Yashasvi Jaiswal Century: ಯಶಸ್ವಿ ಜೈಸ್ವಾಲ್ನ ಈ ಶಾಟ್ಗೆ ದಂಗಾದ ರಾಹುಲ್ ದ್ರಾವಿಡ್: ಏನು ಮಾಡಿದ್ರು ನೋಡಿ
Rahul Dravid and Yashasvi Jaiswal: ಇಂಗ್ಲೆಂಡ್ ವಿರುದ್ಧದ ಮೂರನೇ ಟೆಸ್ಟ್ನ ಎರಡನೇ ಇನ್ನಿಂಗ್ಸ್‌ನಲ್ಲಿ ಯಶಸ್ವಿ ಜೈಸ್ವಾಲ್ ಬಿರುಸಿನ ಶತಕವನ್ನು ಗಳಿಸಿದರು. ತನ್ನ ಅದ್ಭುತ ಹೊಡೆತದ ಮೂಲಕ ಗಮನ ಸೆಳೆದ ಇವರು, ಲೆಗ್-ಸ್ಪಿನ್ನರ್ ರೆಹಾನ್ ಅಹ್ಮದ್ ಬೌಲಿಂಗ್ನಲ್ಲಿ ರಿವರ್ಸ್ ಸ್ವೀಪ್ ಆಡಿದ್ದು ಅಮೋಘವಾಗಿತ್ತು. ಇದನ್ನು ಕಂಡು ಕೋಚ್ ರಾಹುಲ್ ದ್ರಾವಿಡ್ ಏನು ಮಾಡಿದ್ರು ನೋಡಿ.
ಇಂಗ್ಲೆಂಡ್ ವಿರುದ್ಧದ ರಾಜ್ಕೋಟ್ ಟೆಸ್ಟ್ ಪಂದ್ಯದ ಮೂರನೇ ದಿನ ಭಾರತದ ಬ್ಯಾಟಿಂಗ್ನಿಂದ ರನ್ ಮಳೆ ಸುರಿಯಿತು. ಇದು ಬಂದಿದ್ದು ಯಶಸ್ವಿ ಜೈಸ್ವಾಲ್ (Yashasvi Jaiswal) ಅವರ ಬ್ಯಾಟ್‌ನಿಂದ. ಯಶಸ್ವಿ ಅದ್ಭುತ ಶತಕ ಗಳಿಸಿ ಈ ಪಂದ್ಯದಲ್ಲಿ ಟೀಮ್ ಇಂಡಿಯಾಗೆ ಭಾರಿ ಮುನ್ನಡೆ ತಂದುಕೊಟ್ಟರು. ಇದು ಈ ಸರಣಿಯಲ್ಲಿ ಯಶಸ್ವಿ ಜೈಸ್ವಾಲ್ ಅವರ ಎರಡನೇ ಶತಕವಾಗಿದೆ, ಮತ್ತು ಟೆಸ್ಟ್ ವೃತ್ತಿಜೀವನದ ಮೂರನೇ ಶತಕ. ಭಾರತ ಮೊದಲ ಇನ್ನಿಂಗ್ಸ್ ಆಧಾರದ ಮೇಲೆ ಇಂಗ್ಲೆಂಡ್ ವಿರುದ್ಧ 126 ರನ್ಗಳ ಮುನ್ನಡೆ ಸಾಧಿಸಿತ್ತು, ಆದ್ದರಿಂದ ಎರಡನೇ ಇನ್ನಿಂಗ್ಸ್‌ನಲ್ಲಿ ದೊಡ್ಡ ಸ್ಕೋರ್ ಮಾಡಬೇಕಾಗಿತ್ತು. ಇಲ್ಲಿ ಈ ಜವಾಬ್ದಾರಿ ಹೊತ್ತಿದ್ದು ಯಶಸ್ವಿ ಜೈಸ್ವಾಲ್.
ಆರಂಭದಲ್ಲಿ ಜೈಸ್ವಾಲ್ ಸ್ವಲ್ಪ ನಿಧಾನವಾಗಿ ಬ್ಯಾಟ್ ಮಾಡಿದರೂ ನಂತರ ಕೊನೆಯ ಸೆಷನ್‌ನಲ್ಲಿ ಸಂಪೂರ್ಣವಾಗಿ ಇಂಗ್ಲೆಂಡ್ ಮೇಲೆ ದಾಳಿ ನಡೆಸಿದರು. ತನ್ನ ಅದ್ಭುತ ಶಾಟ್ ಮೂಲಕ ಗಮನ ಸೆಳೆದರು. ಅದರಲ್ಲೂ ಇವರು ಹೊಡೆದ ಗೆ ಸ್ವತಃ ಕೋಚ್ ರಾಹುಲ್ ದ್ರಾವಿಡ್ ಫಿದಾ ಆದರು. ರೆಹಾನ್ ಅಹ್ಮದ್ ಬೌಲಿಂಗ್ನಲ್ಲಿ ಒಂದಲ್ಲ ಎರಡು ರಿವರ್ಸ್ ಸ್ವೀಪ್ ಹೊಡೆದು ಚೆಂಡನ್ನು ಬೌಂಡರಿಗೆ ಅಟ್ಟಿದರು. ಇದನ್ನು ಕಂಡು ಮುಖ್ಯ ಕೋಚ್ ರಾಹುಲ್ ಅವರು ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋರ್ ಅವರೊಂದಿಗೆ ನಗುತ್ತಿರುವುದು ಕಂಡುಬಂತು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಯಶಸ್ವಿ ಜೈಸ್ವಾಲ್ ಅಮೋಘ ಶತಕಕ್ಕೆ 3 ಕ್ರಿಕೆಟಿಗರ ವೃತ್ತಿಜೀವನ ಅಂತ್ಯ: ಯಾರು ನೋಡಿ
ಯಶಸ್ವಿ ಜೈಸ್ವಾಲ್ ರಿವರ್ಸ್ ಸ್ವೀಪ್ ಶಾಟ್ಗೆ ದ್ರಾವಿಡ್ ರಿಯಾಕ್ಷನ್ ವಿಡಿಯೋ:
𝘿𝙤 𝙣𝙤𝙩 𝙢𝙞𝙨𝙨!
Yashasvi Jaiswal’s innovative shots bring smiles to the faces of the coaching staff 😃👌
WATCH 🎥🔽 #TeamIndia | #INDvENG | @IDFCFIRSTBank https://t.co/h5bvXhOUxl
— BCCI (@BCCI) February 17, 2024
ಯಶಸ್ವಿ ಜೈಸ್ವಾಲ್ ಈ ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್ ಮಾಡಿದ್ದು ವಿಶೇಷವಾಗಿತ್ತು. ಮೊದಲು ಅವರು 54 ಎಸೆತಗಳಲ್ಲಿ ಗಳಿಸಿದ್ದು ಕೇವಲ 19 ರನ್ ಮಾತ್ರ. ಆದರೆ ನಂತರ ಅವರು ಕೇವಲ 122 ಎಸೆತಗಳಲ್ಲಿ ತಮ್ಮ ಶತಕವನ್ನು ಪೂರ್ಣಗೊಳಿಸಿದರು. ಜೈಸ್ವಾಲ್ ತಮ್ಮ ಇನ್ನಿಂಗ್ಸ್‌ನಲ್ಲಿ 9 ಬೌಂಡರಿ ಮತ್ತು 5 ಸಿಕ್ಸರ್‌ಗಳನ್ನು ಬಾರಿಸಿದರು. ಜೊತೆಗೆ ಕೆಲ ದಾಖಲೆಯನ್ನು ಕೂಡ ಸೃಷ್ಟಿಸಿದರು.
ಕೇನ್ ವಿಲಿಯಮ್ಸನ್ ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದ ಯಶಸ್ವಿ ಜೈಸ್ವಾಲ್..!
ಯಶಸ್ವಿ ಜೈಸ್ವಾಲ್ ಅವರ ವೃತ್ತಿ ಜೀವನದ ಮೂರನೇ ಶತಕ ಇದಾಗಿದ್ದು, ಇದರೊಂದಿಗೆ ವೀರೇಂದ್ರ ಸೆಹ್ವಾಗ್ ದಾಖಲೆಯನ್ನು ಸರಿಗಟ್ಟಿದ್ದಾರೆ. ಜೈಸ್ವಾಲ್ ತಮ್ಮ ವೃತ್ತಿಜೀವನದ ಮೊದಲ 3 ಶತಕಗಳನ್ನು ಕೇವಲ 13 ಇನ್ನಿಂಗ್ಸ್‌ಗಳಲ್ಲಿ ಪೂರ್ಣಗೊಳಿಸಿದರು, ಸೆಹ್ವಾಗ್ ಕೂಡ ಅದೇ ಸಾಧನೆ ಮಾಡಿದ್ದರು. ಮೊದಲ 13 ಇನ್ನಿಂಗ್ಸ್‌ಗಳಲ್ಲಿ ಸೆಹ್ವಾಗ್ ಅವರ ಸರಾಸರಿ 53 ಮತ್ತು 3 ಶತಕಗಳು ಇದ್ದವು, ಜೈಸ್ವಾಲ್ ಅವರ ಸರಾಸರಿ 62 ಮತ್ತು 3 ಶತಕಗಳಿವೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಅತ್ಯಂತ ವೇಗದ 3 ಶತಕಗಳನ್ನು ಗಳಿಸಿದ ಜೈಸ್ವಾಲ್, ಒಟ್ಟಾರೆಯಾಗಿ ಏಳನೇ ಬ್ಯಾಟ್ಸ್‌ಮನ್ ಆಗಿದ್ದಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ