Rishabh Pant: ಬರ್ಮಿಂಗ್ಹ್ಯಾಮ್ನಲ್ಲೂ ರಿಷಭ್ ಪಂತ್ ಶತಕ ಖಚಿತ: ಭಾರತಕ್ಕೆ ಮತ್ತೊಂದು ಸೋಲು?
India vs England 2nd Test: ಎರಡನೇ ಟೆಸ್ಟ್ನಲ್ಲೂ ಪಂತ್ ಶತಕ ಬರುವುದು ಖಚಿತವಾಗಿದೆ. ದ್ವಿತೀಯ ಟೆಸ್ಟ್ ಬರ್ಮಿಂಗ್ಹ್ಯಾಮ್‌ನಲ್ಲಿ ನಡೆಯಲಿದೆ. ಈ ಮೈದಾನ ಪಂತ್‌ಗೆ ತುಂಬಾ ಇಷ್ಟ. ಇಲ್ಲಿಯವರೆಗೆ ಈ ಮೈದಾನದಲ್ಲಿ ಇವರು ಒಂದೇ ಒಂದು ಟೆಸ್ಟ್ ಆಡಿದ್ದರೂ ಇದರಲ್ಲಿ ಸಾಕಷ್ಟು ರನ್ ಗಳಿಸಿದ್ದಾರೆ. ಪಂತ್ ಬರ್ಮಿಂಗ್ಹ್ಯಾಮ್‌ನಲ್ಲಿ ಇದುವರೆಗೆ ಕೇವಲ ಒಂದು ಪಂದ್ಯವನ್ನು ಆಡಿದ್ದಾರೆ, ಆದರೆ ಈ ಸಮಯದಲ್ಲಿ 203 ರನ್ ಗಳಿಸಿದ್ದಾರೆ.

ಬೆಂಗಳೂರು (ಜೂ. 26): ಲೀಡ್ಸ್‌ನ ಹೆಡಿಂಗ್ಲಿಯಲ್ಲಿ ನಡೆದ ಆಂಡರ್ಸನ್-ತೆಂಡೂಲ್ಕರ್ ಟ್ರೋಫಿಯ ಮೊದಲ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡ ಭಾರತವನ್ನು ಐದು ವಿಕೆಟ್‌ಗಳಿಂದ ಸೋಲಿಸಿತು. ಪಂದ್ಯ ಆರಂಭದಿಂದ ಅಂತ್ಯದವರೆಗೆ ಬಹಳ ರೋಚಕತೆ ಸೃಷ್ಟಿಸಿತ್ತು. ಈ ಟೆಸ್ಟ್ ಪಂದ್ಯ ಭಾರತದ ಉಪನಾಯಕ ರಿಷಭ್ ಪಂತ್‌ಗೆ (Rishabh Pant) ತುಂಬಾ ವಿಶೇಷವಾಗಿತ್ತು. ಎಡಗೈ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಪಂತ್ ಎರಡೂ ಇನ್ನಿಂಗ್ಸ್‌ಗಳಲ್ಲಿ ಅಮೋಘ ಶತಕಗಳನ್ನು ಗಳಿಸಿದರು. ತಂಡದ ಗೆಲುವಿಗೆ ಸಾಕಷ್ಟು ಪ್ರಯತ್ನ ಪಟ್ಟರು ಆದರೆ, ಗೆಲುವು ತಂದುಕೊಡಲು ಸಾಧ್ಯವಾಗಲಿಲ್ಲ.
ಈ ಪಂದ್ಯದಲ್ಲಿ ರಿಷಭ್ ಪಂತ್ ಮೊದಲ ಇನ್ನಿಂಗ್ಸ್‌ನಲ್ಲಿ ಅವರು 134 ರನ್ ಗಳಿಸಿದರು ಮತ್ತು ಶುಭ್ಮನ್ ಗಿಲ್ ಅವರೊಂದಿಗೆ 209 ರನ್‌ಗಳ ಜೊತೆಯಾಟ ಆಡಿದರು. ಎರಡನೇ ಇನ್ನಿಂಗ್ಸ್‌ನಲ್ಲಿ 118 ರನ್ ಗಳಿಸಿದರು. ಇಂಗ್ಲೆಂಡ್‌ನಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳನ್ನು ಬಾರಿಸಿದ ದಾಖಲೆಯನ್ನೂ ಮಾಡಿದರು. ಆದರೆ, ಅವರ ಅದ್ಭುತ ಬ್ಯಾಟಿಂಗ್ ಭಾರತವನ್ನು ಗೆಲ್ಲಿಸಲು ಸಾಧ್ಯವಾಗಲಿಲ್ಲ. ಇಂಗ್ಲೆಂಡ್ ನಾಲ್ಕನೇ ಇನ್ನಿಂಗ್ಸ್‌ನಲ್ಲಿ 371 ರನ್‌ಗಳ ಗುರಿಯನ್ನು ಸುಲಭವಾಗಿ ಬೆನ್ನಟ್ಟಿತು.
ಈ ಸೋಲು ಪಂತ್‌ಗೆ ನಿರಾಶಾದಾಯಕವಾಗಿದೆ. ಪಂತ್ ಅವರ ವಿದೇಶಿ ಶತಕಗಳ ಬಗ್ಗೆ ಹೇಳುವುದಾದರೆ, ಅವರ ಮೊದಲ ಶತಕವು 2018 ರಲ್ಲಿ ಓವಲ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಬಂದಿತು. ಭಾರತ ಆ ಪಂದ್ಯವನ್ನು ಸೋತಿತು. 2019 ರಲ್ಲಿ, ಅವರು ಸಿಡ್ನಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ಅಜೇಯ 159 ರನ್ ಗಳಿಸಿದರು, ಭಾರತ ಪಂದ್ಯವನ್ನು ಡ್ರಾ ಮಾಡಿಕೊಂಡಿತು.
ಬಳಿಕ 2022 ರಲ್ಲಿ, ಅವರು ದಕ್ಷಿಣ ಆಫ್ರಿಕಾ ವಿರುದ್ಧ ನ್ಯೂಝಿಡ್ಸ್‌ನಲ್ಲಿ ಮತ್ತು ಇಂಗ್ಲೆಂಡ್ ವಿರುದ್ಧ ಎಡ್ಜ್‌ಬಾಸ್ಟನ್‌ನಲ್ಲಿ ಶತಕಗಳನ್ನು ಗಳಿಸಿದರು, ಆದರೆ ಭಾರತ ಎರಡೂ ಪಂದ್ಯಗಳಲ್ಲಿ ಸೋತಿತು. 2025 ರಲ್ಲಿ, ಅವರು ಹೆಡಿಂಗ್ಲಿಯಲ್ಲಿ ಎರಡೂ ಇನ್ನಿಂಗ್ಸ್‌ಗಳಲ್ಲಿಯೂ ಶತಕಗಳನ್ನು ಗಳಿಸಿದರು, ಆದರೆ ಭಾರತ ಆ ಪಂದ್ಯ ಕೂಡ ಭಾರತ ಸೋತಿತು. ಈ ಅಂಕಿಅಂಶಗಳು ಪಂತ್ ವಿದೇಶಿ ನೆಲದಲ್ಲಿ ಅನೇಕ ಅದ್ಭುತ ಇನ್ನಿಂಗ್ಸ್‌ಗಳನ್ನು ಆಡಿದ್ದಾರೆ, ಆದರೆ ಈರೀತಿ ಆಕರ್ಷಕ ಆಟ ಪ್ರದರ್ಶಿಸಿದ ಸಮಯ ತಂಡವು ಗೆಲ್ಲಲು ಸಾಧ್ಯವಾಗಿಲ್ಲ.
Surya Kumar Yadav: ಆಸ್ಪತ್ರೆಯಲ್ಲಿ ಸೂರ್ಯಕುಮಾರ್ ಯಾದವ್: ವೈರಲ್ ಆಗುತ್ತಿದೆ ಫೋಟೋ… ಇದ್ದಕ್ಕಿದ್ದಂತೆ ಏನಾಯಿತು?
ಇದೀಗ ಎರಡನೇ ಟೆಸ್ಟ್ನಲ್ಲೂ ಪಂತ್ ಶತಕ ಬರುವುದು ಖಚಿತವಾಗಿದೆ. ದ್ವಿತೀಯ ಟೆಸ್ಟ್ ಬರ್ಮಿಂಗ್ಹ್ಯಾಮ್‌ನಲ್ಲಿ ನಡೆಯಲಿದೆ. ಈ ಮೈದಾನ ಪಂತ್‌ಗೆ ತುಂಬಾ ಇಷ್ಟ. ಇಲ್ಲಿಯವರೆಗೆ ಈ ಮೈದಾನದಲ್ಲಿ ಇವರು ಒಂದೇ ಒಂದು ಟೆಸ್ಟ್ ಆಡಿದ್ದರೂ ಇದರಲ್ಲಿ ಸಾಕಷ್ಟು ರನ್ ಗಳಿಸಿದ್ದಾರೆ. ಪಂತ್ ಬರ್ಮಿಂಗ್ಹ್ಯಾಮ್‌ನಲ್ಲಿ ಇದುವರೆಗೆ ಕೇವಲ ಒಂದು ಪಂದ್ಯವನ್ನು ಆಡಿದ್ದಾರೆ, ಆದರೆ ಈ ಸಮಯದಲ್ಲಿ 203 ರನ್ ಗಳಿಸಿದ್ದಾರೆ. ಅವರು ಈ ಮೈದಾನದಲ್ಲಿ ಒಂದು ಶತಕ ಮತ್ತು ಅರ್ಧಶತಕ ಗಳಿಸಿದ್ದಾರೆ. ಅವರ ಸರಾಸರಿ ಮತ್ತು ಸ್ಟ್ರೈಕ್ ರೇಟ್ ಕೂಡ ಅದ್ಭುತವಾಗಿದೆ.
ಈ ಬಾರಿ ತಂಡವನ್ನು ಗೆಲ್ಲಿಸುವುದು ಮೊದಲ ಗುರಿ
ಈ ಬಾರಿ ರಿಷಭ್ ಪಂತ್ ಅವರ ಗುರಿ ಕೇವಲ ಶತಕ ಗಳಿಸುವುದಷ್ಟೇ ಆಗಬಾರದು. ಶತಕ ಬಾರಿಸುವ ಜೊತೆಗೆ ತಮ್ಮ ತಂಡವನ್ನು ಗೆಲ್ಲಿಸಬೇಕೆಂದು ಬಯಸುತ್ತಾರೆ. ಆದಾಗ್ಯೂ, ಪಂತ್ ಮಾತ್ರವಲ್ಲ, ಇಡೀ ಟೀಮ್ ಇಂಡಿಯಾ ಗೆಲುವಿಗಾಗಿ ಆಡಬೇಕಾಗುತ್ತದೆ. ಟೀಮ್ ಇಂಡಿಯಾ ಈಗಾಗಲೇ ಒಂದು ಪಂದ್ಯವನ್ನು ಸೋತ ನಂತರ ಸರಣಿಯಲ್ಲಿ ಹಿಂದುಳಿದಿದೆ. ಎರಡನೇ ಪಂದ್ಯದಲ್ಲೂ ಸೋತರೆ, ಸರಣಿ ಕಳೆದುಕೊಳ್ಳುವ ಭೀತಿ ಉಂಟಾಗಲಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




