Renuka Singh: ಆರ್ಸಿಬಿ ಸೇರಿದ ತಕ್ಷಣ ರೇಣುಕಾ ಸಿಂಗ್ ಹಾಗೂ ಸ್ಮೃತಿ ಮಂಧಾನ ಏನು ಮಾಡಿದ್ರು ನೋಡಿ
RCB, WPL 2023 Auction: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಹಣ ಸುರಿದಿದ್ದು ಕೇವಲ ಮಂಧಾನಗೆ ಮಾತ್ರವಲ್ಲ. ಟೀಮ್ ಇಂಡಿಯಾ ವೇಗಿ ರೇಣುಕಾ ಸಿಂಗ್ ಅವರನ್ನು ಖರೀದಿಸಲೂ ಹಣ ಚೆಲ್ಲಿತು. ಇವರು ಆರ್ಸಿಬಿ ಪಾಲಾದ ತಕ್ಷಣ ಏನು ಮಾಡಿದ್ರು ನೋಡಿ..
ಮುಂಬೈನ ಜಿಯೋ ವರ್ಲ್ಡ್ ಕನ್ವೆನ್ಷನ್ನಲ್ಲಿ ನಡೆದ ಚೊಚ್ಚಲ ಮಹಿಳಾ ಪ್ರೀಮಿಯರ್ ಲೀಗ್ (WPL 2023) ಹರಾಜು ಪ್ರಕ್ರಿಯೆ ಹೊಸ ಇತಿಹಾಸವನ್ನೇ ಸೃಷ್ಟಿಸಿತು. ದಾಖಲೆ ಮೊತ್ತಕ್ಕೆ ಆಟಗಾರರು ಸೇಲ್ ಆಗುವ ಮೂಲಕ ಮಹಿಳಾ ಕ್ರಿಕೆಟ್ ಬೇಡಿಕೆ ಸೃಷ್ಟಿ ಮಾಡಿದೆ. ಒಟ್ಟು 409 ಆಟಗಾರ್ತಿಯರ ಪೈಕಿ 87 ಪ್ಲೇಯರ್ಸ್ ಸೋಲ್ಡ್ ಔಟ್ ಆದರು. ಐದು ಫ್ರಾಂಚೈಸಿ 59.50 ಕೋಟಿ ರೂಪಾಯಿಯನ್ನು ಖರ್ಚು ಮಾಡಿತು. ಆಕ್ಷನ್ನಲ್ಲಿ ಅತಿ ಹೆಚ್ಚು ಮೊತ್ತಕ್ಕೆ ಸೇಲ್ ಆಗಿದ್ದು ಭಾರತ ಮಹಿಳಾ ತಂಡ ಎಡಗೈ ಬ್ಯಾಟರ್ ಸ್ಮೃತಿ ಮಂಧಾನ (Smriti Mandhana). ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಫ್ರಾಂಚೈಸಿ ಇವರನ್ನು ಬರೋಬ್ಬರಿ 3.4 ಕೋಟಿ ಕೊಟ್ಟು ಖರೀದಿ ಮಾಡಿತು. ಇವರ ಜೊತೆಗೆ ಆ್ಯಶ್ ಗಾರ್ಡನರ್ ಮತ್ತು ನ್ಯಾಟ್ ಸ್ಕಿವರ್ 3.2 ಕೋಟಿಗೆ ಹರಾಜಾಗುವ ಮೂಲಕ ದೊಡ್ಡ ಮೊತ್ತಕ್ಕೆ ಸೇಲ್ ಆದ ವಿದೇಶಿ ಪ್ಲೇಯರ್ಸ್ ಆದರು.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಹಣ ಸುರಿದಿದ್ದು ಕೇವಲ ಮಂಧಾನಗೆ ಮಾತ್ರವಲ್ಲ. ಟೀಮ್ ಇಂಡಿಯಾ ವೇಗಿ ರೇಣುಕಾ ಸಿಂಗ್ ಅವರನ್ನು ಖರೀದಿಸಲೂ ಹಣ ಚೆಲ್ಲಿತು. ಇವರನ್ನ ಖರೀದಿಸಲು ಇತರೆ ಫ್ರಾಂಚೈಸಿಗಳು ಕೂಡ ಮುಂದೆ ಬಂದವು. ಆದರೆ, ಅಂತಿಮವಾಗಿ ಆರ್ಸಿಬಿ 1.5 ಕೋಟಿ ರೂ. ನೀಡಿ ರೇಣುಕಾ ಅವರನ್ನು ತನ್ನ ತೆಕ್ಕೆಗೆ ಸೇರಿಸಿಕೊಂಡಿತು. ಕಳೆದ ವರ್ಷ 2022 ರಲ್ಲಿ ಅದ್ಭುತ ಪ್ರದರ್ಶನ ತೋರಿದ್ದ ಇವರು ಐಸಿಸಿ ವರ್ಷದ ಎಮರ್ಜಿಂಗ್ ಮಹಿಳಾ ಕ್ರಿಕೆಟ್ ಆಟಗಾರ್ತಿಯಾಗಿ ಕಾಣಿಸಿಕೊಂಡಿದ್ದರು. ಕಳೆದ ವರ್ಷ ಆಡಿದ ಏಕದಿನ ಪಂದ್ಯಗಳಲ್ಲಿ ಇವರು 18 ವಿಕೆಟ್ ಹಾಗೂ ಟಿ20 ಯಲ್ಲಿ 22 ವಿಕೆಟ್ ಕಿತ್ತು ಮಿಂಚಿದ್ದರು.
ರೇಣುಕಾ ಸದ್ಯ ಹರ್ಮನ್ಪ್ರೀತ್ ಕೌರ್ ನಾಯಕತ್ವದ ಭಾರತ ತಂಡದ ಜೊತೆ ದಕ್ಷಿಣ ಆಫ್ರಿಕಾ ನಾಡಲ್ಲಿದ್ದಾರೆ. ಇಲ್ಲಿ ಐಸಿಸಿ ಮಹಿಳಾ ಟಿ20 ವಿಶ್ವಕಪ್ನಲ್ಲಿ ಆಡುತ್ತಿದ್ದಾರೆ. ಡಬ್ಲ್ಯೂಪಿಎಲ್ ಆಕ್ಷನ್ ದಿನ ಭಾರತದ ಪಂದ್ಯ ಇಲ್ಲದಿದ್ದ ಕಾರಣ ಎಲ್ಲ ಆಟಗಾರ್ತಿಯರು ಟಿವಿಯಲ್ಲಿ ಹರಾಜು ಪ್ರಕ್ರಿಯೆ ವೀಕ್ಷಿಸುತ್ತಿದ್ದರು. ರೇಣುಕಾ ಅವರು ಆರ್ಸಿಬಿ ಪಾಲಾಗುತ್ತಿದ್ದಂತೆ ಸ್ಮೃತಿ ಮಂಧಾನ ಅವರ ಬಳಿ ಬಂದು ತಬ್ಬಿಕೊಂಡಿದ್ದಾರೆ. ಜೊತೆಗೆ ಆರ್ಸಿಬಿ… ಆರ್ಸಿಬಿ… ಎಂದು ಜೋರಾಗಿ ಹೇಳಿಕೊಂಡಿದ್ದಾರೆ. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
IPL 2023: ಯಾರಾಗ್ತಾರೆ SRH ಕ್ಯಾಪ್ಟನ್: ಮುಂಚೂಣಿಯಲ್ಲಿ ಸೌತ್ ಆಫ್ರಿಕಾ ಆಟಗಾರನ ಹೆಸರು
?Scenes from the ??????? ???? ?? ????? ?????? today as Renuka Singh gets mobbed by team-mates ? #WPLAuction | @RCBTweets https://t.co/6MSSHESrdD pic.twitter.com/O28iHVkgXv
— JioCinema (@JioCinema) February 13, 2023
ರೇಣುಕಾ ದೊಡ್ಡ ಮೊತ್ತಕ್ಕೆ ಆರ್ಸಿಬಿ ಪಾಲಾಗುತ್ತಿದ್ದಂತೆ ಅತ್ತ ಅವರ ಮನೆಯಲ್ಲೂ ಸಂಭ್ರಮ ಜೋರಾಗಿತ್ತು. ರೇಣುಕಾ ಅವರ ತಂದೆ- ತಾಯಿ ಅಕ್ಕ-ಪಕ್ಕದ ಮನೆಗೆ ಸಿಹಿ ತಿಂಡಿಗಳನ್ನು ಹಂಚಿ ವಿಶೇಷವಾಗಿ ಸಂಭ್ರಮಿಸಿದರು.
▶️ Not just from South Africa, we have s̐̈w̐̈e̐̈e̐̈t̐̈ reactions from Himachal too! Here’s Renuka Singh’s family she was picked by RCB at INR 1.5CR. #WPLAuction pic.twitter.com/BbV40stApL
— JioCinema (@JioCinema) February 13, 2023
ಆರ್ಸಿಬಿ ಖರೀದಿಸಿದ ಬಗ್ಗೆ ಟ್ವಿಟರ್ನಲ್ಲಿ ವಿಡಿಯೋ ಹಂಚಿಕೊಂಡಿರುವ ರೇಣುಕಾ, ”ರಾಯಲ್ ಚಾಲೆಂಜರ್ಸ್ ನನ್ನನ್ನು ಆಯ್ಕೆ ಮಾಡಿದ್ದು ತುಂಬಾ ಖುಷಿ ನೀಡಿದೆ. ನಾವೆಲ್ಲ ಹರಾಜು ಪ್ರಕ್ರಿಯೆಯನ್ನು ತುಂಬಾ ಸಂಭ್ರಮಿಸಿದೆವು. ಸ್ಮೃತಿ ಮಂಧಾನ ಕೂಡ ಆರ್ಸಿಬಿ ಫ್ರಾಂಚೈಸಿ ಸೇರಿಕೊಂಡಿದ್ದಾರೆ. ನಾವಿಬ್ಬರು ಒಂದೇ ತಂಡದ ಪರ ಇರುವುದು ಸಂತಸವಾಗುತ್ತದೆ. ಆರ್ಸಿಬಿ ತಂಡ ಪ್ರತಿ ಪಂದ್ಯದಲ್ಲಿ ಜಯ ಸಾಧಿಸಲು ನಾವು ಸಾಕಷ್ಟು ಪ್ರಯತ್ನ ಪಡುತ್ತೇವೆ. ನೀವೆಲ್ಲರು ಆರ್ಸಿಬಿಗೆ ಸಪೋರ್ಟ್ ಮಾಡಿ,” ಎಂದು ರೇಣುಕಾ ಹೇಳಿಕೊಂಡಿದ್ದಾರೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:31 am, Tue, 14 February 23