AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

DC vs RCB: ಜಾಕೋಬ್ ಬೆಥೆಲ್‌ ಸಿಡಿಸಿದ 104 ಮೀಟರ್ ಸಿಕ್ಸ್ ಕಂಡು ಶಾಕ್ ಆದ ಕೊಹ್ಲಿ: ವಿಡಿಯೋ ನೋಡಿ

Jacob Bethell 104 Meter Six: ದೆಹಲಿ ಕ್ಯಾಪಿಟಲ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಿನ ಪಂದ್ಯದಲ್ಲಿ, ಆರ್​ಸಿಬಿಯ ಓಪನರ್ ಜಾಕೋಬ್ ಬೆಥೆಲ್ 104 ಮೀಟರ್‌ಗಳ ಲಾಂಗ್ ಸಿಕ್ಸ್ ಬಾರಿಸಿದರು. ಇದನ್ನು ಕಂಡು ಕೇವಲ ಸ್ಟೇಡಿಯಂನಲ್ಲಿದ್ದ ಫ್ಯಾನ್ಸ್ ಮಾತ್ರವಲ್ಲದೆ ಮತ್ತೊಂದು ತುದಿಯಲ್ಲಿದ್ದ ವಿರಾಟ್ ಕೊಹ್ಲಿ ಕೂಡ ಶಾಕ್ ಆದರು. ಇದರ ವಿಡಿಯೋ ಈಗ ಸಾಮಾಜಿಕ ಮಾಧ್ಯಮದಲ್ಲಿ ಸಖತ್ ವೈರಲ್ ಆಗುತ್ತಿದೆ.

DC vs RCB: ಜಾಕೋಬ್ ಬೆಥೆಲ್‌ ಸಿಡಿಸಿದ 104 ಮೀಟರ್ ಸಿಕ್ಸ್ ಕಂಡು ಶಾಕ್ ಆದ ಕೊಹ್ಲಿ: ವಿಡಿಯೋ ನೋಡಿ
Jacob Bethell Six And Virat Kohli Reaction
ಸಾಯಿನಂದಾ
| Edited By: |

Updated on: Apr 28, 2026 | 9:29 AM

Share

ಬೆಂಗಳೂರು (ಏ. 28): 2026 ರ ಇಂಡಿಯನ್ ಪ್ರೀಮಿಯರ್ ಲೀಗ್‌ನ 39 ನೇ ಪಂದ್ಯವು ಡೆಲ್ಲಿ ಕ್ಯಾಪಿಟಲ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವೆ ನಡೆಯಿತು. ಆರ್‌ಸಿಬಿಯ ಸ್ಟಾರ್ ಮತ್ತು ಯುವ ಇಂಗ್ಲಿಷ್ ಬ್ಯಾಟ್ಸ್‌ಮನ್ ಜಾಕೋಬ್ ಬೆಥೆಲ್ (Jacob Bethell) ಈ ಪಂದ್ಯದಲ್ಲಿ ಆಡುವ ಅವಕಾಶ ಪಡೆದರು. ಈ ಪಂದ್ಯದಲ್ಲಿ ಜಾಕೋಬ್ ಸಣ್ಣ ಇನ್ನಿಂಗ್ಸ್ ಆಡಿದರೂ, ಇವರು ಬಾರಿಸಿದ ಒಂದು ಶಾಟ್ ಎಲ್ಲರನ್ನೂ ದಂಗಾಗಿಸಿತು. ಜಾಕೋಬ್ ಬೆಥೆಲ್ ಡೆಲ್ಲಿ ಕ್ಯಾಪಿಟಲ್ಸ್​ನ ವೇಗಿ ಕೈಲ್ ಜೇಮಿಸನ್ ಬೌಲಿಂಗ್​ನಲ್ಲಿ ಅದ್ಭುತವಾದ ಸಿಕ್ಸರ್ ಬಾರಿಸಿದರು, ಅದರ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಸಖತ್ ವೈರಲ್ ಆಗುತ್ತದೆ.

ಜೇಮಿಸನ್ ಬೌಲಿಂಗ್​ನಲ್ಲಿ 104 ಮೀಟರ್ ಸಿಕ್ಸ್ ಸಿಡಿಸಿದ ಬೆಥೆಲ್

ನ್ಯೂಜಿಲೆಂಡ್ ವೇಗಿ ಕೈಲ್ ಜೇಮಿಸನ್ ಡೆಲ್ಲಿ ಕ್ಯಾಪಿಟಲ್ಸ್ ಪರ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಮೂರನೇ ಓವರ್ ಬೌಲಿಂಗ್ ಮಾಡುತ್ತಿದ್ದರು. ಅವರ ಓವರ್‌ನಲ್ಲಿ, ಜಾಕೋಬ್ ಬೆಥೆಲ್ ಶಾರ್ಟ್ ಬಾಲ್‌ನಲ್ಲಿ ಔಟಾದರು, ಆದರೆ ಇದಕ್ಕೂ ಮುನ್ನ 104 ಮೀಟರ್ ಉದ್ದದ ಸಿಕ್ಸ್ ಬಾರಿಸಿದ್ದು ಅದ್ಭುತವಾಗಿತ್ತು. ಅವರು ಜೇಮಿಸನ್ ಎಸೆತದಲ್ಲಿ ಅದ್ಭುತ ಪುಲ್ ಶಾಟ್ ಹೊಡೆದರು. ಇದನ್ನು ಫ್ಯಾನ್ಸ್ ಮಾತ್ರವಲ್ಲದೆ ಮತ್ತೊಂದು ತುದಿಯಲ್ಲಿದ್ದ ವಿರಾಟ್ ಕೊಹ್ಲಿ ಕೂಡ ದಂಗಾಗಿ ಹೋದರು. ಬ್ರಾಡ್‌ಕಾಸ್ಟರ್ ಸ್ಟಾರ್ ಸ್ಪೋರ್ಟ್ಸ್ ಈ ಸಿಕ್ಸ್‌ನ ವಿಡಿಯೋವನ್ನು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದೆ.

ಜಾಕೋಬ್ ಬೆಥೆಲ್ ಸಿಡಿಸಿದ ಸಿಕ್ಸ್​ನ ವಿಡಿಯೋ:

ಆರ್‌ಸಿಬಿ ತಂಡ ದೆಹಲಿಯನ್ನು ನಾಲ್ಕು ವಿಕೆಟ್‌ಗಳಿಂದ ಸೋಲಿಸಿತು

ಏಪ್ರಿಲ್ 27 ರಂದು ನಡೆದ ದೆಹಲಿ ಮತ್ತು ಬೆಂಗಳೂರು ನಡುವಿನ ಪಂದ್ಯದಲ್ಲಿ ಬೆಂಗಳೂರು ತಂಡವು ಡಿಸಿ ತಂಡವನ್ನು 9 ವಿಕೆಟ್‌ಗಳಿಂದ ಸೋಲಿಸಿತು. ಈ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ನ ಬ್ಯಾಟಿಂಗ್ ತೀರಾ ಕಳಪೆ ಮಟ್ಟದಲ್ಲಿತ್ತು. ಡೆಲ್ಲಿ ತಂಡವು ಕೇವಲ 75 ರನ್‌ಗಳಿಗೆ ಸೀಮಿತವಾಯಿತು. ಆರ್‌ಸಿಬಿ ಕೇವಲ 6.3 ಓವರ್‌ಗಳಲ್ಲಿ 76 ರನ್‌ಗಳ ಗುರಿಯನ್ನು ಬೆನ್ನಟ್ಟಿತು.

DC vs RCB, IPL 2026: ಆರ್‌ಸಿಬಿ ವಿರುದ್ಧದ ಅವಮಾನಕರ ಸೋಲಿನ ನಂತರ ಅಕ್ಷರ್ ಪಟೇಲ್​ರಿಂದ ದೊಡ್ಡ ಹೇಳಿಕೆ

12 ಅಂಕ ಸಂಪಾದಿಸಿದ ಬೆಂಗಳೂರು ತಂಡ

ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಇಲ್ಲಿಯವರೆಗೆ ಅದ್ಭುತ ಪ್ರದರ್ಶನ ನೀಡುತ್ತಿದೆ. ಅವರು ತಮ್ಮ ಎಂಟು ಪಂದ್ಯಗಳಲ್ಲಿ ಆರನ್ನು ಗೆದ್ದು 12 ಅಂಕಗಳೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಏತನ್ಮಧ್ಯೆ, ಡೆಲ್ಲಿ ಕ್ಯಾಪಿಟಲ್ಸ್ ಪ್ಲೇಆಫ್‌ಗೆ ಅರ್ಹತೆ ಪಡೆಯುವ ಸಾಧ್ಯತೆ ಕ್ಷೀಣಿಸುತ್ತಿದೆ. ಅಕ್ಷರ್ ಪಡೆ ತಮ್ಮ ಎಂಟು ಪಂದ್ಯಗಳಲ್ಲಿ ಐದರಲ್ಲಿ ಸೋತಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us