Rishabh Pant: ಪಂದ್ಯದ ಬಳಿಕ ಕೇಳಿದ ಪ್ರಶ್ನೆಗೆ ಒಂದೇ ಮಾತಲ್ಲಿ ಉತ್ತರಿಸಿ ರಿಪೋರ್ಟರ್ ಬಾಯಿ ಮುಚ್ಚಿಸಿದ ಪಂತ್

IND vs ENG: ಇಂಗ್ಲೆಂಡ್ ವಿರುದ್ಧದ ಐದನೇ ಟೆಸ್ಟ್​ನಲ್ಲಿ ಆರನೇ ವಿಕೆಟ್‌ಗೆ ಪಂತ್ ಹಾಗೂ ಜಡೇಜಾ ಜೋಡಿ ದಾಖಲೆಯ 222 ರನ್‌ಗಳ ಜೊತೆಯಾಟ ನೀಡಿದರು. ಪಂದ್ಯ ಮುಗಿದ ಬಳಿಕ ಸುದ್ದಿಗೋಷ್ಠಿಗೆ ಬಂದ ರಿಷಭ್ ಪಂತ್​ಗೆ ಸಾಕಷ್ಟು ಪ್ರಶ್ನೆಗಳು ಎದುರಾದವು.

Rishabh Pant: ಪಂದ್ಯದ ಬಳಿಕ ಕೇಳಿದ ಪ್ರಶ್ನೆಗೆ ಒಂದೇ ಮಾತಲ್ಲಿ ಉತ್ತರಿಸಿ ರಿಪೋರ್ಟರ್ ಬಾಯಿ ಮುಚ್ಚಿಸಿದ ಪಂತ್
Rishabh Pant IND vs ENG
Follow us
TV9 Web
| Updated By: Vinay Bhat

Updated on: Jul 02, 2022 | 11:03 AM

ಬರ್ಮಿಂಗ್‌ಹ್ಯಾಮ್​ನಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ಐದನೇ ಟೆಸ್ಟ್ ಪಂದ್ಯದಲ್ಲಿ ಭಾರತ (IND vs ENG) ಫೈಟ್ ಬ್ಯಾಕ್ ಮಾಡಿ ಮೊದಲ ದಿನದಾಟದ ಅಂತ್ಯಕ್ಕೆ 7 ವಿಕೆಟ್ ಕಳೆದುಕೊಂಡು 338 ರನ್ ಗಳಿಸಿದೆ. ಒಂದು ಹಂತದಲ್ಲಿ 150 ರನ್​ಗೂ ಮೊದಲೇ ಆಲೌಟ್ ಆಗುವ ಭೀತಿಯಲ್ಲಿದ್ದ ಟೀಮ್ ಇಂಡಿಯಾಕ್ಕೆ ರಿಷಭ್ ಪಂತ್ ಹಾಗೂ ರವೀಂದ್ರ ಜಡೇಜಾ (Ravindra Jadeja) ಆಸರೆಯಾಗಿ ನಿಂತರು. ಇಂಗ್ಲೆಂಡ್ ಮಾರಕ ವೇಗಿಗಳನ್ನು ಸಮರ್ಥವಾಗಿ ಎದುರಿಸಿದ ಈ ಜೋಡಿ ದಾಖಲೆಯ ಜೊತೆಯಾಟ ಆಡಿತು. ಕಳಪೆ ಬ್ಯಾಟಿಂಗ್​ನಿಂದ ಸಾಕಷ್ಟು ಟೀಕೆಗಳಿಗೆ ಗುರಿಯಾಗಿದ್ದ ಪಂತ್ ಆಕರ್ಷಕ ಶತಕ ಸಿಡಿಸಿ ದೊಡ್ಡ ಸಂದೇಶ ರವಾನಿಸಿದರು. ಜೊತೆಗೆ ಆರನೇ ವಿಕೆಟ್‌ಗೆ ಈ ಜೋಡಿ ದಾಖಲೆಯ 222 ರನ್‌ಗಳ ಜೊತೆಯಾಟ ನೀಡಿದರು. ಪಂದ್ಯ ಮುಗಿದ ಬಳಿಕ ಸುದ್ದಿಗೋಷ್ಠಿಗೆ ಬಂದ ರಿಷಭ್ ಪಂತ್​ಗೆ (Rishabh Pant) ಸಾಕಷ್ಟು ಪ್ರಶ್ನೆಗಳು ಎದುರಾದವು.

ಹೌದು, ಸುದ್ದಿಗೋಷ್ಠಿಯಲ್ಲಿ ಪಂತ್​ಗೆ ಪ್ರಶ್ನೆಗಳ ಮಳೆಯೇ ಸುರಿಯಿತು. ಇದಕ್ಕೆ ಪಂತ್ ಕೂಡ ಅಚ್ಚುಕಟ್ಟಾಗಿ ಖಡಕ್ ಆಗಿ ಉತ್ತರಿಸಿದರು. ಮುಖ್ಯವಾಗಿ ಪಂತ್ ಈ ಪಂದ್ಯದಲ್ಲಿ ಐದನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ಬಂದರು. ಶ್ರೇಯಸ್ ಅಯ್ಯರ್ ಅಚ್ಚರಿ ಎಂಬಂತೆ ಆರನೇ ಸ್ಥಾನದಲ್ಲಿ ಆಡಿದರು. ಈ ಬಗ್ಗೆ ಇಂಗ್ಲಿಷ್ ಪತ್ರಕರ್ತರೊಬ್ಬರು ಪಂತ್ ಬಳಿ, “ನೀವು ಆರನೇ ಕ್ರಮಾಂಕದಲ್ಲಿ ಕಣಕ್ಕಿಳಿಯುತ್ತೀರಾ? ಶ್ರೇಯಸ್ ಅಯ್ಯರ್ ಮತ್ತು ನೀವು ಜಾಗವನ್ನು ಅದಲು-ಬದಲು ಮಾಡುತ್ತೀರಾ,” ಎಂದು ಕೇಳಿದ್ದಾರೆ. ಇದಕ್ಕೆ ಖಡಕ್ ಆಗಿ ಒಂದೇ ಮಾತಿನಲ್ಲಿ ಉತ್ತರಿಸಿದ ಪಂತ್ “ಇಲ್ಲ” ಎಂದು ಹೇಳಿದ್ದಾರೆ.

DERBY vs INDS: T20 ಅಭ್ಯಾಸ ಪಂದ್ಯದಲ್ಲೂ ಹೂಡ ಸ್ಫೋಟಕ ಆಟ: ಕಾರ್ತಿಕ್ ಪಡೆಗೆ 7 ವಿಕೆಟ್​ಗಳ ಜಯ

ಇದನ್ನೂ ಓದಿ
Image
Rishabh Pant: ರಿಷಭ್ ಪಂತ್ ಶತಕ ಸಿಡಿಸಿದಾಗ ಡಗೌಟ್​ನಲ್ಲಿ ಕೋಚ್ ರಾಹುಲ್ ದ್ರಾವಿಡ್ ಮಾಡಿದ್ದೇನು ನೋಡಿ
Image
Malaysia Open 2022: ಕ್ವಾರ್ಟರ್ ಫೈನಲ್‌ನಲ್ಲಿ ಸೋತು ಟೂರ್ನಿಯಿಂದ ಹೊರಬಿದ್ದ ಸಿಂಧು, ಪ್ರಣಯ್ ಪಯಣವೂ ಅಂತ್ಯ
Image
IND vs ENG: ಹಾರ್ದಿಕ್​ ಪಾಂಡ್ಯಗೆ ವಿಶ್ರಾಂತಿ; ದಿನೇಶ್ ಕಾರ್ತಿಕ್​ಗೆ ಟಿ20 ನಾಯಕತ್ವ! ದ್ರಾವಿಡ್ ಅಚ್ಚರಿ ಆಯ್ಕೆ
Image
IND vs ENG: ಭಾರತ ವಿರುದ್ಧದ ಏಕದಿನ, ಟಿ20 ಸರಣಿಗೆ ಬಲಿಷ್ಠ ಇಂಗ್ಲೆಂಡ್ ತಂಡ ಪ್ರಕಟ! ಯಾರಿಗೆಲ್ಲ ಚಾನ್ಸ್?

ಮತ್ತೊಮ್ಮೆ ಮಾತು ಮುಂದೆವರೆಸಿದ ರಿಪೋರ್ಟರ್, “ನೀವು ಯಾವಾಗಲು ಐದನೇ ಕ್ರಮಾಂಕದಲ್ಲೇ ಆಡುತ್ತೀರಾ?” ಎಂದು ಕೇಳಿದ್ದಾರೆ. ಇದಕ್ಕೆ ಪಂತ್ “ಹೌದು, ನಾನು ಯಾವಾಗಲು ಐದನೇ ಸ್ಥಾನದಲ್ಲೇ ಬ್ಯಾಟಿಂಗ್ ಮಾಡುತ್ತೇನೆ,” ಎಂದು ನೇರವಾಗಿ ನುಡಿದಿದ್ದಾರೆ.

ಟೀಮ್ ಇಂಡಿಯಾ 100 ರನ್‌ಗಳ ಗಡಿ ದಾಟಿವ ಮೊದಲೇ ಅಗ್ರ ಕ್ರಮಾಂಕದ 5 ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಆದರೆ, ಆರನೇ ವಿಕೆಟ್‌ಗೆ ಜೊತೆಯಾದ ಎಡಗೈ ಬ್ಯಾಟರ್‌ಗಳಾದ ರಿಷಭ್ ಪಂತ್‌ ಮತ್ತು ರವೀಂದ್ರ ಜಡೇಜಾ ಪ್ರತಿಹೋರಾಟ ನಡೆಸಿ ಜೊತೆಯಾಟ ಕಟ್ಟಿದರು. ಚಹಾ ವಿರಾಮದ ಬಳಿಕ ಇಂಗ್ಲೆಂಡ್‌ ಬೌಲರ್‌ಗಳನ್ನು ಬಡಿದು ಬೆಂಡೆತ್ತಿದ ಪಂತ್‌ ಮತ್ತು ಜಡೇಜಾ ಜೋಡಿ, 6ನೇ ವಿಕೆಟ್‌ಗೆ 239 ಎಸೆತಗಳಲ್ಲಿ 222 ರನ್‌ಗಳ ಅಮೋಘ ಜೊತೆಯಾಟ ಕಟ್ಟುವ ಮೂಲಕ ಭಾರತ ತಂಡವನ್ನು ಮೊದಲ ಇನಿಂಗ್ಸ್‌ನಲ್ಲಿ ಅಲ್ಪ ಮೊತ್ತಕ್ಕೆ ಆಲ್‌ಔಟ್‌ ಆಗುವ ಸಂಕಷ್ಟದಿಂದ ಪಾರು ಮಾಡಿದರು.

150 ರನ್‌ಗಳಿಸುವ ಸನಿಹದಲ್ಲಿದ್ದ ಪಂತ್ ವೇಗವಾಗಿ ಈ ಮೈಲಿಗಲ್ಲನ್ನು ದಾಟುವ ದಾಖಲೆ ಮಾಡಲು 4 ರನ್‌ಗಳ ಅಂತರದಿಂದ ವಿಫಲವಾಗಿ ನಿರ್ಗಮಿಸಿದರು. ಪಂತ್ 111 ಎಸೆಗಳಲ್ಲಿ 20 ಫೋರ್‌ ಮತ್ತು 4 ಸಿಕ್ಸರ್‌ಗಳೊಂದಿಗೆ 146 ರನ್‌ ಚಚ್ಚುವ ಮೂಲಕ ಪಂತ್ ತಮ್ಮ ಸ್ಪೋಟಕ ಇನಿಂಗ್ಸ್‌ ಅಂತ್ಯಗೊಳಿಸಿದರು. ರವೀಂದ್ರ ಜಡೇಜಾ ಹಾಗೂ ಮೊಹಮ್ಮದ್ ಶಮಿ ಕ್ರಿಸ್ ಕಾಯ್ದಿರಿಸಿಕೊಂಡಿದ್ದಾರೆ. ರವೀಂದ್ರ ಜಡೇಜಾ 83 ರನ್‌ಗಳಿಸಿದ್ದು ಶತಕದ ಸನಿಹದಲ್ಲಿದ್ದರೆ ಶಮಿ ಅವರಿಗೆ ಸಾಥ್ ನೀಡುತ್ತಿದ್ದಾರೆ. ಮೊದಲ ದಿನದ ಅಂತ್ಯಕ್ಕೆ ಭಾರತ ತಂಡ 73 ಓವರ್‌ಗಳಲ್ಲಿ 7 ವಿಕೆಟ್‌ಗೆ 338 ರನ್‌ ಕಲೆಹಾಕಿದೆ.

ENG vs IND 5th Tets: ಭಾರತ-ಇಂಗ್ಲೆಂಡ್ 5ನೇ ಟೆಸ್ಟ್​​ನ ಮೊದಲ ದಿನದಾಟದ ರೋಚಕ ಫೋಟೋಗಳು ನೋಡಿ

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್