Vijay Hazare Trophy: ದೇಸಿ ಟೂರ್ನಿಯಲ್ಲಿ ಧವನ್ ಮತ್ತೆ ಫೇಲ್! ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಗಬ್ಬರ್ ಆಯ್ಕೆ ಅನುಮಾನ?
Vijay Hazare Trophy: ಇದಕ್ಕೂ ಮುನ್ನ ಜಾರ್ಖಂಡ್ ಮತ್ತು ಹೈದರಾಬಾದ್ ವಿರುದ್ಧವೂ ಧವನ್ ವಿಫಲವಾಗಿದ್ದರು. ಅವರು ಜಾರ್ಖಂಡ್ ವಿರುದ್ಧ ಖಾತೆ ತೆರೆಯಲು ಸಾಧ್ಯವಾಗಲಿಲ್ಲ ಮತ್ತು ಹೈದರಾಬಾದ್ ವಿರುದ್ಧ 12 ರನ್ ಗಳಿಸಿ ಔಟಾದರು.

ಭಾರತದ ಅತ್ಯುತ್ತಮ ಓಪನರ್‌ಗಳಲ್ಲಿ ಒಬ್ಬರಾದ ಶಿಖರ್ ಧವನ್, ಟೀಮ್ ಇಂಡಿಯಾದಿಂದ ಬಹಳ ಸಮಯದಿಂದ ಹೊರಗುಳಿದಿದ್ದಾರೆ. ತಂಡದ ಪ್ರಮುಖ ಆಟಗಾರರಾದ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಇಂಗ್ಲೆಂಡ್ ಪ್ರವಾಸದಲ್ಲಿದ್ದಾಗ ಶ್ರೀಲಂಕಾ ಪ್ರವಾಸದಲ್ಲಿ ಟೀಂ ಇಂಡಿಯಾ ನಾಯಕರಾಗಿದ್ದರು. ಈಗ ಟೀಂ ಇಂಡಿಯಾ ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಳ್ಳಲಿದ್ದು, ಅಲ್ಲಿ ಮೂರು ಪಂದ್ಯಗಳ ಏಕದಿನ ಸರಣಿಯನ್ನು ಆಡಲಿದೆ. ಕೆಲವು ದಿನಗಳ ಹಿಂದೆ ಧವನ್ ಅವರನ್ನು ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಏಕದಿನ ತಂಡಕ್ಕೆ ಆಯ್ಕೆ ಮಾಡಬಹುದು ಎಂಬ ವರದಿಗಳೂ ಬಂದಿದ್ದವು. ಆದರೆ, ತಂಡವನ್ನು ಇನ್ನೂ ಪ್ರಕಟಿಸಿಲ್ಲ. ಪ್ರಸ್ತುತ ನಡೆಯುತ್ತಿರುವ ವಿಜಯ್ ಹಜಾರೆ ಟ್ರೋಫಿಯು ಧವನ್‌ಗೆ ತಮ್ಮ ಫಾರ್ಮ್ ತೊರಿಸಲು ಉತ್ತಮ ವೇದಿಕೆಯಾಗಿದೆ. ಆದರೆ ಈ ಎಡಗೈ ಬ್ಯಾಟ್ಸ್‌ಮನ್ ಈ ಟೂರ್ನಿಯಲ್ಲಿ ನಿರಂತರವಾಗಿ ವಿಫಲರಾಗುತ್ತಿದ್ದಾರೆ.
ದೆಹಲಿ ಮತ್ತು ಉತ್ತರ ಪ್ರದೇಶ ನಡುವಿನ ವಿಜಯ್ ಹಜಾರೆ ಟ್ರೋಫಿ ಪಂದ್ಯ ಚಂಡೀಗಢದ ಸೆಕ್ಟರ್ 19 ಸ್ಟೇಡಿಯಂನಲ್ಲಿ ನಡೆಯುತ್ತಿದೆ. ಈ ಪಂದ್ಯದಲ್ಲಿ ದೆಹಲಿ ಪರ ಧವನ್ ಉತ್ತಮ ಇನಿಂಗ್ಸ್ ಆಡುವ ನಿರೀಕ್ಷೆ ಇತ್ತು. ಆದರೆ ಧವನ್ ವಿಫಲರಾದರು. ತಂಡಕ್ಕೆ ಶೀಘ್ರ ಆರಂಭ ನೀಡಲು ಸಾಧ್ಯವಾಗಲಿಲ್ಲ. ಧವನ್ ಅವರೊಂದಿಗೆ ಇನ್ನಿಂಗ್ಸ್ ಆರಂಭಿಸಲು ಬಂದಿದ್ದ ತಂಡ ಎರಡನೇ ಓವರ್‌ನ ಕೊನೆಯ ಎಸೆತದಲ್ಲಿ ಧ್ರುವ್ ಶೋರೆ ವಿಕೆಟ್ ಕಳೆದುಕೊಂಡಿತ್ತು. ಅವರ ನಿರ್ಗಮನದ ನಂತರ, ಧವನ್ ಇನ್ನಿಂಗ್ಸ್ ಅನ್ನು ನಿಭಾಯಿಸುತ್ತಾರೆ ಎಂದು ತೋರುತ್ತಿತ್ತು. ಆದರೆ ಧವನ್ ಅವರ ಬ್ಯಾಟ್ ಹೆಚ್ಚು ರನ್ ಗಳಿಸಲು ಸಾಧ್ಯವಾಗಲಿಲ್ಲ ಅಥವಾ ರನ್-ರೇಟ್ ಅನ್ನು ಸರಿಪಡಿಸಲು ಸಾಧ್ಯವಾಗಲಿಲ್ಲ. ಕೇವಲ 14 ರನ್ ಗಳಿಸಿ ಔಟಾದರು. ಇಷ್ಟು ರನ್ ಗಳಿಸಲು ಧವನ್ 22 ಎಸೆತಗಳನ್ನು ಎದುರಿಸಿ ಎರಡು ಬೌಂಡರಿ ಬಾರಿಸಿದರು. ಒಂಬತ್ತನೇ ಓವರ್‌ನ ಮೊದಲ ಎಸೆತದಲ್ಲಿ ಧವನ್ ಔಟಾದರು. ಆಗ ದೆಹಲಿಯ ಸ್ಕೋರ್ 28 ರನ್ ಆಗಿತ್ತು.
ಅನುಜ್, ಲಲಿತ್ ಜವಬ್ದಾರಿ ಧವನ್ ನಿರ್ಗಮನದ ನಂತರ, ಹಿಮ್ಮತ್ ಸಿಂಗ್ ಮತ್ತು ಜಾಂಟಿ ಸಿಧು ಇನ್ನಿಂಗ್ಸ್ ಕಟ್ಟುವ ಕೆಲಸ ಮಾಡಿದರು. ಆದರೆ ಉತ್ತಮ ಆರಂಭವನ್ನು ದೊಡ್ಡ ಇನ್ನಿಂಗ್ಸ್ ಆಗಿ ಪರಿವರ್ತಿಸಲು ಸಾಧ್ಯವಾಗಲಿಲ್ಲ. ಹಿಮ್ಮತ್ ಸಿಂಗ್ 42 ರನ್ ಮತ್ತು ಜಾಂಟಿ 30 ರನ್ ಗಳಿಸಿ ಔಟಾದರು. ಕ್ಷಿತಿಜ್ ಶರ್ಮಾ ಕೇವಲ ಏಳು ರನ್ ಗಳಿಸಲಷ್ಟೇ ಶಕ್ತರಾದರು. ವಿಕೆಟ್ ಕೀಪರ್ ಅನುಜ್ ರಾವತ್ ಮತ್ತೊಮ್ಮೆ 50 ರನ್ ಗಳಿಸಿದರು ಮತ್ತು ಲಲಿತ್ ಯಾದವ್ ದೆಹಲಿ ಪರ 57 ರನ್ ಗಳಿಸಿದರು. ಇವರಿಬ್ಬರು ಔಟಾದ ಬಳಿಕ ಉಳಿದ ಬ್ಯಾಟ್ಸ್‌ಮನ್‌ಗಳು ಬೇಗನೆ ಪೆವಿಲಿಯನ್‌ಗೆ ಮರಳಿದರು. ಇಡೀ ತಂಡ 49 ಓವರ್‌ಗಳಲ್ಲಿ 243 ರನ್ ಗಳಿಸಲಷ್ಟೇ ಶಕ್ತವಾಯಿತು. ಇದಕ್ಕೂ ಮುನ್ನ ಜಾರ್ಖಂಡ್ ಮತ್ತು ಹೈದರಾಬಾದ್ ವಿರುದ್ಧವೂ ಧವನ್ ವಿಫಲವಾಗಿದ್ದರು. ಅವರು ಜಾರ್ಖಂಡ್ ವಿರುದ್ಧ ಖಾತೆ ತೆರೆಯಲು ಸಾಧ್ಯವಾಗಲಿಲ್ಲ ಮತ್ತು ಹೈದರಾಬಾದ್ ವಿರುದ್ಧ 12 ರನ್ ಗಳಿಸಿ ಔಟಾದರು.
ಇದನ್ನೂ ಓದಿ:ಶಿಖರ್ ಧವನ್ ಟು ಜಾವಗಲ್ ಶ್ರೀನಾಥ್: ವಿಚ್ಛೇದನ ಪಡೆದ ಟೀಮ್ ಇಂಡಿಯಾ ಕ್ರಿಕೆಟಿಗರ ಪಟ್ಟಿ ಇಲ್ಲಿದೆ ನೋಡಿ
