
ಭಾರತ ಮತ್ತು ಶ್ರೀಲಂಕಾ (India vs Sri Lanka) ನಡುವಿನ ಎರಡು ಪಂದ್ಯಗಳ ಟೆಸ್ಟ್ ಸರಣಿಯ ಎರಡನೇ ಮತ್ತು ಅಂತಿಮ ಪಂದ್ಯ ಆಗಸ್ಟ್ 23 ರಿಂದ ಅಂದರೆ ಇದೇ ಭಾನುವಾರದಿಂದ ಕೊಲಂಬೊದ (Colombo Test match) ಅಂತರರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ಆರಂಭವಾಗಲಿದೆ. ಈ ಪಂದ್ಯ ಉಭಯ ತಂಡಗಳಿಗೂ ನಿರ್ಣಾಯಕವಾಗಿದೆ. ಏಕೆಂದರೆ ಈ ಪಂದ್ಯದಲ್ಲಿ ಟೀಂ ಇಂಡಿಯಾ ಗೆದ್ದರೆ ಸರಣಿ ಅದರ ಪಾಲಾಗಲಿದೆ. ಇತ್ತ ಶ್ರೀಲಂಕಾ ಗೆದ್ದರೆ ಸರಣಿ 1-1 ರಿಂದ ಸಮಬಲದೊಂದಿಗೆ ಅಂತ್ಯವಾಗಲಿದೆ. ಹೀಗಾಗಿ ಎರಡು ತಂಡಗಳು ಗೆಲ್ಲುವ ಇರಾದೆಯೊಂದಿಗೆ ಕಣಕ್ಕಿಳಿಯಲಿವೆ. ಆದರೆ ಈ ಪಂದ್ಯಕ್ಕೆ ಇನ್ನೊಂದು ದಿನ ಬಾಕಿ ಇರುವಾಗ ಶ್ರೀಲಂಕಾ ತಂಡದಲ್ಲಿ ಎರಡು ಪ್ರಮುಖ ಬದಲಾವಣೆಗಳನ್ನು ಮಾಡಲಾಗಿದೆ.
ಎರಡನೇ ಟೆಸ್ಟ್ ಪಂದ್ಯದಿಂದ ಶ್ರೀಲಂಕಾ ತಂಡದಿಂದ ಇಬ್ಬರು ಆಟಗಾರರು ಹೊರಬಿದ್ದಿದ್ದರೆ, ಅವರ ಬದಲಿಯಾಗಿ ಇಬ್ಬರು ಆಟಗಾರರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ಕುಸಲ್ ಮೆಂಡಿಸ್ ಗಾಯದಿಂದಾಗಿ ಕೊನೆಯ ಟೆಸ್ಟ್ನಿಂದ ಹೊರಗುಳಿದಿದ್ದರೆ, ಐಸಿಸಿ ನಿಯಮಗಳಿಂದಾಗಿ ದಿನೇಶ್ ಚಾಂಡಿಮಲ್ ಕೊನೆಯ ಟೆಸ್ಟ್ ಆಡಲು ಸಾಧ್ಯವಾಗುವುದಿಲ್ಲ. ಹೀಗಾಗಿ ಅವರ ಬದಲಿಗೆ ಕಮಿಲ್ ಮಿಶಾರ ಮತ್ತು ಆಲ್‌ರೌಂಡರ್ ಸಹನ್ ಅರಾಚಿಗೆ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ಇನ್ನು ಗಾಯದಿಂದಾಗಿ ಮೊದಲ ಟೆಸ್ಟ್ ಆಡದ ಪಾತುಮ್ ನಿಸ್ಸಂಕಾ ಎರಡನೇ ಟೆಸ್ಟ್ ಆಡುವುದು ಕೂಡ ಅನುಮಾನವಾಗಿದೆ.
ವಾಸ್ತವವಾಗಿ ಕುಸಲ್ ಮೆಂಡಿಸ್ ಮಂಡಿರಜ್ಜು ಗಾಯದಿಂದ ಬಳಲುತ್ತಿರುವುದರಿಂದ ಅವರನ್ನು ಮೊದಲ ಟೆಸ್ಟ್ನಿಂದ ಹೊರಗಿಡಲಾಗಿತ್ತು. ಆದರೆ ಎರಡನೇ ಟೆಸ್ಟ್ ಪಂದ್ಯಕ್ಕೆ ಅವರು ಫಿಟ್ ಆಗುತ್ತಾರೆ ಎಂದು ಭಾವಿಸಲಾಗಿತ್ತು, ಆದರೆ ಅದು ಆಗಲಿಲ್ಲ. ಹೀಗಾಗಿ ಅವರನ್ನು ತಂಡದಿಂದ ಕೈಬಿಡಲಾಗಿದೆ. ಇತ್ತ ಗಾಲೆ ಟೆಸ್ಟ್ ಪಂದ್ಯದ ವೇಳೆ ದಿನೇಶ್ ಚಾಂಡಿಮಲ್ ಗಾಯಕ್ಕೆ ತುತ್ತಾದರು. ಹೀಗಾಗಿ ಕನ್ಕ್ಯುಶನ್ ಬದಲಿಯಾಗಿ ಪಸಿಂದು ಸೂರ್ಯಬಂದರ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿತ್ತು. ಐಸಿಸಿ ಕನ್ಕ್ಯುಶನ್ ನಿಯಮಗಳ ಪ್ರಕಾರ, ದಿನೇಶ್ ಎರಡನೇ ಪಂದ್ಯದಲ್ಲಿ ಆಡಲು ಸಾಧ್ಯವಾಗುವುದಿಲ್. ಏಕೆಂದರೆ ಗಾಯಗೊಂಡು ತಂಡದಿಂದ ಹೊರಬಿದ್ದ ಆಟಗಾರ ಕನಿಷ್ಠ ಏಳು ದಿನಗಳ ಕಾಲ ತಂಡದಲ್ಲಿ ಆಡುವಂತಿಲ್ಲ. ಆದ್ದರಿಂದ ಚಾಂಡಿಮಲ್ ಕೊನೆಯ ಟೆಸ್ಟ್ ಆಡಲು ಸಾಧ್ಯವಾಗುವುದಿಲ್ಲ.
IND vs SL: ಭಾರತ- ಲಂಕಾ ನಡುವಿನ 2ನೇ ಟೆಸ್ಟ್ ಪಂದ್ಯ ಎಲ್ಲಿ, ಯಾವಾಗ ನಡೆಯಲಿದೆ?
ಇನ್ನೂ ಟೆಸ್ಟ್ ಪಂದ್ಯ ಆಡದ ಸಹನ್ ಅರಚ್ಚಿಗೆ ಅವರನ್ನು ಭಾರತದ ವಿರುದ್ಧದ ಎರಡನೇ ಟೆಸ್ಟ್ ಪಂದ್ಯಕ್ಕಾಗಿ ಶ್ರೀಲಂಕಾ ತಂಡದಲ್ಲಿ ಸೇರಿಸಿಕೊಳ್ಳಲಾಗಿದೆ. ಆದಾಗ್ಯೂ, ಸಹನ್ ಈ ಹಿಂದೆ ಭಾರತ ಎ ವಿರುದ್ಧದ ಅನಧಿಕೃತ ಟೆಸ್ಟ್ ಪಂದ್ಯದಲ್ಲಿ ಶ್ರೀಲಂಕಾ ಎ ಪರ ಉತ್ತಮ ಪ್ರದರ್ಶನ ನೀಡಿದ್ದರು. ಎರಡನೇ ಪಂದ್ಯದಲ್ಲಿ 127 ರನ್ಗಳ ಇನ್ನಿಂಗ್ಸ್ ಆಡಿದ್ದರು. ಇತ್ತ ಈ ಆವೃತ್ತಿಯ ಲಂಕಾ ಪ್ರೀಮಿಯರ್ ಲೀಗ್‌ನಲ್ಲಿ ಅಸಾಧಾರಣ ಪ್ರದರ್ಶನ ನೀಡಿದ್ದ ಕಮಿಲ್ ಮಿಶ್ರಾಗೂ ಅವಕಾಶ ನೀಡಲಾಗಿದೆ.
2ನೇ ಟೆಸ್ಟ್ ಪಂದ್ಯಕ್ಕೆ ಶ್ರೀಲಂಕಾ ತಂಡ: ಧನಂಜಯ ಡಿ ಸಿಲ್ವ (ನಾಯಕ), ಲಹಿರು ಉದಾರ, ಕಮಿಲ್ ಮಿಶ್ರಾ, ಪಸಿಂದು ಸೂರಿಯಬಂಡಾರ, ಕಮಿಂದು ಮೆಂಡಿಸ್, ಸಹನ್ ಅರಾಚ್ಚಿಗೆ, ಸೋನಲ್ ದಿನುಶಾ, ನಿರೋಶನ್ ಡಿಕ್ವೆಲ್ಲಾ, ಕೇಶರ ನುವಂತ, ಪ್ರಭಾತ್ ಜಯಸೂರ್ಯ, ಮಿಲನ್ ರತ್ನಾಯಕೆ, ಲಹಿರು ಕುಮಾರ, ಅಸಿತಾ ಫೆರ್ನಾಂಡೋ, ವಿಶ್ವ ಫೆರ್ನಾಂಡೋ.
Published On - 2:42 pm, Fri, 21 August 26