೇಳಿದ ಪತ್ರಕರ್ತನಿಗೆ ಮುಖಕ್ಕೆ ಹೊಡೆದಂತೆ ತಿರುಗೇಟು ಕೊಟ್ಟ ಸೂರ್ಯಕುಮಾರ್
“ಭಾರತ ತಂಡದ ವರ್ತನೆಯನ್ನು ವಿರೋಧಿಸಿ ಸಲ್ಮಾನ್ ಅಲಿ ಆಘಾ ಪಂದ್ಯದ ನಂತರದ ಪೋಸ್ಟ್ ಮ್ಯಾಚ್ ಪ್ರೆಸೆಂಟೇಷನ್ ಅನ್ನು ತಪ್ಪಿಸಿಕೊಂಡರು” ಎಂದು ಹೇಳಿಕೆಯಲ್ಲಿ ಸೇರಿಸಲಾಗಿದೆ.
ಆದರೆ, ಪಾಕಿಸ್ತಾನದ ಈ ದೂರಿನಿಂದ ಯಾವುದೇ ಪ್ರಯೋಜನವಿಲ್ಲ ಎಂದು ಕೂಡ ವರದಿ ಆಗಿದೆ. ಏಕೆಂದರೆ ಇದಕ್ಕೆ ಯಾವುದೇ ರೀತಿಯ ಶಿಕ್ಷೆ ಅಥವಾ ನಿಷೇಧ ಹೇರಲು ಅವಕಾಶವಿಲ್ಲ. ಭಾರತೀಯ ಆಟಗಾರರು ಪಂದ್ಯವನ್ನು ಖಂಡಿತವಾಗಿಯೂ ಆಡಿದ್ದಾರೆ, ಆದರೆ ಪಾಕಿಸ್ತಾನದೊಂದಿಗೆ ಯಾವುದೇ ರೀತಿಯ ಸ್ನೇಹಪರ ನಡವಳಿಕೆಯನ್ನು ಕಾಪಾಡಿಕೊಳ್ಳುವುದಿಲ್ಲ ಎಂಬ ಸಂದೇಶವನ್ನು ಕಳುಹಿಸಲು ಬಯಸಿದ್ದರು.
ಆದಾಗ್ಯೂ, 2025 ರ ಏಷ್ಯಾ ಕಪ್‌ಗಾಗಿ ನಾಯಕರ ಸಭೆ ನಡೆದಾಗ, ಸೂರ್ಯಕುಮಾರ್ ಯಾದವ್ ಎಸಿಸಿ ಅಧ್ಯಕ್ಷ ಮೊಹ್ಸಿನ್ ನಖ್ವಿ (ಇವರು ಪಿಸಿಬಿ ಅಧ್ಯಕ್ಷರೂ ಆಗಿದ್ದಾರೆ) ಅವರೊಂದಿಗೆ ಕೈಕುಲುಕಿದರು ಮತ್ತು ನಾಯಕ ಸಲ್ಮಾನ್ ಅಲಿ ಆಘಾ ಅವರೊಂದಿಗೆ ಕೈಕುಲುಕಿದರು. ಇದಕ್ಕಾಗಿ ಅವರನ್ನು ಟೀಕಿಸಲಾಯಿತು, ಆದರೆ ಪಂದ್ಯವನ್ನು ಮುಗಿಸಿದ ನಂತರ, ನಾಯಕ ಸೂರ್ಯಕುಮಾರ್ ಯಾದವ್ ನೇರವಾಗಿ ತಮ್ಮ ಸಹ ಬ್ಯಾಟ್ಸ್‌ಮನ್ ಶಿವಂ ದುಬೆ ಅವರೊಂದಿಗೆ ಡ್ರೆಸ್ಸಿಂಗ್ ಕೋಣೆಗೆ ಹೋದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




