Priyansh Arya: ಪಂಜಾಬ್ ಕಿಂಗ್ಸ್-ರಾಜಸ್ಥಾನ್ ಪಂದ್ಯದ ನಡುವೆ ಹರಿಯಿತು ನೆತ್ತರು: ಇದಕ್ಕೆ ಕಾರಣ ಪ್ರಿಯಾಂಶ್ ಆರ್ಯ

PBKS vs RR, IPL 2026: ಐಪಿಎಲ್ 2026 ರಲ್ಲಿ ಮಂಗಳವಾರ ನಡೆದ ಪಂಜಾಬ್ ಕಿಂಗ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ನಡುವಿನ ಪಂದ್ಯ ರೋಚಕತೆಯಿಂದ ಕೂಡಿತ್ತು. ಈ ಸ್ಕೋರಿಂಗ್ ಪಂದ್ಯದಲ್ಲಿ ಪಂಜಾಬ್ ಬ್ಯಾಟರ್ ಪ್ರಿಯಾಂಶ್ ಆರ್ಯ ಸಿಡಿಸಿದ ಒಂದು ಸಿಕ್ಸ್ ಎಲ್ಲರನ್ನೂ ಶಾಕ್ಗೆ ಒಳಪಡಿಸಿತು. ಈ ಒಂದು ಸಿಕ್ಸ್​ನಿಂದ ರಕ್ತಸ್ರಾವ ಕೂಡ ಆಯಿತು. ಅಷ್ಟು ಮೈದಾನದಲ್ಲಿ ಏನಾಯಿತು?. ಈ ಕುರಿತ ಮಾಹಿತಿ ಇಲ್ಲಿದೆ ಓದಿ.

Priyansh Arya: ಪಂಜಾಬ್ ಕಿಂಗ್ಸ್-ರಾಜಸ್ಥಾನ್ ಪಂದ್ಯದ ನಡುವೆ ಹರಿಯಿತು ನೆತ್ತರು: ಇದಕ್ಕೆ ಕಾರಣ ಪ್ರಿಯಾಂಶ್ ಆರ್ಯ
Priyansh Arya Six Punjab Fan Blood
Edited By:

Updated on: Apr 29, 2026 | 10:17 AM

ಬೆಂಗಳೂರು (ಏ. 29): ಐಪಿಎಲ್ 2026 ರಲ್ಲಿ ಏಪ್ರಿಲ್ 28 ರಂದು ನಡೆದ ಪಂಜಾಬ್ ಕಿಂಗ್ಸ್ (Punjab Kings) ವಿರುದ್ಧದ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಭರ್ಜರಿ ಗೆಲುವು ಸಾಧಿಸಿತು. ಈ ಟೂರ್ನಿಯಲ್ಲಿ ಪಂಜಾಬ್ ಪಡೆ ಮೊದಲ ಸೋಲು ಕಂಡಿತು. ಸಾಕಷ್ಟು ರೋಚಕತೆಯಿಂದ ಕೂಡಿದ್ದ ಈ ಹೈ-ಸ್ಕೋರ್ ಪಂದ್ಯದಲ್ಲಿ ಕೆಲ ಅಚ್ಚರಿಯ ಘಟನೆ ಕೂಡ ನಡೆಯಿತು. ಮುಖ್ಯವಾಗಿ ಈ ಪಂದ್ಯದ ಸಮಯದಲ್ಲಿ ಕ್ರೀಡಾಂಗಣದಲ್ಲಿ ನೆತ್ತರು ಹರಿಯಿತು. ಪಂಜಾಬ್ ಕಿಂಗ್ಸ್ ಬ್ಯಾಟಿಂಗ್ ಮಾಡುತ್ತಿದ್ದ ಸಮಯದಲ್ಲಿ ಈ ಘಟನೆ ಸಂಭವಿಸಿದೆ. ಇದಕ್ಕೆ ಕಾರಣವಾಗಿದ್ದು ಪ್ರಿಯಾಂಶ್ ಆರ್ಯ. ಪ್ರಿಯಾಂಶ್ ಆರ್ಯ ಸಿಡಿಸಿದ ಒಂದು ಸಿಕ್ಸ್ ಕ್ರೀಡಾಂಗಣದಲ್ಲಿ ಕುಳಿತಿದ್ದ ವೃದ್ಧರೊಬ್ಬರಿಗೆ ತಾಗಿ ತೀವ್ರವಾಗಿ ಗಾಯಗೊಂಡು ರಕ್ತಸ್ರಾವ ಸಂಭವಿಸಿತು.

ಪ್ರಿಯಾಂಶ್ ಆರ್ಯ ಸಿಕ್ಸರ್​ನಿಂದ ಪಂಜಾಬ್ ಅಭಿಮಾನಿಗೆ ಗಾಯ

ಪ್ರಿಯಾಂಶ್ ಆರ್ಯ ರಾಜಸ್ಥಾನ್ ರಾಯಲ್ಸ್ ವಿರುದ್ಧ 11 ಎಸೆತಗಳಲ್ಲಿ 29 ರನ್ ಗಳಿಸಿದರು, ಐದು ಬೌಂಡರಿ ಮತ್ತು ಒಂದು ಸಿಕ್ಸರ್ ಬಾರಿಸಿದರು. ಅವರು ಹೊಡೆದ ಏಕೈಕ ಸಿಕ್ಸರ್ ಕ್ರೀಡಾಂಗಣದಲ್ಲಿ ಕುಳಿತಿದ್ದ ಹಿರಿಯ ಪಂಜಾಬ್ ಕಿಂಗ್ಸ್ ಅಭಿಮಾನಿಗೆ ಮಾರಕವಾಯಿತು. ಚೆಂಡು ಹಿರಿಯ ಕ್ರಿಕೆಟ್ ಅಭಿಮಾನಿಯ ಮುಖಕ್ಕೆ ನೇರವಾಗಿ ಬಂದು, ಅವರ ಕಣ್ಣು ಮತ್ತು ಮೂಗಿನ ನಡುವಿನ ಪ್ರದೇಶಕ್ಕೆ ತಾಗಿತು. ಪರಿಣಾಮ, ಚೆಂಡು ತಗುಲಿದ ಪ್ರದೇಶದಿಂದ ರಕ್ತಸ್ರಾವ ಆಗಿದೆ.

 

ಗಾಯಗೊಂಡ ಅಭಿಮಾನಿಗೆ ತಕ್ಷಣ ವೈದ್ಯಕೀಯ ಚಿಕಿತ್ಸೆ

ಪ್ರಿಯಾಂಶ್ ಆರ್ಯ ಅವರ ಸಿಕ್ಸರ್​ನಿಂದ ಗಂಭೀರವಾಗಿ ಗಾಯಗೊಂಡ ನಂತರ, ಕ್ರೀಡಾಂಗಣದ ವೈದ್ಯಕೀಯ ತಂಡವು ತಕ್ಷಣವೇ ಆ ವ್ಯಕ್ತಿಯನ್ನು ಪರೀಕ್ಷಿಸಿ ಬ್ಯಾಂಡೇಜ್ ಹಾಕಿ ಚಿಕಿತ್ಸೆ ನೀಡಿತು. ಸಾಮಾನ್ಯವಾಗಿ, ಕ್ರೀಡಾಂಗಣದೊಳಗೆ ಉಂಟಾಗುವ ಯಾವುದೇ ಗಾಯಗಳು ಅಥವಾ ಹಾನಿಗೆ ಐಪಿಎಲ್ ಸಂಘಟಕರು ನೇರವಾಗಿ ಜವಾಬ್ದಾರರಾಗಿರುವುದಿಲ್ಲ. ಇದನ್ನು ಟಿಕೆಟ್ ನಿಯಮಗಳಲ್ಲಿಯೂ ಹೇಳಲಾಗಿದೆ. ಆದಾಗ್ಯೂ, ಸಂಘಟಕರು ಯಾವುದೇ ಅಪಾಯಗಳ ಬಗ್ಗೆ ಪ್ರೇಕ್ಷಕರಿಗೆ ಎಚ್ಚರಿಕೆ ನೀಡುತ್ತಾರೆ. ವೈದ್ಯಕೀಯ ಪ್ರೋಟೋಕಾಲ್‌ಗಳ ಅಡಿಯಲ್ಲಿ, ಅವರು ಪ್ರಾಥಮಿಕ ಪರೀಕ್ಷೆಯನ್ನು ಮತ್ತು ಅಗತ್ಯವಿದ್ದರೆ, ಅವರನ್ನು ಆಸ್ಪತ್ರೆಗೆ ಸಾಗಿಸಲು ಸಹಾಯವನ್ನು ಮಾಡುತ್ತಾರೆ.

DC vs RCB: ಜಾಕೋಬ್ ಬೆಥೆಲ್‌ ಸಿಡಿಸಿದ 104 ಮೀಟರ್ ಸಿಕ್ಸ್ ಕಂಡು ಶಾಕ್ ಆದ ಕೊಹ್ಲಿ: ವಿಡಿಯೋ ನೋಡಿ

ಕೆಲವು ಸಂದರ್ಭಗಳಲ್ಲಿ, ಆಟಗಾರರು ಗಾಯಗೊಂಡ ಫ್ಯಾನ್​ಗೆ ಸಹಾಯ ಮಾಡುವುದನ್ನು ನಾವು ನೋಡಿದ್ದೇವೆ. ಹಾರ್ದಿಕ್ ಪಾಂಡ್ಯ, ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಇದಕ್ಕೆ ಉದಾಹರಣೆಗಳಾಗಿದ್ದು, ತಮ್ಮ ಹೊಡೆತಗಳಿಂದ ಗಾಯಗೊಂಡ ಕ್ರಿಕೆಟ್ ಅಭಿಮಾನಿಗಳಿಗೆ ಚಿಕಿತ್ಸೆ ನೀಡಲು ಸಹಾಯ ಮಾಡಿದ್ದಾರೆ ಅಥವಾ ಪಂದ್ಯಗಳ ನಂತರ ಅವರ ಯೋಗಕ್ಷೇಮವನ್ನು ವಿಚಾರಿಸಲು ಸಂಪರ್ಕಿಸಿದ್ದೂ ಇದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us